ಬೇಗ ಪೀರಿಯಡ್ಸ್ ತರಲು ಮನೆಮದ್ದುಗಳಿವೆ, ಆದರೆ ಅವು ಪ್ರತಿಯೊಬ್ಬ ಮಹಿಳೆಗೂ ಕೆಲಸ ಮಾಡಬೇಕೆಂದಿಲ್ಲ. ಪಪ್ಪಾಯಿ, ಶುಂಠಿ, ಅರಿಶಿನದಂತಹ ಪರಿಹಾರಗಳು ಸಹಾಯಕವಾಗಬಹುದು. ಅನಿಯಮಿತ ಪೀರಿಯಡ್ಸ್ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಅನೇಕ ಮಹಿಳೆಯರು ಋತುಸ್ರಾವದ ಸಮಸ್ಯೆಯನ್ನು ಎದುರಿಸುತ್ತಾರೆ, ಕೆಲವರಿಗೆ ಪಿರೇಡ್ಸ್ ಬೇಗ ಬಂದರೆ ಮತ್ತೆ ಕೆಲವರಿಗೆ ನಿಗದಿತಗಿಂತ ತುಂಬಾ ಲೇಟಾಗಿ ಬರುತ್ತದೆ. ಪಿರೇಡ್ಸ್ ಸಮಯಕ್ಕೆ ಸರಿಯಾಗಿ ಬರದೇ ಇರುವುದು ಅಥವಾ ಬೇಗ ಬರುವುದು, ಅತಿಯಾದ ರಕ್ತಸ್ರಾವದಂತಹ ಸಮಸ್ಯೆಗಳನ್ನು ಅನೇಕರು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಯಾವುದಾದರೂ ಶುಭ ಸಮಾರಂಭಗಳಿದ್ದಾಗ, ಅಥವಾ ಇನ್ಯಾವುದಾದರು ಹಬ್ಬ ಪಾರ್ಟಿ ಅಂತ ಇದ್ದಾಗ ಮಹಿಳೆಯರು ಪಿರೇಡ್ಸ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬರಬೇಕೆಂದು ಬಯಸುತ್ತಾರೆ. ಇದರಿಂದ ನಮಗೆ ಅನುಕೂಲವಾಗುತ್ತದೆ. ಏಕೆಂದರೆ ಟ್ರಿಪ್ ಅಥವಾ ಪಾರ್ಟಿ ಸಮಯದಲ್ಲಿ ಪಿರೇಡ್ಸ್ ಬಂದರೆ ಅದು ಮಹಿಳೆಯರಿಗೆ ತೊಂದರೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರ ಈ ಸಮಸ್ಯೆಗಳನ್ನು ಹೋಗಲಾಡಿಸಿ ಪೀರೇಡ್ಸ್ ಬೇಗ ಬರಲು ನಾವು ನಿಮಗೆ ಕೆಲವು ಮನೆಮದ್ದುಗಳನ್ನು ಹೇಳಲಿದ್ದೇವೆ, ಇದರಿಂದ ನೀವು ಬಯಸಿದರೆ ನಿಮ್ಮ ಪೀರೇಡ್ಸ್ ರಾತ್ರೋರಾತ್ರಿ ಆಗಿ ಬಿಡುತ್ತದೆ.
ನಾಗಾ ಸಾಧ್ವಿಗಳು ಮುಟ್ಟಾದಾಗ ಮಹಾಕುಂಭದಲ್ಲಿ ಸ್ನಾನ ಮಾಡಬಹುದಾ?
ಮನೆಮದ್ದುಗಳಿಂದ ರಾತ್ರೋರಾತ್ರಿ ಪಿರೇಡ್ಸ್ ಬರುತ್ತದೆಯೇ?
ಮನೆಮದ್ದುಗಳಿಂದ ಪಿರೇಡ್ಸ್ ತಕ್ಷಣ ತರಬಹುದು, ಆದರೆ ಇದು ಎಲ್ಲಾ ಮಹಿಳೆಯರಿಗೂ ಅನ್ವಯಿಸುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗಳು ವಿಭಿನ್ನವಾಗಿರುತ್ತವೆ, ಆದ್ದರಿಂದ ಮನೆಮದ್ದುಗಳು ಪ್ರತಿಯೊಬ್ಬ ಮಹಿಳೆಯ ಮೇಲೆ ಪರಿಣಾಮಕಾರಿಯಾಗಬೇಕೆಂಬುದಿಲ್ಲ. ನಿಮ್ಮ ಪಿರೇಯಡ್ಸ್ ನಿಯಮಿತವಾಗಿಲ್ಲದಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು.
ಪಿರಿಯಡ್ಸ್ ಟೈಂನಲ್ಲಿ ಆಫೀಸ್ ಅಸಾಧ್ಯ ಅನ್ನೋರಿಗೆ ಈ ಕಂಪನಿ ಬೆಸ್ಟ್, ಇಲ್ಲಿ ಸಿಗುತ್ತೆ ಮುಟ್ಟಿನ ರಜೆ
ಯಾವ ಮನೆಮದ್ದುಗಳು ಪಿರೇಡ್ಸ್ ಬೇಗ ತರಲು ಸಹಾಯ ಮಾಡುತ್ತವೆ?
ಪಪ್ಪಾಯಿ: ಹಸಿ ಪಪ್ಪಾಯಿ ತಿನ್ನುವುದರಿಂದ ಗರ್ಭಾಶಯದ ಸ್ನಾಯುಗಳಲ್ಲಿ ಸಂಕೋಚನ ಉಂಟಾಗುತ್ತದೆ, ಇದು ಪಿರೇಡ್ಸ್ ಅನ್ನು ಬೇಗ ತರಲು ಸಹಾಯ ಮಾಡುತ್ತದೆ.
ಶುಂಠಿ: ಶುಂಠಿ ಚಹಾ ಅಥವಾ ಹಸಿ ಶುಂಠಿ ತಿನ್ನುವುದರಿಂದ ಅದು ಪಿರೇಡ್ಸ್ ಅನ್ನು ಉತ್ತೇಜಿಸುತ್ತದೆ.
ಅರಿಶಿನ: ಅರಿಶಿನ ಸೇವನೆಯು ಹಾರ್ಮೋನುಗಳ ಸಮತೋಲನವನ್ನು ಸುಧಾರಿಸಲು ಮತ್ತು ಪೀರಿಯಡ್ಸ್ ಅನ್ನು ನಿಯಮಿತಗೊಳಿಸಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ: ದಾಲ್ಚಿನ್ನಿ ಸೇವನೆಯು ಪಿರೇಡ್ಸ್ ಅನ್ನು ನಿಯಮಿತಗೊಳಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಓಂ ಕಾಳು: ಓಂ ಕಾಳು ಸೇವನೆಯು ಪಿರೇಡ್ಸ್ ಅನ್ನು ನಿಯಮಿತಗೊಳಿಸುವ ಸಾಂಪ್ರದಾಯಿಕ ಪರಿಹಾರವಾಗಿ ಬಳಸಲಾಗುತ್ತದೆ.
ಕೊತ್ತಂಬರಿ: ಕೊತ್ತಂಬರಿ ಚಹಾ ಕುಡಿಯುವುದರಿಂದ ಪಿರೇಡ್ಸ್ ತರಲು ಸಹಾಯ ಮಾಡಬಹುದು.
ದಾಳಿಂಬೆ: ನಿಮ್ಮ ನಿಗದಿತ ದಿನಾಂಕಕ್ಕಿಂತ 15 ದಿನಗಳ ಮೊದಲು ದಿನಕ್ಕೆ 3 ಬಾರಿ ದಾಳಿಂಬೆ ಜ್ಯೂಸ್ ಕುಡಿಯಲು ಪ್ರಾರಂಭಿಸಿ. ಇದರಿಂದ ನಿಮ್ಮ ಪಿರೇಡ್ಸ್ ಬೇಗ ಬರುತ್ತದೆ.
ನೈಸರ್ಗಿಕವಾಗಿ ಆಗುವುದನ್ನು ಮುಂದೆ ಹೋಗುವಂತೆ ಅಥವಾ ಮೊದಲೇ ಆಗುವಂತೆ ಮಾಡುವುದರಿಂದ ದೇಹಕ್ಕೆ ಅಡ್ಡಪರಿಣಾಮಗಳು ಆಗುವುದು ಸಹಜ, ಆದ್ದರಿಂದ ಪ್ರಯೋಗ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.