ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದ್ರೂ ಒಳ್ಳೇದಲ್ಲ !

Published : Mar 25, 2025, 02:57 PM ISTUpdated : Mar 25, 2025, 04:24 PM IST
ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದ್ರೂ ಒಳ್ಳೇದಲ್ಲ !

ಸಾರಾಂಶ

ದೇಹಕ್ಕೆ ವಿಟಮಿನ್ ಡಿ ಅಗತ್ಯ. ಇದರ ಹೆಚ್ಚಳ ಹೈಪರ್ವಿಟಮಿನೋಸಿಸ್ ಡಿ ಆಗಿ ಪರಿಣಮಿಸಿ, ಕ್ಯಾಲ್ಸಿಯಂ ಹೆಚ್ಚಳಕ್ಕೆ ಕಾರಣವಾಗಬಹುದು. ವಾಕರಿಕೆ, ಮೂಳೆ ನೋವು, ಕಿಡ್ನಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಕ್ತ ಪರೀಕ್ಷೆ ಮತ್ತು ಮೂತ್ರಪಿಂಡ ಪರೀಕ್ಷೆ ಮೂಲಕ ವಿಟಮಿನ್ ಡಿ ಮಟ್ಟವನ್ನು ಪತ್ತೆಹಚ್ಚಬಹುದು. ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟ ಕಡಿಮೆ ಮಾಡುವುದು ಚಿಕಿತ್ಸೆಯಾಗಿದೆ. ವೈದ್ಯರ ಸಲಹೆಯಂತೆ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು ಮುಖ್ಯ.

ನಮ್ಮ ದೇಹಕ್ಕೆ ವಿಟಮಿನ್ ಡಿ (Vitamin D) ಬಹಳ ಮುಖ್ಯ. ಈ ವಿಟಮಿನ್ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾದ್ರೆ ಅನೇಕ ರೀತಿಯ ರೋಗಗಳು ನಮ್ಮನ್ನು ಕಾಡುತ್ತವೆ. ದೇಹದಲ್ಲಿ ವಿಟಮಿನ್ ಡಿ ಕೊರತೆ ಆಗ್ತಿದ್ದಂತೆ ವೈದ್ಯರು  ವಿಟಮಿನ್ ಡಿ ಮಾತ್ರೆಯನ್ನು ನೀಡ್ತಾರೆ. ಅನೇಕರು ವಿಟಮಿನ್ ಡಿ ಕಡಿಮೆ ಆಗಿದೆ ಎನ್ನುವ ಕಾರಣಕ್ಕೆ ವೈದ್ಯರ ಸಲಹೆ ಪಡೆಯದೆ ಮಾತ್ರೆ ಸೇವನೆ ಮಾಡ್ತಾರೆ. ನಮ್ಮ ದೇಹದಲ್ಲಿ ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಇರಬೇಕು. ಅದು ಕಡಿಮೆ ಆದ್ರೂ, ಹೆಚ್ಚಾದ್ರೂ ಒಳ್ಳೆಯದಲ್ಲ. ನಮ್ಮ ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದಾಗ ಅದನ್ನು ವಿಷತ್ವ ಅಥವಾ ಹೈಪರ್ವಿಟಮಿನೋಸಿಸ್ (Hypervitaminosis) ಡಿ ಎಂದು ಕರೆಯಲಾಗುತ್ತದೆ. ಇದು ಗಂಭೀರ ಸ್ಥಿತಿಯಾಗಿದ್ದು, ಅನೇಕ ಆರೋಗ್ಯ ಸಮಸ್ಯೆ ಇದ್ರಿಂದ ಕಾಡುತ್ತದೆ.

ವಿಟಮಿನ್ ಡಿ ಹೆಚ್ಚಳದಿಂದ ಆಗುವ ಸಮಸ್ಯೆ ಏನು? : ವಿಟಮಿನ್ ಡಿ  ಮುಖ್ಯ ಕಾರ್ಯವೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವುದು. ಇದು ಮೂಳೆಗಳು, ಹಲ್ಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು, ಜೀವಕೋಶಗಳ ಬೆಳವಣಿಗೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದರ ಕೊರತೆಯಿಂದಾಗಿ, ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ವಿಟಮಿನ್ ಡಿ ಹೆಚ್ಚಾದಾಗ ರಕ್ತದಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗಲು ಕಾರಣವಾಗುತ್ತದೆ.  ಇದು ಹೈಪರ್‌ಕಾಲ್ಸೆಮಿಯಾಕ್ಕೆ ಕಾರಣವಾಗಬಹುದು.  

ಈ ಆಹಾರಗಳ ಜೊತೆ ಸೌತೆಕಾಯಿ ತಿಂದ್ರೆ ಆರೋಗ್ಯಕ್ಕೆ ಅಪಾಯ

ವಿಟಮಿನ್ ಡಿ ಕೊರತೆಯಿಂದ ವಾಕರಿಕೆ, ವಾಂತಿ, ಹಸಿವಿನ ಕೊರತೆ, ಅತಿಯಾದ ಬಾಯಾರಿಕೆ ಮತ್ತು ಸುಸ್ತು ಕಾಡುತ್ತದೆ. ಇದಲ್ಲದೆ ದೀರ್ಘಕಾಲಿಕ ಸಮಸ್ಯೆಯಾಗಿ ಮೂಳೆಗಳಲ್ಲಿ ನೋವು ಕಾಡುತ್ತದೆ. ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಳ್ಳುತ್ತದೆ. ಡಿಹೈಡ್ರೇಷನ್ ಸಮಸ್ಯೆಗೆ ಕಾರಣವಾಗುತ್ತದೆ. ಪದೇ ಪದೇ ಮೂತ್ರವಿಸರ್ಜನೆ ಕಾಣಿಸಿಕೊಳ್ಳುತ್ತದೆ.  ಮಲಬದ್ಧತೆ ಕೂಡ ಜನರನ್ನು ಕಾಡುವುದಿದೆ. ವಿಟಮಿನ್ ಡಿ ಹೆಚ್ಚಾದ್ರೆ ಹೃದಯ ಸಮಸ್ಯೆ, ಮಾನಸಿಕ ಸಮಸ್ಯೆ, ಖಿನ್ನತೆ ಕಾಡುವುದಲ್ಲದೆ, ಅತಿಯಾದಾಗ ವ್ಯಕ್ತಿ ಕೋಮಾಕ್ಕೆ ಹೋಗುತ್ತಾನೆ.  

ವಿಟಮಿನ್ ಡಿ ಪತ್ತೆ ಹಚ್ಚುವುದು ಹೇಗೆ? : ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ವಿಟಮಿನ್ ಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ದೇಹದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪ್ರಮಾಣ ಪರೀಕ್ಷಿಸಲು ರಕ್ತ ಪರೀಕ್ಷೆ  ಮಾಡಿಸಿಕೊಳ್ಳಬಹುದು. ಇದಲ್ಲದೆ, ಮೂತ್ರಪಿಂಡದ ಸ್ಥಿತಿಯನ್ನು ಪರೀಕ್ಷಿಸಲು ಮೂತ್ರಪಿಂಡದ ಕಾರ್ಯ ಪರೀಕ್ಷೆ (ಕೆಎಫ್‌ಟಿ) ಸಹ ಮಾಡಬಹುದು. ಈ ಪರೀಕ್ಷೆಗಳು ವಿಟಮಿನ್ ಡಿ ವಿಷತ್ವವನ್ನು ಪತ್ತೆ ಮಾಡುತ್ತವೆ. ವೈದ್ಯರ ಪ್ರಕಾರ, ವಿಟಮಿನ್ ಡಿ ವಿಷತ್ವದಿಂದ ಬಳಲುವ ಜನರ ಸಂಖ್ಯೆ ಕಡಿಮೆ. ಆದ್ರೆ ವಿಷತ್ವ ಹೆಚ್ಚಾದ್ರೆ ಅಪಾಯ ಹೆಚ್ಚು. ಅಧಿಕ ಪ್ರಮಾಣದಲ್ಲಿ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವ ಜನರು, ಮೂಳೆ ಸಮಸ್ಯೆಗಳಿಗೆ ಸಂಬಂಧಿಸಿದ ಔಷಧಿಗಳನ್ನು ದೀರ್ಘಕಾಲದವರೆಗೆ ಸೇವಿಸುವ ಜನರು ಈ ಸಮಸ್ಯೆಯಿಂದ ಬಳಲುವುದು ಹೆಚ್ಚು. 

ನವರಾತ್ರಿಯಲ್ಲಿ ಬೆಳ್ಳುಳ್ಳಿ-ಈರುಳ್ಳಿ ಯಾಕೆ ತಿನ್ನಲ್ಲ ಗೊತ್ತಾ?

ವಿಟಮಿನ್ ಡಿ ವಿಷತ್ವಕ್ಕೆ ಚಿಕಿತ್ಸೆ ಹೇಗೆ? : ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಕಡಿಮೆ ಮಾಡುವುದು ವಿಟಮಿನ್ ಡಿ ವಿಷತ್ವಕ್ಕೆ ಪ್ರಾಥಮಿಕ ಚಿಕಿತ್ಸೆಯಾಗಿದೆ. ನಿರ್ಜಲೀಕರಣಕ್ಕೆ ಚಿಕಿತ್ಸೆ ನೀಡಲು ವೈದ್ಯರು ರಕ್ತನಾಳಗಳ ಮೂಲಕ ಅಭಿದಮನಿ ದ್ರವಗಳನ್ನು ನೀಡುತ್ತಾರೆ. ವೈದ್ಯರ ಸಲಹೆಯಂತೆ ನೀವು ವಿಟಮಿನ್ ಡಿ ಪೂರಕ ಸೇವನೆ ಮಾಡಬೇಕು. ವಾರದಲ್ಲಿ ಒಂದು ದಿನ ಮಾತ್ರ ವಿಟಮಿನ್ ಡಿ ಮಾತ್ರೆ ಸೇವನೆ ಮಾಡಬೇಕು. ವೈದ್ಯರು ನೀಡಿದ ಕೋರ್ಸ್ ಮಾತ್ರ ಮುಗಿಸಿ, ಅದಕ್ಕಿಂತ ಹೆಚ್ಚು ದಿನ ವಿಟಮಿನ್ ಡಿ ಮಾತ್ರೆ ಸೇವನೆ ಮಾಡಬೇಡಿ. ಮಕ್ಕಳಿಗೆ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೆ ವಿಟಮಿನ್ ಡಿ ಪೂರಕವನ್ನು ನೀಡಬೇಡಿ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?