
ಹೊರಾಂಗಣದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುವವರು ಯಾವಾಗಲೂ ಕಂಪ್ಯೂಟರ್ (Computer)ನಲ್ಲಿ ಕೆಲಸ ಮಾಡುವವರ ಬಗ್ಗೆ ಟೀಕಿಸುತ್ತಲೇ ಇರುತ್ತಾರೆ. ನಿಮ್ದೇನು ಕಂಪ್ಯೂಟರ್ ಮುಂದೆ ಕುಳಿತು ಸುಮ್ಮನೆ ಕೀಬೋರ್ಡ್ ಒತ್ತುತ್ತಿದ್ದರೆ ಆಯಿತು. ಏನೂ ಪರಿಶ್ರಮ ಪಡಬೇಕಾಗಿಲ್ಲ. ಆರಾಮ ಕೆಲಸ (Work) ಎಂದು. ಆದರೆ ಈ ಯಾಂತ್ರಿಕ ಕೆಲಸಕ್ಕಿಂತ ದೈಹಿಕ ಶ್ರಮದ ಕೆಲಸವೇ ನೂರು ಪಾಲು ಉತ್ತಮ ಅನ್ನೋದು ಅವರಿಗೇನು ಗೊತ್ತು.
ಕೋವಿಡ್ ಕಾಲಾನಂತರವಂತೂ ಮನುಷ್ಯನ ಜೀವನಶೈಲಿ (Lifestyle)ಯೇ ಬದಲಾಗಿದೆ. ದಿನನಿತ್ಯದ ಜೀವನದಲ್ಲಿ ಮೊಬೈಲ್ ಲ್ಯಾಪ್‌ಟಾಪ್‌ಗಳು ಹೆಚ್ಚು ಅನಿವಾರ್ಯವಾಗಿ ಬಿಟ್ಟಿವೆ. ಅದರಲ್ಲೂ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರ ಪಾಡಂತೂ ಹೇಳೋದೆ ಬೇಡ. ಗಂಟೆಗಟ್ಟಲೆ ಲ್ಯಾಪ್‌ಲಾಪ್ ಮುಂದೆ ಕುಳಿತು ಕೆಲಸ ಮಾಡುವುದು ಹಲವರಿಗೆ ಅನಿವಾರ್ಯವಾಗಿ ಬಿಟ್ಟಿದೆ. ಇದರಿಂದ ಆಗ್ತಿರೋ ಆರೋಗ್ಯ ಸಮಸ್ಯೆ (Health Problem)ಗಳು ಸಹ ಹಲವಾರು. ಬೆನ್ನುನೋವು, ಕಣ್ಣು ನೋವು, ಸೊಂಟ ನೋವು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಹಾಗಿದ್ರೆ ಇಂಥಾ ಆರೋಗ್ಯ ಸಮಸ್ಯೆಯಿಂದ ಪಾರಾಗಲು ನಾವು ಕೆಲವೊಂದು ಸಿಂಪಲ್ ಟಿಪ್ಸ್ ಹೇಳ್ತೀವಿ.
ದಿನವನ್ನು ಈ ರೀತಿ ಆರಂಭಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ!
ಸಾಂಕ್ರಾಮಿಕ ರೋಗವು ಪ್ರತಿಯೊಬ್ಬರನ್ನು ಅವರ ಮನೆಗಳಿಗೆ ನಿರ್ಬಂಧಿಸಿತು. ಆನ್‌ಲೈನ್ ತರಗತಿಗಳು, ದೀರ್ಘಾವಧಿಯ ಸಮಯದ ಕೆಲಸವಂತೂ ಸಾಮಾನ್ಯವಾಗಿ ಹೋಗಿದೆ. ಮನೆಯಿಂದ ಕೆಲಸ ಮಾಡುವುದು ಒಂದು ಸಾಂತ್ವನದ ಕಲ್ಪನೆಯಂತೆ ತೋರುತ್ತದೆಯಾದರೂ, ಇದು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಹಾನಿಯನ್ನುಂಟು ಮಾಡಿದೆ.
ಆನ್‌ಲೈನ್ ಕ್ಲಾಸ್ (Online Class) ಮತ್ತು ವರ್ಕ್ ಫ್ರಂ ಹೋಮ್ (Work From Home) ಕಾನ್ಸೆಪ್ಟ್‌ನಿಂದ ಮನುಷ್ಯನ ಆರೋಗ್ಯಕ್ಕೆ ಅದೆಷ್ಟು ತೊಂದ್ರೆಯಾಗ್ತಿದೆ ಎಂಬುದನ್ನು ಸೆಲೆಬ್ರಿಟಿ ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಹೇಳಿದ್ದಾರೆ. ಆನ್‌ಲೈನ್ ತರಗತಿಗಳು ಮತ್ತು ಕೆಲಸದ ಕಾರಣದಿಂದಾಗಿ ನಾವು ನಿರಂತರವಾಗಿ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ತೊಡಗಿಸಿಕೊಂಡಿರುವುದರಿಂದ ನಮ್ಮ ತಲೆ ಮತ್ತು ಕುತ್ತಿಗೆಗೆ ಸಾಕಷ್ಟು ಹಾನಿಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ವರ್ಕ್ ಫ್ರಂ ಹೋಮ್‌ನಿಂದಾಗಿ ನಮ್ಮ ಬೆನ್ನು ಒತ್ತಡವನ್ನು ಅನುಭವಿಸುತ್ತಿದೆ. ಏಕೆಂದರೆ ನಾವು ಕುಳಿತುಕೊಳ್ಳುವಾಗ ಬೆನ್ನಿಗೆ ಹೆಚ್ಚು ಭಾರ ಬೀಳುತ್ತದೆ. ಅಲ್ಲದೆ, ನಮ್ಮ ಹೊಟ್ಟೆಯು ಉಬ್ಬಲು ಪ್ರಾರಂಭಿಸುತ್ತದೆ. ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ತೊಡೆಗಳು ನೋಯಲು ಶುರುವಾಗುತ್ತೆ. ಈ ಹಾನಿಯನ್ನು ಕಡಿಮೆ ಮಾಡಲು ನೀವು ಕೆಲವು ದೈಹಿಕ ಚಲನೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ರುಜುತಾ ದಿವೇಕರ್ ಹೇಳುತ್ತಾರೆ. ಅದರಂತೆ, ದಿವೇಕರ್ ಅವರು ನಿಮ್ಮ ಒತ್ತಡದ ವೇಳಾಪಟ್ಟಿಯಲ್ಲಿ ನೀವು ಮಾಡಬಹುದಾದ ಸರಳವಾದ 10-ನಿಮಿಷಗಳ ತಾಲೀಮು ದಿನಚರಿಯನ್ನು ವಿವರಿಸಿದ್ದಾರೆ.
ಆಫೀಸ್‌ನಿಂದ ಬಂದು ಈ ಕೆಲಸ ಮಾಡಿದ್ರೆ, ರಾತ್ರಿ ಆರಾಮ ಸಿಗುತ್ತೆ
ಈ ತಾಲೀಮು ದಿನಚರಿಯು ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ದೇಹಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ನಿಮ್ಮನ್ನು ಫಿಟ್ ಆಗಿರಿಸಲು ಪ್ರತಿದಿನ ಈ ಸರಳ ಸ್ಟ್ರೆಚ್‌ಗಳನ್ನು ಅಭ್ಯಾಸ ಮಾಡಿ. ಈ ತಾಲೀಮು ದಿನಚರಿಯು ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ದೇಹಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
* ಲೆಗ್ ರೈಸ್ - 5 ಪುನರಾವರ್ತನೆಗಳು
*ಸ್ಟ್ರೈಟ್ ಲೆಗ್ ಲಿಫ್ಟ್ - 5 ರೆಪ್ಸ್
* ಭುಜದ ಹಿಗ್ಗುವಿಕೆ - 5 ಎಣಿಕೆಗಳು
* ಕರು ಹಿಗ್ಗಿಸುವಿಕೆ - ಎರಡೂ ಬದಿಗಳಲ್ಲಿ 5 ಪುನರಾವರ್ತನೆಗಳು
*ಮಂಡಿರಜ್ಜು ಹಿಗ್ಗಿಸುವಿಕೆ - 5 ಪುನರಾವರ್ತನೆಗಳು
* ಮೇಲಿನ ದೇಹದ ಟ್ವಿಸ್ಟ್ - 5 ಎಣಿಕೆಗಳು
* ತೋಳಿನ ಹಿಗ್ಗುವಿಕೆ - 5 ಎಣಿಕೆಗಳು
* ಬೆನ್ನು ಮತ್ತು ಕುತ್ತಿಗೆ ಹಿಗ್ಗಿಸುವಿಕೆ - 5 ಎಣಿಕೆಗಳು
*ಬೆನ್ನು ಮತ್ತು ಕುತ್ತಿಗೆ ಹಿಗ್ಗಿಸುವಿಕೆ 2 - 5 ಎಣಿಕೆಗಳು
ಮೇಲೆ ಸೂಚಿಸಿದ ಸುಲಭ ವ್ಯಾಯಾಮಗಳನ್ನು ಮಾಡುವಂತೆ ಸೆಲೆಬ್ರಿಟಿ ಪೌಷ್ಟಿಕ ತಜ್ಷೆ ರುಜುತಾ ದಿವೇಕರ್ ಸಲಹೆ ನೀಡುತ್ತಾರೆ. ಇನ್ಯಾಕೆ ತಡ ನಿಮ್ಗೆ ಸಹ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಿ ಆರೋಗ್ಯ ಸಮಸ್ಯೆ ಕಾಡ್ತಾ ಇದ್ರೆ ಈ ಸರಳ ವ್ಯಾಯಾಮಗಳನ್ನು ಮಾಡ್ಬೋದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.