ತೂಕ ನಷ್ಟವು ತಿನ್ನೋ ಆಹಾರ, ದಿನಾ ಮಾಡೋ ವ್ಯಾಯಾಮ ಮೊದಲಾದ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಹಲವಾರು ವಿವಿಧ ವಿಧಾನಗಳಿವೆ. ಅವುಗಳಲ್ಲಿ ಒಂದು ಯೋಗ. ಯಾವ ಯೋಗಾಸನದಿಂದ ತೂಕ ಇಳಿಸ್ಕೊಳ್ಬೋದು ಅನ್ನೋ ಮಾಹಿತಿ ಇಲ್ಲಿದೆ.
ಯೋಗಾಸನಗಳನ್ನು ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಯೋಗವು ದೈಹಿಕ ಭಂಗಿಗಳು, ಉಸಿರಾಟದ ತಂತ್ರಗಳು ಮತ್ತು ಸಾವಧಾನತೆಗಳನ್ನು ಸಂಯೋಜಿಸುವ ಮೂಲಕ ತೂಕ ನಷ್ಟಕ್ಕೆ ಸಮಗ್ರ ರೀತಿಯಲ್ಲಿ ನೆರವಾಗುತ್ತದೆ. ಭಂಗಿಗಳು (ಆಸನಗಳು), ನಿಯಂತ್ರಿತ ಉಸಿರಾಟ (ಪ್ರಾಣಾಯಾಮ) ಮತ್ತು ಧ್ಯಾನಗಳ ಸಂಯೋಜನೆಯು ಚಯಾಪಚಯವನ್ನು ವರ್ಧಿಸುತ್ತದೆ. ಒಟ್ಟಾರೆ ದೇಹದ ಸಂಯೋಜನೆಯನ್ನು ಸುಧಾರಿಸುತ್ತದೆ.ಯೋಗದ ನಿಯಮಿತ ಅಭ್ಯಾಸವು ಕ್ರಮೇಣ ತೂಕ ನಷ್ಟಕ್ಕೆ ಕಾರಣವಾಗಬಹುದು. ಹಾಗಿದ್ರೆ ತೂಕ ಇಳಿಸಿಕೊಳ್ಳೋಕೆ ನೆರವಾಗೋ ಯೋಗಾಸನಗಳು ಯಾವುವು ತಿಳಿಯೋಣ.
ಬೋಟ್ ಪೋಸ್
ನವಾಸನ ಎಂದೂ ಕರೆಯಲ್ಪಡುವ ಈ ಈ ಯೋಗಾಸನ ಕಿಬ್ಬೊಟ್ಟೆಯ ಸ್ನಾಯುಗಳನ್ನು ಒಳಗೊಂಡಂತೆ ಕೋರ್ ಸ್ನಾಯುಗಳನ್ನು ಬಲಪಡಿಸುವ ಅತ್ಯುತ್ತಮ ಯೋಗ ಭಂಗಿಯಾಗಿದೆ. ಬೋಟ್ ಪೋಸ್ ಮಾಡಲು, ಕಾಲುಗಳನ್ನು ಮುಂದೆ ಚಾಚಿ ಚಾಪೆಯ ಮೇಲೆ ಕುಳಿತುಕೊಳ್ಳಿ. ಸ್ವಲ್ಪ ಹಿಂದಕ್ಕೆ ಬಗ್ಗಿ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ, ಅವುಗಳನ್ನು ನೇರವಾಗಿ ಇರಿಸಿ. ಇದೇ ಸಮಯದಲ್ಲಿ, ಕೈಗಳನ್ನು ನೆಲಕ್ಕೆ ಸಮಾನಾಂತರವಾಗಿ ಮೇಲಕ್ಕೆತ್ತಿ ಪಾದಗಳ ಕಡೆಗೆ ತಿರುಗಿಸಿ. ಇದೇ ಸ್ಥಾನದಲ್ಲಿಕೊಂಡು ಆಳವಾಗಿ ಉಸಿರಾಡಿ.
ಯೋಗದ ಈ 5 ಆಸನಗಳು ಕೂದಲುದುರುವಿಕೆ ತಡೆಯುತ್ತವೆ.. ಖಂಡಿತಾ ಟ್ರೈ ಮಾಡಿ
ಬೋಟ್ ಪೋಸ್ ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೋನ್ ಮಾಡುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಪ್ಲ್ಯಾಂಕ್ ಪೋಸ್
ಫಲಕಾಸನ ಎಂದೂ ಕರೆಯಲ್ಪಡುವ ಇದು ಕಿಬ್ಬೊಟ್ಟೆಯ ಸ್ನಾಯುಗಳು, ಓರೆಗಳು ಮತ್ತು ಕೆಳ ಬೆನ್ನನ್ನು ಒಳಗೊಂಡಂತೆ ಸಂಪೂರ್ಣ ಕೋರ್‌ನ್ನು ಗುರಿಯಾಗಿಸುವ ಯೋಗ ಭಂಗಿಯಾಗಿದೆ. ಕೈಗಳನ್ನು ನೇರವಾಗಿ ಭುಜಗಳ ಕೆಳಗೆ ಮತ್ತು ಕಾಲುಗಳನ್ನು ಹಿಂದಕ್ಕೆ ಇಟ್ಟುಕೊಂಡು ಸಿ ಪುಶ್-ಅಪ್ ಸ್ಥಾನದಲ್ಲಿ ಪ್ರಾರಂಭಿಸಿ. ದೇಹವನ್ನು ತಲೆಯಿಂದ ಕಾಲಿನ ವರೆಗೆ ನೇರವಾಗಿ ಇರಿಸಿ. 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ಈ ಸ್ಥಾನವನ್ನು ಹಿಡಿದುಕೊಳ್ಳಿ. ಪ್ಲ್ಯಾಂಕ್ ಪೋಸ್ ದೇಹದಲ್ಲಿ ಶಕ್ತಿ ಮತ್ತು ಸ್ಥಿರತೆಯನ್ನು ನಿರ್ಮಿಸುತ್ತದೆ, ದೇಹದ ಭಂಗಿಯನ್ನು ಸುಧಾರಿಸುತ್ತದೆ. ಕ್ಯಾಲೋರಿ ವೆಚ್ಚವನ್ನು ಹೆಚ್ಚಿಸುವ ಮೂಲಕ ತೂಕ ನಷ್ಟವನ್ನು ಬೆಂಬಲಿಸುತ್ತದೆ.
ಕೆಳಮುಖವಾಗಿರುವ ಯೋಗ
ಅಧೋ ಮುಖ ಶ್ವಾನಾಸನ ಎಂದೂ ಕರೆಯಲ್ಪಡುವ ಇದು ಯೋಗದ ಭಂಗಿಯಾಗಿದ್ದು ಹೊಟ್ಟೆಯ ಸ್ನಾಯುಗಳನ್ನು ಒಳಗೊಂಡಂತೆ ಇಡೀ ದೇಹವನ್ನು ಬಲಪಡಿಸುತ್ತದೆ. ಕೈಗಳು ಮತ್ತು ಮೊಣಕಾಲುಗಳನ್ನು ಆಧರಿಸಿ ಈ ಯೋಗವನ್ನು ಮಾಡಬೇಕು. ಅಧೋ ಮುಖ ಶ್ವಾನಾಸನ ಎಂದರೆ ಅದು ನಾಯಿ ಮುಂದೆ ಭಾಗಿದಾಗ ಹೇಗೆ ಕಾಣಿಸುತ್ತದೆಯೋ ಆ ಭಂಗಿಯಲ್ಲಿ ಇರುವುದು. ಈ ಯೋಗವನ್ನು ದಿನಾ ಮಾಡಿದರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ವಯಸ್ಸಾದ್ರೂ ಮುಖ ಯಂಗ್ ಆಗಿ ಹೊಳೀತಿರಬೇಕು ಅಂದ್ರೆ ಈ ಸಿಂಪಲ್ ಯೋಗಾಸನ ಮಾಡಿ ಸಾಕು
ವೀರಭದ್ರಾಸನ
ವೀರ ಭದ್ರಾಸನವು ಒಂದು ಆಕರ್ಷಕ ಯೋಗ ಭಂಗಿಯಾಗಿದೆ. ಕಾಲುಗಳನ್ನು ಅಡಿ ಅಗಲವಾಗಿರಿಸಿಕೊಂಡು ನೇರವಾಗಿ ನಿಲ್ಲಬೇಕು. ಬಲದ ಕಾಲನ್ನು 90 ಡಿಗ್ರಿ ಮತ್ತು ಎಡ ಕಾಲನ್ನು 15 ಡಿಗ್ರಿಯಲ್ಲಿ ಇಡಬೇಕು. ಬಲಕಾಲಿನ ಹಿಂಗಾಲು ಎಡಕಾಲಿನ ಪಾದದ ಮಧ್ಯಭಾಗಕ್ಕೆ ನೇರವಾಗಿರಬೇಕು. ಅಂಗೈಯು ಪರಸ್ಪರ ಎದುರಾಗುವಂತೆ ಮಾಡಿ ಎರಡೂ ಕೈಗಳನ್ನು ಮೇಲಕ್ಕೆತ್ತಿಕೊಳ್ಳಬೇಕು. ಈ ಆಸನವು ಹೆಸರೇ ಸೂಚಿಸುವಂತೆ ವೀರರಂತೆ ದೇಹವನ್ನು ಸಜ್ಜುಗೊಳಿಸುವ ಆಸನವಾಗಿದೆ. ಈ ಆಸನ ಕಿಬ್ಬೊಟ್ಟೆಯ ಸ್ನಾಯುಗಳನ್ನು ಟೋನ್ ಮಾಡುತ್ತದೆ. ಏಕಾಗ್ರತೆ ಮತ್ತು ಗಮನವನ್ನು ಹೆಚ್ಚಿಸುತ್ತದೆ.
ಪವನಮುಕ್ತಾಸನ
ಪವನಮುಕ್ತಾಸನ ಭಂಗಿಯು ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ತೊಂದರೆ ಕಡಿಮೆ ಮಾಡಲು ವಿಶೇಷವಾಗಿ ಪ್ರಯೋಜನಕಾರಿ ಆಗಿದೆ. ಕಾಲುಗಳನ್ನು ಒಟ್ಟಾಗಿಸಿ, ಬೆನ್ನಿನ ಮೇಲೆ ಮಲಗಿ ಹಾಗೂ ತೋಳುಗಳನ್ನು ಶರೀರದ ಪಕ್ಕದಲ್ಲಿರಿಸಿ. ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಉಸಿರನ್ನು ಬಿಡುತ್ತಾ, ನಿಮ್ಮ ಬಲಮಂಡಿಯನ್ನು ನಿಮ್ಮ ಎದೆಯ ಕಡೆಗೆ ತನ್ನಿರಿ ಮತ್ತು ತೊಡೆಯನ್ನು ನಿಮ್ಮ ಹೊಟ್ಟೆಯ ಕಡೆಗೆ ತಂದು ಕೈಗಳಿಂದ ಒತ್ತಿ ಹಿಡಿಯಿರಿ. ಈ ಭಂಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬುವಿಕೆಯನ್ನು ನಿವಾರಿಸುತ್ತದೆ. ಮಾತ್ರವಲ್ಲ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ಮಾಡುತ್ತದೆ.