
ಕೊರೊನಾ ನಂತ್ರ ಹೃದಯಾಘಾತ (Heart attack)ದ ಸಂಖ್ಯೆ ಹೆಚ್ಚಾಗಿದೆ. ಕೂತಿದ್ದೋರು, ನಿಂತಿದ್ದೋರು, ಕೆಲ್ಸ ಮಾಡ್ತಿದ್ದೋರು ಅಲ್ಲಲ್ಲೇ ಕುಸಿದು ಬಿದ್ದು ಸಾವನ್ನಪ್ತಿದ್ದಾರೆ. ಇದು ಜನರಲ್ಲಿ ಭಯ ಹುಟ್ಟಿಸಿದ್ದು ನಿಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಸಾವಿನ ಸಂಖ್ಯೆ ಹೆಚ್ಚು. ಚಳಿಗಾಲದಲ್ಲಿ ಸ್ನಾನ ಮಾಡುವಾಗ ಬಾತ್ ರೂಮಿನಲ್ಲಿಯೇ ಕುಸಿದು ಬಿದ್ದು ಹಠಾತ್ ಸಾಯುವ ಸುದ್ದಿ ಹೆಚ್ಚಾಗಿ ಕೇಳಿ ಬರುತ್ತದೆ. ಚಳಿಗಾಲದಲ್ಲಿ ಬಾತ್ ರೂಮನ್ನು ಅತ್ಯಂತ ಅಪಾಯಕಾರಿ ಜಾಗ ಎಂದೇ ಗುರುತಿಸಲಾಗುತ್ತದೆ. ಬಾತ್ ರೂಮಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಲು ಮುಖ್ಯ ಕಾರಣ ರಕ್ತದೊತ್ತಡ ಮತ್ತು ತಾಪಮಾನದಲ್ಲಿನ ಬದಲಾವಣೆ. ನೀವು ಮಾಡುವ ಸಣ್ಣ ತಪ್ಪು ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಚಳಿಗಾಲದಲ್ಲಿ ಬಾತ್ ರೂಮಿನಲ್ಲಿ ಹೆಚ್ಚು ಜನರು ಸಾಯಲು ಕಾರಣ ಏನು? ರಕ್ಷಣೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
1.ಮಲಬದ್ಧತೆಯಿಂದ ಬಳಲುತ್ತಿದ್ದರೆ ಅಪಾಯ ಗಮನಾರ್ಹವಾಗಿ ಹೆಚ್ಚಾಗಿರುತ್ತದೆ. ಮಲಬದ್ಧತೆಯಿಂದಾಗಿ ಜನರು ಮಲವಿಸರ್ಜನೆಗೆ ಒತ್ತಡ ಹಾಕುತ್ತಾರೆ. ಇದು ವಲ್ಸಲ್ವಾ ಕುಶಲ ಎಂಬ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಉಸಿರು ಹಿಡಿದುಕೊಂಡು ಬಲ ಪ್ರಯೋಗ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮೆದುಳಿಗೆ ಆಮ್ಲಜನಕ ಸಪ್ಲೈ ಆಗುವುದಿಲ್ಲ. ಹೃದ್ರೋಗ, ಅಧಿಕ ರಕ್ತದೊತ್ತಡ ಅಥವಾ ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರಿಗೆ ಈ ಅಪಾಯ ಹೆಚ್ಚು.
Parenting Tips: ಮಗುವಿಗೆ ಜ್ವರ ಬಂದಾಗ ಎಂದಿಗೂ ಈ 4 ತಪ್ಪನ್ನ ಮಾಡ್ಬೇಡಿ
2.ಬಾತ್ ರೂಮ್ ವಾತಾವರಣ ಹಾಗೂ ಶೀತ ಎರಡೂ ಇದಕ್ಕೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ತಣ್ಣಗಿರುವ ಬಾತ್ ರೂಮ್ ಪ್ರವೇಶ ಮಾಡಿ, ಬಿಸಿಬಿಸಿಯಾದ ನೀರನ್ನನು ಮೈಗೆ ಹಾಕಿದಾಗ ದೇಹದ ತಾಪಮಾನದಲ್ಲಿ ತ್ವರಿತ ಬದಲಾವಣೆ ಆಗುತ್ತದೆ. ಈ ಹಠಾತ್ ಉಷ್ಣತೆ ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
3.ಚಳಿಗಾಲದಲ್ಲಿ ಬಾತ್ ರೂಮಿನಲ್ಲಿ ಜಾರಿ ಬಿದ್ದು ಇಲ್ಲವೆ ಉಸಿರುಗಟ್ಟಿ ಜನ ಸಾಯೋದು ಬಹಳ ಕಡಿಮೆ. ಮುಖ್ಯ ಕಾರಣ ದೇಹದ ಉಷ್ಣತೆಯಲ್ಲಿ ಹಠಾತ್ ಕುಸಿತ ಅಥವಾ ಹೆಚ್ಚಳದಿಂದ ಉಂಟಾಗುವ ಹೃದಯದ ಮೇಲಿನ ಒತ್ತಡ.
1.ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಜನರು ಸ್ನಾನಕ್ಕೆ ಹೋಗುವ ಮೊದಲು ಮನೆಯಲ್ಲಿ ಯಾರಿಗಾದರೂ ತಿಳಿಸಿ. ಬಾತ್ ರೂಮ್ ಲಾಕ್ ಹಾಕಬೇಡಿ.
2.ಸ್ನಾನ ಮಾಡುವ ಮೊದಲು ಬಾತ್ ರೂಮಿನಲ್ಲಿ ಸ್ವಲ್ಪ ನಡೆದಾಡಿ. ಇದರಿಂದ ರಕ್ತ ಪರಿಚಲನೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
3.ಚಳಿಗಾಲದಲ್ಲಿ ಬೆಳಿಗ್ಗೆ ಬೇಗನೆ ತಣ್ಣನೆಯ ಬಾತ್ ರೂಮಿಗೆ ಹೋಗುವುದು ಅಪಾಯಕಾರಿ. ಸ್ನಾನ ಮಾಡುವ ಮೊದಲು, ಬಾತ್ ರೂಮ್ ಬೆಚ್ಚಗಿರುವಂತೆ ನೋಡಿಕೊಳ್ಳಿ. ಬಾತ್ ರೂಮ್ ಕಿಟಿಕಿ, ಬಾಗಿಲು ಹಾಕಿ.
4.ಬಿಸಿಯಾದ ನೀರನ್ನು ಮೈಮೇಲೆ ಹಾಕಿಕೊಳ್ಳಬೇಡಿ. ಮೊದಲು ಉಗುರು ಬೆಚ್ಚಗಿನ ನೀರನ್ನು ಕೈ, ಕಾಲುಗಳಿಗೆ ಹಾಕಿ ನಂತರ ತಲೆಗೆ ಹಾಕಿಕೊಳ್ಳಿ.
ನಿಮ್ಮ ದೇಹದ ಈ 5 ಭಾಗದಲ್ಲಿ ನೋವು ಬರುತ್ತಿದೆಯಾ?, ಹಾಗಾದ್ರೆ ಕಿಡ್ನಿಗೆ ಹಾನಿಯಾಗಿದೆ ಎಂದರ್ಥ
5.ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡಬೇಡಿ. ಇದರಿಂದ ಬಿಪಿ ಇಳಿಯಬಹುದು.
ಮಲಬದ್ಧತೆಗೆ ಪರಿಹಾರ ಹೀಗೆ? : ಮಲಬದ್ಧತೆ ಇರುವವರಿಗೆ ಚಳಿಗಾಲದಲ್ಲಿ ಸಮಸ್ಯೆ ಡಬಲ್ ಆಗುತ್ತದೆ. ಅಂಥವರು ನಾರಿನಂಶವಿರುವ ಆಹಾರವನ್ನು ಸೇವಿಸಿ. ಸಲಾಡ್ ಸೇವಿಸಿ. ಮಾವು ಮತ್ತು ಸೌತೆಕಾಯಿಯಂತಹ ತರಕಾರಿ, ಹಣ್ಣನ್ನು ಸಿಪ್ಪೆ ಜೊತೆ ಸೇವನೆ ಮಾಡಿ. ಸಾಕಷ್ಟು ನೀರು ಕುಡಿಯಿರಿ. ದೈಹಿಕ ವ್ಯಾಯಾಮ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.