ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಕಾಲರಾ ಪ್ರಕರಣ ಹೆಚ್ಚಳ, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 49ಕ್ಕೆ ಏರಿಕೆ!

By Suvarna News  |  First Published Apr 6, 2024, 4:04 PM IST

ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯದ ಮಾಹಿತಿಯಂತೆ ಇಬ್ಬರು ವೈದ್ಯ ವಿದ್ಯಾರ್ಥಿನಿಯರಿಗೆ  ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ. 


ಬೆಂಗಳೂರು (ಏ.6):  ಬೆಂಗಳೂರು ವೈದ್ಯಕೀಯ ಕಾಲೇಜಿನ ಮಹಿಳಾ ಹಾಸ್ಟೆಲ್ ನಲ್ಲಿ ಕಾಲರಾ ರೋಗ ಬಾಧಿಸಿರುವುದು ಸ್ಪಷ್ಟವಾಗಿದೆ. ಸದ್ಯದ ಮಾಹಿತಿಯಂತೆ ಇಬ್ಬರು ವೈದ್ಯ ವಿದ್ಯಾರ್ಥಿನಿಯರಿಗೆ  ಪರೀಕ್ಷಾ ಮಾದರಿ ಪಾಸಿಟಿವ್ ಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೌಶಿನ್ ಇದನ್ನು ಸ್ಪಷ್ಟಪಡಿಸಿದ್ದಾರೆ. ನಿನ್ನೆ 47 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು ಆಗಿದ್ದರು. ಇಂದು ಹೊಸದಾಗಿ ಇಬ್ಬರು ದಾಖಲಾಗಿದ್ದಾರೆ. ಈಗ ಒಟ್ಟು 49ರ ಪೈಕಿ ಇಬ್ಬರಿಗೆ ಕಾಲರಾ ಇರುವುದು ದೃಢವಾಗಿದೆ ಎಂದಿದ್ದಾರೆ.

ಜೊತೆಗೆ ವಿದ್ಯಾರ್ಥಿಗಳನ್ನ ಭೇಟಿ ಮಾಡಿ ಮಾತನಾಡಿದ್ವಿ, ಅವರು ಕೆಲ ಕಂಪ್ಲೆಟ್ ಮಾಡಿದ್ದಾರೆ. ಕುಡಿಯುವ ನೀರಿನ ಫಿಲ್ಟರ್ ಸಮಸ್ಯೆಯಿದೆ, 4 ಫಿಲ್ಟರ್ ನಲ್ಲಿ ಎರಡು ಕೆಟ್ಟು ಹೋಗಿದೆ. ನಾವು ವಾರ್ಡನ್ ಬಳಿ ಕೇಳಿದಾಗ ಅವರು ರಿಪೇರಿಗೆ ಕಾಲ್ ಮಾಡಿದ್ವಿ‌ ಬಂದಿಲ್ಲ ಅಂದ್ರು. ಸ್ವಚ್ಚತೆ ಸಮಸ್ಯೆಯಿದೆ. ಕ್ಲಿನ್ ಮಾಡಲು ತಿಳಿಸಲಾಗಿದೆ. ಅಡಿಗೆ ಸಿಬ್ಬಂದಿ ಬದಲಾವಣೆ ಸೂಚಿಸಿದ್ದೇವೆ. ವಿದ್ಯಾರ್ಥಿನಿಯರು ಡೈರೆಕ್ಟರ್ ಗಮನಕ್ಕೆ ತಂದಿಲ್ಲಂತೆ ವಾರ್ಡನ್ ಮಾತ್ರ ದೂರು ನೀಡಿದ್ದಾರಂತೆ. ಈ ಸಮಸ್ಯೆ ಬಂದಾಗ ಡೈರೆಕ್ಟರ್ ದೂರು ನೀಡಬೇಕಿತ್ತು ಅವರು ನೀಡಿಲ್ಲ. ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳತ್ತೇವೆ.

Tap to resize

Latest Videos

undefined

ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ, ಓರ್ವ ವಿದ್ಯಾರ್ಥಿನಿಗೆ ಕಾಲರಾ ದೃಢ!

ಕಲ್ಚರ್ ರಿಪೋರ್ಟ್ ನಲ್ಲಿ ಎರಡು ಕಾಲರಾ ಕೇಸ್ ಪತ್ತೆಯಾಗಿದೆ. ಮತ್ತೋರ್ವ ವಿದ್ಯಾರ್ಥಿನಿಗೆ ಕಾಲರಾ ಪತ್ತೆಯ ಬಗ್ಗೆ ಅನುಮಾನವಿದೆ. ವರದಿ ನಮ್ಮ ಕೈ ಸೇರಿದೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಹಾಸ್ಟೆಲ್ ನಲ್ಲಿ ಅವ್ಯವಸ್ಥೆ ಇರೋದು ಪರಿಶೀಲನೆ ವೇಳೆ ಕಂಡುಬಂದಿದೆ. ಅದನ್ನ ಸರಿ ಮಾಡುವ ಅಧಿಕಾರ ವಾರ್ಡನ್ ಗೆ ಇತ್ತು ಅವರು ಮಾಡಿಲ್ಲ ಹೀಗಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಕಾಲರಾ ಪತ್ತೆ ಹಿನ್ನೆಲೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹೊರಗಿನಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಸ್ಟೆಲ್ ಕಿಚನ್ ಸೀಝ್ ಮಾಡಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ ಕಿಚನ್ ನಿಂದ  ಊಟದ ವ್ಯವಸ್ಥೆ ಮಾಡಲಾಗಿದೆ.

Cholera: ರಾಜ್ಯದ ಜನರಿಗೆ ಶುರುವಾಯ್ತಾ ಕಾಲರಾ ಭೀತಿ ? ಬಾಲಕಿಯರ ಹಾಸ್ಟೆಲ್‌ನ 47 ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆ ?

ಮಹಿಳಾ‌ ಆಯೋಗ ಅಧ್ಯಕ್ಷೆ ನಾಗಲಕ್ಷ್ಮಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಐಸಿಯು ನಲ್ಲಿರುವ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದೇನೆ. ವಿದ್ಯಾರ್ಥಿನಿಯರು ಪಿಜಿ ಮಾಡ್ತಿದ್ದಾರೆ. ಮೊದಲು ಭೇದಿ ಶುರುವಾಯ್ತು ಅಂತಂದ್ರು, ಆದ್ರೆ ಈಗ ಎಲ್ಲರೂ ಚೆನ್ನಾಗಿದ್ದಾರೆ. ಎರಡು ನೀರಿನ ಟ್ಯಾಂಕ್ ರಿಪೇರಿಯಲ್ಲಿದೆ. ಮೆಸ್ ಕ್ಲೋಸ್ ಮಾಡಿಸಲಾಗಿದೆ. ಊಟದಲ್ಲಿ ಹುಳ ಜಿರಳೆ ತಿಗಣೆ ಇದೆ ಎಂದು ಸಮಸ್ಯೆ ಹೇಳ್ಕೊಂಡಿದ್ದಾರೆ. ಓದೋಕೆ ಹೋಗಿ ರಾತ್ರಿ ಹತ್ತು ಗಂಟೆ ಮೇಲೆ ಬಂದ್ರೆ ಹೆಚ್ಚು ಫೈನ್ ಹಾಕ್ತಾರೆ. ಒಂದು ವಾರದಲ್ಲಿ ಇದಕ್ಕೆ ವಿವರಣೆ ನೀಡ್ಬೇಕು ಎಂದು ಸೂಚನೆ ನೀಡಿದ್ದೇನೆ. ಮೂರು ಜನ ಕೂರುವ ರೂಮಲ್ಲಿ ನಾಲ್ಕು ಜನ ಹಾಕಿದ್ದಾರೆ. ವಾಟರ್ ಕ್ವಾಲಿಟಿ ಚೆಕ್ ಮಾಡ್ತಿರ್ಲಿಲ್ಲ, ರೂಮ ತುಂಬಾ ಗಲೀಜು ಇದೆ. ಬೆಕ್ಕು ನಾಯಿ ಓಡಾಡ್ತಿರುವ ಫೋಟೋ ನೋಡಿದ್ದೇನೆ. ಈಗಾ ಸ್ವಚ್ಚತೆ ಶುರು ಮಾಡ್ತಿದ್ದಾರೆ. ಒಂದು ವಾರದಲ್ಲಿ ಸೂಕ್ತ ದಾಖಲೆ‌ ನೀಡುವಂತೆ ಸೂಚನೆ ನೀಡಲಾಗಿದೆ. ಸುಮೋಟ ಕೇಸ್ ದಾಖಲು ಮಾಡಿ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಹೇಳಿದ್ದು, BMCRI ಹಾಸ್ಟೆಲ್ ವಿರುದ್ದ ಸುಮೊಟೊ ಕೇಸ್ ದಾಖಲು ಮಾಡಲಾಗುತ್ತದೆ ಎಂದಿದ್ದಾರೆ.

click me!