Health Tips : ವ್ಯಾಯಾಮ ಮಾಡುವಾಗ ಆಕಳಿಕೆ ಬಂದ್ರೆ ಅದು ಆಲಸ್ಯವಲ್ಲ.. ಕಾರಣ ಇಲ್ಲಿದೆ

By Contributor AsianetFirst Published Jun 14, 2023, 12:51 PM IST
Highlights

ಯಾವುದೋ ಕಠಿಣ ವ್ಯಾಯಾಮ ಮಾಡ್ತಿರುತ್ತೇವೆ, ಫ್ರೆಶ್ ಆಗಿದ್ದೇವೆ ಅಂತಾ ನಾವು ಭಾವಿಸಿರ್ತೇವೆ. ಆಗ ಒಂದಾದ್ಮೆಲೊಂದು ಆಕಳಿಕೆ ಬರಲು ಶುರುವಾಗುತ್ತೆ. ಕೆಲವರು ನಿದ್ರೆ ಅಂದ್ರೆ ನಿಮ್ಮನ್ನು ಯಾರೋ ನೆನಪಿಸಿಕೊಳ್ತಿದ್ದಾರೆ ಅಂತಾ ಮತ್ತ್ಯಾರೋ ಹೇಳ್ತಾರೆ. ಇದಕ್ಕೆ ಕಾರಣವೇನು ನಿಮಗೆ ಗೊತ್ತಾ?  
 

ಪ್ರತಿ ನಿತ್ಯ ಹತ್ತು ನಿಮಿಷವಾದ್ರೂ ವರ್ಕ್ ಔಟ್, ಯೋಗ, ವಾಕಿಂಗ್ ಮಾಡಬೇಕು. ಕೊರೊನಾ ನಂತ್ರ ಆರೋಗ್ಯ ಎಷ್ಟು ಮುಖ್ಯ ಎಂಬುದು ಜನರ ಅರಿವಿಗೆ ಬಂದಿದೆ. ಮೊದಲಿಗಿಂತ ಈಗ ಹೆಚ್ಚು ಜನರು ವಾಕಿಂಗ್ ಮಾಡೋದನ್ನು, ಯೋಗಾಭ್ಯಾಸ ಮಾಡೋದನ್ನು ನಾವು ನೋಡ್ಬಹುದು. ಇದು ಒಳ್ಳೆಯ ಅಭ್ಯಾಸ. ಬೆಳಿಗ್ಗೆ ಎದ್ದ ನಂತ್ರ ಅನೇಕರು ವ್ಯಾಯಾಮ ಅಥವಾ ಯೋಗ ಮಾಡಲು ಶುರು ಮಾಡ್ತಾರೆ. ಈ ವೇಳೆ ಆಕಳಿಕೆ ಬರ್ತಿರುತ್ತದೆ. ನಿದ್ರೆ ಕಾರಣಕ್ಕೆ ಆಕಳಿಕೆ ಬರ್ತಿದೆ ಅಂತಾ ನಾವೆಲ್ಲ ಭಾವಿಸ್ತೇವೆ. ಆದ್ರೆ ನಿದ್ರೆಗಾಗಿ ಮಾತ್ರವಲ್ಲ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಆಕಳಿಕೆ ಬರಲು ಇನ್ನೂ ಕೆಲ ಕಾರಣವಿದೆ. ನಾವಿಂದು ವರ್ಕ್ ಔಟ್ ಮಾಡುವಾಗ ಆಕಳಿಕೆ ಬರಲು ಏನು ಕಾರಣ ಎಂಬುದನ್ನು ನಿಮಗೆ ಹೇಳ್ತೇವೆ. ಹಾಗೇ ಅದ್ರಿಂದ ರಕ್ಷಣೆ ಹೇಗೆ ಎಂಬುದನ್ನು ತಿಳಿಸ್ತೇವೆ.

ವ್ಯಾಯಾಮ (Exercise) ದ ವೇಳೆ ಆಕಳಿ (Yawning) ಕೆ ಬರಲು ಕಾರಣವೇನು? : ದೇಹ (Body) ತುಂಬಾ ದಣಿದಿದೆ ಅಥವಾ ನಿದ್ರೆ ಸರಿಯಾಗಿ ಆಗಿಲ್ಲ ಹಾಗಾಗಿ ಆಕಳಿಕೆ ಬರ್ತಿದೆ ಎಂತಾ ನೀವಂದುಕೊಳ್ಳುತ್ತೀರಿ. ಆದ್ರೆ ಆಕಳಿಕೆ ನಿಮ್ಮ ದೇಹದ ಕೆಲ ಅಡಚಣೆಯಿಂದ ಕಾಣಿಸಿಕೊಳ್ಳುತ್ತದೆ. ಕಠಿಣ ವರ್ಕ್ ಔಟ್ ಅಥವಾ ವ್ಯಾಯಾಮ ಮಾಡಿದಾಗ ನಿಮಗೆ ಆಕಳಿಕೆ ಬರೋದು ಹೆಚ್ಚು. ಇದ್ರ ಹಿಂದಿನ ಕಾರಣವೆಂದ್ರೆ ನಿಮ್ಮ ದೇಹದ ಉಷ್ಣತೆ ಹೆಚ್ಚಾಗುವುದು. ವ್ಯಾಯಾಮ ಮಾಡಿದಾಗ ದೇಹದ ಉಷ್ಣತೆ ಹೆಚ್ಚಾಗುವ ಜೊತೆಗೆ ಜೀರ್ಣಕ್ರಿಯೆ ಮೇಲೂ ಇದು ಪರಿಣಾಮ ಬೀರುತ್ತದೆ. ಆಗ ಆಕಳಿಕೆ ಬರುತ್ತದೆ. ಆಕಳಿಕೆ ನಿಮ್ಮ ದೇಹವನ್ನು ತಂಪಾಗಿಸುವ ಕೆಲಸ ಮಾಡುತ್ತದೆ. ವ್ಯಾಯಾಮದ ವೇಳೆ ನಿಮಗೆ ಆಕಳಿಕೆ ಬಂದ್ರೆ ನಿಮ್ಮ ದೇಹದ ಉಷ್ಣತೆ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಆಕಳಿಕೆ ಬರ್ತಿದೆ ಎಂದು ನೀವು ಭಾವಿಸಬಹುದು.

HEALTH TIPS : ಪ್ರತಿ ದಿನ ಕತ್ತು ನೋವು ಕಾಡ್ತಿದ್ದರೆ ಸುಸ್ತಿನ ಕಾರಣ ಹೇಳ್ಬೇಡಿ..

ಆಕಳಿಕೆ ಆಲಸ್ಯದ ಸಂಕೇತವೇ? : ಸಾಮಾನ್ಯವಾಗಿ ಆಕಳಿಕೆ ಬಂದ್ರೆ ಸೋಮಾರಿತನ, ಆಲಸ್ಯವೆಂದು ನಾವು ಹೇಳ್ತೇವೆ. ಈ ದಿನ ಆಲಸಿತನ ಹೆಚ್ಚಾಗಿದ್ದು, ಪದೇ ಪದೇ ಆಕಳಿಕೆ ಬರ್ತಿದೆ ಎನ್ನುತ್ತೇವೆ. ಆದ್ರೆ ಆಲಸ್ಯದಿಂದ ಅಲ್ಲ ಆಯಾಸದಿಂದ ಆಕಳಿಕೆ ಬರ್ತಿರುತ್ತದೆ. ಹೌದು, ನಿಮ್ಮ ದೇಹ ದಣಿದಿದ್ದರೂ ಆಕಳಿಕೆ ಬರುತ್ತದೆ. ಈ ಸಮಯದಲ್ಲಿ ಚೇತರಿಕೆ ಅಗತ್ಯವಾಗುತ್ತದೆ. ನೀವು ವಿಶ್ರಾಂತಿ ಪಡೆಯುವ ಅವಶ್ಯಕತೆ ಇರುತ್ತದೆ. ಇಷ್ಟೇ ಅಲ್ಲ ನೀವು ಸರಿಯಾಗಿ ನಿದ್ರೆ ಮಾಡದೆ ಹೋದಾಗ ಆಕಳಿಕೆ ಬರುತ್ತದೆ. ನೀವು ಸರಿಯಾಗಿ ನಿದ್ರೆ ಮಾಡಬೇಕು. ಹಾಗೆಯೇ ಉತ್ತಮ ಜೀವನ ಶೈಲಿಯನ್ನು ನೀವು ರೂಪಿಸಿಕೊಳ್ಳಬೇಕು. 

ಆಕಳಿಕೆಗೆ ಮುಖ್ಯವಾಗಿ ದೇಹದ ಉಷ್ಣತೆ, ನಿದ್ರೆ ಕೊರತೆ ಹಾಗೂ ದಣಿವು ಕಾರಣವಾಗಿದೆ. ಅದ್ರಿಂದ ಹೊರಬರಲು ನೀವು ಕೆಲ ಉಪಾಯವನ್ನು ಮಾಡಬೇಕು.

ಹೆಚ್ಚು ಹಾಲು ಕುಡಿಯೋದ್ರಿಂದ ತಾಯಂದಿರ ಎದೆಹಾಲು ಹೆಚ್ಚುತ್ತಾ?

• ವಾರ್ಮ್ ಅಪ್ ಮಾಡ್ಬೇಕು : ವಾರ್ಮ್ ಅಪ್ ಮಾಡೋದ್ರಿಂದ ಸ್ನಾಯುಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುತ್ತದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಡೈನಾಮಿಕ್ ಸ್ಟ್ರೆಚ್‌ಗಳು ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ನೀವು ಮಾಡ್ಬಬಹುದು.
•  ಉಸಿರಾಟದ ವ್ಯಾಯಾಮ : ದೇಹದಲ್ಲಿ ಆಮ್ಲಜನಕದ ಕೊರತೆಯುಂಟಾದ್ರೂ ಆಕಳಿಕೆ ಬರುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ನೀವು ಆಮ್ಲಜನಕದ ಕೊರತೆ ನೀಗಿಸಲು ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಿ.
• ದೇಹವನ್ನು ಹೈಡ್ರೇಟ್ ಮಾಡಿ : ವ್ಯಾಯಾಮ ಮಾಡಿದಾಗ ದೇಹದಲ್ಲಿನ ನೀರು ಬೆವರಿನ ಮೂಲಕ ಹೊರಗೆ ಹೋಗುತ್ತದೆ. ಇದ್ರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ನಿಮ್ಮ ದೇಹವನ್ನು ಹೈಡ್ರೇಟ್ ಮಾಡುವುದು ಮುಖ್ಯ. ಹಾಗಾಗಿ ನೀವು ಆಗಾಗ ನೀರನ್ನು ಸೇವನೆ ಮಾಡ್ತಿದ್ದರೆ ಆಕಳಿಕೆ ಸಮಸ್ಯೆ ಕಾಡೋದಿಲ್ಲ.
 

click me!