ಆರೋಗ್ಯಕರ ಆಹಾರ ರೋಗದಿಂದ ನಮ್ಮನ್ನು ದೂರವಿಡುತ್ತದೆ. ಆದ್ರೆ ಸಮಯದ ಅಭಾವ ಹಾಗೂ ರುಚಿ ಹೆಸರಿನಲ್ಲಿ ನಾವು ದಿನದ ಆರಂಭವನ್ನೇ ಕೆಟ್ಟದಾಗಿ ಶುರು ಮಾಡಿರ್ತೇವೆ. ತಪ್ಪಾದ ಆಹಾರ ಕ್ರಮ ನಮ್ಮ ಆರೋಗ್ಯ ಹದಗೆಡಲು ಕಾರಣವಾಗುತ್ತದೆ.
ಉಪಹಾರ ತಯಾರಿಸಲು ಸಮಯ ಸಿಗೋದಿಲ್ಲ. ಕೆಲಸದ ಒತ್ತಡದಲ್ಲಿ ಜನರು ಬ್ರೆಡ್ ಹಾಗೆ ಬಿಸ್ಕತ್ ಮೊರೆ ಹೋಗ್ತಾರೆ. ಬಹುತೇಕರ ಬೆಳಗಿನ ಉಪಹಾರವೇ ಬ್ರೆಡ್ ಹಾಗೂ ಬಿಸ್ಕತ್ ಆಗಿರುತ್ತದೆ. ಆದ್ರೆ ಬೆಳಿಗ್ಗೆ ಎದ್ದ ತಕ್ಷಣ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾರ್ಬೋಹೈಡ್ರೇಟ್ ಗಳು ಡೋಪಮೈನ್ ಮತ್ತು ಕಾರ್ಟಿಸೋಲ್‌ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಇದು ನಮ್ಮಲ್ಲಿ ಆಲಸ್ಯವನ್ನು ಹೆಚ್ಚು ಮಾಡುತ್ತದೆ. ಬೆಳಿಗ್ಗೆ ಇವುಗಳ ಸೇವನೆಯಿಂದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬೆಳಗ್ಗಿನ ಉಪಹಾರ ದಿನವಿಡಿ ದೇಹಕ್ಕೆ ಶಕ್ತಿ ನೀಡುತ್ತದೆ. ದಿನಪೂರ್ತಿ ಹೆಚ್ಚಾಗಿರಬೇಕೆಂದ್ರೆ ಬೆಳಗಿನ ಆಹಾರ ಚೆನ್ನಾಗಿರಬೇಕು. ಬೆಳಗಿನ ಆಹಾರ ದಿನದ ಮೊದಲ ಆಹಾರವಾಗಿರುತ್ತದೆ. ಹಾಗಾಗಿ ಅದನ್ನು ನಾವು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ಕಾರ್ಬೋಹೈಡ್ರೇಟ್ ಆಹಾರ ಸೇವನೆಯನ್ನು ತಪ್ಪಿಸಬೇಕು. ಕಾರ್ಬೋಹೈಡ್ರೇಟ್ ಆಹಾರ ಸೇವನೆಯಿಂದ ಏನೆಲ್ಲ ತೊಂದರೆಯಿದೆ ಗೊತ್ತಾ?.
ಕಾರ್ಬೋಹೈಡ್ರೇಟ್ (Carbohydrate) ಆಹಾರ ಸೇವನೆಯಿಂದ ಕಡಿಮೆಯಾಗುತ್ತೆ ಇನ್ಸುಲಿನ್ ಸೂಕ್ಷ್ಮತೆ : ಮುಂಜಾನೆ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವುದರಿಂದ ಇನ್ಸುಲಿನ್ ಸೂಕ್ಷ್ಮತೆ ಗಮನಾರ್ಹವಾಗಿ ಕಡಿಮೆ ಆಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಕೊಬ್ಬು (Fat) ಸಂಗ್ರಹವಾಗುತ್ತದೆ.
ಹೆಚ್ಚಾಗುವ ಹಸಿವು (Hunger) : ಬೆಳಿಗ್ಗೆ ನೀವು ಆ ಕ್ಷಣಕ್ಕೆ ಹೊಟ್ಟೆ ತುಂಬುವ ಆಹಾರ ಸೇವನೆ ಮಾಡಿರ್ತೀರಿ. ಆದ್ರೆ ಅದೇ ಆಹಾರ ನಿಮ್ಮ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಕಾರ್ಬೋಹೈಡ್ರೇಟ್ ತಿನ್ನುವುದರಿಂದ ಹಸಿವಿನ ಹಾರ್ಮೋನ್ (Hormone) ಆಗಿರುವ ಗ್ರೆಲಿನ್ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಗ್ರೆಲಿನ್ ಬಿಡುಗಡೆಯಾಗ್ತಿದ್ದಂತೆ ಮೆದುಳಿಗೆ ಸಂದೇಶ ರವಾನೆಯಾಗುತ್ತದೆ. ಇದು ಹಸಿವಿನ ಸಮಯವೆಂಬ ಸಂದೇಶ ಹೋಗುತ್ತದೆ. ಇದ್ರಿಂದ ಹಸಿವು ಹೆಚ್ಚಾಗುತ್ತದೆ.
ಗ್ಲೈಸೆಮಿಕ್ (Glycemic) ಪ್ರತಿಕ್ರಿಯೆ ಕಡಿಮೆ : ಬೆಳಿಗ್ಗೆ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಭರಿತ ಆಹಾರ (Food) ಸೇವನೆ ಮಾಡುವುದ್ರಿಂದ ಗ್ಲೈಸೆಮಿಕ್ ಸೂಚಿ ಕಡಿಮೆ ಆಗುತ್ತದೆ. ಇದು ರಕ್ತ (Blood) ದಲ್ಲಿನ ಸಕ್ಕರೆ (Sugar) ಯ ಪ್ರಮಾಣವನ್ನು ಬದಲಾಯಿಸುತ್ತದೆ.
ದಿನದ ಆರಂಭ ಹೀಗಿರಲಿ : ಉಪಹಾರ (Breakfast) ವು ಪ್ರೋಟೀನ್ ಗಳು, ವಿಟಮಿನ್ ಗಳು ಮತ್ತು ಹಣ್ಣುಗಳು, ಡ್ರೈ ಫ್ರೂಟ್ಸ್ ಮತ್ತು ಗಿಡಮೂಲಿಕೆಗಳಂತಹ ವಿವಿಧ ಪೋಷಕಾಂಶಗಳಿಂದ ತುಂಬಿರಬೇಕು ಎನ್ನುತ್ತಾರೆ ತಜ್ಞರು. ಅವರ ಪ್ರಕಾರ, ಬೆಳಿಗ್ಗೆ ಎಚ್ಚರವಾದ ನಂತರ ಮೊದಲು ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ 400 ಮಿಲಿ ನೀರನ್ನು ಕುಡಿಯಬೇಕು. ನಂತ್ರ ಆರೋಗ್ಯಕರ ಕೊಬ್ಬನ್ನು ಹೊಂದಿರುವ ಐದು ಬಾದಾಮಿ, 2 ವಾಲ್‌ನಟ್ಸ್, ಹಾಗೂ 1 ಬ್ರೆಜಿಲ್ ನಟ್ಸ್ ಸೇವನೆ ಮಾಡ್ಬೇಕು.
WOMEN HEALTH: ಮುಟ್ಟಿಗೂ ಹಸ್ತಮೈಥುನಕ್ಕೂ ಸಂಬಂಧವಿದ್ಯಾ?
ಬೆಳಗಿನ ಉಪಹಾರದಲ್ಲಿ ಪೌಷ್ಟಿಕಾಂಶ ಭರಿತ ಪಾನೀಯಗಳನ್ನು ಸೇವನೆ ಮಾಡುವುದು ಮುಖ್ಯವಾಗುತ್ತದೆ. ನೀವು ನುಗ್ಗೆ ಕಾಯಿ ಎಲೆಯ ನೀರು, ಗೊಂದು ಅಥವಾ ಮೆಂತ್ಯ ಬೀಜದ ನೀರನ್ನು ಸೇವನೆ ಮಾಡ್ಬೇಕು ಎನ್ನುತ್ತಾರೆ ತಜ್ಞರು. ಬೆಳಗಿನ ಉಪಾಹಾರಕ್ಕೆ ಮೊದಲು ಬಾಳೆಹಣ್ಣು ಅಥವಾ ಪಪ್ಪಾಯಿ ಹಣ್ಣು ಸೇವನೆ ಮಾಡುವುದು ಹೆಚ್ಚು ಪ್ರಯೋಜನಕಾರಿ. ತುಂಬಾ ಸಮಯ ಹೊಟ್ಟೆ ತುಂಬಿದ ಅನುಭವ ನಿಮಗೆ ಆಗ್ಬೇಕೆಂದ್ರೆ ನೀವು ಪ್ರೋಟೀನ್ ಭರಿತ ಉಪಹಾರವನ್ನು ಸೇವಿಸುವುದು ಒಳ್ಳೆಯದು.
Work From Home: ಕೆಲ್ಸ ಸರಿಯಾಗಿ ಆಗ್ತಿಲ್ವಾ ? ಕೂತ್ಕೊಳ್ಳೋ ಭಂಗಿ ಸರಿಯಿದ್ಯಾ ಚೆಕ್ ಮಾಡ್ಕೊಳ್ಳಿ
ಅನೇಕ ಸಂಶೋಧನೆಗಳ ಪ್ರಕಾರ, ಕಡಿಮೆ ಕಾರ್ಬ್ಹೈಡ್ರೇಟ್ ಪ್ರೋಟೀನ್ ಭರಿತ ಆಹಾರ ನಿಮಗೆ ಇಡೀ ದಿನ ತೃಪ್ತಿ ನೀಡುತ್ತದೆ. ನಿಮ್ಮ ದೇಹದ ಶಕ್ತಿಯನ್ನು ಕಾಯ್ದುಕೊಳ್ಳುತ್ತದೆ. ಹಾಗಾಗಿ ಉಪಹಾರಕ್ಕೆ ಉತ್ತಮ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಕಾಮಕಸ್ತೂರಿ ಬೀಜವನ್ನು ನೀವು ಸೇವನೆ ಮಾಡಬಹುದು. ಹಾಗೆ ಬಟಾಣಿ ಮತ್ತು ಕಡಲೆಕಾಯಿ ಮತ್ತು ತರಕಾರಿ ಓಟ್ಸ್, ಓಟ್ಸ್ ಅಥವಾ ಉದ್ದಿನ ಬೇಳೆ ಇಡ್ಲಿ, ಹುರಿದ ಪನ್ನೀರ್, ದೋಸೆ, ಚಟ್ನಿ ಇವೆಲ್ಲವನ್ನು ನೀವು ಸೇವನೆ ಮಾಡ್ಬಹುದು ಎನ್ನುತ್ತಾರೆ ತಜ್ಞರು.