67 ವರ್ಷ ವಯಸ್ಸಿನ ವೈದ್ಯ ಮೈಕೆಲ್ ಮೊಸ್ಲಿ ಕಾಣೆಯಾಗಿದ್ದಾರೆ. ದೂರದರ್ಶನದಲ್ಲಿ ಜನಪ್ರಿಯವಾಗಿದ್ದ ಅವರ ಹುಡುಕಾಟ ನಡೆಯುತ್ತಿದೆ. ಪ್ರವಾಸದ ವೇಳೆ ವಾಕಿಂಗ್ ಗೆ ಹೋಗಿದ್ದ ಅವರು ವಾಪಸ್ ಬಂದಿಲ್ಲ. ಅವರ್ಯಾರು ಎನ್ನುವ ಮಾಹಿತಿ ಇಲ್ಲಿದೆ.
ವೈದ್ಯ, ಬರಹಗಾರ ಮತ್ತು ಬ್ರಿಟಿಷ್ ಪತ್ರಕರ್ತ ಮೈಕೆಲ್ ಮೊಸ್ಲಿ ಗ್ರೀಕ್ ದ್ವೀಪವಾದ ಸಿಮಿಯಲ್ಲಿ ಕಾಣೆಯಾಗಿದ್ದಾರೆ. ರಜೆಗೆ ಹೋದ ಮೈಕಲ್ ಕಾಣೆಯಾಗಿದ್ದು, ಅವರ ಶೋಧ ಕಾರ್ಯ ನಡೆಯುತ್ತಿದೆ. ಅವರ ಪತ್ನಿ ಗುರುವಾರ ಬೆಳಿಗ್ಗೆ ಸ್ಥಳೀಯ ಪೊಲೀಸರಿಗೆ ಕಾಣೆಯಾದ ದೂರನ್ನು ನೀಡಿದ್ದಾರೆ. ವೈದ್ಯ ಮೈಕಲ್ ಮೊಸ್ಲಿ, ಕೊನೆಯದಾಗಿ ಬುಧವಾರದಂದು ಗ್ರೀಕ್ ದ್ವೀಪ ಸಿಮಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ವಾಕಿಂಗ್ ಗೆ ಹೋದವರು ವಾಪಸ್ ಬರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಅಗ್ನಿಶಾಮಕ ದಳದವರು, ಸ್ವಯಂಸೇವಕರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ 25 ಸದಸ್ಯರ ಶೋಧ ತಂಡವು ಮೊಸ್ಲಿಯನ್ನು ಹುಡುಕುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ದೂರದ ಪ್ರದೇಶಗಳನ್ನು ತಲುಪಲು ಡ್ರೋನ್ ಹಾಗೂ ಪೊಲೀಸ್ ನಾಯಿಗಳನ್ನು ಬಳಸಲಾಗುತ್ತಿದೆ. ಹುಡುಕಾಟದಲ್ಲಿ ಸಹಾಯ ಮಾಡಲು ಗ್ರೀಕ್ ರಾಜಧಾನಿ ಅಥೆನ್ಸ್‌ನಿಂದ ಹೆಲಿಕಾಪ್ಟರ್ ಅನ್ನು ಸಹ ನಿಯೋಜಿಸಲಾಗಿದೆ. ಮೊಸ್ಲಿ, ಫೋನ್ ಬಿಟ್ಟು ವಾಕಿಂಗ್ ಹೋಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೈಕಲ್ ಮೊಸ್ಲಿ (Michael Mosley) ಯಾರು? : ಮೊಸ್ಲಿ ಸುಮಾರು ಎರಡು ದಶಕಗಳಿಂದ ರೇಡಿಯೊದಲ್ಲಿ ಕೆಲಸ ಮಾಡಿದ್ದಾರೆ. ಆಹಾರ (Diet), ವ್ಯಾಯಾಮ ಮತ್ತು ಔಷಧಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅವರು ಆಕರ್ಷಕ ಶೈಲಿಯಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು. ಟ್ರಸ್ಟ್ ಮಿ ಐಯಾಮ್ ಎ ಡಾಕ್ಟರ್, ದ ಟ್ರೂತ್ ಎಬೌಟ್ ಎಕ್ಸರ್ಸೈಸ್ ಮತ್ತು ಲೂಸ್ ಎ ಸ್ಟೋನ್ ಇನ್ 21 ಡೇಸ್‌ನಂತಹ ಕಾರ್ಯಕ್ರವನ್ನು ನಡೆಸುತ್ತಿದ್ದ ಅವರು, ಆಗಾಗ ತಾವು ನಡೆಸುತ್ತಿದ್ದ ಪರೀಕ್ಷೆ ಬಗ್ಗೆ ಮಾಹಿತಿ ನೀಡುತ್ತಿದ್ದರು.
ಬಿಬಿಸಿ (BBC) ಒನ್‌ನ ದಿ ಒನ್ ಶೋ ಮತ್ತು ಐಟಿವಿಯ ದಿಸ್ ಮಾರ್ನಿಂಗ್‌ನಲ್ಲಿ ಕಾಣಿಸಿಕೊಂಡಿದ್ದ ಕಾರಣ ಮೈಕಲ್ ಮೊಸ್ಲಿ ಬಗ್ಗೆ ಲಕ್ಷಾಂತರ ಮಂದಿ ತಿಳಿದಿದ್ದರು. ಅವರು 5:2 ಮತ್ತು ಫಾಸ್ಟ್ 800 ಆಹಾರಕ್ರಮಗಳನ್ನು ಜನಪ್ರಿಯಗೊಳಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ಮಧ್ಯಂತರ ಉಪವಾಸ, ಕಡಿಮೆ ಕಾರ್ಬೋಹೈಡ್ರೇಟ್ ತಿನ್ನೋದನ್ನೂ ಪ್ರತಿಪಾದಿಸಿದ್ದರು.
ಡಿವೋರ್ಸ್ ಬಳಿಕವೂ ನಿವೇದಿತಾ-ಚಂದನ್ ಒಟ್ಟಿಗೇ ಇದ್ದಾರಾ? ಇನ್ಸ್ಟಾಗ್ರಾಮ್ ನೋಡಿ ಗುಸುಗುಸು ಶುರು!
ಏತನ್ಮಧ್ಯೆ, ಸರಳ ಮತ್ತು ಪ್ರವೇಶಿಸಬಹುದಾದ ಆರೋಗ್ಯ ಸಲಹೆಗಳೊಂದಿಗೆ BBC ರೇಡಿಯೊ 4 ನಲ್ಲಿ ಪ್ರಸಾರವಾದ ಅವರ ಸರಣಿ ಜಸ್ಟ್ ಒನ್ ಥಿಂಗ್ ವಿಶ್ವಾದ್ಯಂತ 25 ಮಿಲಿಯನ್ ಕೇಳುಗರನ್ನು ಆಕರ್ಷಿಸಿದೆ. ಅದರ ಟಿವಿ ಆವೃತ್ತಿಯನ್ನು ಈ ವರ್ಷದ ಆರಂಭದಲ್ಲಿ ಪ್ರದರ್ಶಿಸಲಾಗಿತ್ತು. 2021 ರಲ್ಲಿ ಸ್ಲೇ ಜಸ್ಟ್ ಒನ್ ಥಿಂಗ್ ಅನ್ನು ಅವರು ಪ್ರಾರಂಭಿಸಿದ್ದರು. ಪ್ರತಿ ಸಂಚಿಕೆ ಕೇಳುಗರ ಆರೋಗ್ಯ ಮತ್ತು ಜೀವನಶೈಲಿಯನ್ನು ಸುಧಾರಿಸುವಲ್ಲಿ (Health and Lifestyle Improvement) ಬಹಳ ಮಹತ್ವದ ಪಾತ್ರವನ್ನು ವಹಿಸಿತ್ತು. ಅವರು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಸಂಚಿಕೆಗಳನ್ನು ಪ್ರಸ್ತುತಪಡಿಸಿದ್ದಾರೆ. ಮುಂಜಾನೆ ನಡಿಗೆಯಿಂದ ಹಿಡಿದು ಧ್ಯಾನ ಮತ್ತು ಚಾಕೊಲೇಟ್ ತಿನ್ನುವವರೆಗಿನ ಸರಳ ಜೀವನಶೈಲಿಯ ಅಭ್ಯಾಸಗಳನ್ನು ಒಳಗೊಂಡಿದೆ. ಕಳೆದ ವಾರ ಹೇ ಫೆಸ್ಟಿವಲ್‌ನಲ್ಲಿ ಕಾರ್ಯಕ್ರಮದ ಆವೃತ್ತಿ ರೆಕಾರ್ಡ್ ಮಾಡಿದೆ. ನಿಧಾನವಾಗಿ ತಿನ್ನುವ ಪ್ರಯೋಜನಗಳ ಅವರ ಕಾರ್ಯಕ್ರಮ ಗುರುವಾರ ಬೆಳಿಗ್ಗೆ ರೇಡಿಯೋ 4 ನಲ್ಲಿ ಪ್ರಸಾರವಾಗಿತ್ತು.
ಮೈಕೆಲ್ ಮೊಸ್ಲಿ 1957 ರಲ್ಲಿ ಭಾರತದಲ್ಲಿ ಜನಿಸಿದರು. ಬೋರ್ಡಿಂಗ್ ಶಾಲೆಗೆ ಸೇರಲು ಏಳನೇ ವಯಸ್ಸಿನಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದರು. ನಂತ್ರ ಅವರು ಪ್ರೆಸೆಂಟರ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಪಿಪಿಇ ಅಧ್ಯಯನ ಮಾಡಿದರು. ಹೂಡಿಕೆ ಬ್ಯಾಂಕರ್ ಆಗಿ ತನ್ನ ವಯಸ್ಕ ಜೀವನವನ್ನು ಪ್ರಾರಂಭಿಸಿದ್ದರು. ಆದರೆ ಎರಡು ವರ್ಷಗಳ ಕೆಲಸದ ನಂತರ ಅವರು ತಮ್ಮ ವೃತ್ತಿ ಬದಲಿಸಿದ್ದರು. ಲಂಡನ್‌ನ ರಾಯಲ್ ಫ್ರೀ ಹಾಸ್ಪಿಟಲ್‌ನಲ್ಲಿ ವೈದ್ಯರಾಗಿ ಮರು ತರಬೇತಿ ಪಡೆದ ಮೈಕಲ್ ಮೊಸ್ಲಿ, ವೈದ್ಯರಾಗುವಲ್ಲಿ ಹೆಚ್ಚು ಆಸಕ್ತಿ ತೋರುವ ಬದಲು 1985 ರಲ್ಲಿ ಸಹಾಯಕ ನಿರ್ಮಾಪಕರಾಗಿ ಬಿಬಿಸಿಗೆ ಸೇರಿದರು. ಅವರು ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹವಾಗಿ ಪ್ರಗತಿ ಸಾಧಿಸಿದರು ಮತ್ತು ಟುಮಾರೋಸ್ ವರ್ಲ್ಡ್, ಕ್ಯೂಇಡಿ ಮತ್ತು ಹಾರಿಜಾನ್‌ನಂತಹ ವಿಜ್ಞಾನ ಕಾರ್ಯಕ್ರಮಗಳ ನಿರ್ಮಾಪಕರಾದ್ದರು.
ಟುಮಾರೋಸ್ ವರ್ಲ್ಡ್, ಕ್ಯೂಇಡಿ ಮತ್ತು ಹಾರಿಜಾನ್‌ನಂತಹ ವಿಜ್ಞಾನ ಕಾರ್ಯಕ್ರಮಗಳ ನಿರ್ಮಾಪಕರಾದ್ದರು. ಚಲನಚಿತ್ರಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಜಾನ್ ಕ್ಲೀಸ್ ಪ್ರಸ್ತುತಪಡಿಸಿದ ದಿ ಹ್ಯೂಮನ್ ಫೇಸ್ ಮತ್ತು ಎಲಿಜಬೆತ್ ಹರ್ಲಿ, ಪಿಯರ್ಸ್ ಬ್ರಾನ್ಸನ್ ಮತ್ತು ಸರ್ ಡೇವಿಡ್ ಅಟೆನ್‌ಬರೋ ಮೈಕಲ್ ಮೊಸ್ಲಿ ನಟಿಸಿದ್ದರು. ಇದು 2002 ರಲ್ಲಿ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
ಒಂಟಿಯಾಗಿದ್ದಾಗ Googleನಲ್ಲಿ ಇದನ್ನೆಲ್ಲಾ ಹುಡುಕಾಡ್ತಾರೆ ಯುವತಿಯರು!
ಅವರ ಫಾಸ್ಟ್ 800 ಆಹಾರಕ್ರಮ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ತೂಕವನ್ನು ಕಳೆದುಕೊಳ್ಳಲು ಬಯಸುವ ಜನರಿಗೆ ಕಾರ್ಬೋಹೈಡ್ರೇಟ್ ಕಡಿಮೆ ಇರುವ ಮತ್ತು ಮೆಡಿಟರೇನಿಯನ್ ಆಹಾರಗಳನ್ನು ಒಳಗೊಂಡಿರುವ ದಿನಕ್ಕೆ 800 ಕ್ಯಾಲೋರಿ ಆಹಾರ ತಿನ್ನುವಂತೆ ಅವರು ಹೇಳಿದ್ದರು. ಕೆಲವೊಂದು ಅವರ ಆಹಾರ ವಿವಾದಕ್ಕೂ ಕಾರಣವಾಗಿತ್ತು.