ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ, ಓರ್ವ ವಿದ್ಯಾರ್ಥಿನಿಗೆ ಕಾಲರಾ ದೃಢ!

By Suvarna News  |  First Published Apr 6, 2024, 12:39 PM IST

ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯ ಓರ್ವ ವಿದ್ಯಾರ್ಥಿನಿಯ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ.


ಬೆಂಗಳೂರು (ಏ.6): ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯ ಓರ್ವ ವಿದ್ಯಾರ್ಥಿನಿಯ ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ. ಸರಾಸರಿ 47 ವೈದ್ಯರಿಗೆ ಕಾಲರಾ ಅಟ್ಯಾಕ್ ಆಗಿರುವ ಬಗ್ಗೆ ಸುದ್ದಿಯಾಗಿತ್ತು. ವಿದ್ಯಾರ್ಥಿಗಳು ವಾಂತಿ, ಭೇದಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಐಸಿಯು ನಲ್ಲಿ 4 ಜನ ಸಂಶೋಧನಾ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು H ಬ್ಲಾಕ್ ನಲ್ಲಿ ದಾಖಲು ಮಾಡಲಾಗಿದೆ. ಹಾಸ್ಟೆಲ್ ಅವ್ಯವಸ್ಥೆಯಿಂದ ಕಾಲರಾ ಹರಡಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ಓರ್ವ ವಿದ್ಯಾರ್ಥಿನಿಗೆ ಕಾಲರಾ ಬಂದಿರುವುದು ದೃಢವಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ 47 ವೈದ್ಯಕೀಯ ವಿದ್ಯಾರ್ಥಿಗಳಲ್ಲಿ  26 ವರ್ಷದ ಫ್ರಫೂಲ್ಲ ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಆಗಿದೆ. ಬ್ಲಡ್ ಸ್ಯಾಂಪಲ್ ನಲ್ಲಿ ಕಾಲರಾ ಬಂದಿರುವುದು ದೃಢವಾಗಿದೆ. ಮಿಕ್ಕ   46 ಸಂಶೋಧನಾ ವಿದ್ಯಾರ್ಥಿನಿಯರ ಟೆಸ್ಟ್ ರಿಪೋರ್ಟ್ ಇನ್ನು ಬರಬೇಕಷ್ಟೇ. ಕಲ್ಚರ್ ರಿಪೋರ್ಟ್ ಇನ್ನು ಮೂರು ದಿನದಲ್ಲಿ ಬರುವ ಸಾಧ್ಯತೆ ಇದ್ದು, ಬಂದನಂತರ ಕಾಲರಾದ ಬಗ್ಗೆ ಸ್ಪಷ್ಟನೆ ಸಿಗಲಿದೆ.

Tap to resize

Latest Videos

undefined

'ಕೋವಿಡ್‌ಗಿಂತ 100 ಪಟ್ಟು ಡೇಂಜರ್', ಮಾರಣಾಂತಿಕ H5N1 ಹಕ್ಕಿ ಜ್ವರದ ಬಗ್ಗೆ ತಜ್ಞರಿಂದ ಎಚ್ಚರಿಕೆ

ಬಿಎಂಸಿಆರ್‌ಐ (Bangalore Medical College and Research Institute - BMCRI) ಹಾಸ್ಟೆಲ್ ನಲ್ಲಿ ಕನಿಷ್ಠ ಸ್ವಚ್ಛತೆ ಇಲ್ಲದ ಬಗ್ಗೆ ಹಲವು ಬಾರಿ ದೂರು ವಿದ್ಯಾರ್ಥಿಗಳು ನೀಡಿದ್ದರು. ಈ ವೇಳೆ ಸ್ವಚ್ಛತೆ ಬೇಕು ಅಂದ್ರೆ ಹಾಸ್ಟೆಲ್ ಬಿಟ್ಟು ಹೋಗಿ ಎಂದು  ವಾರ್ಡನ್ ದರ್ಪ ತೋರಿದ್ದಾರೆ. ನಿಮ್ಮ ಸ್ಟೈಫೆಂಡ್ ಹಣದಲ್ಲಿ ಬದುಕಿ ಎಂದು ವಾರ್ಡನ್ ಧಿಮಾಕು ಹಾಕಿದ್ದಾರೆ. ಕುಡಿಯುವ ನೀರು ಕೂಡ ಕೊಳಕಾಗಿದೆ. ಹೀಗಾಗಿ ಹಣಕೊಟ್ಟು ವಿದ್ಯಾರ್ಥಿಗಳು ಬಾಟೆಲ್ ನೀರು ಖರೀದಿಸುತ್ತಿದ್ದರು. 

ಇನ್ನು  ಬೆಂಗಳೂರು ವೈದ್ಯಕೀಯ ಕಾಲೇಜಿನ ಡೀನ್ ಅವರು ನಿನ್ನೆ  ಹಾಸ್ಟೆಲ್ ಗೆ ಭೇಟಿ ನೀಡಿ ಸಮಸ್ಯೆ ಬಗ್ಗೆ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು. ಹೀಗಾಗಿ ಇಂದು ಅವ್ಯವಸ್ಥೆ ಕುರಿತು ಪರಿಶೀಲನೆ ಕಮಿಟಿ ರಚನೆ ಮಾಡಲು ತೀರ್ಮಾನಿಸಿದ್ದಾರೆ. ಕಮಿಟಿ ಸಭೆ ನಡೆಸಿ ವಾರ್ಡನ್ ತಪ್ಪು ಕಂಡುಬಂದರೆ BMCRI ಹಾಸ್ಟೆಲ್ ವಾರ್ಡನ್ ಅಖಿಲಾಂಡೇಶ್ವರಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಲಿದ್ದಾರೆ.

ಇನ್ನು BMCRI ಹಾಸ್ಟೆಲಲ್ಲಿ ಕಾಲರಾ ಶಂಕೆ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಹಾಸ್ಟೆಲ್ ಗೆ ಭೇಟಿ ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆರೊಗ್ಯಾಧಿಕಾರಿಗಳು, ಡಿಹೆಚ್ ಓಗಳ‌ ತಂಡ ಭೇಟಿ ನೀಡಿ. ಹಾಸ್ಟೆಲ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದೆ. ಕಲುಷಿತ ನೀರಿನ ಬಳಕೆ, ಆಹಾರ ಸರಿಯಿಲ್ಲದಿರುವುದರ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಇನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿಯರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ಅವರ ಸಮಸ್ಯೆ ಆಲಿಸಿದರು.

ಏ.8ಕ್ಕೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ಶ್ರವಣದೋಷದ ಬೆಂಗಳೂರು ವಕೀಲೆ ಸಾರಾ ಸನ್ನಿ ಇತಿಹಾಸ

ಇನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಹೇಳಿಕೆ ನೀಡಿ ನಿನ್ನೆ BMS ನ  47 ವೈದ್ಯಕೀಯ ವಿದ್ಯಾರ್ಥಿಗಳು ಅಡ್ಮಿಟ್ ಆಗಿದ್ದಾರೆ. 41 ವಿದ್ಯಾರ್ಥಿಗಳು ಟ್ರಾಮಾ ಸೆಂಟರ್ ನಲ್ಲಿ ಇದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಡಿಸ್ಚಾರ್ಜ್ ಆಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ಸ್ಕ್ರೀನಿಂಗ್ ಟೆಸ್ಟ್ ನಲ್ಲಿ ಒಬ್ಬ ವಿದ್ಯಾರ್ಥಿಯ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಐಸಿಯುನಲ್ಲಿ ಒಬ್ಬ ಪೇಷೆಂಟ್ ಇದ್ದಾರೆ. ಬಿಬಿಎಂಪಿಗೆ ‌ಮಾಹಿತಿ ಕೊಡಲಾಗಿದೆ. ಕಲ್ಚರ್ ರಿಪೋರ್ಟ್ ಬರಲು ಇನ್ನೂ‌ 3 ದಿನ ಬೇಕು. ಹಾಸ್ಟೆಲ್ ನಲ್ಲಿ ಒಟ್ಟು 200 ವಿದ್ಯಾರ್ಥಿಗಳು ಇದ್ದಾರೆ. ನೀರು ಆಗಿದ್ದರೆ ಎಲ್ಲಾ ವಿದ್ಯಾರ್ಥಿಗಳಿಗೆ ಸೋಂಕು ತಗುಲಬೇಕಿತ್ತು. ಆದರೆ ಕೇವಲ 47 ವಿದ್ಯಾರ್ಥಿಗಳಿಗೆ ಮಾತ್ರ ಹೀಗಾಗಿದೆ.  ಫುಡ್ ನಿಂದ ಹೀಗಾಗಿರಬಹುದು. ಹೀಗಾಗಿ ಹಾಸ್ಟೆಲ್ ಅಡುಗೆ ಮನೆ ಸೀಲ್ ಮಾಡಲಾಗಿದೆ.

ನಮ್ಮ ಆಸ್ಪತ್ರೆ ಕಡೆಯಿಂದ ವಿದ್ಯಾರ್ಥಿಗಳಿಗೆ ಊಟ, ನೀರಿನ ವ್ಯವಸ್ಥೆ ‌ಮಾಡಲಾಗಿದೆ. ಹಾಸ್ಟೆಲ್ ಫೋಟೊ ಹಳೆಯದ್ದು, ಒಂದು ವರ್ಷದ ಹಿಂದಿನ ಹಳೇ ಫೋಟೊ. ಈಗ ಹಾಸ್ಟೆಲ್ ವ್ಯವಸ್ಥೆ ಚೆನ್ನಾಗಿದೆ. ನಾನು‌ ಕೂಡ ಹಾಸ್ಟೆಲ್ ಹೋಗಿ ಪರಿಶೀಲನೆ ನಡೆಸಿದ್ದೇನೆ. ಫೋಟೊಗೂ, ಈ ಆರೋಗ್ಯ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ. ಹಾಸ್ಟೆಲ್ ನಲ್ಲಿ ಉಳಿದವರಿಗೆ ಯಾವುದೇ ಗುಣಲಕ್ಷಣಗಳು ಇಲ್ಲ. ಸುಮಾರು 800 ವಿದ್ಯಾರ್ಥಿಗಳು ಇದ್ದಾರೆ, ಒಟ್ಟು 2 ಹಾಸ್ಟೆಲ್ ಇದೆ. H ಬ್ಲಾಕ್ ನಲ್ಲಿ ಇರುವ ವಿದ್ಯಾರ್ಥಿಗಳು ಇವತ್ತು ಸಂಜೆ ಡಿಸ್ಚಾರ್ಜ್ ಆಗಬಹುದು. ಇಬ್ಬರು ವಿದ್ಯಾರ್ಥಿಗಳು ಮಾತ್ರ ಐಸಿಯುನಲ್ಲಿ ಇದ್ದಾರೆ. ಅವರ ಆರೋಗ್ಯ ಕೂಡ ಸ್ಥಿರವಾಗಿದೆ. 47 ವಿದ್ಯಾರ್ಥಿಗಳಿಗೆ ಲೂಸ್ ಮೋಷನ್, ವಾಮಿಟಿಂಗ್ ಇತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ‌ ಕೊಡಲಾಗುತ್ತಿದೆ ಎಂದಿದ್ದಾರೆ. 

ಇನ್ನು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ ಪ್ರಶಾಂತ್ ಹೇಳಿಕೆ ನೀಡಿ, ಮೂವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಒಬ್ಬರಿಗೆ ಕಿಡ್ನಿ ಪ್ರಾಬ್ಲಂ ಆಗಿತ್ತು, ನೆಫ್ರಾಲಜಿಸ್ಟ್ ಅಭಿಪ್ರಾಯದಂತೆ ಆಂಟಿಬಯೋಟಿಕ್ ಶುರು ಮಾಡಲಾಗಿದೆ. ಇನ್ನೊಬ್ಬ ವಿದ್ಯಾರ್ಥಿನಿ ಶಾಕ್ ಲ್ಲಿ ಬಂದಿದ್ರು, ಹೀಗಾಗಿ ಬಿಪಿ ಜಾಸ್ತಿಯಾಗಿತ್ತು. ಇವತ್ತು ಎಲ್ಲರೂ ರಿಕವರಿ ಆಗ್ತಿದ್ದಾರೆ. ಇವತ್ತು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತೆ. ಹ್ಯಾಂಗಿಂಗ್ ರಿಪೋರ್ಟ್ ನೆಗೆಟಿವ್ ಬಂದಿದೆ, ಕಲ್ಚರ್ ರಿಪೋರ್ಟ್ ಮೂರ್ನಾಲ್ಕು ದಿನದಲ್ಲಿ ಬರಲಿದೆ. 47 ವಿದ್ಯಾರ್ಥಿನಿಯರಿಗೆ ಭೇದಿ ಮಾತ್ರ ಇತ್ತು, ವಾಂತಿ ಇರಲಿಲ್ಲ. ಹೀಗಾಗಿ ಇದು ಕಾಲರಾ ಅನ್ನಕ್ಕಾಗಲ್ಲ. ತಾಪಮಾನದಿಂದ ಫುಡ್ ಪಾಯಿಸನ್ ಆಗಿರಬಹುದು. ಫುಡ್ ಪಾಯಿಸನ್ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗ್ತಿದೆ. ಸ್ಟೂಲ್ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದಿರುವ ವಿದ್ಯಾರ್ಥಿನಿ ಸ್ಟೇಬಲ್ ಆಗಿದ್ದಾರೆ. ಕಲ್ಚರ್ ರಿಪೋರ್ಟ್ ಗಾಗಿ ಕಾಯ್ತಿದ್ದೇವೆ ಎಂದಿದ್ದಾರೆ. 

click me!