ವಾಕಿಂಗ್‌ ವಂಚಿತ ಡಯಾಬಿಟೀಸ್‌ ರೋಗಿಗಳಿಗೆ ಪರ್ಯಾಯ ಏನು?

Kannadaprabha News   | Asianet News
Published : Apr 16, 2020, 09:36 AM IST
ವಾಕಿಂಗ್‌ ವಂಚಿತ ಡಯಾಬಿಟೀಸ್‌ ರೋಗಿಗಳಿಗೆ ಪರ್ಯಾಯ ಏನು?

ಸಾರಾಂಶ

ಮಧುಮೇಹ ಇರುವವರಿಗೆ ಬೆಳಗಿನ ವಾಕಿಂಗ್‌ ಮಾಡಿ ಅಂತ ಎಲ್ಲ ವೈದ್ಯರೂ ಸಲಹೆ ಮಾಡೋದುಂಟು. ಅದರಲ್ಲೂ ಕೆಲವರಿಗೆ ಸ್ಟೆ್ರಸ್‌ನಿಂದಾಗಿ ಬ್ಲಡ್‌ ಶುಗರ್‌ ಲೆವೆಲ್‌ನಲ್ಲಿ ಏರುಪೇರಾಗುತ್ತದೆ.

ಅಂಥಾ ಟೈಪ್‌ 1 ಅಥವಾ ಟೈಪ್‌ 2 ಡಯಾಬಿಟೀಸ್‌ ಪೇಶೆಂಟ್‌ಗಳಿಗೆ ವಾಕಿಂಗ್‌, ರನ್ನಿಂಗ್‌ ಎಕ್ಸರ್‌ಸೈಸ್‌ಗಳಿಂದ ಮಧುಮೇಹ ಕಂಟ್ರೋಲ್‌ಗೆ ಬರೋದಿದೆ. ಆದರೆ ಸದ್ಯಕ್ಕೀಗ ಅಂಥಾ ಆಯ್ಕೆಗಳಿಲ್ಲ. ಹಾಗಿದ್ರೆ ಏನು ಮಾಡಬಹುದು

ಮಧುಮೇಹಿಗಳ ಗೋಲ್ಡನ್‌ ರೈಸ್‌ ಹೃದಯ ಬೇನೆಗೂ ರಾಮಬಾಣ!

- ದಿನಕ್ಕೆ ಅರ್ಧ ಗಂಟೆ ಎಕ್ಸರ್‌ಸೈಸ್‌ ಮಾಡಲೇ ಬೇಕು. ವಾಕಿಂಗ್‌ ಬದಲಿಗೆ ಯೋಗ ಮಾಡಬಹುದು. ಅದರಲ್ಲೂ ಸೂರ್ಯನ ಎಳೆಬಿಸಿಲಿಗೆ ಮೈಯ್ಯೊಡ್ಡಿ ಯೋಗ ಮಾಡಿದರೆ ಹೆಚ್ಚು ಪರಿಣಾಮಕಾರಿ.

- ಸ್ಟ್ರೆಚಿಂಗ್‌ ಮತ್ತು ಇತರೆ ವ್ಯಾಯಾಮಗಳನ್ನು ಮಾಡಬಹುದು.

ಶುಗರ್ ಪೇಷೆಂಟ್ಸ್‌ಗೆ 'ಸಿಹಿ' ಸುದ್ದಿ! ಡಯಾಬಿಟಿಸ್‌ಗೆ ಮದ್ದು?

- ಸಾಧ್ಯವಾದರೆ ಟೆರೇಸ್‌ನಲ್ಲಿ ಇಲ್ಲವಾದರೆ ಮನೆಯೊಳಗೆ ಎರಡು ಚೇರ್‌ಗಳನ್ನು ಇಡಿ. ವೇಗದ ನಡಿಗೆ ಅಥವಾ ಓಡುತ್ತಾ ಎಂಟು ಅಂಕಿಯ ಶೇಪ್‌ ನಲ್ಲಿ ಆ ಚೇರ್‌ಗೆ ಸುತ್ತು ಬನ್ನಿ.

- ಊಟ ಮಾಡಿದ ತಕ್ಷಣ ನಿದ್ದೆ ಖಂಡಿತಾ ಬೇಡ. ಊಟ ಮಾಡಿ ನಿಧಾನಕ್ಕೆ ಹದಿನೈದು ನಿಮಿಷ ಓಡಾಡಿ. ಈ ಸಮಯದಲ್ಲಿ ವೇಗದ ನಡಿಗೆ ಒಳ್ಳೆಯದಲ್ಲ.

- ದಿನದಲ್ಲಿ ಸಾಧ್ಯವಾದಷ್ಟುಹೊತ್ತು ಕೂರುವುದನ್ನು ತಪ್ಪಿಸಿ. ನಡೆದಾಡುತ್ತಾ, ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?