Health Tips: ಹೃದಯ ಸ್ತಂಭನವಾದಾಗ ಹೀಗೆ ಮಾಡಿದ್ರೆ ವ್ಯಕ್ತಿ ಬದುಕೋ ಚಾನ್ಸ್‌ ಹೆಚ್ಚು

By Suvarna News  |  First Published Jan 23, 2023, 9:15 PM IST

ಹೃದಯ ಸ್ತಂಭನಕ್ಕೆ ಯಾರಾದರೂ ಒಳಗಾದಾಗ ಅವರ ಎದೆ ಒತ್ತುವುದು, ಬಾಯಿಗೆ ಉಸಿರಾಟ ನೀಡುವಂತಹ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸಾಮಾನ್ಯ. ಆದರೆ, ಬಹಳಷ್ಟು ಜನರಿಗೆ ಈ ಸಮಯದಲ್ಲಿ ನಿರ್ದಿಷ್ಟವಾಗಿ ಏನು ಮಾಡಬೇಕು ಎನ್ನುವ ಸ್ಪಷ್ಟತೆಯಿಲ್ಲ. ಕಾರ್ಡಿಯೋ ಪಲ್ಮನರಿ ರಿಸಸೈಟೇಷನ್‌ -ಸಿಪಿಆರ್‌ ಎನ್ನುವ ಪ್ರಕ್ರಿಯೆಯನ್ನು ತಕ್ಷಣ ಮಾಡಿದರೆ ವ್ಯಕ್ತಿ ಬದುಕುವ ಸಾಧ್ಯತೆ ಎರಡ್ಮೂರು ಪಟ್ಟು ಹೆಚ್ಚುತ್ತದೆ.


ನಿನ್ನೆ ಆರಾಮಾಗಿದ್ದವರು ಇಂದು ಇಷ್ಟೊತ್ತಿಗೆ ಇರುತ್ತಾರೆನ್ನುವ ಭರವಸೆ ಇಲ್ಲ. ಸಾವು ಯಾವುದೇ ಕ್ಷಣದ ಅತಿಥಿ. ಇತ್ತೀಚೆಗಂತೂ ಯಾವುದೇ ಮುನ್ಸೂಚನೆ ನೀಡದೆ, ರೋಗ ಅನುಭವಿಸದೆ ಇದ್ದಕ್ಕಿದ್ದ ಹಾಗೆ ಸಾವಿಗೀಡಾಗುವವರ ಪ್ರಮಾಣ ಏರಿಕೆಯಾಗಿದೆ. ಮಕ್ಕಳು, ಮಧ್ಯವಯಸ್ಕರು, ಯುವಕರು ಎನ್ನುವ ಭೇದ ಸಾವಿಗಿಲ್ಲ. ಇಂತಹ ಸಮಯದಲ್ಲಿ ಹೃದಯ ಇದ್ದಕ್ಕಿದ್ದ ಹಾಗೆ ತನ್ನ ಕೆಲಸವನ್ನು ಸ್ಥಗಿತಗೊಳಿಸಿಬಿಡುತ್ತದೆ. ಈ ಸಮಸ್ಯೆ ನಾವು ಸಾಮಾನ್ಯವಾಗಿ ಹೇಳುವಂತೆ ಹಾರ್ಟ್‌ ಅಟ್ಯಾಕ್‌ ಅಲ್ಲ. ಇದು ಕಾರ್ಡಿಯಾಕ್‌ ಅರೆಸ್ಟ್‌ ಅಂದರೆ, ಹೃದಯ ಸ್ತಂಭನ. ನಮ್ಮ ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನ ಹೃದಯ ಸ್ತಂಭನಕ್ಕೆ ಬಲಿಯಾಗುತ್ತಾರೆ. 2012-2021 ರ 10 ವರ್ಷಗಳ ಅವಧಿಯಲ್ಲಿ ಹೃದಯ ಸ್ತಂಭನ ಉಂಟಾಗುವ ಸಾಧ್ಯತೆ ಶೇಕಡ 54ರಷ್ಟು ಹೆಚ್ಚಾಗಿದೆ ಎಂದರೆ ಇದರ ಅಪಾಯವನ್ನು ಊಹಿಸಬಹುದು. ಕಾರ್ಡಿಯಾಕ್‌ ಅರೆಸ್ಟ್‌ ಉಂಟಾದಾಗ, ಹೃದಯದ ಬಡಿತ ಏಕಾಏಕಿ ಸ್ಥಗಿತವಾಗಿ ಉಸಿರಾಟ ನಿಂತು, ಮನುಷ್ಯ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ಅನಿರ್ದಿಷ್ಟವಾದ ಕಾರಣದಿಂದ ಈ ಸಮಸ್ಯೆ ಉಂಟಾದಾಗ ಸಾವಿಗೆ ತುತ್ತಾಗುವ ಸಂಭವವೇ ಅತಿ ಹೆಚ್ಚು. ಹೃದಯ ಸ್ತಂಭನದ ಮುಖ್ಯ ಲಕ್ಷಣವೆಂದರೆ, ಎಚ್ಚರ ಕಳೆದುಕೊಂಡು ಯಾವುದೇ ಪ್ರತಿಕ್ರಿಯೆ ನೀಡದಿರುವುದು. 

ಈ ಸಂದರ್ಭದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸೈಟೇಷನ್‌ -ಸಿಪಿಆರ್‌ (Cardio Pulmonary Resuscitation) ಎನ್ನುವ ಪ್ರಕ್ರಿಯೆ ಮಾಡುವುದು ಅತಿ ಮುಖ್ಯ. ವೈದ್ಯಕೀಯ ಸೌಲಭ್ಯ (Medical Help) ದೊರೆಯುವವರೆಗೆ ಸಿಪಿಆರ್‌ (CPR) ಮೂಲಕ ವ್ಯಕ್ತಿಯನ್ನು ಬದುಕಿಸಲು ಸಾಧ್ಯವಾಗುತ್ತದೆ. ಹೀಗಾಗಿ, ಇದರ ಬಗ್ಗೆ ತಿಳಿದಿರುವುದು ಇಂದಿನ ಕಾಲಕ್ಕೆ ಅಗತ್ಯ. 

Tap to resize

Latest Videos

Women Health : ಒಂದು.. ಎರಡು ಅಷ್ಟೇ ಅಂತ ಪೆಗ್ ಏರಿಸುವ ಮಹಿಳೆಯರು ಇದನ್ನೋದಿ

ಸಹಾಯಕ್ಕೆ ಕರೆಯಿರಿ: ಮೊದಲನೆಯದಾಗಿ, ಯಾರಾದರೂ ಕಾರ್ಡಿಯಾಕ್‌ ಅರೆಸ್ಟ್‌ (Cardiac Arrest) ಗೆ ಒಳಗಾದಾಗ ಅವರಿಗೆ ಎಚ್ಚರವಿದೆಯೇ ಇಲ್ಲವೇ ಎನ್ನುವುದನ್ನು ಚೆಕ್‌ ಮಾಡಬೇಕು. ಸ್ವಲ್ಪ ಎಚ್ಚರವಿದ್ದರೆ (Conscious) ಅವರನ್ನು ಮಾತನಾಡಿಸಲು ಯತ್ನಿಸಬೇಕು, ಪ್ರತಿಕ್ರಿಯೆ ನೀಡುವಂತೆ ಪ್ರೇರೇಪಿಸಬೇಕು. ಒಂದೊಮ್ಮೆ, ಎಚ್ಚರ ತಪ್ಪಿದ್ದರೆ ಆಂಬುಲೆನ್ಸ್‌ ಸೇವೆಗಾಗಿ ಕರೆ ಮಾಡಬೇಕು. ಇದಕ್ಕಾಗಿ ದೇಶಾದ್ಯಂತ ಇರುವ ಸಂಖ್ಯೆ 102, ನಮ್ಮ ರಾಜ್ಯದಲ್ಲಿ 108 ಸೇವೆಯಿದೆ. ಹಾಗೆಯೇ, ಒಬ್ಬರೇ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಸಮೀಪದಲ್ಲಿ ಯಾರಾದರೂ ಇದ್ದರೆ ಅವರನ್ನೂ ಕರೆಯಿರಿ. 

ಉಸಿರಾಟವಿದೆಯೇ?: ವ್ಯಕ್ತಿ ಉಸಿರಾಡಿಸುತ್ತಿದ್ದಾನೆಯೇ (Breathing) ಇಲ್ಲವೇ ಎಂದೂ ಚೆಕ್‌ ಮಾಡಬೇಕು. ಮುಖ್ಯವಾಗಿ, ಕುತ್ತಿಗೆಯ (Neck) (Heart) ಬಳಿ ಇರುವ ನಾಡಿಯನ್ನು ಪರೀಕ್ಷೆ ಮಾಡಬೇಕು. ಏಕೆಂದರೆ, ಇದು ಹೃದಯಕ್ಕೆ ಸಮೀಪದಲ್ಲಿರುವ ನಾಡಿ (Pulse). ಒಂದೊಮ್ಮೆ ರಕ್ತದೊತ್ತಡ-ಬಿಪಿ ಕಡಿಮೆ ಪ್ರಮಾಣದಲ್ಲಿದ್ದರೂ ಕುತ್ತಿಗೆಯಲ್ಲಿ ಮಿಡಿತ ಇದ್ದೇ ಇರುತ್ತದೆ. ಇಷ್ಟು ಪರೀಕ್ಷೆ ಮಾಡಲು ಕೇವಲ ಹತ್ತು ಸೆಕೆಂಡ್‌ ಸಾಕು. 

ದಿನಾ ಮೊಟ್ಟೆ ಸೇವಿಸಿದ್ರೆ ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆ ಹೆಚ್ಚುತ್ತಾ?

ಎದೆಯನ್ನು ಒತ್ತಿ:  ವ್ಯಕ್ತಿ ಎಚ್ಚರ ತಪ್ಪಿರುವುದು ಗ್ಯಾರೆಂಟಿಯಾದರೆ ಎದೆಯನ್ನು (Chest) ಒತ್ತಬೇಕು. ಇದರಿಂದ ಕೃತಕವಾಗಿ ಹೃದಯದ ಬಡಿತವಾದಂತೆ ಆಗುತ್ತದೆ. ಹೃದಯದ ಒಳಗಿರುವ ರಕ್ತವೆಲ್ಲವೂ (Blood) ಆಚೆಗೆ ಹರಿಯುವಂತೆ ಪ್ರೆಸ್‌ ಮಾಡಬೇಕು. ಮಿದುಳಿಗೆ (Brain) ಆಗುವ ಹಾನಿ ಇದರಿಂದ ಕಡಿಮೆಯಾಗುತ್ತದೆ. ಸಾಮಾನ್ಯ ಹೃದಯದ ಬಡಿತ 80-90 ಇದ್ದರೆ ಈ ಸಮಯದಲ್ಲಿ ನಿಮಿಷಕ್ಕೆ 100-120 ಬಾರಿ ಎದೆಯನ್ನು ಸಂಕುಚನಗೊಳಿಸುವುದು ಅಗತ್ಯ. ಎದೆಯ ಮೇಲೆ ಅಂದರೆ ನೇರವಾಗಿ ಹೃದಯದ ಮೇಲೆ ಒತ್ತಡ ಹಾಕಬಾರದು.

ಹೀಗೆ ಮಾಡಿದರೆ ಮೃದುವಾಗ ಪಕ್ಕೆಲುಬುಗಳು ಮುರಿಯಬಹುದು. ಹೀಗಾಗಿ, ಎದೆ ಮೂಳೆಯ (Sternum) ಕೆಳಭಾಗದಲ್ಲಿ ಒತ್ತಡ ಹಾಕಬೇಕು. ಇದು ಸುಮಾರಾಗಿ ಟಿ ಶೇಪ್‌ ನಲ್ಲಿರುತ್ತದೆ. ಇದು ಎದೆಯ ಎರಡೂ ಭಾಗ ಜೋಡಣೆಯಾಗುವ ಮಧ್ಯದ ಭಾಗ. ಇದನ್ನು ಮೇಲಿನಿಂದ ಕೆಳಗೆ ಜರುಗಿಸುವಂತೆ ಹಸ್ತಗಳ (Palm) ಮೂಲಕ ಒತ್ತಡ ಹಾಕಬೇಕು. ಒಮ್ಮೆ ಒತ್ತುವುದು, ರಿಲ್ಯಾಕ್ಸ್‌ ಆಗಲು ಬಿಡುವುದು, ಪುನಃ ಒತ್ತಡ ಹಾಕುವುದು ಹೀಗೆ ಹಲವು ಬಾರಿ ಮಾಡಬೇಕು. 

ನೇರವಾಗಿ (Strait) ಮಲಗಿಸಿ: ಸ್ತಂಭನಕ್ಕೆ ಒಳಗಾದ ವ್ಯಕ್ತಿಯನ್ನು ನೇರವಾಗಿ ಮಲಗಿಸಬೇಕು. ಸಾಮಾನ್ಯವಾಗಿ ನಾವು ತಲೆಯನ್ನು ಎತ್ತಿ ಹಿಡಿದುಕೊಳ್ಳಲು ಯತ್ನಿಸುತ್ತೇವೆ. ಆದರೆ, ಇದರಿಂದ ಮಿದುಳಿಗೆ ರಕ್ತದ ಹರಿವು ಕಡಿಮೆಯಾಗಿ ಇನ್ನಷ್ಟು ಹಾನಿಯಾಗುತ್ತದೆ. ಬದಲಿಗೆ, ಕಾಲುಗಳನ್ನು ಎತ್ತರದಲ್ಲಿ ಇರಿಸಿ ಮೇಲ್ಭಾಗಕ್ಕೆ ರಕ್ತ ಸಂಚರಿಸುವಂತೆ ಮಾಡಬಹುದು. ಎದೆಮೂಳೆಯ ಕೆಳಭಾಗಕ್ಕೆ ಒತ್ತಡ ಹಾಕುವ ಸಮಯದಲ್ಲೇ ಇನ್ನೊಬ್ಬರು ಅವರ ಬಾಯಿ ಮೂಲಕ ಆಕ್ಸಿಜನ್‌ (Oxygen) ಒದಗಿಸುವ ಯತ್ನಿಸಬೇಕು. ಈ ಸಮಯದಲ್ಲಿ ಅವರ ಮೂಗನ್ನು ಮುಚ್ಚಿಕೊಳ್ಳಬೇಕು. 
ಇನ್ನೊಂದು ವಿಧಾನವೆಂದರೆ, ಆಟೋಮೇಟೆಡ್‌ ಎಕ್ಸಟರ್ನಲ್‌ ಡಿಫೈಬ್ರಿಲೇಟರ್‌-ಎಇಡಿ ಎನ್ನುವ ಸಾಧನದಿಂದಲೂ ವ್ಯಕ್ತಿಯನ್ನು ಬದುಕಿಸಲು ಯತ್ನಿಸಬಹುದು. ಇದು ಸರಳವಾಗಿದ್ದು, ಬಳಕೆ ಮಾಡುವುದು ಸುಲಭ. 

click me!