ಕೆಲಸದ ಒತ್ತಡವನ್ನು ಚಿಟಿಕೆಯಲ್ಲಿ ದೂರ ಮಾಡುತ್ತೆ Y – ಬ್ರೇಕ್

Published : Jun 14, 2023, 03:50 PM IST
ಕೆಲಸದ ಒತ್ತಡವನ್ನು ಚಿಟಿಕೆಯಲ್ಲಿ ದೂರ ಮಾಡುತ್ತೆ Y – ಬ್ರೇಕ್

ಸಾರಾಂಶ

ಒಂದೇ ಕಡೆ ಕುಳಿತು, ದಿನಪೂರ್ತಿ ಕೆಲಸ ಮಾಡೋದು ಸುಲಭವಲ್ಲ. ಓಡಾಡ್ತಾ ಮಾಡುವ ಕೆಲಸಕ್ಕಿಂತ ಹೆಚ್ಚು ನೋವು, ಒತ್ತಡ ಇದ್ರಲ್ಲಿ ಕಾಡುತ್ತದೆ. ಕುಳಿತು ಕೆಲಸ ಮಾಡುವವರ ಆರೋಗ್ಯ ವೃದ್ಧಿಗೆ ಕೇಂದ್ರ ಸರ್ಕಾರ ಒಂದು ಬ್ರೇಕ್ ನೀಡಿದೆ. ಅದ್ಯಾವುದು ಗೊತ್ತಾ?  

ಎಲ್ಲ ಪ್ರಾಣಿ ಪಕ್ಷಿಗಳಿಗೂ ಕೂಡ ಕೆಲಸದ ನಡುವೆ ವಿಶ್ರಾಂತಿ ಎನ್ನುವುದು ಬೇಕೇ ಬೇಕು. ಕೆಲಸ ಯಾವುದೇ ಆದರೂ ನಡುವೆ ಬ್ರೇಕ್ ಎನ್ನುವುದು ಇರಬೇಕು. ಶರೀರ ಹಾಗೂ ಮಾನಸಿಕ ದಣಿವನ್ನು ನೀಗಿಸಲು ಇದು ಅತ್ಯಗತ್ಯ. ಕೃಷಿಕರೇ ಆಗಿರಲಿ, ಸಾಫ್ಟವೇರ್ ಉದ್ಯೋಗಿಗಳೇ ಆಗಲಿ ಅಥವಾ ಸಿನಿಮಾ ತಾರೆಯರೇ ಆಗಿರಲಿ ಎಲ್ಲರೂ ಒಂದೊಂದು ರೀತಿಯಲ್ಲಿ ಬ್ರೇಕ್ ತೆಗೆದುಕೊಳ್ತಾರೆ. ಹಾಗೆ ನಾವು ತೆಗೆದುಕೊಳ್ಳುವ ಬ್ರೇಕ್ ಆರೋಗ್ಯಕರವಾಗಿರಬೇಕು.

ನೀವು ಯಾವುದಾದರೂ ಒಂದು ಸರ್ಕಾರಿ (Govt) ಕಚೇರಿಗೆ ನಿಮ್ಮ ಕೆಲಸಕ್ಕಾಗಿ ಹೋದಾಗ ಅಲ್ಲಿರುವ ಉದ್ಯೋಗಿ (Employee) ಗಳು ಕುರ್ಚಿಯಲ್ಲೇ ಕುಳಿತು ಯೋಗ ಮಾಡುತ್ತಿರುವುದನ್ನು ನೋಡಿರಬಹುದು. ಏನೋ ಸುಮ್ಮನೆ ಟೈಮ್ ಪಾಸ್ ಮಾಡಲು ಹೀಗೆ ಮಾಡುತ್ತಿರಬಹುದು ಎಂದುಕೊಳ್ಳಬೇಡಿ. ಏಕೆಂದರೆ ಸರಕಾರವೇ ಅವರಿಗೆ ಕೆಲಸದ ನಡುವೆ ಬ್ರೇಕ್ ತೆಗೆದುಕೊಂಡು ಯೋಗವನ್ನು ಮಾಡಲು ಸೂಚಿಸಿದೆ. ಸರಕಾರ ತನ್ನ ಉದ್ಯೋಗಿಗಳಿಗೆ ಕೆಲಸದ ನಡುವೆ ಬಿಡುವು ಮಾಡಿಕೊಂಡು y- ಬ್ರೇಕ್ ತೆಗೆದುಕೊಳ್ಳಲು ಆದೇಶಿಸಿದೆ. ಇದರಿಂದ ಸರಕಾರಿ ನೌಕರರ ಆರೋಗ್ಯ (Health) ಚೆನ್ನಾಗಿರಲಿ, ಒತ್ತಡ ಕಡಿಮೆಯಾಗಲಿ ಹಾಗೂ ಕೆಲಸ ಮಾಡಲು ಇನ್ನಷ್ಟು ಹುಮ್ಮಸ್ಸು ಬರಲಿ ಎನ್ನುವುದೇ ಸರಕಾರದ ಮೂಲ ಉದ್ದೇಶ. ಹಾಗಾಗಿಯೇ ಸರಕಾರ ತನ್ನ ಅಧಿಕಾರಿಗಳು ಮತ್ತು ನೌಕರರನ್ನು y- ಬ್ರೇಕ್ ತೆಗೆದುಕೊಳ್ಳಲು ಪ್ರೇರೇಪಿಸುತ್ತಿದೆ.

ಈ ಯೋಗ ಮಾಡಿದ್ರೆ ವಯಸ್ಸಾದ್ರೂ ನೀವು ಯಂಗ್ ಆಗಿ ಕಾಣ್ತೀರಿ

ಏನಿದು ವೈ ಬ್ರೇಕ್ ?:  ವೈ  ಬ್ರೇಕ್ ಎಂದರೆ ಯೋಗದ ಬ್ರೇಕ್ ಅಥವಾ ಯೋಗ ವಿರಾಮ. ತಮ್ಮ ಕೆಲಸದಲ್ಲಿ ತಾವು ನಿರತರಾಗಿರುವ ಸರಕಾರಿ ಉದ್ಯೋಗಿಗಳು ಹಾಗೂ ಅಧಿಕಾರಿಗಳಿಗೆ ಇಂತಹ ವಿರಾಮಗಳ ಅವಶ್ಯಕತೆ ತುಂಬಾ ಇರುತ್ತದೆ. ದಿನವಿಡೀ ಅಥವಾ ವರ್ಷಪೂರ್ತಿ ಒಂದೇ ಜಾಗದಲ್ಲಿ ಕುಳಿತು ಒಂದೇ ರೀತಿಯ ಕೆಲಸವನ್ನು ಮಾಡಲು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢವಾಗಿರಬೇಕು. ಈ ಕಾರಣಕ್ಕಾಗಿಯೇ ಕೇಂದ್ರ ಸರಕಾರ ತನ್ನ ಕೆಲಸಗಾರರ ಭಾರವನ್ನು ಸ್ವಲ್ಪ ಕಡಿಮೆ ಮಾಡಲು ಈ ವೈ ಬ್ರೇಕ್ ನಿಯಮವನ್ನು ಜಾರಿಗೊಳಿಸಿದೆ.

ಈ ವೈ ಬ್ರೇಕ್ ನಲ್ಲಿ ಉದ್ಯೋಗಿಗಳ ತಮ್ಮ ಸ್ಥಳದಲ್ಲಿಯೇ ಕುಳಿತು ಯೋಗವನ್ನು ಮಾಡಬಹುದು. ಉದ್ಯೋಗಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಯೋಗವನ್ನು ಮಾಡಿ ರಿಲಾಕ್ಸ್ ಆಗಬಹುದು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಸೂಚನೆಯನ್ನು ನೀಡಿ ಯೋಗವನ್ನು ಉತ್ತೇಜಿಸಲು ತಿಳಿಸಿದೆ. ಉದ್ಯೋಗಿಗಳು ಒತ್ತಡಮುಕ್ತರಾಗಿ ಸಂತೋಷದಿಂದ ಕೆಲಸ ಮಾಡಬೇಕೆನ್ನುವ ಉದ್ದೇಶದಿಂದ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಆಯುಷ್ ಸಚಿವಾಲಯವು ಈ ಯೋಜನೆಯನ್ನು ಪ್ರಾರಂಭಿಸಿದೆ. ಕುಳಿತಲ್ಲಿಯೇ ಮಾಡುವ ಈ ಯೋಗಕ್ಕೆ ವರ್ಕ್ ಪ್ಲೇಸ್ ಯೋಗ ಎಂದೂ ಕರೆಯಬಹುದು.

ಸ್ಟ್ರೆಸ್‌ನಿಂದ ಹೃದಯಕ್ಕೆ ತೊಂದ್ರೆ, ರಿಲ್ಯಾಕ್ಸ್ ಆಗಿರಲು ಹೀಗ್ ಮಾಡಿ

ವೈ  ಬ್ರೇಕ್ ನ ಉಪಯೋಗಗಳು : ಬಹಳ ಸಮಯದ ತನಕ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಶರೀರಕ್ಕೆ ಮತ್ತು ಬೆನ್ನಿನ ಹುರಿಗಳಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ವೈದ್ಯರು ಹೇಳುವ ಪ್ರಕಾರ, ಪ್ರತಿ ಅರ್ಧ ಗಂಟೆಗೊಮ್ಮೆ ಕುಳಿತ ಜಾಗದಿಂದ ಎದ್ದು ಸ್ವಲ್ಪ ಓಡಾಡಬೇಕು ಮತ್ತು ಬಾಡಿ ಮೂವ್ ಮೆಂಟ್ ಮಾಡಬೇಕು. ಹೀಗೆ ಶರೀರಕ್ಕೆ ಸಣ್ಣ ವ್ಯಾಯಾಮ ನೀಡುವುದರಿಂದ ಸ್ಟ್ರೆಸ್ ರಿಲೀಸ್ ಆಗುತ್ತದೆ. ಈ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಯೋಗ ವಿರಾಮವನ್ನು ಕೂಡ ಆರಂಭಿಸಲಾಗಿದೆ. ಇದರಿಂದ ಸರಕಾರಿ ನೌಕರರ ಆರೋಗ್ಯವೂ ಚೆನ್ನಾಗಿರುತ್ತೆ. ಮನೆಯಲ್ಲಿ ವರ್ಕೌಟ್, ಯೋಗ ಮಾಡದ ಅಥವಾ ಹೆಚ್ಚು ಯೋಗದ ಆಸನಗಳನ್ನು ಮಾಡಲು ಸಾಧ್ಯವಾಗದವರಿಗೆ ಇಂತಹ ಸರಳ ಯೋಗ ಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಸರ್ಕಾರಿ ನೌಕರರಲ್ಲಿ ಅನೇಕ ಮಂದಿ ಮಧುಮೇಹ, ಬಿಪಿಯಂತಹ ಆರೋಗ್ಯ ಸಮಸ್ಯೆಯನ್ನು ಹೊಂದಿರಬಹುದು. ಅಂತಹ ಉದ್ಯೋಗಿಗಳು ಯಾವುದೇ ಒತ್ತಡವಿಲ್ಲದೇ ಕೆಲಸ ಮಾಡಲು ಯೋಗ ವಿರಾಮದಂತಹ ಯೋಜನೆಗಳು ಬಹಳ ಸಹಕಾರಿಯಾಗಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?