ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಸಿಹಿ ಹೆಚ್ಚಿದೆಯಾ? ಹಾಗಿದ್ದರೆ ಹೃದಯಾಘಾತ ಅಪಾಯ ಹೆಚ್ಚು!

By Chethan Kumar  |  First Published Jun 7, 2024, 12:56 PM IST

ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಉಪ್ಪು ಇದೆಯಾ? ಈ  ಮಾತನ್ನು ಎಲ್ಲರೂ ಕೇಳಿರುತ್ತೀರಿ. ಆದರೆ ನಿಮ್ಮ ಟೂಥ್ ಪೇಸ್ಟ್‌ನಲ್ಲಿ ಸ್ವೀಟ್‌ನೆಸ್ ಹೆಚ್ಚಿದೆಯಾ? ಕ್ಸೈಲಿಟೊಲ್ ಶುಗರ್ ಕಂಟೆಂಟ್ ಹೆಚ್ಚಿದ್ದರೆ ಹೃದಯಾಘಾತ ಸೇರಿದಂತೆ ಹಲವು ಅಫಾಯದ ಸಾಧ್ಯತೆಯೂ ಹೆಚ್ಚು ಅನ್ನೋದು ಅಧ್ಯಯನ ವರದಿ ಬಹಿರಂಗಪಡಿಸಿದೆ.
 


ಕ್ಲೀವ್‌ಲ್ಯಾಂಡ್(ಜೂ.07) ಹೃದಯಾಘಾತ ಸಮಸ್ಯೆ, ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಯಸ್ಸು, ಗಟ್ಟಿ ಮುಟ್ಟಾದ ಆರೋಗ್ಯ ಎಲ್ಲವನ್ನೂ ಮೀರಿ ಹೃದಯಾಘಾತ ಈಗಾಗಲೇ ಹಲವು ಶಾಕ್ ನೀಡಿದೆ. ಕೊರೋನಾ ಬಳಿಕ ವಿಶ್ವದೆಲ್ಲೆಡೆ ಹೃದಯಾಘಾತ ಸಮಸ್ಯೆಗಳ ಪ್ರಮಾಣ ದುಪ್ಪಟ್ಟಾಗಿದೆ. ಇದೀಗ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಳಸುವ ಟೂತ್ ಪೇಸ್ಟ್ ಕೂಡ ಇದೀಗ ಅಪಾಯಕ ಸಂಕೇತ ನೀಡುತ್ತಿದೆ ಎಂದು ಅಮೆರಿಕದ ಕ್ಲೀವ್‌ಲ್ಯಾಂಡ್ ಲೆರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ವರದಿ ನೀಡಿದೆ.

ಟೂತ್‌ಪೇಸ್ಟ್‌ನಲ್ಲಿ ಬಳಸುವ ಕ್ಸೈಲಿಟೊಲ್ ಶುಗರ್ ಕಂಟೆಂಟ್ ಹೆಚ್ಚಿದ್ದರೆ ಇದು ಬ್ಲಡ್ ಕ್ಲಾಟ್, ಹೃದಯಾಘಾತಕ್ಕೆ ಕಾರಣವಾಗಲಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಕ್ಸೈಲಿಟೊಲ್ ಶುಗರ್ ಕೇವಲ ಟೂತ್ ಪೇಸ್ಟ್‌ನಲ್ಲ ಮಾತ್ರವಲ್ಲ, ಮೌಥ್ ವಾಶ್, ಗಮ್, ಕೇಕ್, ಶುಗರ್ ಫ್ರಿ ಬಿಸ್ಕೆಟ್‌ಗಳಲ್ಲಿ ಈ ಕ್ಸೈಲಿಟೊಲ್ ಶುಗರ್ ಬಳಸಲಾಗುತ್ತದೆ. 

Tap to resize

Latest Videos

ಮೆಕ್ಸಿಕೋ ವ್ಯಕ್ತಿ ಹಕ್ಕಿಜ್ವರಕ್ಕೆ ಬಲಿ : ವಿಶ್ವದಲ್ಲೇ ಇಂಥ ಪ್ರಕರಣ ಫಸ್ಟ್‌

ಕ್ಸೈಲಿಟೊಲ್ ಸಕ್ಕರೆಯನ್ನು ಅಲ್ಕೋಹಾಲ್ ಸಕ್ಕರೆ ಎಂದೂ ಕರೆಯುತ್ತಾರೆ. ಹಣ್ಣುಗಳು ಹಾಗೂ ತರಕಾರಿಗಳಲ್ಲಿರುವ ಸಣ್ಣ ಪ್ರಮಾಣದ ಕ್ಸೈಲಿಟೊಲ್ ಸಕ್ಕರೆಯನ್ನು ತೆಗೆದು ಸಂಸ್ಕರಿಸಿ ಕೆಲ ಮಿಶ್ರಣಗಳ ಮೂಲಕ ಅಲ್ಕೋಹಾಲ್ ಸಕ್ಕರೆ ತಯಾರಿಸಲಾಗುತ್ತದೆ. ಆದರೆ ಇದರ ಪ್ರಮಾಣ ಕೊಂಚ ಹೆಚ್ಚಾದರೂ ಅಪಾಯವೇ ಹೆಚ್ಚು. 

ಟೂಥ್ ಪೇಸ್ಟ್‌ಗಳಲ್ಲಿ ಅಲ್ಕೋಹಾಲ್ ಸಕ್ಕರೆಯನ್ನು ಹೆಚ್ಚಾಗಿ ಬಳಸುತ್ತಾರೆ. ಇದರ ಪ್ರಮಾಣ ಹೆಚ್ಚಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ ಲೆರ್ನರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ವಿಜ್ಞಾನದ ಅಧ್ಯಕ್ಷ ಡಾ. ಹಾಜೆನ್ ಹೇಳಿದ್ದಾರೆ.  ಇವರು ನಡೆಸಿದ ಅಧ್ಯಯನದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರ್ಟಿಫೀಶಿಯಲ್ ಸಕ್ಕರೆ ಅಥವಾ ಕೃತಕ ಸಿಹಿಕಾರಕವಾಗಿರುವ ಕ್ಸೈಲಿಟೊಲ್ ಸಕ್ಕರೆಯನ್ನು ಹಲವು ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಇದರಿಂದ ಬೊಜ್ಜು, ಮಧುಮೇಹ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಇಷ್ಟೇ ಅಲ್ಲ, ಪ್ರಮುಖವಾಗಿ ಬ್ಲಡ್ ಕ್ಲಾಟ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಇದರಿಂದ ಹೃದಯಾಘಾತ ಸಮಸ್ಯೆಗಳು ಹೆಚ್ಚಾಗಿ ಸಂಭವಿಸಲಿದೆ ಎಂದು ಹಾಜೆನ್ ಹೇಳಿದ್ದಾರೆ.  

 ಕ್ಸೈಲಿಟೊಲ್ ಸಕ್ಕರೆ ಸಂಪೂರ್ಣವಾಗಿ ತ್ಯಜಿಸಲು ಸಾಧ್ಯವಿಲ್ಲ. ಹಣ್ಣುಗಳಲ್ಲಿ, ತರಕಾರಿಗಳಲ್ಲಿ ನಿಯಮಿತ ಪ್ರಮಾಣದಲ್ಲಿ ಇದು ನಮ್ಮ ದೇಹ ಸೇರುತ್ತದೆ. ಇದು ಆರೋಗ್ಯಕ್ಕೆ ಉತ್ತಮ. ಆದರೆ ಇದನ್ನು ಸಂಸ್ಕರಿಸಿ ಇತರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಕಿ ಸೇವಿಸುವುದು ಅಫಾಯ ಎಂದು ಅಧ್ಯಯನ ವರದಿ ಹೇಳುತ್ತಿದೆ. ಮಾರಣಾಂತಿಕ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಂಡು ಜೀವಕ್ಕೆ ಅಪಾಯವಾಗಬಹುದು ಎಂದು ಅಧ್ಯಯ ವರದಿ ಎಚ್ಚರಿಸಿದೆ. ಕೆಲ ಪಾನಿಯಗಳಲ್ಲೂ ಈ ಕೃತಕ ಸಿಹಿಕಾರಗಳನ್ನು ಬಳಸಲಾಗುತ್ತದೆ. ಈ ಕೃತಕ ಸಿಹಿಕಾರ ಹೃದ್ರೋಗದ ಸಮಸ್ಯೆಗೆ ಕಾರಣವಾಗಲಿದೆ.  

ವೇಸ್ಟ್ ಅಂತ ಡಸ್ಟ್‌ಬಿನ್‌ಗೆ ಎಸೆಯೋ ಬೆಳ್ಳುಳ್ಳಿ ಸಿಪ್ಪೆ ಹೃದಯದ ಆರೋಗ್ಯ ಕಾಪಾಡುತ್ತೆ!
 

click me!