ವಾಕಿಂಗ್‌ ಇಲ್ಲ, ಜಿಮ್ಮೂ ಇಲ್ಲ, ಮನೇಲೇ ಎಕ್ಸರ್‌ಸೈಸ್‌ ಹೇಗೆ?ಮಂದಿರಾ ಬೇಡಿ ಕೊಡ್ತಾರೆ ಉತ್ತರ!

By Kannadaprabha NewsFirst Published Apr 16, 2020, 9:10 AM IST
Highlights
ಮನೆಯಲ್ಲಿ ಎಕ್ಸರ್‌ಸೈಸ್‌ ಮಾಡೋದು ಕಷ್ಟಅಲ್ಲ. ಆದರೆ ಅದಕ್ಕೆ ತಕ್ಕಂಥ ಮೂಡ್‌ ಕ್ರಿಯೇಟ್‌ ಆಗಲ್ಲ ಅನ್ನೋದು ಹಲವರ ದೂರು. ಮಂದಿರಾ ಬೇಡಿ ಹೇಳೋ ಮಾತು ಕೇಳಿದ್ರೆ ನಿಮಗೂ ಮತ್ತೆ ಫಿಟ್‌ನೆಸ್‌ ಕ್ರೇಜ್‌ ಬರಬಹುದು.

ಲಾಕ್‌ಡೌನ್‌ ಟೈಮ್‌ನಲ್ಲಿ ಎಕ್ಸರ್‌ಸೈಸ್‌ ಅಂದ್ರೆ ಯಾವ ಕರ್ಮಕ್ಕೆ ಅಂತ ಮನಸ್ಸು ಕೇಳೋದು ಸಹಜವೇ. ಆದರೆ ಈ ದಿನಗಳಲ್ಲಿ ಎಕ್ಸರ್‌ಸೈಸ್‌ ಹೆಚ್ಚೆಚ್ಚು ಬೇಕು. ಏಕೆಂದರೆ ಹೊರಗೆ ಓಡಾಡಲ್ಲ. ನಾಲ್ಕು ಗೋಡೆಗಳ ಮಧ್ಯ ಎಷ್ಟುಓಡಾಡಿದರೂ ದೇಹದಲ್ಲಿ ಕೊಬ್ಬು ತುಂಬೋದು ತಪ್ಪಲ್ಲ. ಅದಕ್ಕೋಸ್ಕರ ಮನೆಯಲ್ಲಿ ಎಕ್ಸರ್‌ಸೈಸ್‌ ಮಿಸ್‌ ಮಾಡ್ಬೇಡಿ ಅಂತಾರೆ ಮಂದಿರಾ. ಅವರು ಹೇಳೋ ಹೋಮ್‌ ವರ್ಕೌಟ್‌ ಟಿಫ್ಸ್‌ ಹೀಗಿದೆ.

- ಫಿಟ್‌ನೆಸ್‌ ಗೋಲ್‌ ಹಾಕ್ಕೊಳ್ಳಿ. ಇನ್ನು ಒಂದು ತಿಂಗಳು ಇಷ್ಟುಎಕ್ಸರ್‌ಸೈಸ್‌ ದಿನಾಲೂ ಮಾಡೇ ಮಾಡ್ತೀನಿ ಅಂತ ಶಪಥ ಮಾಡಿ. ಈ ಕ್ಷಣದಿಂದ ಎಕ್ಸರ್‌ಸೈಸ್‌ ಶುರು ಮಾಡಿ. ನಾನಂತೂ 365 ದಿನಗಳಿಗೆ ಗೋಲ್‌ ಸೆಟ್‌ ಮಾಡಿದ್ದೇನೆ. ಒಂದು ದಿನವೂ ಮಿಸ್‌ ಮಾಡಿಲ್ಲ.

ಫೋಮೋ ಅಂದ್ರೆ ಕಳೆದು ಹೋಗುವ ಭಯ;ನಿಮಗೂ ಇದೆಯಾ ಚೆಕ್‌ ಮಾಡಿಕೊಳ್ಳಿ!

- ಓಡಾಡಿ, ನಡೆದಾಡಬೇಡಿ. ಮನೆಯೊಳಗೆ ಓಡುತ್ತಲೇ ಕೆಲಸ ಮಾಡಿ. ನಡೆಯೋದನ್ನೇ ಓಟವಾಗಿ ಮಾರ್ಪಡಿಸಿ,

- ಬಸ್ಕಿ ಹೊಡೆಯೋದು ಬೆಸ್ಟ್‌. ನಿಮ್ಮ ತಾಕತ್ತಿನ ಮೇಲೆ ಗುರಿ ನಿಗದಿ ಮಾಡಿ ಬಸ್ಕಿ ಹೊಡಿಯೋಕೆ ಶುರು ಮಾಡಿ. ಎಲ್ಲ ಸೈಡ್‌ಗೂ ತಿರುಗುತ್ತಾ ಬಸ್ಕಿ ಹೊಡಿಯೋದು ಮುಂದುವರಿಸಿ.

- ಐದು ಮೆಟ್ಟಿಲು ಹತ್ತಿ, ಇಳಿಯಿರಿ. ಹೀಗೇ ಒಂದೈವತ್ತು ಸಲ ಮಾಡಿ.

ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್! .

- ನಿಮ್ಮ ವಯಸ್ಸು, ಮನಸ್ಸು, ದೇಹದ ಗಾತ್ರ ಎಲ್ಲ ಮರೆತು ನಿಮ್ಮ ಮನಸ್ಸಿಗೆ ಬಂದ ಹಾಗೆ ಡ್ಯಾನ್ಸ್‌ ಮಾಡಿ. ಆಮೇಲೆ ದೇಹ, ಮನಸ್ಸು ಎರಡೂ ಹಗುರಾಗಿರೋದು ನಿಮ್ಮರಿವಿಗೆ ಬರುತ್ತೆ.

click me!