
ಬಹುತೇಕರು ಮುಚ್ಚಿಡುವ ಕಾಯಿಲೆ (Disease) ಯಲ್ಲಿ ಮೂಲವ್ಯಾಧಿ (Hemorrhoids) ಕಾಯಿಲೆ ಕೂಡ ಒಂದು. ಮೂಲವ್ಯಾಧಿ ಸಮಸ್ಯೆಯನ್ನು ಅನುಭವಿಸಿದವರಿಗೆ ಮಾತ್ರ ಅದರ ನೋವು (Pain) ತಿಳಿಯುತ್ತದೆ. ಮೂಲವ್ಯಾಧಿ ಕಾಡ್ತಿರುವ ವ್ಯಕ್ತಿಗೆ ಸರಿಯಾಗಿ ಎದ್ದು ಕುಳಿತುಕೊಳ್ಳಲು ಆಗುವುದಿಲ್ಲ. ಮೂಲವ್ಯಾಧಿ ಗುದ (Anal) ದ ಸುತ್ತಲೂ ಅಥವಾ ಗುದನಾಳದ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಊತವಾಗಿದೆ. ಒಂದು ವರದಿಯ ಪ್ರಕಾರ, ಸುಮಾರು ಶೇಕಡಾ 50 ರಷ್ಟು ಜನರು 50 ವರ್ಷ ವಯಸ್ಸಿನೊಳಗೆ ಮೂಲವ್ಯಾಧಿಯ ಲಕ್ಷಣಗಳನ್ನು ಅನುಭವಿಸುತ್ತಾರೆ. ಮೊದಲೇ ಹೇಳಿದಂತೆ ಜನರು ಈ ರೋಗದ ಬಗ್ಗೆ ಹೇಳಲು ನಾಚಿಕೆಪಡುತ್ತಾರೆ. ವೈದ್ಯರ ಬಳಿಗೆ ಹೋಗುವುದಿಲ್ಲ. ಮೂಲವ್ಯಾಧಿ ಸಮಸ್ಯೆಯಿದ್ದರೆ ನೀವೂ ನಾಚಿಕೊಳ್ಳುತ್ತಿದ್ದರೆ ವೈದ್ಯರ ಬಳಿ ಹೋಗುವ ಅಗತ್ಯವಿಲ್ಲ. ಕೆಲ ಉಪಾಯದ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿರುವ ವಸ್ತುಗಳನ್ನು ಬಳಸಿಯೇ ನಾವು ಮೂಲವ್ಯಾಧಿ ಗುಣಪಡಿಸಿಕೊಳ್ಳಬಹುದು. ಆಯುರ್ವೇದ (Ayurveda ) ವೈದ್ಯೆ (Doctor) ಐಶ್ವರ್ಯಾ ಸಂತೋಷ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಪರಿಣಾಮಕಾರಿ ಮದ್ದನ್ನು ಹೇಳಿದ್ದಾರೆ. ಮಜ್ಜಿಗೆಗೆ ಸುವರ್ಣ ಗಡ್ಡೆ (Elephant Foot) ಹಾಕಿ ಸೇವಿಸುವುದು ಪೈಲ್ಸ್ ಸಮಸ್ಯೆಗೆ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಇದನ್ನು ತಿನ್ನುವುದರಿಂದ ಹೊಟ್ಟೆ (Stomach ) ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಮೊದಲು ಈ ಮೂಲವ್ಯಾಧಿ ಎಂದರೇನು ಎಂಬುದನ್ನು ತಿಳಿಯೋಣ : ಇದು ಗುದದ್ವಾರದ ಒಳಗಿನ ಮತ್ತು ಹೊರಗಿನ ರಕ್ತನಾಳಗಳು ಉರಿಯುವ ಕಾಯಿಲೆಯಾಗಿದೆ. ಈ ಕಾರಣದಿಂದಾಗಿ, ಕೆಲವು ಮಾಂಸವು ಗುದದ್ವಾರದ ಒಳ ಅಥವಾ ಹೊರ ಭಾಗದಲ್ಲಿ ಸಂಗ್ರಹವಾಗುತ್ತದೆ. ಅದರಿಂದ ರಕ್ತಸ್ರಾವದ ಜೊತೆಗೆ ಸಾಕಷ್ಟು ನೋವು ಕಾಡುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ತುಂಬಾ ಬಿಸಿ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಉಂಟಾಗುತ್ತದೆ. ಕುಟುಂಬದಲ್ಲಿ ಯಾರಿಗಾದರೂ ಅಂತಹ ಸಮಸ್ಯೆ ಇದ್ದರೆ, ಮುಂದಿನ ಪೀಳಿಗೆಗೆ ಈ ಕಾಯಿಲೆ ವರ್ಗವಾಗುತ್ತದೆ.
ಬಾಲಿವುಡ್‌ಗೂ ಗೊತ್ತು ಮೊಸರನ್ನದ ಮಹಿಮೆ! ಕೆಲವರಿಗಂತೂ ಇದೇ ಪರಮಾನ್ನ ಬಿಡಿ
ಮೂಲವ್ಯಾಧಿ ಲಕ್ಷಣಗಳು :
• ಕರುಳಿನ ಚಲನೆಯ ಸಮಯದಲ್ಲಿ ಅಸಾಮಾನ್ಯ ನೋವು ಅಥವಾ ಉರಿ. ಮಲದಲ್ಲಿ ರಕ್ತ.
• ಗುದದ ಸುತ್ತ ಊತ ಅಥವಾ ಉಂಡೆ.
• ಗುದದ್ವಾರದ ಬಳಿ ತುರಿಕೆ.
ಸುವರ್ಣ ಗಡ್ಡೆ ತರಕಾರಿ : ಸುವರ್ಣ ಗಡ್ಡೆಯನ್ನು ಅನೇಕ ಕಡೆ ಬೆಳೆಯಲಾಗುತ್ತದೆ. ಆಫ್ರಿಕಾದಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಸುವರ್ಣ ಗಡ್ಡೆ ಒಂದು ರೀತಿಯ ತರಕಾರಿ. ಅದ್ರಲ್ಲಿ ಅನೇಕ ರೀತಿಯ ಆಹಾರವನ್ನು ತಯಾರಿಸಬಹುದು.
ಸುವರ್ಣ ಗಡ್ಡೆ ಆರೋಗ್ಯಕ್ಕೆ ಪ್ರಯೋಜನಕಾರಿ : ಸುವರ್ಣ ಗಡ್ಡೆ ತಿನ್ನುವುದು ಪೈಲ್ಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಡಾ ಐಶ್ವರ್ಯ ಹೇಳಿದ್ದಾರೆ. ಇದರ ಜೊತೆ ಸುವರ್ಣ ಗಡ್ಡೆ ಮಲಬದ್ಧತೆ, ಉದರಶೂಲೆ, ಹುಳುಗಳ ಬಾಧೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.
ಸುವರ್ಣಗಡ್ಡೆ ಬಳಕೆ ಹೇಗೆ ? :
ಮೊದಲು ಸುವರ್ಣ ಗಡ್ಡೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು. 5 ಗ್ರಾಂ ಸುವರ್ಣ ಗಡ್ಡೆ ಪುಡಿಯನ್ನು ತೆಗೆದುಕೊಂಡು ಅದನ್ನು ಮಜ್ಜಿಗೆಯೊಂದಿಗೆ ಬೆರೆಸಿ ಪ್ರತಿದಿನ ಸೇವಿಸಬೇಕು. ಹೀಗೆ ಮಾಡ್ತಾ ಬಂದ್ರೆ ಅಧ್ಬುತ ಫಲಿತಾಂಶ ಸಿಗುತ್ತದೆ.
ಬೆಳಗ್ಗೆ ಹಾಲಿನ ಪುಡಿ ಟೀ ಕುಡೀತೀರಾ? ಒಳ್ಳೇದಲ್ಲ ಬಿಟ್ಟು ಬಿಡಿ
ಹೊಟ್ಟೆಗೆ ಪ್ರಯೋಜನಕಾರಿ ಸುವರ್ಣ ಗಡ್ಡೆ : ಸುವರ್ಣ ಗಡ್ಡೆಯಲ್ಲಿ ವಿಟಮಿನ್ ಬಿ6, ವಿಟಮಿನ್ ಬಿ1, ರೈಬೋಫ್ಲಾವಿನ್, ಫೋಲಿಕ್ ಆಸಿಡ್, ನಿಯಾಸಿನ್, ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸಹ ಕ್ಯಾಲೋರಿಗಳು, ಕೊಬ್ಬು, ಕಾರ್ಬೋಹೈಡ್ರೇಟ್, ಪ್ರೊಟೀನ್, ಪೊಟ್ಯಾಸಿಯಮ್ ಮತ್ತು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇವು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.