ಯಾರೋ ಹೇಳಿದ್ರು ಅಂತ ಹೆಚ್ಚು ನೀರು ಕುಡಿತೀರಾ? ಮುಂದೆ ಗಂಭೀರ ಸಮಸ್ಯೆ ಆಗುತ್ತೆ.. ಹುಶಾರು!

ಕಿಡ್ನಿ ಸ್ಟೋನ್ ಇದ್ದರೆ ಹೆಚ್ಚು ನೀರು, ಅಥವಾ ಬೇರೆ ಕೆಲವು ಸಮಸ್ಯೆಗಳಲ್ಲಿ ಕಡಿಮೆ ನೀರು ಸೇವನೆಯನ್ನು ಸೂಚಿಸಲಾಗುತ್ತದೆ. ಹೀಗಾಗಿ ಅರೋಗ್ಯವಂತ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣಕ್ಕೂ ವ್ಯತ್ಯಾಸ..

Doctor suggestion for standard water consumption per day for a person

ನಮ್ಮ ದೇಹದಲ್ಲಿ ನೀರಿನ (water) ಪ್ರಮಾಣ ಇಷ್ಟೇ ಇರ್ಬೇಕು ಅಂತ ಒಂದು ಕ್ಯಾಲ್ಕ್ಯಲೇಶನ್ ಇರುತ್ತೆ.. ಅದಕ್ಕಿಂತ ಕಡಿಮೆ ಆದಾಗ ಮೂತ್ರ ಡಾರ್ಕ್ ಹಳದಿ ಬಣ್ಣಕ್ಕೆ ತಿರುಗುತ್ತೆ.. ಅದೇ ಜಾಸ್ತಿ ನೀರು ಕುಡಿದಾಗ ಅದು ಹೆಚ್ಚು ಬಿಳಿ ಬಣ್ಣಕ್ಕೆ ಹತ್ತಿರ ಆಗಿರುತ್ತೆ.. ಅದೇ ರೀತಿ, ನಾವು ಹೆಚ್ಚು ನೀರು ಕುಡಿದಾಗ ಕಿಡ್ನಿಯ ಕಾನ್ಸಂಟ್ರೇಶನ್ ಕೆಪ್ಯಾಸಿಟಿ ಹೋಗ್ಬಿಡುತ್ತೆ.. ನಮ್ಗೆ ಎಷ್ಟು ದಾಹ ಆಗುತ್ತೋ ಅಷ್ಟು ನೀರು ಕುಡಿದರೆ ಸಾಕು. ನಮಗೆ ನೀರು ಬೇಕು, ಅಗತ್ಯವಿದೆ ಅಂದಾಗ ಅದನ್ನು ನಮ್ಮ ಬ್ರೇನ್ ಒಂದು ಇನ್ಫಾರ್ಮೇಶನ್ ಕೊಡುತ್ತೆ, ಆಗ ನೀರು ಕುಡಿದರೆ ಸಾಕು.

ಬಹಳಷ್ಟು ಬೆವರು ಹರಿದುಹೋದರೆ, ಇಲ್ಲ ಹೆಚ್ಚಿನ ದೈಹಿಕ ಕೆಲಸಗಳನ್ನು ಮಾಡಿದರೆ ಆಗ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯ ಇರುತ್ತದೆ. ಕೆಲವೊಬ್ಬರಿಗೆ ನೀರು ನೋಡಿದ ತಕ್ಷಣ ಕುಡಿಬೇಕು ಅನ್ಸುತ್ತೆ, ಅದು ಅವ್ರ ಸೈಕಾಲಜಿಕಲ್ ಸಮಸ್ಯೆ ಅಂತೀವಿ, ಆದ್ರೆ ಹಾಗೆಲ್ಲಾ ಅನಾವಶ್ಯಕ ನೀರು ಕುಡಿತಾನೇ ಹೋಗ್ಬಾರ್ದು. ಕಾರಣ, ಕಿಡ್ನಿಗೆ ಒಂದು ನಿರ್ಧಿಷ್ಟ ನೀರಿನ ಪ್ರಮಾನ ಅಂತ ಇರುತ್ತೆ, ಅದು ಬಿಟ್ಟು ಬೇಕಾಬಿಟ್ಟಿ ಕುಡಿದ್ರೆ, ನೀರು ಕುಡಿದ ತಕ್ಷಣ ಮೂತ್ರ ಬರುತ್ತೆ, ಅನಿವಾರ್ಯವಾಗಿ ಮೂತ್ರ ವಿಸರ್ಜನೆಗೆ ಹೋಗ್ಬೇಕಾಗುತ್ತೆ.. 

Latest Videos

6 ತಿಂಗಳ ಒಳಗಿನ ಮಗುವಿಗೆ ನೀರು ಕುಡಿಸಿದರೆ ಏನಾಗುತ್ತೆ? ತಾಯಂದಿರಿಗೆ ಈ ವಿಚಾರ ತಿಳಿದಿರಬೇಕು!

ಹಾಗೆ, ನೀರು ಕುಡಿದ ತಕ್ಷಣ ಮೂತ್ರ ಹೋಗ್ತಾ ಇದ್ದರೆ ದೇಹದಲ್ಲಿ ಡಿಹೈಡ್ರೇಷನ್ ಆಗುತ್ತೆ.. ಅದಕ್ಕೇ ನಾವು, ದಿನಕ್ಕೆ 1.5 ಲೀಟರ್‌ನಿಂದ 3 ಲೀ ನೀರು ಕುಡಿರಿ ಸಾಕು ಅಂತ ಹೇಳ್ತೀವಿ. ನಾವು ಜಾಸ್ತಿ ಕೆಲಸನೋ ಅಥವಾ, ಜಾಸ್ತಿ ಬೆವರು ಹರಿಯುವಂಥ ಸ್ಥಳಕ್ಕೆ ಹೋದಾಗ ಸಹಜವಾಗಿಯೇ ನಮ್ಮ ದೇಹ ನೀರು ಕೇಳುತ್ತೆ.. ಆಗ, ನಾವು ನೀರು ಕುಡಿದರೆ ಸಾಕು.. ಆದ್ರೆ, ಅನಾವಶ್ಯಕ ನೀರು ಕುಡಿಯೋದ್ರಿಂದ ಕಿಡ್ನಿಯ ಸಾಮರ್ಥ್ಯದಲ್ಲೆ ಏರುಪೇರಾಗಿ, ಅದು ಮುಂದೆ ದೊಡ್ಡ ಸಮಸ್ಯೆಯನ್ನು ತಂದಿಡುತ್ತೆ. ಮತ್ತೆ ಕಿಡ್ನಿನ ರೀಸೆಟ್ ಮಾಡೋದು ತುಂಬಾ ಕಷ್ಟ. 

ಹೆಚ್ಚು ನೀರು ಕುಡಿಯೋದ್ರಿಂದ ಆಗುವ ಮತ್ತೊಂದು ಸಮಸ್ಯೆ ಅಂದ್ರೆ, ನಾವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದಾಗ, ಸಹಜವಾಗಿಯೇ ನಮ್ಮ ದೇಹದಲ್ಲಿ ಸೋಡಿಯಂ ಲೆವಲ್ ಕುಸಿಯುತ್ತೆ.. ನಮ್ಮ ದೇಹದಲ್ಲಿ ನೀರಿನ ಅಂಶ ಜಾಸ್ತಿಯಾಗಿ, ಸೋಡಿಯಂ ಸೇರಿದಂತೆ ಹಲವು ಲವಣಾಂಶಗಳು ಕಡಿಮೆ ಆದಾಗ ಅದು ನಮ್ಮ ಮೆದುಳು ಸೇರಿದಂತೆ ದೇಹದ ಹಲವು ಅಗಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅದ್ರಿಂದ ಹೆಚ್ಚು ನೀರನ್ನು ಯಾವುದೇ ಕಾರಣಕ್ಕೂ ಕುಡಿಬಾರ್ದು. 

ಪ್ರತಿದಿನ ಶುಗರ್‌ಲೆಸ್‌ ಕಾಫಿ ಕುಡಿಯೋದು ಒಳ್ಳೆಯದಾ?

ಇನ್ನು ಕಡಿಮೆ ನೀರು ಕುಡಿಯೋದ್ರಿಂದ ಕೂಡ ಸಮಸ್ಯೆ ಕಟ್ಟಿಟ್ಟ ಬುತ್ತಿ. ನಮ್ಮ ದೇಹದಿಂದ ದಿನವೊಂದಕ್ಕೆ ಕನಿಷ್ಠ 500 ಮೀಲೀ ಲೀಟರ್ ಮೂತ್ರ ಹೊರಗೆ ಹೋಗಲೇಬೇಕು. ಅದಕ್ಕಿಂತ ಕಡಿಮೆ ಹೋದಾಗ ಸಹಜವಾಗಿಯೇ ದೇಹದಿಂದ ಕಲ್ಮಶಗಳು ಹೊರಗೆ ಸರಿಯಾಗಿ ಹೋಗುತ್ತಿಲ್ಲ ಅಂತ ಅರ್ಥ. ಯಾಕಂದ್ರೆ, ನಾವು ದೇಹದೊಳಗೆ ತೆಗೆದುಕೊಳ್ಳುವ ಆಹಾರಗಳಿಂದ ಸಹಜವಾಗಿಯೇ ಟಾಕ್ಸಿನ್‌ ಸೃಷ್ಟಿಯಾಗುತ್ತವೆ. ಆ ಅಂಶಗಳು ದೇಹದಿಂದ ಹೊರಗೆ ಹೋಗಿಲ್ಲ ಅಂದ್ರೆ ಅವು ಮುಂದೆ ನಮ್ಮ ದೇಹಕ್ಕೆ ಸಮಸ್ಯೆ ತಂದಿಡುತ್ತವೆ. 

ಕಡಿಮೆ ನೀರು ಕುಡಿದಾಗ ಕಿಡ್ನಿಯಲ್ಲಿ ಕಲ್ಲು ಉತ್ಪಾದನೆ ಆಗೋ ಚಾನ್ಸ್ ಇರುತ್ತೆ. ನಮ್ಮ ದೇಹದಲ್ಲಿ ಉತ್ಪಾದನೆ ಆಗುವ ಕಲ್ಮಶಗಳು, ಲವಣಾಂಶಗಳು ಹೊರಗೆ ಹೋಗದೇ ಇದ್ದಾಗ, ಅದು ಕಿಡ್ನಿಯಲ್ಲಿ ಕಲ್ಲಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಟಾಕ್ಸಿನ್‌ಗಳು ಕರಗಲು ನೀರು ಬೇಕೇ ಬೇಕು. ಹೀಗಾಗಿ, ದಿನವೊಂದಕ್ಕೆ ಆರೋಗ್ಯವಂತ ವ್ಯಕ್ತಿ 1.5 ರಿಂದ 3 ಲೀಟರ್ ನೀರು ಕುಡಿದರೆ ಸಾಕು. ಇನ್ನು ಅನಾರೋಗ್ಯ ಕಾಡುತ್ತಿದ್ದರೆ ವೈದ್ಯರ ಸಲಹೆಯಂತೆ ನೀರಿನ ಪ್ರಮಾಣವನ್ನು ಮೆಟೇನ್ ಮಾಡಬೇಕಾಗುತ್ತದೆ. 

ಚರ್ಮದ ಕಾಂತಿ ಹೆಚ್ಚಾಗಲು ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು?

ಕಿಡ್ನಿ ಸ್ಟೋನ್ ಇದ್ದರೆ ಹೆಚ್ಚು ನೀರು, ಅಥವಾ ಬೇರೆ ಕೆಲವು ಸಮಸ್ಯೆಗಳಲ್ಲಿ ಕಡಿಮೆ ನೀರು ಸೇವನೆಯನ್ನು ಸೂಚಿಸಲಾಗುತ್ತದೆ. ಹೀಗಾಗಿ ಅರೋಗ್ಯವಂತ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣಕ್ಕೂ ವ್ಯತ್ಯಾಸ ಇರಬೇಕಾಗುತ್ತದೆ' ಎಂದು ವೈದ್ಯರಾಗಿರುವ ಡಾ ವಿದ್ಯಾ ಶಂಕರ್‌ (Dr Vidyashankar) ಖಾಸಗಿ ಚಾನೆಲ್ಲೊಂದರ ಸಂದರ್ಶನದಲ್ಲಿ ಹೇಳಿದ್ದಾರೆ . 

click me!