Heart Attacks: ಸೋಮವಾರವೇ ಹೆಚ್ಚು ಹೃದಯಾಘಾತ ಆಗುತ್ತಂತೆ, ನಿಜಾನಾ?

Published : Jun 30, 2025, 07:57 PM IST
Heart Attack

ಸಾರಾಂಶ

ಹಾಸನದಲ್ಲಿ ಸೋಮವಾರ ತಡರಾತ್ರಿ ನಾಲ್ಕು ಹೃದಯಾಘಾತಗಳು ಸಂಭವಿಸಿವೆ. ಸೋಮವಾರ ಹೆಚ್ಚು ಹೃದಯಾಘಾತ ಸಂಭವಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ. ಒತ್ತಡ ಮತ್ತು ದೇಹದ ಲಯದಲ್ಲಿನ ಬದಲಾವಣೆಗಳು ಇದಕ್ಕೆ ಕಾರಣವಿರಬಹುದು.

ಸಣ್ಣವರಲ್ಲೂ ಹೃದಯಾಘಾತಗಳು ಹೆಚ್ಚುತ್ತಿವೆ. ಇದು ಇಂದು ನಿನ್ನೆಯ ಸುದ್ದಿಯಲ್ಲ. ಬಹಳ ಸಮಯದಿಂದ ಇದು ಕೇಳಿಬರುತ್ತಿದೆ. ಇಂದು ಹಾಸನದಲ್ಲಿ ನಾಲ್ಕು ಹೃದಯಾಘಾತಗಳು ವರದಿಯಾಗಿವೆ. ಇಂದು ಸೋಮವಾರ. ಹಾಗಾದರೆ ಸೋಮವಾರ ಹೃದಯಾಘಾತ ಹೆಚ್ಚಾ? ಹೌದು, ವೈದ್ಯರು, ಒಂದೆರಡು ಅಧ್ಯಯನಗಳು ಕೂಡ ಇದನ್ನು ಸಮರ್ಥಿಸಿವೆ ಯಾಕೆ ಅಂತ ಇಲ್ಲಿ ನೋಡೋಣ.

ಹೃದಯಾಘಾತ ಯಾರಿಗೆ, ಯಾವಾಗ, ಎಲ್ಲಿ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಸೋಮವಾರದಂದೇ ಹೃದಯಾಘಾತ ಹೆಚ್ಚಾಗಿ ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. 2023ರಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ (BCS) ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ವಾರವಿಡೀ ಅಧಿಕ ರಕ್ತದೊತ್ತಡ ಇದ್ದರೆ, ಸೋಮವಾರ ಹೃದಯಾಘಾತವಾಗುವ ಅಪಾಯ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ. ಸೋಮವಾರದಂದು ತೀವ್ರ ಹೃದಯಾಘಾತಗಳು, ವಿಶೇಷವಾಗಿ ಎಸ್‌ಟಿ-ಸೆಗ್ಮೆಂಟ್ ಎಲಿವೇಷನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (STEMI) ಹೆಚ್ಚಾಗಿ ಕಂಡು ಬರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಸೋಮವಾರದಂದೇ ಈ ಹೃದಯಾಘಾತ ಏಕೆ ಸಂಭವಿಸುತ್ತದೆ ಎಂಬುವುದರ ಬಗ್ಗೆ ಇನ್ನೂ ಯಾರಿಗೂ ಮಾಹಿತಿ ಇಲ್ಲ. ಆದರೆ ಇದು ದೇಹದ ಲಯ ಮತ್ತು ಕೆಲಸದ ಒತ್ತಡದಿಂದಾಗಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಂಶೋಧನೆಯನ್ನು ಬೆಲ್‌ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ಟ್ರಸ್ಟ್ ಮತ್ತು ಐರ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ವೈದ್ಯರು ನಡೆಸಿದ್ದಾರೆ. STEMI ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳ ದಾಖಲೆಗಳನ್ನು ಸಂಶೋಧಕರು ಪರಿಶೀಲಿಸಿದರು. ಇತರ ದಿನಗಳಿಗಿಂತ ಸೋಮವಾರದಂದು STEMI ಹೃದಯಾಘಾತದ ಅಪಾಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

ಈ ಅಧ್ಯಯನದ ಪ್ರಮುಖ ಸಂಶೋಧಕರಾದ ಡಾ. ಜ್ಯಾಕ್ ಲಾಫನ್, ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡು ಬಂದಿದೆ ಎಂದು ಹೇಳಿದ್ದಾರೆ. ಚಳಿಗಾಲದಲ್ಲಿ ಮುಂಜಾನೆ ಹೊತ್ತು ಹೆಚ್ಚಾಗಿ ಹೃದಯಾಘಾತಗಳು ಸಂಭವಿಸುತ್ತವೆ ಮತ್ತು ಪಾರ್ಶ್ವವಾಯು ಪ್ರಕರಣಗಳಲ್ಲಿ ಸಹ ಇದು ಹೆಚ್ಚು ಎಂದು ತಿಳಿಸಿದ್ದಾರೆ. ಹೃದಯಾಘಾತ ಏಕೆ ಸಂಭವಿಸುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ದೇಹದಲ್ಲಿರುವ ಆಂತರಿಕ ಗಡಿಯಾರ (ಸರ್ಕಾಡಿಯನ್ ರಿದಮ್) ಇದಕ್ಕೆ ಕಾರಣವಾಗಿರಬಹುದು ಎಂದು ವೈದ್ಯರು ಅನುಮಾನಿಸುತ್ತಾರೆ. ಈ ಸಿರ್ಕಾಡಿಯನ್ ಲಯವು ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ.

ಮತ್ತೊಂದು ಕಾರಣವೆಂದರೆ ಒತ್ತಡ. ವಾರಾಂತ್ಯದ ರಜೆಯ ನಂತರ ಸೋಮವಾರ ಕಚೇರಿಗೆ ಹಿಂತಿರುಗಬೇಕಲ್ಲ ಎಂಬುದು ಅನೇಕ ಮಂದಿಗೆ ಒತ್ತಡವನ್ನುಂಟು ಮಾಡುತ್ತದೆ. ಈ ಒತ್ತಡವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೃದಯಾಘಾತದ ಲಕ್ಷಣಗಳನ್ನು ಮೊದಲೇ ಗುರುತಿಸುವುದರಿಂದ ಜೀವಗಳನ್ನು ಉಳಿಸಬಹುದು. ನಿಮ್ಮ ಹೃದಯದ ಮೇಲೆ ಏನೋ ಒತ್ತುತ್ತಿರುವಂತೆ ಭಾಸವಾದರೆ, ಹೃದಯ ಭಾರದಂತೆ ಮತ್ತು ನೋವಿನಿಂದ ಕೂಡಿದರೆ ಕೂಡಲೇ ಎಚ್ಚರಗೊಳ್ಳಿ. ಇದು ಕೆಲವು ನಿಮಿಷಗಳ ಕಾಲ ಉಳಿಯಬಹುದು ಅಥವಾ ನಡುವೆ ಬಂದು ಹೋಗಬಹುದು. ಎದೆ ನೋವು ಇಲ್ಲದಿದ್ದರೂ ನಿಮಗೆ ಉಸಿರಾಟದ ಸಮಸ್ಯೆ ಅನಿಸಬಹುದು.

ನೋವು ತೋಳುಗಳು, ಕುತ್ತಿಗೆ, ದವಡೆ, ಬೆನ್ನು ಮತ್ತು ಹೊಟ್ಟೆಗೂ ಈ ನೋವು ಹರಡಬಹುದು. ಅನೇಕ ಮಂದಿ ಇದನ್ನು ಸ್ನಾಯು ಸೆಳೆತ ಅಥವಾ ಅಜೀರ್ಣ ಎಂದು ತಪ್ಪಾಗಿ ಭಾವಿಸುತ್ತಾರೆ. ಇನ್ನೂ ಮಹಿಳೆಯರಲ್ಲಿ ಬೆವರುವುದು, ತಲೆತಿರುಗುವಿಕೆ, ವಾಕರಿಕೆ, ತೀವ್ರ ಆಯಾಸ ಇವು ಹೃದಯಾಘಾತದ ಸಾಮಾನ್ಯ ಲಕ್ಷಣಗಳಾಗಿವೆ.

ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ 10-10-10 ಫಾರ್ಮುಲಾ ಫಾಲೋ ಮಾಡಿ!

ನೋವು ತೋಳುಗಳು, ಕುತ್ತಿಗೆ, ದವಡೆ, ಬೆನ್ನು ಮತ್ತು ಹೊಟ್ಟೆಗೂ ಈ ನೋವು ಹರಡಬಹುದು. ಅನೇಕ ಮಂದಿ ಇದನ್ನು ಸ್ನಾಯು ಸೆಳೆತ ಅಥವಾ ಅಜೀರ್ಣ ಎಂದು ತಪ್ಪಾಗಿ ಭಾವಿಸುತ್ತಾರೆ. ಇನ್ನೂ ಮಹಿಳೆಯರಲ್ಲಿ ಬೆವರುವುದು, ತಲೆತಿರುಗುವಿಕೆ, ವಾಕರಿಕೆ, ತೀವ್ರ ಆಯಾಸ ಇವು ಹೃದಯಾಘಾತದ ಸಾಮಾನ್ಯ ಲಕ್ಷಣಗಳಾಗಿವೆ.

ಈ ಲಕ್ಷಣಗಳು ಮೊದಲಿಗೆ ಚಿಕ್ಕದಾಗಿ ಕಂಡು ಬಂದರೂ, ಅವುಗಳನ್ನು ನಿರ್ಲಕ್ಷಿಸಬೇಡಿ. ನೀವು ಅಥವಾ ನಿಮ್ಮ ಸುತ್ತಮುತ್ತಲಿರುವ ಯಾರಿಗಾದರೂ ಈ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಕರೆಯಬೇಕು ಅಥವಾ ಆಸ್ಪತ್ರೆಗೆ ಕರೆದೊಯ್ಯಬೇಕು. ಏಕೆಂದರೆ ಹೃದಯಾಘಾತವಾದಾಗ ಪ್ರತಿ ಸೆಕೆಂಡ್ ಅಮೂಲ್ಯದಾಗಿರುತ್ತದೆ.

ಕೆಲ ಮಕ್ಕಳು ವಯಸ್ಸಿಗೆ ತಕ್ಕಂಗೆ ಬೆಳವಣಿಗೆ ಆಗ್ದೇ ಇರೋದಕ್ಕೆ ಕಾರಣ ಏನು?

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಗಡಿ, ಕೆಮ್ಮು ಇದ್ದಾಗ ಮಕ್ಕಳಿಗೆ ಬಾಳೆಹಣ್ಣು, ಮೊಸರು ಕೊಡಬಹುದಾ? ಕೊಟ್ಟರೆ ಏನಾಗುತ್ತೆ?
ಇಂಥವರನ್ನು ಮದುವೆ ಆದ್ರೆ ಆರೋಗ್ಯವಾಗಿ ಹುಟ್ಟಲ್ಲ ಮಕ್ಕಳು, ಕಾಡುತ್ತೆ ನಾನಾ ಖಾಯಿಲೆ