
ಸೈಕ್ಲಿಂಗ್ (Cycling) ಮಾಡೋದು ತುಂಬಾ ಮಂದಿಗೆ ಇಷ್ಟವಿರುತ್ತೆ. ಹಾಗೇ ಸುಮ್ನ ಸುಮ್ನೆ ರಿಲ್ಯಾಕ್ಸ್ ಆಗ್ಲಿ ಅಂತ ಸೈಕ್ಲಿಂಗ್ ಮಾಡೋರಿದ್ದಾರೆ. ಇನ್ನು ಕೆಲವೊಬ್ಬರು ದೊಡ್ಡ ದೊಡ್ಡ ಗಾಡಿಗಳಲ್ಲೇ ಪ್ರಯಾಣಿಸೋದನ್ನು ರೂಢಿ ಮಾಡಿಕೊಂಡಿರ್ತಾರೆ, ಆದ್ರೆ ಬೈಕ್, ಕಾರು ಬಿಟ್ಬಿಡಿ. ಸೈಕ್ಲಿಂಗ್ ಮಾಡೋದ್ರಿಂದ ಆರೋಗ್ಯ (Health)ಕ್ಕಿರೋ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಡೈಲಿ ಸೈಕ್ಲಿಂಗ್ ಮಾಡೋದು ಖಂಡಿತ. ಹಾಗಿದ್ರೆ ಸೈಕ್ಲಿಂಗ್ ಮಾಡೋದ್ರಿಂದ ಏನು ಪ್ರಯೋಜನವಿದೆ. ದಿನಾಲೂ ಸೈಕ್ಲಿಂಗ್ ಮಾಡೋದ್ರಿಂದ ಆರೋಗ್ಯ ವೃದ್ಧಿಯಾಗುತ್ತಾ ಎಂಬುದನ್ನು ತಿಳಿದುಕೊಳ್ಳೋಣ.
ವಿಶ್ವ ಬೈಸಿಕಲ್ ದಿನದ ಇತಿಹಾಸ:
ಇಂದು ಜೂನ್ 3. ವಿಶ್ವ ಬೈಸಿಕಲ್ ದಿನ (World Bicycle Day). ವಿಶ್ವಸಂಸ್ಥೆಯು ಪ್ರತಿ ವರ್ಷ ವಿಶ್ವ ಸೈಕಲ್ ದಿನವನ್ನು ಆಚರಿಸುತ್ತದೆ. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಜೂನ್ 3 ಅನ್ನು ವಿಶ್ವ ಬೈಸಿಕಲ್ ದಿನವೆಂದು ಘೋಷಿಸಿತು, ಪೋಲಿಷ್-ಅಮೆರಿಕನ್ ಸಮಾಜಶಾಸ್ತ್ರಜ್ಞ ಲೆಸ್ಜೆಕ್ ಸಿಬಿಲ್ಸ್ಕಿ ಅವರ ಹೋರಾಟ ಮತ್ತು ವಿಶ್ವ ಬೈಸಿಕಲ್ ದಿನವನ್ನು ಗುರುತಿಸಲು ತುರ್ಕಮೆನಿಸ್ತಾನ್ ಮತ್ತು 56 ಇತರ ದೇಶಗಳ ಬೆಂಬಲಕ್ಕೆ ನಿಂತವು..ಸಾರಿಗೆ ಸಾಧನವಾಗಿ ಮತ್ತು ವ್ಯಾಯಾಮದ ಒಂದು ರೂಪವಾಗಿ ಸೈಕ್ಲಿಂಗ್‌ನ ವಿಶಿಷ್ಟತೆ ಮತ್ತು ಪ್ರಯೋಜನಗಳನ್ನು ಪ್ರಚಾರ ಮಾಡುವ ಗುರಿಯನ್ನು ಈ ದಿನ ಹೊಂದಿದೆ. ಇಂದು ನಾವು ವಿಶ್ವ ಸೈಕಲ್ ದಿನವನ್ನು ಆಚರಿಸುತ್ತಿರುವಾಗ ಸೈಕ್ಲಿಂಗ್‌ನ ಕೆಲವು ಆರೋಗ್ಯ ಪ್ರಯೋಜನಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಈ ಯೋಗಾಸನಗಳ ಮೂಲಕ ಮಲಬದ್ಧತೆಯನ್ನು ನಿವಾರಿಸಿ
ತೂಕ ಇಳಿಸಲು ಸಹಕಾರಿ: ಪ್ರತಿ ದಿನ ತೂಕ ಇಳಿಸುವುದು ತೂಕ ಇಳಿಕೆಗೆ ತುಂಬಾ ಸಹಕಾರಿಯಾಗಿದೆ. ಸೈಕ್ಲಿಂಗ್ ಚಯಾಪಚಯವನ್ನು ಸುಧಾರಿಸುತ್ತದೆ, ಸ್ನಾಯುಗಳನ್ನು ನಿರ್ಮಿಸುತ್ತದೆ ಮತ್ತು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲು ಸೈಕ್ಲಿಂಗ್ ಅನ್ನು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಸೈಕ್ಲಿಂಗ್ ನಿಮಗೆ 400 ರಿಂದ 1000 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ನಿಯಮಿತವಾಗಿ ಸೈಕ್ಲಿಂಗ್ ಮಾಡುವ ಅಭ್ಯಾಸ ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೆಡಿಕಲ್ ನ್ಯೂಸ್ ಟುಡೇ ಡಾಟ್ ಕಾಮ್ ಪ್ರಕಾರ, ನಿಯಮಿತ ವ್ಯಾಯಾಮದಂತೆ ಸೈಕ್ಲಿಂಗ್ ಮಾಡುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬಹುದು.
ಶ್ವಾಸಕೋಶದ ಆರೋಗ್ಯ. ಸುಧಾರಿಸುತ್ತದೆ: ನಿಯಮಿತವಾಗಿ ಸೈಕ್ಲಿಂಗ್ ಮಾಡುವ ಅಭ್ಯಾಸ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಸೈಕ್ಲಿಂಗ್ ಸಮಯದಲ್ಲಿ, ಶ್ವಾಸಕೋಶಗಳು ನಿಯಮಿತವಾಗಿ ತಾಜಾ ಆಮ್ಲಜನಕವನ್ನು ಪಡೆಯುತ್ತವೆ, ಇದು ಶ್ವಾಸಕೋಶದ ಸುತ್ತಲಿನ ಸ್ನಾಯುಗಳು ವಿಸ್ತರಿಸುವ ದರವನ್ನು ಹೆಚ್ಚಿಸುತ್ತದೆ.
Migraine Problem: ನಿಮಗೆ ಮೈಗ್ರೇನ್ ಯಾವಾಗ ಬರುತ್ತೆ?
ಒತ್ತಡವನ್ನು ಕಡಿಮೆ ಮಾಡುತ್ತದೆ: ಸೈಕ್ಲಿಂಗ್ ಒತ್ತಡ, ಖಿನ್ನತೆ ಅಥವಾ ಆತಂಕದ ಭಾವನೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೈಹಿಕ ಯೋಗಕ್ಷೇಮವನ್ನು ಸುಧಾರಿಸುವಾಗ ಒತ್ತಡವನ್ನು ಜಯಿಸಲು ಸಹಾಯ ಮಾಡಲು ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದೆ. ಸೈಕಲ್ ವ್ಯಾಯಾಮವು ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ: ಸೈಕ್ಲಿಂಗ್ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಸೈಕ್ಲಿಂಗ್ ಅನ್ನು ಸಾಯಂಕಾಲದಲ್ಲಿ ಮಾಡುವುದು ಉತ್ತಮ - 30 ರಿಂದ 60 ನಿಮಿಷಗಳ ಸೈಕ್ಲಿಂಗ್ ನಿಮಗೆ ಆಳವಾದ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನವು ಹೇಳಿದೆ.
ಟ್ರೆಡ್ ಮಿಲ್ v/s ಹೊರಾಂಗಣ ಓಟ, ಆರೋಗ್ಯಕ್ಕೆ ಯಾವುದು ಉತ್ತಮ
ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬಹುದು. ಸೈಕ್ಲಿಂಗ್ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಮೆಡಿಕಲ್ ನ್ಯೂಸ್ ಟುಡೇ ಡಾಟ್ ಕಾಮ್ ಪ್ರಕಾರ, ನಿಯಮಿತ ವ್ಯಾಯಾಮದಂತೆ ಸೈಕ್ಲಿಂಗ್ ಮಾಡುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಬಹುದು. ಸೆಕ್ಲಿಂಗ್ ಒತ್ತಡ, ಖಿನ್ನತೆ ಅಥವಾ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ದೈಹಿಕ ಯೋಗಕ್ಷೇಮವನ್ನು ಸುಧಾರಿಸುವಾಗ ಒತ್ತಡವನ್ನು ಜಯಿಸಲು ಸಹಾಯ ಮಾಡಲು ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.