World Health Day: ದಿನಾ ಮಾಡೋ ಇಂಥಾ ತಪ್ಪು ಹೃದಯದ ಆರೋಗ್ಯ ಹಾಳು ಮಾಡುತ್ತೆ

By Vinutha Perla  |  First Published Apr 7, 2024, 9:31 AM IST

ಪ್ರಪಂಚದಾದ್ಯಂತದ ಜನರು ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲು ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಏಪ್ರಿಲ್ 7, 1948ರಂದು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯ ನೆನಪಿಗಾಗಿ ಇದನ್ನು ಆರಂಭಿಸಿತು. ಈ ವರ್ಷ, WHO 76ನೇ ವಾರ್ಷಿಕೋತ್ಸವವನ್ನು  'ನನ್ನ ಆರೋಗ್ಯ, ನನ್ನ ಹಕ್ಕು' ಎಂಬ ವಿಷಯದಡಿ ಆಚರಿಸಲಾಗುತ್ತಿದೆ.


ಪ್ರಪಂಚದಾದ್ಯಂತದ ಜನರು ಆರೋಗ್ಯದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಲು ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಏಪ್ರಿಲ್ 7, 1948ರಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಥಾಪನೆಯ ನೆನಪಿಗಾಗಿ ಇದನ್ನು ಆರಂಭಿಸಿತು. ಈ ವರ್ಷ, WHO 76ನೇ ವಾರ್ಷಿಕೋತ್ಸವವನ್ನು  'ನನ್ನ ಆರೋಗ್ಯ, ನನ್ನ ಹಕ್ಕು' ಎಂಬ ವಿಷಯದಡಿ ಆಚರಿಸಲಾಗುತ್ತಿದೆ. ನಾವು ದಿನನಿತ್ಯದ ಜೀವನದಲ್ಲಿ ಮಾಡುವ ತಪ್ಪುಗಳು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಜೀವನಶೈಲಿ ಆಯ್ಕೆಗಳಿಂದ ಹಿಡಿದು ಕೆಟ್ಟ ಅಭ್ಯಾಸಗಳ ವರೆಗೆ, ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಸಲಹೆಗಳು ಇಲ್ಲಿವೆ.

ಜಡ ಜೀವನಶೈಲಿ: ಇವತ್ತಿನ ದಿನಗಳಲ್ಲಿ ಎಲ್ಲರೂ ಅತಿಯಾದ ಜಡ ಜೀವನಶೈಲಿಯನ್ನು ಅನುಸರಿಸುತ್ತಾರೆ. ದೀರ್ಘಕಾಲ ಕುಳಿತುಕೊಳ್ಳುವುದು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕುಳಿತುಕೊಂಡು ಮಾಡುವ ಕೆಲಸ  ಹೃದ್ರೋಗ ಮತ್ತು ಇತರ ಹೃದಯರಕ್ತನಾಳದ ಸಮಸ್ಯೆಗಳಿಗೆ ನಿಕಟ ಸಂಬಂಧ ಹೊಂದಿದೆ. ದೈನಂದಿನ ದಿನಚರಿಯಲ್ಲಿ ನಿಯಮಿತ ದೈಹಿಕ ಚಟುವಟಿಕೆಯನ್ನು ಸೇರಿಸುವ ಮೂಲಕ ಇದನ್ನು ಹೋಗಲಾಡಿಸಬಹುದು. ವ್ಯಾಯಾಮ, ಚುರುಕಾದ ನಡಿಗೆ, ಸೈಕ್ಲಿಂಗ್ ಅಥವಾ ಡ್ಯಾನ್ಸ್‌ ಸಹ ಆರೋಗ್ಯ ಚೆನ್ನಾಗಿರಲು ನೆರವಾಗುತ್ತದೆ.

Latest Videos

undefined

ಅತಿಯಾದ ಪ್ರೋಟೀನ್ ಸೇವನೆಯಿಂದ ಹೆಚ್ಚುತ್ತೆ ಹೃದ್ರೋಗದ ಅಪಾಯ; ಅಧ್ಯಯನ

ಅನಾರೋಗ್ಯಕರ ಆಹಾರ ಪದ್ಧತಿ: ಕಳಪೆ ಆಹಾರದ ಆಯ್ಕೆಗಳು ಹೃದಯದ ಆರೋಗ್ಯದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಕೊಬ್ಬುಗಳು, ಸಕ್ಕರೆ ಮತ್ತು ಸೋಡಿಯಂ ಅಧಿಕವಾಗಿರುವ ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ನೇರ ಪ್ರೋಟೀನ್‌ಗಳು, ಬೀಜಗಳು ಮತ್ತು ಆವಕಾಡೊಗಳಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಆರಿಸಿಕೊಳ್ಳಿ. ಸಕ್ಕರೆ ಪಾನೀಯಗಳು, ಕರಿದ ಆಹಾರಗಳು ಮತ್ತು ಸಂಸ್ಕರಿಸಿದ ತಿಂಡಿಗಳ ಸೇವನೆಯನ್ನು ಮಿತಿಗೊಳಿಸಿ.

ಮಾನಸಿಕ ಒತ್ತಡ: ದೀರ್ಘಕಾಲದ ಒತ್ತಡವು ಕೇವಲ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವುದಿಲ್ಲ. ಬದಲಿಗೆ ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಕಾಲದ ಒತ್ತಡವು ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ಅತಿಯಾಗಿ ತಿನ್ನುವುದು ಅಥವಾ ಧೂಮಪಾನದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿ ರಾತ್ರಿ ಸಾಕಷ್ಟು ನಿದ್ರೆ ಪಡೆಯುವುದು ಸಹ ಮುಖ್ಯ. ಏಕೆಂದರೆ ಒತ್ತಡದ ಮಟ್ಟವನ್ನು ನಿರ್ವಹಿಸಲು ಗುಣಮಟ್ಟದ ವಿಶ್ರಾಂತಿ ಮುಖ್ಯವಾಗಿದೆ.

Health Tips: ಈ ಸರಳ ವಿಧಾನದಿಂದ ನಿಮ್ಮ ಹೃದಯದ ಆರೋಗ್ಯವ ಸ್ವಯಂ ಪರೀಕ್ಷಿಸಿಕೊಳ್ಳಿ

ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿ: ನಿಯಮಿತ ಆರೋಗ್ಯ ತಪಾಸಣೆಗಳನ್ನು ನಿರ್ಲಕ್ಷಿಸುವುದು ಹೃದಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌ನಂತಹ ಆರೋಗ್ಯ ಸಮಸ್ಯೆಗಳು ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆರೋಗ್ಯ ತಪಾಸಣೆಯ ಸಂದರ್ಭವಷ್ಟೇ ತಿಳಿದುಬರುತ್ತದೆ. ಹೀಗಾಗಿ ಆರೋಗ್ಯ ತಪಾಸಣೆ ಮಾಡದಿದ್ದಲ್ಲಿ ಹೃದಯದ ಆರೋಗ್ಯ ಸಮಸ್ಯೆ ಇದ್ದರೂ ಗೊತ್ತಾಗಲ್ಲ

ಆರೋಗ್ಯ ಸಮಸ್ಯೆ ನಿರ್ಲಕ್ಷಿಸಬೇಡಿ: ಹೃದಯ ಸಮಸ್ಯೆಗಳ ಎಚ್ಚರಿಕೆ ಚಿಹ್ನೆಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಿದೆ. ಎದೆ ನೋವು,ಅಸ್ವಸ್ಥತೆ, ಉಸಿರಾಟದ ತೊಂದರೆ, ಆಯಾಸ, ತಲೆತಿರುಗುವಿಕೆ ಮತ್ತು ವೇಗ ಹೃದಯ ಬಡಿತದಂತಹ ರೋಗಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಈ ಯಾವುದೇ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.

click me!