ಕ್ಯಾನ್ಸರ್ ಈಗ ಸಾಮಾನ್ಯ ಎನ್ನುವಂತಾಗಿದೆ. ನಾನಾ ರೀತಿಯ ಕ್ಯಾನ್ಸರ್ ನಿಂದ ಜನರು ಬಳಲುತ್ತಿದ್ದಾರೆ. ಕ್ಯಾನ್ಸರ್ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ. ಒಂದು ಅಧ್ಯಯನದ ಪ್ರಕಾರ, ಎತ್ತರಕ್ಕೂ ಕ್ಯಾನ್ಸರ್ ಗೂ ಸಂಬಂಧವಿದೆಯಂತೆ.
ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹತ್ತರಲ್ಲಿ ಒಬ್ಬರನ್ನು ಕಾಡುವ ರೋಗವಾಗಿದೆ. ಸಣ್ಣ ಮಕ್ಕಳಿಗೂ ಕ್ಯಾನ್ಸರ್ ಕಾಡ್ತಿದೆ. ನಮ್ಮ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಕಾಯಿಲೆ ಇದು. ದೇಹದಲ್ಲಿನ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಮತ್ತು ದೇಹದ ಇತರ ಭಾಗಗಳಿಗೆ ಹರಡಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ಕ್ಯಾನ್ಸರ್ (Cancer ) ಗೆ ಅನೇಕ ಕಾರಣವಿದೆ. ವಯಸ್ಸು, ಕುಟುಂಬದ ಇತಿಹಾಸ, ತಂಬಾಕು (Tobacco) ಸೇವನೆ, ಆಲ್ಕೊಹಾಲ್ ಸೇವನೆ ಮತ್ತು ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಕಾಡುತ್ತದೆ. ಇತ್ತೀಚಿನ ವರದಿಯ ಪ್ರಕಾರ, ನಮ್ಮ ಎತ್ತರ (height) ಕ್ಕೂ ಕ್ಯಾನ್ಸರ್ ಗೂ ಸಂಬಂಧವಿದೆ. ನಾವಿಂದು ಇದ್ರ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಎತ್ತರ ಹಾಗೂ ಕಾನ್ಸರ್ ಬಗ್ಗೆ ಸಂಶೋಧನೆ (Research) ಹೇಳೋದೇನು? : ನಮ್ಮ ಎತ್ತರವು ನಮ್ಮ ಕ್ಯಾನ್ಸರ್ ಅಪಾಯವನ್ನು ನಿರ್ಧರಿಸುತ್ತದೆ ಎಂದು ಈ ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಇಂಟರ್ನ್ಯಾಷನಲ್ ಹೇಳುತ್ತದೆ. ಆಹಾರ, ತೂಕ, ದೈಹಿಕ ಚಟುವಟಿಕೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧಗಳ ಕುರಿತು ಜಾಗತಿಕ ಪುರಾವೆಗಳನ್ನು ಇದು ಪರಿಶೀಲಿಸಿದೆ. ಒಬ್ಬ ವ್ಯಕ್ತಿ ಎತ್ತರವಾಗಿದ್ದಷ್ಟೂ ಅಂಡಾಶಯ, ಪ್ರಾಸ್ಟೇಟ್, ಮೇದೋಜೀರಕ ಗ್ರಂಥಿ, ಕೊಲೊರೆಕ್ಟಲ್, ಸ್ತನ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ ಎಂಬುದು ಸಂಶೋಧನೆಯಿಂದ ಪತ್ತೆಯಾಗಿದೆ.
ಪ್ರತಿ ಹೆಚ್ಚುವರಿ ಐದು ಸೆಂಟಿಮೀಟರ್ ಎತ್ತರವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನ ಹೇಳಿದೆ. ಅಧ್ಯಯನದ ಪ್ರಕಾರ, ಪ್ರತಿ ಐದು ಸೆಂಟಿಮೀಟರ್ ಹೆಚ್ಚುವರಿ ಎತ್ತರವು ಮೂತ್ರಪಿಂಡ ಕ್ಯಾನ್ಸರ್ ಅಪಾಯವನ್ನು ಶೇಕಡಾ 10ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಮುಟ್ಟಿನ ಮೊದಲು ಮತ್ತು ನಂತರ ಕಾಡುವ ಸ್ತನ ಕ್ಯಾನ್ಸರ್ ಅಪಾಯ ಶೇಕಡಾ ಒಂಬತ್ತರಿಂದ ಹನ್ನೊಂದಷ್ಟು ಹೆಚ್ಚಿರುತ್ತದೆ. ಅಂಡಾಶಯ ಕ್ಯಾನ್ಸರ್ ಶೇಕಡಾ ಎಂಟರಷ್ಟಿದ್ದರೆ, ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಅಪಾಯ ಶೇಕಡಾ ಏಳರಷ್ಟು ಹೆಚ್ಚಿರುತ್ತದೆ. ಕೊಲೊರೆಕ್ಟಲ್ ಶೇಕಡಾ ಐದರಷ್ಟು ಹಾಗೂ ಪ್ರಾಸ್ಟೇಟ್ ಶೇಕಡಾ ನಾಲ್ಕರಷ್ಟು ಹೆಚ್ಚಿರುತ್ತದೆ.
ಎತ್ತರ ಜಾಸ್ತಿಯಾದಂತೆ ಏಕೆ ಕಾಡುತ್ತೆ ಕ್ಯಾನ್ಸರ್ ? : ಇಲ್ಲಿ ಮುಖ್ಯವಾಗುವ ವಿಷ್ಯವೆಂದ್ರೆ ನಿಮ್ಮ ಎತ್ತರವಲ್ಲ. ನಿಮ್ಮ ತಲೆಯಿಂದ ನಿಮ್ಮ ಪಾದಗಳ ನಡುವಿನ ಅಂತರವು ನಿಮ್ಮ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದಲ್ಲ. ನಿಮ್ಮ ದೇಹವು ನಿಮ್ಮನ್ನು ಎತ್ತರ ಮಾಡಲು ಪ್ರಕ್ರಿಯೆ ಕ್ಯಾನ್ಸರ್ ನೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ ತಜ್ಞರು. ಹಾಗಂತ ನಿಮ್ಮ ಎತ್ತರವನ್ನು ಬದಲಾಯಿಸಲು ಸಾಧ್ಯವಿಲ್ಲ. ಎತ್ತರ ನಿಮ್ಮ ಕೈನಲ್ಲಿಲ್ಲ. ಎತ್ತರವಾಗಿದ್ದೀರಿ ಅಂದ್ರೆ ಕ್ಯಾನ್ಸರ್ ಬಂದೇ ಬರುತ್ತೆ ಎಂದಲ್ಲ. ಅಪಾಯವಿದೆ ಎಂದಷ್ಟೆ ನಾವು ಹೇಳಬಹುದು.
Health Tips: ಹೃದಯ ಸ್ತಂಭನವಾದಾಗ ಹೀಗೆ ಮಾಡಿದ್ರೆ ವ್ಯಕ್ತಿ ಬದುಕೋ ಚಾನ್ಸ್ ಹೆಚ್ಚು
ನಿಮ್ಮ ಎತ್ತರ ನಿಮಗೆ ಶಾಪವಲ್ಲ. ಮಧುಮೇಹ, ಪಾರ್ಶ್ವವಾಯು ಮತ್ತು ಹೃದಯಾಘಾತ ಸೇರಿದಂತೆ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಎತ್ತರ ವರದಾನವಾಗಿದೆ.
ಅಮೇರಿಕನ್ ಕ್ಯಾನ್ಸರ್ ಸೊಸೈಟಿ (ACS) ಕ್ಯಾನ್ಸರ್ ಆರಂಭಿಕ ರೋಗ ಲಕ್ಷಣದ ಬಗ್ಗೆ ಮಾಹಿತಿ ನೀಡಿದೆ. ನಿಮಗೆ ಈ ರೋಗಲಕ್ಷಣ ಕಾಣ್ತಿದ್ದಂತೆ ಎಚ್ಚೆತ್ತುಕೊಳ್ಳಿ ಎಂದು ಅದು ಹೇಳಿದೆ.
Health Tips: ಕಾಲು ನೋವು ನಿರ್ಲಕ್ಷ್ಯಿಸಬೇಡಿ: ದೇಹದಲ್ಲಿನ ಈ ಸಮಸ್ಯೆ ಲಕ್ಷಣವಿರಬಹುದು!
ಯಾವುದೇ ಖಾಯಿಲೆಯಿಂದ ನೀವು ಚೇತರಿಸಿಕೊಂಡ್ರೂ ಸುಸ್ತು ಹೋಗ್ತಿಲ್ಲ ಎಂದಾದ್ರೆ, ಅತಿಯಾದ ತೂಕ ನಷ್ಟ ಹಾಗೂ ಅತಿಯಾದ ತೂಕ ಏರಿಕೆ. ದೇಹದ ಭಾಗಗಳಲ್ಲಿ ಊತ ಅಥವಾ ಗಂಟು, ಚರ್ಮದ ಬಣ್ಣದಲ್ಲಿ ಬದಲಾವಣೆಗ,ಕೆಮ್ಮು, ಜ್ವರ ಅಥವಾ ರಾತ್ರಿ ಬೆವರುವುದು, ತಲೆನೋವು ಈವೆಲ್ಲವೂ ಕ್ಯಾನ್ಸರ್ ಆರಂಭಿಕ ಲಕ್ಷಣವಾಗಿದೆ. ಮೊದಲೇ ಹೇಳಿದಂತೆ ಎತ್ತರ ಕಡಿಮೆ ಮಾಡಲು ಸಾಧ್ಯವಿಲ್ಲ ಆದ್ರೆ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ನೀವು ಆರೋಗ್ಯಕರ ಆಹಾರ ಸೇವನೆ ಮಾಡಿದ್ರೆ, ದೈಹಿಕವಾಗಿ ಸಕ್ರಿಯವಾಗಿದ್ದರೆ, ತೂಕ ನಿಯಂತ್ರಣದಲ್ಲಿಟ್ಟುಕೊಂಡ್ರೆ, ಧೂಮಪಾನದಿಂದ ದೂರವಿದ್ರೆ, ಆಲ್ಕೋಹಾಲ್ ಸೇವನೆ ಮಾಡದೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡ್ತಿದ್ದರೆ ಕ್ಯಾನ್ಸರ್ ನಿಂದ ದೂರವಿರಬಹುದು.