ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ, 40 ಲಕ್ಷದಷ್ಟು ಭಾರೀ ಏರಿಕೆ!

Published : Mar 02, 2024, 08:31 AM ISTUpdated : Mar 02, 2024, 08:33 AM IST
ಭಾರತದ 1.25 ಕೋಟಿ ಮಕ್ಕಳಿಗೆ ಬೊಜ್ಜು ಸಮಸ್ಯೆ,  40 ಲಕ್ಷದಷ್ಟು ಭಾರೀ ಏರಿಕೆ!

ಸಾರಾಂಶ

ಭಾರತದಲ್ಲಿ 1.25 ಕೋಟಿ ಮಕ್ಕಳಿಗೆ ಬೊಜ್ಜಿನ ಸಮಸ್ಯೆ. 1990ಕ್ಕೆ ಹೋಲಿಸಿದರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಭಾರೀ ಏರಿಕೆ.  

ನವದೆಹಲಿ (ಮಾ.2): ಭಾರತದಲ್ಲಿ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆ (ಸ್ಥೂಲಕಾಯ) ಎದುರಿಸುತ್ತಿದ್ದಾರೆ. 1990ಕ್ಕೆ ಹೋಲಿಸದಿರೆ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಪ್ರಮಾಣದಲ್ಲಿ 40 ಲಕ್ಷದಷ್ಟು ಭಾರೀ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಲ್ಯಾನ್ಸೆಟ್‌ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿ ಅನ್ವಯ 2022ರಲ್ಲಿ ಭಾರತದಲ್ಲಿ 5ರಿಂದ 19ರ ವಯೋಮಾನದ ನಡುವಿನ 1.25 ಕೋಟಿ ಮಕ್ಕಳು ಬೊಜ್ಜಿನ ಸಮಸ್ಯೆಗೆ ತುತ್ತಾಗಿದ್ದರು. ಈ ಪೈಕಿ 7.3 ಕೋಟಿ ಬಾಲಕರು ಮತ್ತು 5.2 ಕೋಟಿ ಬಾಲಕಿಯರು. ಜೊತೆಗೆ ಭಾರತದಲ್ಲಿ 4.4 ಕೋಟಿ ಮಹಿಳೆಯರು ಮತ್ತು 2.6 ಕೋಟಿ ಪುರುಷರ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದಾರೆ.

ದಿನಾ ಬೆಳಗ್ಗೆದ್ದು ಈ ರೊಟೀನ್ ಫಾಲೋ ಮಾಡಿದ್ರೆ ಒಂದೇ ತಿಂಗಳಲ್ಲಿ ಬೊಜ್ಜು ಕರಗುತ್ತೆ

ಇನ್ನು ಇದೇ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರ ಮಕ್ಕಳು, ಯುವಕರು ಮತ್ತು ಹಿರಿಯರ ಪ್ರಮಾಣ ಜಾಗತಿಕ ಮಟ್ಟದಲ್ಲಿ 100 ಕೋಟಿ ದಾಟಿದೆ ಎಂದು ವರದಿ ಎಚ್ಚರಿಸಿದೆ. 2022 ರಲ್ಲಿ ಭಾರತದಲ್ಲಿ 70 ಮಿಲಿಯನ್ ವಯಸ್ಕರು ಸ್ಥೂಲಕಾಯದಿಂದ ವಾಸಿಸುತ್ತಿದ್ದಾರೆ, ಪುರುಷರಿಗಿಂತ ಮಹಿಳೆಯರ ಸಂಖ್ಯೆ ಸುಮಾರು ಎರಡು ಪಟ್ಟು ಹೆಚ್ಚಿದೆ. ಕ್ರಮವಾಗಿ 44 ಮಿಲಿಯನ್ ಮತ್ತು 26 ಮಿಲಿಯನ್. 19 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ, 5.2 ಮಿಲಿಯನ್ ಹುಡುಗಿಯರು ಮತ್ತು 7.3 ಮಿಲಿಯನ್ ಹುಡುಗರು ಬೊಜ್ಜು ಹೊಂದಿದ್ದಾರೆ.

ಪರಾಕಾಷ್ಠೆಗೆ ಅಡ್ಡಿಯಾಗ್ಬಹುದು ಸ್ಥೂಲಕಾಯ

ಹವಾಮಾನ ಬದಲಾವಣೆ, ಕೋವಿಡ್‌ ಸಾಂಕ್ರಾಮಿಕ ಸೃಷ್ಟಿಸಿದ ಅವಾಂತರಗಳು ಉಕ್ರೇನ್‌-ರಷ್ಯಾ ಯುದ್ಧಗಳು ವಿಶ್ವದಾದ್ಯಂತ ವಿವಿಧ ವಯೋಮಾನದ ಜನರಲ್ಲಿ ಬೊಜ್ಜು ಮತ್ತು ಅಪೌಷ್ಠಿಕತೆಯ ಸಮಸ್ಯೆಯನ್ನು ಹೆಚ್ಚಿಸಿವೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ