Year Ender 2023: ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಏನೇನಾಯ್ತು? ಜನರನ್ನು ಕಾಡಿದ ವಿಚಿತ್ರ ಕಾಯಿಲೆಗಳಿವು

By Vinutha Perla  |  First Published Dec 22, 2023, 9:23 AM IST

ನಾವೆಲ್ಲರೂ 2023ರ ಅಂತಿಮಘಟ್ಟದಲ್ಲಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ನಾವಿಂದು 2023ರ ಮಾರ್ಚ್‌ ತಿಂಗಳಿನಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಆಯ್ತು ಯಾವೆಲ್ಲ ಹೊಸ ಕಾಯಿಲೆಗಳು ಜನರನ್ನು ಕಾಡಿದವು ಅನ್ನೋದನ್ನು ತಿಳಿಯೋಣ


ನಾವೆಲ್ಲರೂ 2023ರ ಅಂತಿಮಘಟ್ಟದಲ್ಲಿದ್ದು, ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ನಾವಿಂದು 2023ರ ಮಾರ್ಚ್‌ ತಿಂಗಳಿನಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಆಯ್ತು ಯಾವೆಲ್ಲ ಹೊಸ ಕಾಯಿಲೆಗಳು ಜನರನ್ನು ಕಾಡಿದವು ಅನ್ನೋದನ್ನು ತಿಳಿಯೋಣ

ಬಾವಲಿಗಳಿಂದ ಮನುಷ್ಯರಿಗೆ ಹರುಡುವ ವೈರಸ್ ಮಾರ್ಬರ್ಗ್‌ ಪತ್ತೆ
2023ರಲ್ಲಿ ಬಾವಲಿಗಳಿಂದ ಮನುಷ್ಯರಿಗೆ ಹರುಡುವ ವೈರಸ್ ಮಾರ್ಬರ್ಗ್‌ ಪತ್ತೆಯಾಗಿತ್ತು. ಮಾರ್ಬರ್ಗ್ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ನಂತರ ಇದು ಸೋಂಕಿತ ರೋಗಿಯ ದೈಹಿಕ ದ್ರವಗಳು, ಮೇಲ್ಮೈಗಳು ಮತ್ತು ವಸ್ತುಗಳ ನೇರ ಸಂಪರ್ಕದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿದುಬಂದಿದೆ. ಈ ವೈರಸ್ ಚಿಕಿತ್ಸೆಗಾಗಿ ಇಲ್ಲಿಯವರೆಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆಯಿಲ್ಲ. ಹೀಗಾಗಿ ಮಾರ್ಬರ್ಗ್ ವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿತ್ತು. ಸೋಂಕಿತ ಪ್ರದೇಶಗಳಲ್ಲಿ ಸಂಪರ್ಕ ಪತ್ತೆಹಚ್ಚುವಿಕೆ, ಸೋಂಕಿತ ಜನರ ಪ್ರತ್ಯೇಕತೆ ಮತ್ತು ರೋಗದ ಲಕ್ಷಣಗಳಿರುವ ಜನರ ಚಿಕಿತ್ಸೆ ಮತ್ತು ಆರೈಕೆಗಾಗಿ ಪೀಡಿತ ಜಿಲ್ಲೆಗಳಲ್ಲಿ ಮುಂಗಡ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

Latest Videos

undefined

Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

ದೇಶದಲ್ಲಿ ಕ್ಯಾನ್ಸರ್‌ ರೋಗದ ಕುರಿತು ದೊಡ್ಡ ಎಚ್ಚರಿಕೆ ನೀಡಿದ ಐಸಿಎಂಆರ್‌!
ದೇಶದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ವೇಗವಾಗಿ ಹೆಚ್ಚಾಗಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ದೊಡ್ಡ ಎಚ್ಚರಿಕೆಯನ್ನು ನೀಡಿತು. 2025 ರ ವೇಳೆಗೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 12.7 ರಷ್ಟು ಹೆಚ್ಚಳವನ್ನು ಐಸಿಎಂಆರ್‌ ಊಹಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಕ್ಯಾನ್ಸರ್‌ ವೇಗವಾಗಿ ಹೆಚ್ಚಳವಾಗುತ್ತಿರುವ ದೃಷ್ಟಿಯಿಂದ ತಜ್ಞರು ಈ ಎಚ್ಚರಿಕೆಯನ್ನು ನೀಡಿದರು.

ಜನ ಸಾಮಾನ್ಯರಿಗೆ ರಿಲೀಫ್, ಪ್ಯಾರಸಿಟಮಾಲ್ ಸೇರಿ 128 ಔಷಧಿಗಳ ಬೆಲೆ ಇಳಿಕೆ
ಔಷಧ ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಪ್ರತಿಜೀವಕಗಳು ಮತ್ತು ಆಂಟಿವೈರಲ್ ಔಷಧಿಗಳು ಸೇರಿದಂತೆ 128 ಔಷಧಿಗಳ ಬೆಲೆಯನ್ನ ಪರಿಷ್ಕರಿಸಿತು. ಬೆಲೆಗಳನ್ನು ಪರಿಷ್ಕರಿಸಲಾದ ಔಷಧಿಗಳಲ್ಲಿ ಅಮೋಕ್ಸಿಸಿಲಿನ್ ಮತ್ತು ಕ್ಲಾವುಲಾನಿಕ್ ಆಮ್ಲದ ಪ್ರತಿಜೀವಕ ಚುಚ್ಚುಮದ್ದು ಗಳು ಸಹ ಸೇರಿವೆ. ವ್ಯಾಂಕೊಮೈಸಿನ್, ಅಸ್ತಮಾ ಔಷಧಿ ಸಾಲ್ಬುಟಮಾಲ್, ಕ್ಯಾನ್ಸರ್ ಔಷಧಿ ಟ್ರಾಸ್ಟುಜುಮಾಬ್, ಮೆದುಳಿನ ಗೆಡ್ಡೆ ಚಿಕಿತ್ಸೆ ಔಷಧ ಟೆಮೊಜೊಲೊಮೈಡ್, ನೋವು ನಿವಾರಕ ಇಬುಪ್ರೊಫೇನ್, ನೋವು ಮತ್ತು ಜ್ವರಕ್ಕೆ ಬಳಸುವ ಪ್ಯಾರಸಿಟಮಾಲ್ ಬೆಲೆಗಳನ್ನ ಎನ್ಪಿಪಿಎ ಪರಿಷ್ಕರಿಸಿದೆ.

ಮಗುನೇ ಬೇಡ ಎಂದ ನಿವೇದಿತಾ ಗೌಡ, ಡಿವೋರ್ಸ್‌ಗೆ ಕಾರಣವಾದ ರಶ್ಮಿಕಾ ಮಂದಣ್ಣ; ಜನವರಿ 2023ರ ಕಥೆ ಇದು!
 
ಫಿಟ್ನೆಸ್ ಹುಚ್ಚಿಗೆ ಬಾಲಕ ಸಾವು; ಪ್ರೊಟೀನ್‌ ಶೇಕ್‌ ಕುಡಿಯುವಾಗ ಇರಲಿ ಎಚ್ಚರ
16 ವರ್ಷದ ಹುಡುಗ ಪ್ರೊಟೀನ್ ಶೇಕ್ ಕುಡಿದು ಮೃತಪಟ್ಟ ಘಟನೆ ಈ ವರ್ಷ ನಡೆಯಿತು.  ಲಂಡನ್‌ನಲ್ಲಿ ಭಾರತೀಯ ಮೂಲದ ರೋಹನ್ ಗೋಧಾನಿಯಾ ಮೃತ ವ್ಯಕ್ತಿ. ರೋಹನ್ ತುಂಬಾ ಸಣ್ಣಗಿದ್ದ ಕಾರಣ ಸಹಪಾಠಿಗಳು ಅವನನ್ನು ರೇಗಿಸುತ್ತಿದ್ದರು. ಹೀಗಾಗಿ ಸ್ನಾಯುಗಳನ್ನು ನಿರ್ಮಿಸುವ ಪ್ರಯತ್ನದಲ್ಲಿ ರೋಹನ್ ಅವರ ತಂದೆ ಖರೀದಿಸಿದ ಪ್ರೋಟೀನ್ ಶೇಕ್ ಅನ್ನು ಸೇವಿಸಿದ್ದರು. ಶೇಕ್ ಸೇವಿಸಿದ ಕೆಲವು ದಿನಗಳ ನಂತರ, ರೋಹನ್‌ನ ಆರೋಗ್ಯವು ಹದಗೆಟ್ಟಿತು. ನಂತರ ಮೃತಪಟ್ಟಿದ್ದಾನೆ ಎಂದು ತಿಳಿದುಬಂತು.

ಕೇರಳದಲ್ಲಿ ಹೆಚ್ಚಿದ ವೈರಲ್ ಜ್ವರ
ಕೇರಳ ರಾಜ್ಯದಲ್ಲಿ 10 ದಿನಗಳಲ್ಲಿ 13,000 ಕ್ಕೂ ಹೆಚ್ಚು ವೈರಲ್ ಜ್ವರ ಸೋಂಕಿತರು ಪತ್ತೆಯಾದರು. ಡೆಂಗ್ಯೂ, ಇಲಿ ಜ್ವರ ಮತ್ತು ಲೆಪ್ಟೊಸ್ಪೈರೋಸಿಸ್ನೊಂದಿಗೆ ಹೆಚ್ಚುತ್ತಿರುವುದು ಬೆಳಕಿಗೆ ಬಂತು. ರಾಜ್ಯದಲ್ಲಿ ಸಾಂಕ್ರಾಮಿಕ ಜ್ವರದ ಜೊತೆಗೆ ಈ ಎರಡು ಬಗೆಯ ಜ್ವರಗಳ ಹಾವಳಿಯೂ ಹೆಚ್ಚಿದೆ. ಮಲಪ್ಪುರಂನಲ್ಲಿ ಡೆಂಗ್ಯೂನಿಂದ ಎರಡು  ಸಾವು ಸಂಭವಿಸಿರುವುದನ್ನು ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದರು. ಈ ಮೂಲಕ ಶಂಕಿತ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿರುವವರ ಸಂಖ್ಯೆ ಕನಿಷ್ಠ 23ಕ್ಕೆ ಏರಿಕೆಯಾಗಿತ್ತು.  

click me!