ದಿನವಿಡೀ ಉಲ್ಲಾಸವಾಗಿರಬೇಕು ಎಂದರೆ ಬೆಳಗ್ಗಿನ ಸಮಯದಲ್ಲಿ ಉತ್ತಮ ಆಹಾರ ಸೇವನೆ ಮಾಡಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಆಹಾರದಿಂದ ಎನರ್ಜಿ ದೊರೆಯುವ ಜತೆಗೆ ದೇಹವೂ ಶುದ್ಧವಾಗಬೇಕು.
ಆಹಾರವೇ (Food) ಆರೋಗ್ಯದ (Health) ಮೂಲ. ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಬ್ರೇಕ್ ಫಾಸ್ಟ್ (Breakfast) ಜತೆಗೆ ದಿನವನ್ನು ಆರಂಭಿಸುವುದು ಉತ್ತಮ ವಿಧಾನ. ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ಉತ್ತಮ ಪೌಷ್ಟಿಕಾಂಶದ (Nutrition) ಅಗತ್ಯವಿರುತ್ತದೆ. ನಮಗೆ ಹೆಚ್ಚು ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಜತೆಗೆ ನಮ್ಮ ದೇಹದಲ್ಲಿರುವ ಟಾಕ್ಸಿಕ್ (Toxic) ಅಂಶಗಳನ್ನು ಹೊರಹಾಕಲೂ ಇವು ಸಹಕಾರಿಯಾಗುತ್ತವೆ.
ಬೆಳಗಿನ ಹೊತ್ತು ತಪ್ಪು ಕಾಂಬಿನೇಷನ್ (Bad Combination) ಆಹಾರ ಸೇವನೆ ಮಾಡುವುದರಿಂದ ನಮ್ಮ ಜೀರ್ಣಾಂಗ (Digestive) ವ್ಯವಸ್ಥೆ ಅಧ್ವಾನವಾಗುತ್ತದೆ. ಹೀಗಾಗಿ, ಬೆಳಗ್ಗೆ ಖಾಲಿ (Empty) ಹೊಟ್ಟೆಯಲ್ಲಿ (Stomach) ತಿನ್ನುವ ಆಹಾರ ಅತಿ ಮುಖ್ಯವಾಗುತ್ತದೆ. ಹಾಗಿದ್ದರೆ ಬೆಳಗಿನ ಹೊತ್ತು ಸೇವಿಸಬೇಕಾದ ಆಹಾರ ಯಾವುವು ನೋಡಿ.
ಕಲ್ಲಂಗಡಿ ಹಣ್ಣು (Watermelon)
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಸೇವನೆ ಉತ್ತಮ. ಇದರಿಂದ ದೇಹದ ಇಲೆಕ್ಟ್ರೊಲೈಟ್ ಬ್ಯಾಲೆನ್ಸ್ ಉತ್ತೇಜನಗೊಳ್ಳುತ್ತದೆ. ಹಾಗೂ ದೇಹದ ನಿರ್ಜಲೀಕರಣ ದೂರವಾಗಿ, ಎಲ್ಲ ಕೋಶಗಳಿಗೂ ಬೇಕಾದ ಶಕ್ತಿ ದೊರೆಯುತ್ತದೆ. ಕಲ್ಲಂಗಡಿ ಹಣ್ಣಿನ ಶೇ.90ರಷ್ಟು ಭಾಗ ನೀರಿನಿಂದ ಕೂಡಿರುತ್ತದೆ. ಹೀಗಾಗಿ, ಬೇಸಿಗೆಯಲ್ಲಿ ಇದರ ಸೇವನೆ ಉತ್ತಮ. ಜತೆಗೆ, ನೈಸರ್ಗಿಕ ಸಕ್ಕರೆ ಹಾಗೂ ಕಡಿಮೆ ಕ್ಯಾಲರಿ ಹೊಂದಿರುವುದರಿಂದ ಆರೋಗ್ಯಕ್ಕೆ ಪೂರಕವಾಗಿದೆ. ವಿಟಮಿನ್ ಸಿ, ವಿಟಮಿನ್ ಬಿ೬ ಮತ್ತು ಇತರ ಪೌಷ್ಟಿಕಾಂಶಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ನೆರವಾಗುತ್ತವೆ.
ಮಾರ್ನಿಂಗ್ ಯಾವ ಡ್ರಿಂಕ್? (Drink)
ಬೆಳಗಿನ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು. ಅಥವಾ ಎಳನೀರು, ಜೀರಿಗೆ (Jeera) ನೀರು ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಕೆಲವು ರೀತಿಯ ಟೀ (Tea) ಅನ್ನು ಕುಡಿಯಬಹುದು. ಇವುಗಳನ್ನು ಬೆಳಗಿನ ಹೊತ್ತು ಸೇವಿಸುವ ಉತ್ತಮ ಪಾನೀಯಗಳು ಇವಲ್ಲದೆ ಬೇರೆ ಯಾವುದೂ ಅಲ್ಲ. ಇವು ಕೆಫೀನ್ ಬದಲು ಉತ್ತಮ ಪಾನೀಯವಾಗಿವೆ. ಜೇನನ್ನೂ ಸಹ ಅಲ್ಪ ಪ್ರಮಾಣದಲ್ಲಿ ಸೇವಿಸಬಹುದು. ಜೇನಿನಲ್ಲಿ ಹಲವು ರೀತಿಯ ಮಿನರಲ್ಸ್, ವಿಟಮಿನ್ಸ್ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಅನುಕೂಲವಾಗುವ ಎಂಝೈಮುಗಳು ಇರುತ್ತವೆ. ದಿನವೂ ಬೆಳಗ್ಗೆ ನೀರಿನೊಂದಿಗೆ ಜೇನು ಸೇವಿಸುವುದರಿಂದ ಮೆಟಬಾಲಿಸಂ ಗೆ ಉತ್ತೇಜನ ದೊರೆಯುತ್ತದೆ. ಜತೆಗೆ, ಮೇಲಿನ ಎಲ್ಲ ಪದಾರ್ಥಗಳು ದೇಹದಲ್ಲಿರುವ ಟಾಕ್ಸಿಕ್ ಅಂಶವನ್ನು ಸಹ ಹೊರಹಾಕುತ್ತವೆ.
ಪಪ್ಪಾಯ ಹಣ್ಣು (Pappaya)
ಪಪ್ಪಾಯದೊಂದಿಗೆ ದಿನದ ಆರಂಭವನ್ನು ಮಾಡುವುದು ಉತ್ತಮ ಐಡಿಯಾ. ಇದು ದೇಹವನ್ನು ಶುದ್ಧಗೊಳಿಸುತ್ತದೆ. ಡಿಟಾಕ್ಸಿಫಿಕೇಷನ್ ಗೊಳಿಸುವ ಉತ್ತಮ ಆಹಾರ ಪಪ್ಪಾಯ. ಇದರಿಂದ ದೇಹಕ್ಕೆ ನಾರಿನಂಶ ಹಾಗೂ ಫ್ರಕ್ಟೋಸ್ ಅಂಶವೂ ದೊರೆಯುತ್ತದೆ. ದಿನವೂ ಬೆಳಗ್ಗೆ ಸ್ವಲ್ಪ ಪಪ್ಪಾಯ ಸೇವನೆ ಮಾಡಿದ 45 ನಿಮಿಷಗಳ ಬಳಿಕ ಬ್ರೇಕ್ ಫಾಸ್ಟ್ ಮಾಡಿ. ಇದು ಕೆಟ್ಟ ಕೊಬ್ಬನ್ನು ಕರಗಿಸುತ್ತದೆ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿ.
ಹುಡುಗಿ ಸಿಗ್ತಿಲ್ಲ ಎಂದು ಖಿನ್ನತೆಗೊಳಗಾದ ವ್ಯಕ್ತಿ
ನೆನೆಸಿದ ಬಾದಾಮಿ (Almond)
ನೆನೆಸಿದ ಬಾದಾಮಿ ಅಥವಾ ಅಕ್ರೋಟ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪ್ರೊಟೀನ್ ಹಾಗೂ ಆರೋಗ್ಯಕರ ಕೊಬ್ಬು ಲಭ್ಯವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಸಮಯದಲ್ಲಿ ನಾರಿನಂಶ ಹಾಗೂ ಒಮೆಗಾ-೩ ಫ್ಯಾಟಿ ಆಸಿಡ್ ಭರಿತ ಬೀಜಗಳನ್ನು ಸೇವಿಸುವುದರಿಂದ ದೇಹಕ್ಕೆ ಭಾರೀ ಲಾಭ ದೊರೆಯುತ್ತದೆ.
ನಿಮ್ಮ ಮಗು 5 ವರ್ಷ ದಾಟಿದ್ರೂ ಹಾಸಿಗೆ ಒದ್ದೆ ಮಾಡುತ್ತಾ? ನೀವೇನು ಮಾಡಬೇಕು?
ತರಕಾರಿ ಜ್ಯೂಸ್ (Juice)
ಕ್ಯಾರೆಟ್, ಸೌತೆಕಾಯಿ, ಬೀಟ್ ರೂಟ್, ಅಲೋವೆರ ಜ್ಯೂಸ್ ಮಾಡಿ ಸೇವನೆ ಮಾಡಬಹುದು. ಇವುಗಳಲ್ಲಿ ವಿಟಮಿನ್ಸ್ ಮತ್ತು ಆಂಟಿಆಕ್ಸಿಡಂಟ್ ಗಳಿರುತ್ತವೆ. ಜ್ಯೂಸಿಗೆ ಸ್ವಲ್ಪ ಲಿಂಬೆ ರಸವನ್ನೂ ಸೇರಿಸಿಕೊಂಡರೆ ಇನ್ನಷ್ಟು ಉತ್ತಮ.
ಖರ್ಜೂರ (Dates)
ಬೆಳಗ್ಗೆ ಎದ್ದಾಕ್ಷಣ ಕೆಲಸ ಮಾಡಲು ಹೆಚ್ಚು ಎನರ್ಜಿ ಬೇಕು ಎನ್ನುವವರು ನೀರಿನೊಂದಿಗೆ ಎರಡು ಖರ್ಜೂರ ತಿನ್ನಬೇಕು.