ಕೆಮ್ಮಿದಾಗ ಕರುಳೇ ಹೊರಗೆ ಬರೋದಾ? ಇದ್ಯಾಪ ಪರಿ ರೋಗ?

By Roopa Hegde  |  First Published Jun 8, 2024, 12:23 PM IST

ದೇಹದ ಒಳಗೆ ಧೂಳು, ಕೆಟ್ಟ ಕಣಗಳು ಹೋದಾಗ ಅದನ್ನು ಕೆಮ್ಮು, ಸೀನಿನ ಮೂಲಕ ದೇಹ ಹೊರ ಹಾಕುತ್ತದೆ. ಇದು ಸಾಮಾನ್ಯ ಕ್ರಿಯೆ ಆದ್ರೂ ಅಪಾಯಕಾರಿ. ಕೆಲವೊಮ್ಮೆ ನಾವು ಸೀನುವ ವೇಗಕ್ಕೆ ನಮ್ಮ ಹೊಟ್ಟೆಯಲ್ಲಿರುವ ಅಂಗ ಹೊರಗೆ ಬರುವ ಅಪಾಯವಿರುತ್ತದೆ. 
 


ಫ್ಲೋರಿಡಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. 63 ವರ್ಷದ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ಜೊತೆ ಉಪಾಹಾರ ಸೇವಿಸುತ್ತಿದ್ದಾಗ ಕೆಮ್ಮು ಮತ್ತು ಸೀನು ಬಂದಿದೆ. ಈ ಸಮಯದಲ್ಲಿ ಅವರ ಕರುಳು ಸ್ಫೋಟಗೊಂಡಿದೆ. ಕರುಳು ವಯಸ್ಸಾದ ವ್ಯಕ್ತಿಯ ದೇಹದಿಂದ ಹೊರಗೆ ಬಂದಿದ್ದು, ಅವರು ತೀವ್ರ ನೋವಿನಿಂದ ಬಳಲುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ. 

ಫ್ಲೋರಿಡಾ (Florida) ದ ಈ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಕಿಬ್ಬೊಟ್ಟೆ (Abdomen) ಶಸ್ತ್ರಚಿಕಿತ್ಸೆ (Surgery) ನಡೆದಿತ್ತು. ಆದ್ರೆ ಚಿಕಿತ್ಸೆ ನಂತ್ರ ಅವರು ಚೇತರಿಸಿಕೊಂಡಿದ್ದರು. ಹೊಟ್ಟೆಯಲ್ಲಿ ಯಾವುದೇ ಛೇದನ ಇರಲಿಲ್ಲ. ಹೊಲಿಗೆ ಕೂಡಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವ್ಯಕ್ತಿ ಕುಟುಂಬದ ಜೊತೆ ರೆಸ್ಟೋರೆಂಟ್ ಗೆ ಹೋದಾಗ ಈ ಘಟನೆ ನಡೆದಿದೆ. ಆತನಿಗೆ ಸೀನು ಮತ್ತು ಕೆಮ್ಮು ಕಾಣಿಸಿಕೊಂಡಿದೆ. ನಂತ್ರ ಆರ್ದ್ರತೆ ಅನುಭವವಾಗಿದೆ. ನಂತ್ರ ತೀವ್ರ ನೋವು ಕಾಣಿಸಿಕೊಂಡಿದೆ. ಅವನ ಹೊಟ್ಟೆಯಿಂದ ಕರುಳು ಹೊರಗೆ ಬಂದಿರುವುದು ಕಾಣಿಸಿದೆ. ಆ ತಕ್ಷಣ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಸಮಯದಲ್ಲಿ ವ್ಯಕ್ತಿ ಹೊಟ್ಟೆಯಲ್ಲಿ ಮೂರು ಇಂಚಿನ ಛೇದವಾಗಿರೋದು ಕಾಣಿಸಿಕೊಂಡಿದೆ. ಕರುಳು ಹೊರಗೆ ಬಂದಿರುವುದನ್ನು ವೈದ್ಯರು ಗಮನಿಸಿದ್ದಾರೆ. 

Latest Videos

ಜಾಸ್ತಿ ಬೈಕ್ ಓಡಿಸಿದ್ರೆ ಹಾಳಾಗೋದು ಗಾಡಿಯಲ್ಲ, ನಿಮ್ಮ ಬಾಡಿ… ಹುಷಾರು!

ವೈದ್ಯರು ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿ ಆತನ ಕರುಳನ್ನು ವಾಪಸ್ ಕೂರಿಸಿದ್ದಾರೆ. ಅಮೇರಿಕನ್ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್‌ನಲ್ಲಿ ಈ ವ್ಯಕ್ತಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಈಗ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಯಾವುದೇ ಸಮಸ್ಯೆಯಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. 

ಕರುಳು ಹೊರಗೆ ಬರಲು ಕಾರಣವೇನು? : ಹಿಂದೆ ಶಸ್ತ್ರಚಿಕಿತ್ಸೆ (Surgery) ಮಾಡಿದ್ದು, ಗಾಯ ಸರಿಯಾಗಿ ವಾಸಿಯಾಗಿಲ್ಲ ಎಂದಾಗ ಕರುಳು ಹೊರಗೆ ಬರುವ ಸಂಭವವಿರುತ್ತದೆ. ಇದು ಎಲ್ಲರಿಗೂ ಆಗ್ಬೇಕೆಂದೇನಿಲ್ಲ. ಅಪರೂಪದ ಆರೋಗ್ಯ ಸ್ಥಿತಿಯಾಗಿದೆ. ನೂರರಲ್ಲಿ ಮೂರು ಮಂದಿಗೆ ಇದು ಕಾಣಿಸಿಕೊಳ್ಳುತ್ತದೆ. ಇದು ಕೆಲ ಗಂಭೀರ ಅಡ್ಡಪರಿಣಾಮಗಳನ್ನು ಹೊಂದಿದೆ. ಹತ್ತರಲ್ಲಿ ಕನಿಷ್ಟ ನಾಲ್ಕು ಮಂದಿ ಸಾವನ್ನಪ್ಪುವ ಅಪಾಯ ಇದರಲ್ಲಿರುತ್ತದೆ.  ಹೊಟ್ಟೆಯ ಅಂಗ ಹೊರಗೆ ಬಂದಾಗ ಅತಿಯಾದ ರಕ್ತದ ನಷ್ಟ, ದೀರ್ಘಕಾಲದ ಮತ್ತು ತೀವ್ರವಾದ ನೋವು, ತೆರೆದ ಅಂಗಗಳಿಗೆ ಗಾಯ ಸೇರಿದಂತೆ ಅನೇಕ ಅಡ್ಡಪರಿಣಾಮ ಕಾಣಿಸಿಕೊಳ್ಳುತ್ತದೆ. 

ಕೆಮ್ಮು ಅಪಾಯಕಾರಿಯೇ? : ಕೆಮ್ಮು, ಸೀನು ಬಿಕ್ಕಳಿಕೆ ಎಲ್ಲವೂ ದೇಹದಲ್ಲಾಗುವ ನೈಸರ್ಗಿಕ ಕ್ರಿಯೆ. ಇದು ಅಪಾಯಕಾರಿಯಲ್ಲ. ಆದ್ರೆ ಅಪರೂಪದ ಸಮಯದಲ್ಲಿ, ಹೊಟ್ಟೆಯಲ್ಲಿ ಗಾಯವಾದಾಗ, ದೊಡ್ಡ ಪ್ರಮಾಣದಲ್ಲಿ ಸೀನು, ಕೆಮ್ಮು, ಬಿಕ್ಕಳಿಕೆ ಕಾಣಿಸಿಕೊಂಡ್ರೆ ಹೊಟ್ಟೆಯಲ್ಲಿರುವ ಅಂಗ ಹೊರಬರುವ ಅಪಾಯವಿರುತ್ತದೆ. 

ಕೆಮ್ಮುವುದು ಮತ್ತು ಸೀನುವುದು ಉಸಿರಾಟದ ಪ್ರದೇಶವನ್ನು  ವಿವಿಧ ಸೂಕ್ಷ್ಮಜೀವಿಗಳಿಂದ ರಕ್ಷಿಸಲು ಪ್ರಮುಖ ಕಾರ್ಯವಿಧಾನಗಳಾಗಿವೆ. ದೇಹವು ನೈಸರ್ಗಿಕವಾಗಿ ಮೂಗು ಮತ್ತು ಬಾಯಿಯನ್ನು ಕೆರಳಿಸುವ ಉದ್ರೇಕಕಾರಿಗಳನ್ನು ಹೊರಹಾಕುತ್ತದೆ. ಮೂಗಿನ ಕುಹರದೊಳಗೆ ಪ್ರವೇಶಿಸುವ ಹೊಗೆ, ಧೂಳು ಅಥವಾ ವಿವಿಧ ಅಲರ್ಜಿನ್‌ಗಳಂತಹ ಹೊರ ಪದಾರ್ಥಗಳಿಂದ ಇದು ಹೆಚ್ಚಾಗಿ ಪ್ರಚೋದಿಸಲ್ಪಡುತ್ತದೆ. ಸೀನುವಿಕೆ ಸಮಯದಲ್ಲಿ ಎದೆಯ ಸ್ನಾಯುಗಳು ಮತ್ತು ಡಯಾಫ್ರಾಮ್ನ ಹಠಾತ್ ಅನೈಚ್ಛಿಕ ಸಂಕೋಚನ ಉಂಟುಮಾಡುತ್ತದೆ. ಕೆಮ್ಮುವುದು ಮತ್ತು ಸೀನುವುದು ದೈನಂದಿನ ಚಟುವಟಿಕೆಗಳಂತೆ ಕಾಣಿಸಬಹುದು, ಆದರೆ ಕೆಮ್ಮುವುದು ಅಥವಾ ಬಲವಂತವಾಗಿ ಸೀನುವುದು ಕೆಳ ಬೆನ್ನಿನಲ್ಲಿ ಛಿದ್ರಗೊಂಡ ಇಂಟರ್ವರ್ಟೆಬ್ರಲ್ ಡಿಸ್ಕ್ ಗೆ ಕಾರಣವಾಗಬಹುದು.  

ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಸಿಹಿ ಹೆಚ್ಚಿದೆಯಾ? ಹಾಗಿದ್ದರೆ ಹೃದಯಾಘಾತ ಅಪಾಯ ಹೆಚ್ಚು!

ನೀವು ನಿಧಾನವಾಗಿ ಕೆಮ್ಮಿದ್ರೆ ಅಥವಾ ಸೀನಿದ್ರೆ ಅದು ಗಂಟೆಗೆ ಸುಮಾರು 30 ಕಿಲೋಮೀಟರ್ ವೇಗದಲ್ಲಿರುತ್ತದೆ. ಅದೇ ಬಲವಾಗಿ ಸೀನಿದಾಗ ಅದು ಗಂಟೆಗೆ 150 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ. ನೀವು ಬಲವಾದ ಕೆಮ್ಮು ಅಥವಾ ಸೀನುವಿಕೆಗೆ ಒಳಗಾದ್ರೆ  ಸ್ನಾಯುಗಳ ತ್ವರಿತ ಸಂಕೋಚನದಿಂದಾಗಿ ಎದೆ ಮತ್ತು ಕಿಬ್ಬೊಟ್ಟೆಯ ಕುಳಿಗಳಲ್ಲಿ ಒತ್ತಡ ಉಂಟಾಗುತ್ತದೆ.  

click me!