ಮನೆ, ಕೆಲ್ಸದ ಮಧ್ಯೆ ಪರ್ಸನಲ್ ಲೈಫ್ ಕಳೆದು ಹೋಗಿದ್ಯಾ? ಫಾಲೋ ಮಾಡಿ 8+8+8 ನಿಯಮ

Published : Feb 01, 2025, 11:16 AM ISTUpdated : Feb 28, 2025, 08:23 PM IST
ಮನೆ, ಕೆಲ್ಸದ ಮಧ್ಯೆ ಪರ್ಸನಲ್ ಲೈಫ್ ಕಳೆದು ಹೋಗಿದ್ಯಾ? ಫಾಲೋ ಮಾಡಿ 8+8+8 ನಿಯಮ

ಸಾರಾಂಶ

ಕೆಲಸ, ಕುಟುಂಬ, ವೈಯಕ್ತಿಕ ಜೀವನ ಸಮತೋಲನಕ್ಕೆ 8 +8+8 ನಿಯಮ ಪಾಲಿಸಿ. 8 ಗಂಟೆ ಕೆಲಸ, 8 ಗಂಟೆ ನಿದ್ರೆ, 8ಗಂಟೆ ವಿರಾಮ. ವಿರಾಮದಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯಿರಿ, ಆರೋಗ್ಯ, ಹವ್ಯಾಸಗಳಿಗೆ ಗಮನ ಕೊಡಿ, ಆಂತರಿಕ ಶಾಂತಿ ಬೆಳೆಸಿಕೊಳ್ಳಿ. ವೇಳಾಪಟ್ಟಿ ರಚಿಸಿ, ಪಾಲಿಸಿ, ಮೌಲ್ಯಮಾಪನ ಮಾಡಿ.

ಕೆಲಸ, ಕುಟುಂಬ ಮತ್ತು ವೈಯಕ್ತಿಕ ಜೀವನ (Personal life )ವನ್ನು ಸಮತೋಲನಗೊಳಿಸಲು ನೀವು ತೊಂದ್ರೆ ಅನುಭವಿಸ್ತಿದ್ದೀರಾ? ನಿಮ್ಮ ವೈಯಕ್ತಿಕ ವಿಷ್ಯಕ್ಕೆ ಸಮಯವೇ ಸಿಕ್ತಿಲ್ವಾ? ನೀವು ಮಾತ್ರವಲ್ಲ ನಮ್ಮ ಜಗತ್ತಿನಲ್ಲಿ ನಿಮ್ಮಂತೆ ಅನೇಕ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಜೀವನದಲ್ಲಿ ನಾನಾ ಪಾತ್ರ, ನಾನಾ ಜವಾಬ್ದಾರಿ (responsibility)ಗಳನ್ನು ನಿಭಾಯಿಸೋದು ಸವಾಲಾಗಿದೆ. ಒಂದು ಮಾಡಿದ್ರೆ ಮತ್ತೊಂದಕ್ಕೆ ಸಮಯ ಸಿಗ್ತಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಜೀವನದಲ್ಲಿ ಹೆಚ್ಚು ಸಾಮರಸ್ಯ ಮತ್ತು ಸಂತೋಷ (happiness)ದ ಅಗತ್ಯತೆ ಇದೆ ಎಂದಾದ್ರೆ ನೀವು 8+8+8 ಎಂಬ ಸರಳ ನಿಯಮವನ್ನು ಪಾಲಿಸಬೇಕು. ನಾವಿಂದು 8+8+8 ಅಂದ್ರೇನು ಎಂಬುದನ್ನು ಹೇಳ್ತೇವೆ. 

8+8+8 ನಿಯಮ ಎಂದರೇನು? : ಯಾವ್ದೆ ಕೆಲಸಕ್ಕೂ ಸಮಯವಿಲ್ಲ ಎನ್ನುವವರು ನೀವಾಗಿದ್ರೆ ಈ 8+8+8 ನಿಯಮವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಇದೊಂದು ಸಮಯ ನಿರ್ವಹಣಾ ತಂತ್ರ. ಅದು ನಿಮ್ಮ ದಿನವನ್ನು ಮೂರು ಸಮಾನ ಭಾಗಗಳಾಗಿ ವಿಂಗಡಿಸುತ್ತದೆ. ಈ ನಿಯಮದ ಹಿಂದಿನ ಆಲೋಚನೆಯೆಂದ್ರೆ, ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ನಿಗದಿಪಡಿಸುವ ಮೂಲಕ, ನೀವು ನಿಮ್ಮ ಉತ್ಪಾದಕತೆ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಅತ್ಯುತ್ತಮಗೊಳಿಸಬಹುದು. 

8+8+8 ನಿಯಮವು ಈ ಕೆಳಗಿನ ತತ್ವಗಳನ್ನು ಆಧರಿಸಿದೆ:

8 ಗಂಟೆಗಳ ಪ್ರಾಮಾಣಿಕ ಕಠಿಣ ಪರಿಶ್ರಮ : ಇದರರ್ಥ ನಿಮ್ಮ ವೃತ್ತಿಪರ ಅಥವಾ ಶೈಕ್ಷಣಿಕ ಗುರಿಗಳಿಗೆ ಹಾಗೂ ನಿಮ್ಮ ಗಮನ ಮತ್ತು ಶ್ರಮ ಅಗತ್ಯವಿರುವ ಯಾವುದೇ ಇತರ ಕಾರ್ಯಗಳಿಗೆ ನಿಮ್ಮನ್ನು ಅರ್ಪಿಸಿಕೊಳ್ಳುವುದು. ದಿನಕ್ಕೆ 8 ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡುವುದರಿಂದ, ನಿಮ್ಮ ವೃತ್ತಿ ಅಥವಾ ಅಧ್ಯಯನದಲ್ಲಿ ನೀವು ಹೆಚ್ಚಿನ ಫಲಿತಾಂಶಗಳು ಮತ್ತು ತೃಪ್ತಿಯನ್ನು ಸಾಧಿಸಬಹುದು. ಗೊಂದಲ, ವಿಳಂಬ ಮತ್ತು ಅನಗತ್ಯ ಒತ್ತಡವನ್ನು ತಪ್ಪಿಸಲು ಇದು ನೆರವಾಗುತ್ತದೆ. ನೀವು ಈ ಸಮಯದಲ್ಲಿ ಎಷ್ಟು ಕೆಲಸ ಮಾಡಿದ್ದೀರಿ ಎಂಬುದನ್ನು ಗಮನಿಸಬಾರದು, ಎಷ್ಟು ಗುಣಮಟ್ಟದ ಕೆಲಸ ಮಾಡಿದ್ದೀರಿ ಎಂಬುದನ್ನು ಗಮನಿಸಬೇಕು.

ದಿನಾ ಒಂದು ಸೇಬು ತಿಂದ್ರೆ ಈ ರೋಗಗಳಿಂದ ದೂರವಿರಬಹುದು

8 ಗಂಟೆಗಳ ಉತ್ತಮ ನಿದ್ರೆ : ಇದರರ್ಥ ನಿಮ್ಮ ದೇಹ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆ ನೀಡುವುದು. ರಾತ್ರಿ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸುವ ಮೂಲಕ, ನೀವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು.  ಇದು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ಪ್ರತಿ ದಿನ ನೀವು ಒಂದೇ ಸಮಯಕ್ಕೆ ಮಲಗ್ಬೇಕು, ಒಂದೇ ಸಮಯಕ್ಕೆ ಏಳಬೇಕು. ಮಲಗುವ ಮುನ್ನ ಕೆಫೀನ್, ಆಲ್ಕೋಹಾಲ್ ಸೇವನೆ ತಪ್ಪಿಸಬೇಕು. ಮೊಬೈಲ್, ಲ್ಯಾಪ್ ಟಾಪ್, ಟಿವಿಯಿಂದ ದೂರವಿದ್ದು ಆರಾಮದಾಯಕ ನಿದ್ರೆಗೆ ಆದ್ಯತೆ ನೀಡುವುದು. 

8 ಗಂಟೆಗಳ ವಿರಾಮ ಚಟುವಟಿಕೆಗಳು : ಇದರರ್ಥ ನಿಮ್ಮನ್ನು ಸಂತೋಷಪಡಿಸುವ ಮತ್ತು ತೃಪ್ತಿಪಡಿಸುವ ವಿಷಯಗಳಲ್ಲಿ ಸಮಯ ಕಳೆಯುವುದು. ದಿನಕ್ಕೆ 8 ಗಂಟೆಗಳ ಕಾಲ ನಿಮ್ಮನ್ನು ಆನಂದಿಸುವ ಮೂಲಕ, ನೀವು ನಿಮ್ಮ ಜೀವನವನ್ನು ಹೆಚ್ಚು ಸಂತೋಷದಿಂದ ಕಳೆಯುವುದು. ನೀವು ಈ ಸಮಯದಲ್ಲಿ ನಿಮ್ಮ ಬೆಳವಣಿಗೆ ಮತ್ತು ಯೋಗಕ್ಷೇಮಕ್ಕೆ ಪ್ರಯೋಜನಕಾರಿಯಾದ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.  

ನಿದ್ರೆ ಮಾಡುವಾಗ ಈ ಮಲಗುವ ಭಂಗಿ ಗೊತ್ತಿರಲಿ!

ವಿರಾಮದ ಚಟುವಟಿಕೆಯನ್ನು ನೀವು ಮತ್ತೆ ಮೂರು ಭಾಗವಾಗಿ ವಿಂಗಡಿಸಬಹುದು. 3Fs, 3Hs ಮತ್ತು 3Ss. 3Fs  ಅಂದ್ರೆ ನೀವು ಕುಟುಂಬ, ಸ್ನೇಹಿತರ ಜೊತೆ ಸಮಯ ಕಳೆಯುವುದು. ಸಂಬಂಧಗಳು ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬಲಪಡಿಸಬಹುದು. 3Hs  ಅಂದ್ರೆ ಆರೋಗ್ಯ, ನೈರ್ಮಲ್ಯ ಮತ್ತು ಹವ್ಯಾಸದತ್ತ ಗಮನ ಹರಿಸುವುದು. 3Ss  ಅಂದ್ರೆ ಆಂತರಿಕ ಶಾಂತಿ ಮತ್ತು ಸಂತೋಷವನ್ನು ಪೋಷಿಸುವ ಕ್ರಿಯೆ.  ಆಸಕ್ತಿಗಳು ಮತ್ತು ಪ್ರತಿಭೆಗಳನ್ನು ಅನ್ವೇಷಿಸಬಹುದು. ನೀವು  ಪ್ರತಿ ದಿನ ಅಥವಾ ವಾರ ಪ್ರಾರಂಭವಾಗುವ ಮೊದಲು, ನೀವು ನಿಮ್ಮ ಸಮಯವನ್ನು ಹೇಗೆ ಕಳೆಯಲು ಬಯಸುತ್ತೀರಿ ಎಂಬುದರ ವೇಳಾಪಟ್ಟಿಯನ್ನು ಮಾಡಿ. ಅದರಂತೆ ನಡೆದುಕೊಳ್ಳಿ. ಅದನ್ನು ಟ್ರ್ಯಾಕ್ ಮಾಡ್ತಾ ಇರಿ. ವಾರಾಂತ್ಯದಲ್ಲಿ ಅದರ ಫಲಿತಾಂಶವನ್ನು ಮೌಲ್ಯಮಾಪನ ಮಾಡಿ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು