Health Tips: ಡೆಂಗ್ಯೂ ಇರೋರು ಯಾವುದನ್ನ ತಿನ್ಲೇಬಾರ್ದು? ಯಾವುದನ್ನ ತಿನ್ಲೇಬೇಕು?

By Suvarna News  |  First Published Aug 1, 2023, 6:40 PM IST

ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಸಾಕಷ್ಟು ಕಡೆ ಕಂಡುಬರುತ್ತಿದೆ. ಇದು ದೇಹವನ್ನು ಅತಿಯಾಗಿ ನಿತ್ರಾಣಗೊಳಿಸಿಬಿಡುತ್ತದೆ. ಸ್ವಲ್ಪ ಅಲಕ್ಷ್ಯ ಮಾಡಿದರೂ ಪ್ರಾಣಾಪಾಯವಾಗಬಹುದು. ಈ ಸಮಯದಲ್ಲಿ ಆಹಾರದ ಬಗ್ಗೆಯೂ ಭಾರೀ ಎಚ್ಚರಿಕೆ ಅಗತ್ಯ. ಯಾವುದನ್ನು ತಿನ್ನಲೇಬಾರದು ಹಾಗೂ ಯಾವುದನ್ನು ತಿನ್ನಲೇಬೇಕು ಎಂದು ನೋಡಿಕೊಳ್ಳಿ.
 


ಡೆಂಗ್ಯೂ ಜ್ವರ ಬಂದರೆ ದೇಹ ಬಸವಳಿದು ಹೋಗುತ್ತದೆ. ಹೀಗಾಗಿ, ಅದರಿಂದ ಚೇತರಿಸಿಕೊಳ್ಳಲು ಬಹಳಷ್ಟು ಸಮಯವೂ ಬೇಕಾಗುತ್ತದೆ. ಡೆಂಗ್ಯೂ ಜ್ವರದ ಸಮಯದಲ್ಲಿ ಸಿಕ್ಕಾಪಟ್ಟೆ ತಲೆನೋವು, ತೀವ್ರ ಜ್ವರ ಸೇರಿದಂತೆ ಹಲವು ಸಂಕಟಗಳು ಉಂಟಾಗುವುದರಿಂದ ಸೂಕ್ತ ಕಾಲಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಕ್ಕೂ ಅಪಾಯ ಎದುರಾಗುತ್ತದೆ. ಅಷ್ಟು ತೀವ್ರವಾಗಿ ಕಾಡಿಸುವ ಜ್ವರ ಡೆಂಗ್ಯೂ. ಹೀಗಾಗಿ, ಯಾವುದೇ ಕಾರಣಕ್ಕೂ ಜ್ವರ ಕಂಡುಬಂದಾಗ ಮನೆಯಲ್ಲೇ ಚಿಕಿತ್ಸೆ ಮಾಡಿಕೊಳ್ಳದೆ ವೈದ್ಯರನ್ನು ಕಾಣುವುದು ಉಚಿತ. ಡೆಂಗ್ಯೂದಿಂದಾಗಿ ರಕ್ತದಲ್ಲಿರುವ ಪ್ಲೇಟ್ ಲೆಟ್ ಗಳು ಕುಸಿಯುತ್ತವೆ. ಇವು ಏರಿಕೆಯಾಗಲು ಶುರುವಾದರೆ ದಿನವೊಪ್ಪತ್ತಿನಲ್ಲೇ ಲಕ್ಷಾಂತರ ಸಂಖ್ಯೆಯಲ್ಲಿ ಏರಿಬಿಡುತ್ತವೆ. ಆದರೆ, ಅದಕ್ಕೆ ಪೂರಕವಾದ ಔಷಧ ಮತ್ತು ಆಹಾರ ಅಗತ್ಯ. ಡೆಂಗ್ಯೂ ಸಮಯದಲ್ಲಂತೂ ಆಹಾರದ ಬಗ್ಗೆ ಭಾರೀ ಕಟ್ಟೆಚ್ಚರ ವಹಿಸಬೇಕು. ಏಕೆಂದರೆ, ಕೆಲ ಆಹಾರಗಳು ಡೆಂಗ್ಯೂ ವೈರಸ್ ಗೆ ಹೊಂದುವುದಿಲ್ಲ. ಇಂತಹ ಆಹಾರಗಳಿಂದ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. “ಹೇಗಿದ್ದರೂ ಔಷಧ ಪಡೆಯುತ್ತಿದ್ದೇವೆ, ಯಾವುದಾದರೂ ಆಹಾರ ಸೇವಿಸಬಹುದು’ ಎನ್ನುವ ಅಲಕ್ಷ್ಯ ಬೇಡವೇ ಬೇಡ. ಈ ಸಮಯದಲ್ಲಿ ಕೆಲವು ಆಹಾರಗಳನ್ನು ಸೇವಿಸಲೇಬಾರದು.

•    ಮಸಾಲೆ ಪದಾರ್ಥ (Spicy Food)
ಮಸಾಲೆಯುಕ್ತ ಯಾವುದೇ ರೀತಿಯ ಆಹಾರಗಳನ್ನು ಡೆಂಗ್ಯೂ ಜ್ವರ (Dengue Fever) ಇರುವ ಸಮಯದಲ್ಲಿ ಹಾಗೂ ಚೇತರಿಸಿಕೊಳ್ಳುವ ಸಮಯದಲ್ಲಿ ಸೇವಿಸಬಾರದು. ಡೆಂಗ್ಯೂ ರೋಗಿಗಳಂತೂ ಮಸಾಲೆ ಬೆರೆಸಿದ ಪಲಾವ್, ಬಿರಿಯಾನಿ ಸೇರಿದಂತೆ ಎಲ್ಲ ರೀತಿಯ ಆಹಾರಗಳಿಂದ ದೂರವಿರಬೇಕು. ಮಸಾಲೆ ಅಂಶ ಹೊಟ್ಟೆಯಲ್ಲಿ ಆಸಿಡ್ (Acid) ಉತ್ಪಾದನೆ ಮಾಡುವುದರಿಂದ ಅಲ್ಸರ್ (Ulcer) ಸಮಸ್ಯೆ ಹೆಚ್ಚುತ್ತದೆ. ಹೀಗಾಗುವುದರಿಂದ ಚೇತರಿಸಿಕೊಳ್ಳಲು ದೀರ್ಘ ಸಮಯ ಬೇಕಾಗುತ್ತದೆ.

ಈ ಜ್ಯೂಸ್ ಕುಡಿದ್ರೆ ಬುದ್ಧೀನೂ ಚೆನ್ನಾಗಿರುತ್ತೆ, ಹೃದಯವೂ ಆರೋಗ್ಯವಾಗಿರುತ್ತೆ

Tap to resize

Latest Videos

•    ಕಾಫಿ (Coffee)
ಜ್ವರ ಬಂದಾಗ ಕಾಫಿ ಸೇವನೆ ಮಾಡುವುದರಿಂದ ಹಿತವೆನಿಸುವುದು ಸಹಜ. ಆದರೆ, ಡೆಂಗ್ಯೂ ಇರುವಾಗ ಕಾಫಿಯಿಂದ ದೂರವಿರಬೇಕು. ಕಾಫಿ ಮಾತ್ರವಲ್ಲ, ಈ ಸಮಯದಲ್ಲಿ ಹೈಡ್ರೇಟಿಂಗ್ ಡ್ರಿಂಗ್ಸ್ (Hydrating Drinks) ಮತ್ತು ಕೆಫೀನ್ (Caffeine) ಒಳಗೊಂಡಿರುವ ಯಾವುದೇ ಪಾನೀಯಗಳ ಸೇವನೆ ಮಾಡಬಾರದು. ಸಾಫ್ಟ್ ಡ್ರಿಂಕ್ಸ್ ಬೇಡವೇ ಬೇಡ. ಇದರಿಂದ ಹೃದಯದ ಬಡಿತ (Heart Rate) ಹೆಚ್ಚುತ್ತದೆ. ಸುಸ್ತು ಮತ್ತು ಮಾಂಸಖಂಡಗಳ ನೋವು ಕಂಡುಬರುತ್ತದೆ. 

•    ಮಾಂಸಾಹಾರ (Non-Vegetarian)
ಸಹಜವಾಗಿ ಮಾಂಸಾಹಾರಗಳಲ್ಲಿ ಮಸಾಲೆ ಪದಾರ್ಥ ಹೆಚ್ಚಿರುತ್ತದೆ. ಅಲ್ಲದೆ, ಮಾಂಸಾಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ. ಅಧಿಕ ಜಿಡ್ಡಿನಂಶ ಹೊಂದಿರುತ್ತವೆ. ಹೀಗಾಗಿ, ಮಾಂಸಾಹಾರ ಡೆಂಗ್ಯೂ ರೋಗಿಗಳ ಹಲವು ಸಮಸ್ಯೆಯನ್ನು ಉಲ್ಬಣಿಸುತ್ತದೆ. 

ಯಾವುದು ಬೆಸ್ಟ್?
•    ಡೆಂಗ್ಯೂ ರೋಗಿಗಳು ಮತ್ತು ಡೆಂಗ್ಯೂ ಬಳಿಕ ಆರೋಗ್ಯ ಚೆನ್ನಾಗಿ ಸುಧಾರಿಸಲು ಕೆಲವು ಆಹಾರಗಳನ್ನು ಸೇವಿಸುವುದು ಉತ್ತಮ. ಅವುಗಳಲ್ಲಿ ಮೊದಲ ಸಾಲಿನಲ್ಲಿ ಇರುವುದು ಎಳನೀರು (Coconut Water). ಇದರಲ್ಲಿ ಎಲೆಕ್ಟ್ರೋಲೈಟ್ಸ್ ಮತ್ತು ಇತರ ಅಗತ್ಯ ಪೋಷಕಾಂಶಗಳಿರುತ್ತವೆ. ದೇಹವನ್ನು ಡಿಹೈಡ್ರೇಟ್ (Dehydrate) ಆಗಲು ಬಿಡುವುದಿಲ್ಲ. 

ತಿಂಗಳು ಬೇಡ, ಎರಡು ವಾರ ಬಿಟ್ಟು ನೋಡಿ, ಆರೋಗ್ಯ ಸುಧಾರಿಸೋ ಬಗೆ ಇದು

•    ತಿಂದ ಆಹಾರ ಜೀರ್ಣವಾಗಲು (Digest) ಆಗಾಗ ಬಿಸಿನೀರು ಕುಡಿಯಬೇಕು. ದ್ರವಾಹಾರ ಸೇವಿಸಬೇಕು. ಚೆನ್ನಾಗಿ ಬೇಯಿಸಿದ ಮೆತ್ತಗಿನ ಅನ್ನ, ಮಸಾಲೆ ಬೆರೆಸದ ಹೆಸರುಬೇಳೆಯ ಸಾರನ್ನು ಸೇವಿಸಬಹುದು.
•    ಎಲ್ಲರೂ ತಿಳಿದಿರುವಂತೆ ಡೆಂಗ್ಯೂ ರೋಗಿಗಳಿಗೆ ಪಪ್ಪಾಯದ ಎಲೆಯ ರಸದ ಸೇವನೆ ಉತ್ತಮ. ಇದರಲ್ಲಿ ಪಪೈನ್ ಮತ್ತು ಕೈಮೋಪಪೈನ್ ನಂತಹ ಎಂಜೈಮುಗಳಿರುತ್ತವೆ. ಇವು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಹೊಟ್ಟೆಯಲ್ಲಿ ಉಂಟಾಗುವ ನೋವು (Pain), ಕಿರಿಕಿರಿಗಳನ್ನು ನಿವಾರಿಸುತ್ತವೆ. ಎಲ್ಲಕ್ಕಿಂತ ದೊಡ್ಡ ಲಾಭವೆಂದರೆ, ಇವು ರಕ್ತದಲ್ಲಿ ಪ್ಲೇಟ್ ಲೆಟ್ (Platelets) ಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಕೇವಲ 30 ಎಂಎಲ್ ರಸದಿಂದ ಪ್ಲೇಟ್ ಲೆಟ್ಸ್ ಹೆಚ್ಚುತ್ತವೆ. 
•    ಕಿವಿ (Kiwi) ಹಣ್ಣು ಸಹ ಡೆಂಗ್ಯೂ ರೋಗಿಗಳಿಗೆ ಉತ್ತಮ. ಪೊಟ್ಯಾಶಿಯಂ, ವಿಟಮಿನ್ ಎ, ವಿಟಮಿನ್ ಇ ಮುಂತಾದ ಅಂಶಗಳಿಂದ ತುಂಬಿರುವ ಕಿವಿ ಹಣ್ಣಿನಲ್ಲಿ ವಿಶೇಷವಾಗಿರುವ ತಾಮ್ರದ (Copper) ಅಂಶವು ಕೆಂಪು ರಕ್ತಕಣಗಳನ್ನು ಸೃಷ್ಟಿಸುತ್ತದೆ. ರೋಗನಿರೋಧಕತೆ ಹೆಚ್ಚುತ್ತದೆ. 

click me!