ಫೋಮೋ ಅಂದ್ರೆ ಕಳೆದು ಹೋಗುವ ಭಯ;ನಿಮಗೂ ಇದೆಯಾ ಚೆಕ್‌ ಮಾಡಿಕೊಳ್ಳಿ!

By Kannadaprabha NewsFirst Published Apr 16, 2020, 8:50 AM IST
Highlights
ಫೋಮೋ(ಫಿಯರ್‌ ಆಫ್‌ ಮಿಸ್ಸಿಂಗ್‌ ಔಟ್‌) ಅನ್ನುವ ಒಂದು ಸಿಂಡ್ರೋಮ್‌ ಸದ್ದಿಲ್ಲದೇ ಮನೆಯೊಳಗಿರುವ ನಮ್ಮ ತಲೆಯೊಳಗೆ ದಾಳಿ ಮಾಡುತ್ತಿದೆ. ಫೋಮೋ ಅಂದರೆ ಕಳೆದು ಹೋಗೋ ಭಯ. ಒಳಗೆ ಕೂತು ಕೂತೇ ನಾನೆಲ್ಲಿ ಬೆಲೆ ಕಳ್ಕೊಳ್ತೇನೋ ಅನ್ನುವ ಭಯ ನಿಮ್ಮಲ್ಲೂ ಶುರುವಾಗಿದೆಯಾ?

ಹಾಗೆ ನೋಡಿದ್ರೆ ಈ ಫೋಮೋ ಅನ್ನೋದು ಮೊದಲು ಸಾಕಷ್ಟುಚರ್ಚೆಯಾಗ್ತಾ ಇತ್ತು. ಮುಖ್ಯವಾಗಿ ಸೋಷಲ್‌ ಮೀಡಿಯಾಗಳಿಂದ ಈ ಸಮಸ್ಯೆ ಉಲ್ಬಣವಾದದ್ದು. ನಿಮ್ಮ ಕ್ಲೋಸ್‌ ಫ್ರೆಂಡ್‌ ತನ್ನ ಹೊಸ ಲಕ್ಸುರಿ ಕಾರ್‌ ಜೊತೆಗಿನ ಫೋಟೋ ಹಾಕಿದ್ರೆ ನಿಮ್ಮೊಳಗೊಂದು ವಿಷಾದ, ನಿಮ್ಮ ಗೆಳತಿ ಅವಳ ಗಂಡನ ಜೊತೆಗೆ ಇಂಟಿಮೇಟ್‌ ಫೋಟೋ ಹಂಚಿಕೊಂಡರೆ ನಿಮಗೆ ನಿಮ್ಮ ಹಳಸಿರುವ ವೈವಾಹಿಕ ಸಂಬಂಧ ನೆನೆದು ಬೇಸರ.. ಹೀಗೆ. ಇದೆಲ್ಲ ಫಿಯರ್‌ ಆಫ್‌ ಮಿಸ್ಸಿಂಗ್‌ ಔಟ್‌ ಅಥವಾ ಫೋಮೋ ಎಂಬ ಸಮಸ್ಯೆಗೆ ಕಾರಣ ಆಗ್ತಿತ್ತು.

ಆದರೆ ಈಗ ಆ ಸ್ಥಿತಿ ಇಲ್ಲ. ಯಾರೂ ತಮ್ಮ ಲಕ್ಸುರಿಯನ್ನು ಹಂಚಿಕೊಳ್ಳಲ್ಲ. ಆದರೆ ಹೆಚ್ಚಿನವರು ಫ್ಯಾಮಿಲಿ ಫನ್‌, ಅಡುಗೆ ಇತ್ಯಾದಿ ಘಟನೆಗಳನ್ನು ಅಪ್‌ ಲೋಡ್‌ ಮಾಡ್ತಿರುತ್ತಾರೆ ಈ ಹೊತ್ತಲ್ಲಿ ನಿಮಗೆ ಕೆಲಸ ಹೋಗೋ ಚಿಂತೆ, ಸಂಬಳ ಬರದಿದ್ರೆ ಅನ್ನುವ ಚಿಂತೆ. ಅವರಿಗಿಲ್ಲದ ತಲೆಬಿಸಿ ನಿಮಗೆ ಮಾತ್ರ ಇದೆ ಅನ್ನುವ ಭಾವನೆ. ಇದೇ ಈ ಹೊತ್ತಿನ ಫೋಮೋ ಸಮಸ್ಯೆ.

ಮನೆಯಲ್ಲೇ ಕುಳಿತು ಖಿನ್ನತೆ ಬೇಕಿದೆ ಎಚ್ಚರ, ತಜ್ಞರ ಸಲಹೆ

ಇಲ್ಲಿ ಐದು ಪಾಯಿಂಟ್‌ಗಳಿವೆ. ಅವಕ್ಕೆ ವೈಯುಕ್ತಿಕ ನೆಲೆಯಲ್ಲಿ ಉತ್ತರಿಸಿ. ಆಮೇಲೆ ಕೊನೆಯಲ್ಲಿರುವ ಬ್ರಾಕೆಟ್‌ ನೋಡಿ. ನಿಮಗೆ 15 ಕ್ಕಿಂತ ಹೆಚ್ಚು ಮಾರ್ಕ್ಸ್‌ ಬಂದರೆ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ ಅಂತರ್ಥ. 5 ರಿಂದ 15 ಮಾರ್ಕ್ಸ್‌ ಬಂದರೆ ಇಂದಲ್ಲ ನಾಳೆ ನಿಮಗೆ ಈ ಸಮಸ್ಯೆ ಬರಬಹುದು. ಐದಕ್ಕಿಂತ ಕಮ್ಮಿ ಮಾರ್ಕ್ಸ್‌ ಬಂದರೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಇದೇ ಮನಸ್ಥಿತಿ ಮುಂದುವರಿಸಿ.

- ಹೇಗಾದ್ರೂ ಮಾಡಿ ಇತರರ ಕಣ್ಣಲ್ಲಿ ಗ್ರೇಟ್‌ ಅನಿಸಿಕೊಳ್ಳಬೇಕು ಅನ್ನುವ ಮನೋಭಾವ. (ಹೌದಾದರೆ 3 ಮಾರ್ಕ್)

- ಇನ್ನೊಬ್ಬರು ಹಾಯಾಗಿ ಲಾಕ್‌ಡೌನ್‌ ದಿನಗಳನ್ನು ಕಳೆಯುತ್ತಿರುವ ಫೆäಟೋ, ವೀಡಿಯೋ ನೋಡಿ ತಳಮಳ ( ಹೌದು: 4 ಮಾರ್ಕ್)

- ತಾನು ಮನೆಯೊಳಗೇ ಬಂಧಿಯಾಗಿರುವೆ, ಉಳಿದವರೆಲ್ಲ ಮುಂದೆ ಹೋಗ್ತಿದ್ದಾರೆ ಅನ್ನುವ ಉದ್ವೇಗ ( ಹೌದು : 8 ಮಾರ್ಕ್)

- ಏಕಾಂಗಿಯಾಗುವ ಭಯ, ಮಂಕುತನ, ನಿರಾಸಕ್ತಿ (5 ಮಾರ್ಕ್)

- ರಾತ್ರಿ ನಿದ್ದೆ ಬರಲ್ಲ. ಊಟ, ತಿಂಡಿಯಲ್ಲಿ ನಿರಾಸಕ್ತಿ, ನನ್ನ ಕತೆ ಇಷ್ಟೇ ಅನ್ನುವ ವೇದನೆ, ಉದ್ವೇಗ (5 ಮಾರ್ಕ್)

ಒಂದಿಷ್ಟುಅಭ್ಯಾಸ ಶುರು ಮಾಡಿ, ಸಮಸ್ಯೆಯಿಂದ ಹೊರಬನ್ನಿ

- ರಾತ್ರಿ ಸರಿಯಾಗಿ ನಿದ್ದೆ ಬರದಿದ್ರೂ ಪರ್ವಾಗಿಲ್ಲ. ಮುಂಜಾನೆ ಬೇಗ ಎದ್ದು ಯೋಗ ಮಾಡಿ. ಪ್ರಾಣಾಯಾಮ ಶುರು ಮಾಡಿ. ಆನ್‌ಲೈನ್‌ ನಲ್ಲಿ ಯೋಗ ಪಾಠಗಳು ಸಿಗುತ್ತವೆ.

- ಇನ್ನೊಬ್ಬರು ಒಳ್ಳೆಯದನ್ನಷ್ಟೇ ಪೋಸ್ಟ್‌ ಮಾಡ್ತಾರೆ. ಅವರ ನಗುವಿನ ಹಿಂದೆಯೂ ಭವಿಷ್ಯದ ಅಳು ಇರುತ್ತೆ ಅನ್ನೋದನ್ನು ಅರ್ಥ ಮಾಡಿಕೊಳ್ಳಿ.

- ಕೊರೋನಾ ಸಂತ್ರಸ್ತರಿಗೆ ನಿಮ್ಮಿಂದಾದ ಸಹಾಯ ಮಾಡಿ. ಆ ತೃಪ್ತಿ ಈ ವಿಷಾದವನ್ನು ಕಳೆಯುತ್ತೆ.

ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!

- ಓದೋದನ್ನು ಶುರುಮಾಡಿ. ತೀವ್ರವಾಗಿ ಓದಿ, ತೀವ್ರವಾಗಿ ಡ್ಯಾನ್ಸ್‌ ಮಾಡಿ. ನಿಮ್ಮಿಷ್ಟದ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ.

- ಹೊಸ ಹೊಸ ಕಲಿಕೆ ಶುರುಮಾಡಿ, ಕ್ರಿಯೇಟಿವ್‌ ಪ್ಲಾನ್‌ ಬಿ ರೆಡಿ ಮಾಡಿಟ್ಕೊಳ್ಳಿ. ಒಂದು ವೇಳೆ ಕೆಲಸ ಹೋದರೂ ಸಮಸ್ಯೆ ಆಗಲ್ಲ. ಹೋಗದೇ ಇದ್ದರೂ ನೆಮ್ಮದಿ ಇರುತ್ತೆ.

- ಬಹಳ ಮುಖ್ಯವಾಗಿ ಸೋಷಲ್‌ ಮೀಡಿಯಾ ಎಷ್ಟುಬೇಕೋ ಅಷ್ಟೇ ಬಳಸೋದನ್ನು ರೂಢಿಸಿಕೊಳ್ಳಿ.

click me!