ಹುಳು ಹಿಡಿದ ಹಲ್ಲು ಸರಿಯಾಗ್ಬೇಕಾ? ಇದೊಂದು ಪದಾರ್ಥ ಯೂಸ್ ಮಾಡಿ ನೋಡಿ

Published : Feb 03, 2025, 02:41 PM ISTUpdated : Feb 03, 2025, 02:52 PM IST
ಹುಳು ಹಿಡಿದ ಹಲ್ಲು ಸರಿಯಾಗ್ಬೇಕಾ? ಇದೊಂದು ಪದಾರ್ಥ ಯೂಸ್ ಮಾಡಿ ನೋಡಿ

ಸಾರಾಂಶ

ಕ್ಸಿಲಿಟಾಲ್, ಹಲ್ಲಿನ ಹುಳು ತಡೆಯುವ ನೈಸರ್ಗಿಕ ಪರಿಹಾರ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆ ಕಡಿಮೆ ಮಾಡಿ, ಲಾಲಾರಸ ಉತ್ಪಾದನೆ ಹೆಚ್ಚಿಸಿ ಹಲ್ಲುಗಳನ್ನು ಮರುಖನಿಜೀಕರಿಸುತ್ತದೆ. ಕ್ಸಿಲಿಟಾಲ್ ಗಮ್, ಮಿಠಾಯಿ, ಟೂತ್‌ಪೇಸ್ಟ್‌ಗಳಲ್ಲಿ ಲಭ್ಯ. ದಿನಕ್ಕೆ 6 -10  ಗ್ರಾಂ ಸೇವಿಸಿ, ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ. ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುವುದಿಲ್ಲ.

ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜ (Toothbrush) ಬೇಕು, ಆಹಾರ ತಿಂದ್ಮೇಲೆ ಬಾಯಿ ತೊಳೆಯಬೇಕು ಅಂತ ಉಪದೇಶ ಹೇಳ್ತೇವೆ. ಮಕ್ಕಳಲ್ಲ ದೊಡ್ಡವರೂ ಸರಿಯಾಗಿ ಇದನ್ನು ಪಾಲಿಸೋದಿಲ್ಲ. ಹಾಗಾಗಿಯೇ ಹಲ್ಲಿನ ಹುಳುಗಳು ತಮ್ಮ ಕೆಲಸ ಶುರು ಮಾಡುತ್ವೆ. ಮೊದಲು ಹಲ್ಲು ಹಳದಿಯಾಗುತ್ತೆ. ಈ ಹಳದಿ ಹಲ್ಲು ಮತ್ತು ಪ್ಲೇಕ್ ವಸಡು, ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಬೀರಲು ಶುರು ಮಾಡುತ್ತೆ. ಹಲ್ಲನ್ನು ಹುಳು (tooth decay) ತಿಂದು, ಹಲ್ಲಿನಲ್ಲಿ ದೊಡ್ಡ ಕುಳಿ ಕಾಣಿಸಿಕೊಳ್ಳುತ್ತೆ. ಈ ಕುಳಿ ಆಳವಾಗಿ ಹಲ್ಲು ಮುರಿಯೋದಿದೆ. ಈಗ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಹಲ್ಲು ಹುಳು, ಹಲ್ಲು ನೋವು ಕಾಮನ್ ಎನ್ನುವಂತಾಗಿದೆ. ನಿಮ್ಮ ಹಲ್ಲು ಕೂಡ ಹುಳು ತಿಂತಾ ಇದೆ, ಅದನ್ನು ಆದಷ್ಟು ಬೇಗ ಸರಿ ಮಾಡ್ಕೊಳ್ಬೇಕು ಅಂತಿದ್ರೆ ಮನೆ ಮದ್ದನ್ನು ಬಳಸ್ಬಹುದು. ಈಗ ನಾವು ಹೇಳುವ ಮನೆ ಮದ್ದನ್ನು ನೀವು ಪಾಲಿಸಿದ್ರೆ ಹಲ್ಲಿನ ಸಮಸ್ಯೆಯನ್ನು ಕಡಿಮೆ ಮಾಡ್ಬಹುದು. 

ನಿಮ್ಮ ಮನೆಯಲ್ಲಿರುವ ಒಂದೇ ಒಂದು ಆಹಾರವನ್ನು ನೀವು ಅಗೆಯುವ ಮೂಲಕ ಹಲ್ಲು ಹುಳುಕನ್ನು ಕಡಿಮೆ ಮಾಡ್ಕೊಳ್ಳಬಹುದು. ಹಲ್ಲಿನ ಈ ಸಮಸ್ಯೆಗೆ ಕ್ಸಿಲಿಟಾಲ್ (xylitol) ಪರಿಹಾರವಾಗಿದೆ. ಕ್ಸಿಲಿಟಾಲ್, ಕೆಲ ತರಕಾರಿಗಳಲ್ಲಿ ಇರುತ್ತೆ. ಆದ್ರೆ ತುಂಬಾ ಕಡಿಮೆ ಪ್ರಮಾಣದಲ್ಲಿರುವ ಕಾರಣ ಅದು ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡುವುದಿಲ್ಲ. ಕೆಲ ಕಂಪನಿಗಳು ಕ್ಸಿಲಿಟಾಲ್ ಗಮ್ ತಯಾರಿಸುತ್ತವೆ. ನೀವು ಅದನ್ನು ಬಳಕೆ ಮಾಡ್ಬಹುದು. ಸಕ್ಕರೆ ಪ್ರಮಾಣ ಅತಿ ಕಡಿಮೆ ಇರುವ ಕ್ಸಿಲಿಟಾಲ್, ನಿಮ್ಮ ಹಲ್ಲಿನ ಸಮಸ್ಯೆಗೆ ಮದ್ದಾಗುತ್ತದೆ. 

ಜೇನುತುಪ್ಪದಲ್ಲಿ ನೆನೆಸಿದ ಬಾದಾಮಿ ತಿಂದ್ರೆ ಸಿಗೋ 5 ಪ್ರಯೋಜನಗಳಿವು

ಕ್ಸಿಲಿಟಾಲ್ ಗಮ್ ತೆಗೆದುಕೊಂಡು ಅದನ್ನು ಅಗೆಯಬೇಕು.  ಇದನ್ನು ನೀವು ಅಗೆಯುತ್ತಿದ್ದರೆ ಲಾಲಾರಸ ರೂಪುಗೊಳ್ಳುತ್ತದೆ. ಲಾಲಾರಸದಿಂದ ಖನಿಜಗಳು ಅದರ ಮೇಲೆ ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಇದು ಹಲ್ಲುಗಳ ಟೊಳ್ಳನ್ನು ತುಂಬುತ್ತದೆ. ನಿಮಗೆ ಗೊತ್ತಿರುವಂತೆ, ನಮ್ಮ ಬಾಯಿಯಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ನಾವು ಸೇವಿಸುವ ಸಕ್ಕರೆಯನ್ನು ತಿಂದು ನಮ್ಮ ಹಲ್ಲುಗಳ ಮೇಲೆ ಕುಳಿಗಳನ್ನು ಉಂಟು ಮಾಡುತ್ತವೆ. ಆದ್ರೆ ಬ್ಯಾಕ್ಟೀರಿಯಾಗಳು ಕ್ಸಿಲಿಟಾಲ್ ತಿನ್ನಲು ಸಾಧ್ಯವಾಗುವುದಿಲ್ಲ. ಆಗ ಬ್ಯಾಕ್ಟೀರಿಯಾಗಳು ಹಸಿವಿನಿಂದ ಸಾಯುತ್ತವೆ.  ಕ್ಸಿಲಿಟಾಲ್ ಹಲ್ಲುಗಳಿಗೆ ಬ್ಯಾಕ್ಟೀರಿಯಾ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಇದರಿಂದಾಗಿ ಪ್ಲೇಕ್ ಕಡಿಮೆಯಾಗುತ್ತದೆ.  

ಕ್ಸಿಲಿಟಾಲ್ ಸಕ್ಕರೆಯಂತೆ ಒಡೆಯುವುದಿಲ್ಲವಾದ್ದರಿಂದ, ಲಾಲಾರಸದಲ್ಲಿ pH ಮಟ್ಟ ಹೆಚ್ಚಾಗುತ್ತದೆ. ಆಮ್ಲವು ರೂಪುಗೊಳ್ಳುವುದಿಲ್ಲ. ಇದರ ಜೊತೆಗೆ ಕ್ಸಿಲಿಟಾಲ್ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಇದು ಹಾನಿಗೊಳಗಾದ ದಂತಕವಚವನ್ನು ಸರಿಪಡಿಸಲು ಮತ್ತು ಹಲ್ಲುಗಳನ್ನು ಮರುಖನಿಜೀಕರಿಸಲು ಪ್ರಯೋಜನಕಾರಿಯಾಗಿದೆ.  ಕ್ಸಿಲಿಟಾಲ್‌ ಶೇಕಡಾ 100 ರಷ್ಟು ನೈಸರ್ಗಿಕವಾಗಿರುತ್ತದೆ. ಇದು ಸುರಕ್ಷಿತ. ಇದ್ರ ಸೇವನೆ ಮಾಡೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ಕಿವಿಯ ಸೋಂಕನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ವೈದ್ಯರ ಒಪ್ಪಿಗೆ ಮೇಲೆ ಮಧುಮೇಹಿಗಳು ಇದನ್ನು ಬಳಸಬಹುದು. ಒಸಡಿನ ಸಮಸ್ಯೆಯಿಂದ ಬಳಲುವವರು ಇದನ್ನು ಬಳಸಬಹುದು. 

ಹಾರ್ಟ್ ಅಟ್ಯಾಕ್‌ಗೂ ಮುನ್ನ ದೇಹ ನೀಡುವ 8 ಸಂಕೇತಗಳು; ಹಲ್ಲು ನೋವಿದ್ದರೂ ಹೃದಯಾಘಾತ

ಕ್ಸಿಲಿಟಾಲ್ ಒಳಗೊಂಡಿರುವ ಉತ್ಪನ್ನಗಳು : ಕ್ಸಿಲಿಟಾಲ್ ಹೊಂದಿರುವ ಅತ್ಯಂತ ಸಾಮಾನ್ಯವಾಗಿ ಬಳಸುವ ಉತ್ಪನ್ನಗಳೆಂದರೆ ಸಕ್ಕರೆ ರಹಿತ ಚೂಯಿಂಗ್ ಗಮ್ ಮತ್ತು  ಪುದೀನ, ಕ್ಯಾರಮೆಲ್ನ ಮಿಠಾಯಿ. ಟೂತ್‌ಪೇಸ್ಟ್, ಮೌತ್ ಸ್ಪ್ರೇ ಅಥವಾ ವಾಶ್ ನಲ್ಲಿಯೂ ಕ್ಸಿಲಿಟಾಲ್ ಇರುತ್ತದೆ. ಶೇಕಡಾ 100 ರಷ್ಟು ಕ್ಸಿಲಿಟಾಲ್ ಹೊಂದಿರುವ ಮತ್ತು ಹೆಚ್ಚಿನ ಮಟ್ಟದ ಆಮ್ಲವನ್ನು ಹೊಂದಿರದ ಉತ್ಪನ್ನವನ್ನು ಮಾತ್ರ ಖರೀದಿ ಮಾಡಿ.  ಒಂದು ಸಮಯದಲ್ಲಿ ದಿನಕ್ಕೆ 6-10 ಗ್ರಾಂ ಸೇವನೆ ಮಡ್ಬಹುದು. ನೀವು ಬೆಳಿಗ್ಗೆ ಕ್ಸಿಲಿಟಾಲ್ ಟೂತ್‌ಪೇಸ್ಟ್ ಅಥವಾ ಮೌತ್‌ವಾಶ್ ಬಳಸಬಹುದು. ಬೆಳಗಿನ ಉಪಾಹಾರದ ನಂತರ, ಊಟದ ನಂತರ, ರಾತ್ರಿ ಊಟದ ನಂತ್ರ ಕ್ಸಿಲಿಟಾಲ್ ಗಮ್ ಅಥವಾ ಕ್ಯಾಂಡಿ ತಿನ್ನಬಹುದು. ಮಲಗುವ ಮುನ್ನ ಕ್ಸಿಲಿಟಾಲ್ ಡೆಂಟಲ್ ಫ್ಲಾಸ್, ಟೂತ್‌ಪೇಸ್ಟ್ ಅಥವಾ ಮೌತ್‌ವಾಶ್ ಬಳಸಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ