ಬೇಸಿಗೆಯಲ್ಲಿ ಹಾವು ಕಚ್ಚುವ ಸಾಧ್ಯತೆ ಹೆಚ್ಚಿದ್ದು, ಭಾರತ್ ಸೀರಮ್ ಸಂಸ್ಥೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾವು ಕಡಿತದಿಂದ ಆಗುವ ಅಪಾಯಗಳು ಹಾಗೂ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು (ಮಾ.26): ಬೇಸಿಗೆ ಋತುವಿನಲ್ಲಿ ಬಿಸಿಲಿನ ತಾಪ ತಾಳಲಾರದೇ ಹೊರಬರುವ ಹಾವುಗಳು ಮನುಷ್ಯರನ್ನು ಕಚ್ಚುವ ಸಾಧ್ಯತೆ ಹೆಚ್ಚಾಗಿರುತ್ತವೆ. ಆದ್ದರಿಂದ ವಿಷಕಾರಿ ಹಾವುಗಳು ಕಚ್ಚಿದಾಗ ಮುಂಜಾಗ್ರತಾ ಕ್ರಮವಾಗಿ ಏನು ಮಾಡಬೇಕು ಎಂಬಮ ಮಾರ್ಗಸೂಚಿನ್ನು ಭಾರತ್ ಸೀರಮ್ ಮತ್ತು ವ್ಯಾಕ್ಸಿನೇಷನ್ ಸಂಸ್ಥೆ (ಬಿಎಸ್‌ವಿ) ಬಿಡುಗಡೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ದತ್ತಾಂಶದ ಪ್ರಕಾರ ವಾರ್ಷಿಕವಾಗಿ ಜಾಗತಿಕ ಮಟ್ಟದಲ್ಲಿ 4 ರಿಂದ 5 ಮಿಲಿಯನ್ ಜನರು ವಿಷಕಾರಿ ಹಾವುಗಳ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವಿನ ಕಡಿತದ ಸಾವುಗಳನ್ನು ಹೊಂದಿದೆ. ಹೀಗಾಗಿ, ಹಾವು ಕಡಿತದಿಂದಾಗುವ ಸಾವಿನ ಪ್ರಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಎಸ್‌ವಿ ಸಂಸ್ಥೆಯಿಂದ ಹಾವು ಕಡಿತ ಸಂಭವಿಸಿದರೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಹಾಗೂ ಚಿಕಿತ್ಸೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹಾವು ಕಡಿತದಿಂದ ಹೆಚ್ಚಾಗಿ ಬಹು-ಅಂಗಾಂಗ ವೈಫಲ್ಯ ಉಂಟುಮಾಡಬಹುದು. ರಕ್ತಸ್ರಾವ, ಪಾರ್ಶ್ವವಾಯು, ಸ್ನಾಯು ನಷ್ಟ, ಹೃದಯಾಘಾತ, ತೀವ್ರವಾದ ಮೂತ್ರ ಪಿಂಡದ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಬಹುತೇಕ ಪ್ರಕರಣದಲ್ಲಿ ಸಾವು ಸಂಭವಿಸಬಹುದು. ಹೀಗಾಗಿ, ಹಾವು ಕಡಿತವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅದಕ್ಕೆ ಚಿಕಿತ್ಸೆ ಪಡೆಯುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ: ವಿಶ್ವದಲ್ಲಿ ಹಾವು ಕಡಿತದಿಂದ ಸಾಯುವ ಜಾಗತಿಕ ರಾಜಧಾನಿ ಭಾರತ! ಈ ನಾಲ್ಕು ವಿಷಪೂರಿತ ಹಾವುಗಳಿಂದಲೇ ಹೆಚ್ಚು ಸಾವು!
ಹಾವು ಕಡಿತ ತಕ್ಷಣ ಏನು ಮಾಡಬೇಕು?
- ಹಾವು ಕಡಿದ ಕೂಡಲೇ ಗಾಬರಿಯಾಗದೇ, ನೀವು ಓಡಾಡುವುದನ್ನು ನಿಲ್ಲಿಸಿ ಒಂದೆಡೆ ಕೂರಬೇಕು, ಬೇರೆಯವರ ಸಹಾಯ ಪಡೆದು ಆಸ್ಪತ್ರೆಗೆ ಹೋಗಬೇಕು.
- ಹಾವು ಕಚ್ಚಿದ ಸ್ಥಳದಲ್ಲಿ ಯಾವುದೇ ಆಭರಣ ಅಥವಾ ಬಿಗಿಯಾದ ಬಟ್ಟೆ ಇದ್ದರೆ ಕೂಡಲೇ ತೆಗೆದು ಹಾಕಬೇಕು.
- ಒಂದು ವೇಳೆ ಎದೆ ಭಾಗದಲ್ಲಿ ಹಾವು ಕಚ್ಚಿದ್ದರೆ, ಆ ವ್ಯಕ್ತಿಯನ್ನು ಮಲಗಿಸಬೇಕು. ವಿಷ ಹರಡುವುದನ್ನು ತಡೆಯಲು ವ್ಯಕ್ತಿಯನ್ನು ಶಾಂತವಾಗಿರಿಸಬೇಕು.
- ಹಾವು ಕಚ್ಚಿದ ಗಾಯವನ್ನು ಸ್ವಚ್ಛವಾದ ಬ್ಯಾಂಡೇಜ್‌ನಿಂದ ಮುಚ್ಚಿ, ಬೇರೆ ವೈರಾಣುಗಳು ಸೇರದಂತೆ ಕಟ್ಟಬೇಕು.
- ಒಂದು ವೇಳೆ ಹಾವು ನಿಮ್ಮ ಕಾಲಿಗೆ ಕಚ್ಚಿದರೆ, ನೀವು ನಿಮ್ಮ ಬೂಟುಗಳನ್ನು ತೆಗೆದು ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ಹೋಗಬೇಕು.
ಇದನ್ನೂ ಓದಿ: ಬಹಿರ್ದೆಸೆಗೆ ಕುಳಿತ ವ್ಯಕ್ತಿ ಮೇಲೆ ದಾಳಿ ಮಾಡಿ, ನುಂಗಲು ಮುಂದಾದ 13 ಅಡಿ ಉದ್ದದ ಹೆಬ್ಬಾವು!
ಹಾವು ಕಚ್ಚಿದಾಗ ಏನು ಮಾಡಬಾರದು:
- ಯಾವುದೇ ಸ್ವಯಂ ಔಷಧ ಮಾಡಿಕೊಳ್ಳುವುದು ಒಳ್ಳೆಯದಲ್ಲ.
- ಹಾವು ಕಚ್ಚಿದ ಗಾಯವನ್ನು ಕತ್ತರಿಸಲು ಪ್ರಯತ್ನಿಸಬೇಡಿ, ವಿಷವನ್ನು ಬಾಯಿಂದ ಹೀರಲು ಪ್ರಯತ್ನಿಸಬೇಡಿ.
- ಗಾಯಕ್ಕೆ ಐಸ್ ಹಚ್ಚಬೇಡಿ, ಕೆಫೀನ್ ಅಥವಾ ಆಲ್ಕೋಹಾಲ್ ಇರುವ ಪದಾರ್ಥವನ್ನು ವ್ಯಕ್ತಿಗೆ ಕೊಡಬೇಡಿ.
- ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಓಡಾಡಲು ಬಿಡಬೇಡಿ, ಕೂಡಲೇ ಆತನನ್ನು ವಾಹನಸಲ್ಲಿ ಆಸ್ಪತ್ರೆಗೆ ಕರೆದೊಯ್ಯಿರಿ.