ಆರೋಗ್ಯ ಚೆನ್ನಾಗಿರಬೇಕಾದರೆ ಹೇಗೆ ಕಾಯಿಲೆಗಳು ಮೆಡಿಸಿನ್‌ಗಳನ್ನು ತೆಗೆದುಕೊಳ್ಳಬೇಕೋ ಹಾಗೆಯೇ ಆರೋಗ್ಯದಲ್ಲಿ ಏರುಪೇರಾಗದಿರಲು ಎಕ್ಸ್‌ಪೈಯರಿ ಆದ ಮೆಡಿಸಿನ್‌ಗಳನ್ನು ತೆಗೆದುಕೊಳ್ಳದಿರುವುದು ಸಹ ಅಷ್ಟೇ ಮುಖ್ಯ. ಅವಧಿ ಮೀರಿದ ಔಷಧಿ ಸೇವನೆಯಿಂದ ಉಂಟಾಗಬಹುದಾದ ಈ ಕೆಳಗಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ
ಆರೋಗ್ಯ ಚೆನ್ನಾಗಿರಬೇಕಾದರೆ ಹೇಗೆ ಕಾಯಿಲೆಗಳು ಮೆಡಿಸಿನ್‌ಗಳನ್ನು ತೆಗೆದುಕೊಳ್ಳಬೇಕೋ ಹಾಗೆಯೇ ಆರೋಗ್ಯದಲ್ಲಿ ಏರುಪೇರಾಗದಿರಲು ಎಕ್ಸ್‌ಪೈಯರಿ ಆದ ಮೆಡಿಸಿನ್‌ಗಳನ್ನು ತೆಗೆದುಕೊಳ್ಳದಿರುವುದು ಸಹ ಅಷ್ಟೇ ಮುಖ್ಯ. ಯಾವುದೇ ಗಂಭೀರ ಆರೋಗ್ಯ ತೊಡಕುಗಳು ತಪ್ಪಿಸಲು ಯಾವುದೇ ಔಷಧಿಯನ್ನು ಖರೀದಿಸುವ ಮೊದಲು ಅದರ ಮುಕ್ತಾಯ ದಿನಾಂಕವನ್ನು ಪರೀಕ್ಷಿಸಬೇಕು. ಒಂದು ವೇಳೆ ನೀವು ಅವಧಿ ಮೀರಿದ ಔಷಧಿಗಳನ್ನು ಸೇವಿಸಿದರೆ ತಕ್ಷಣ ವೈದ್ಯರಿಗೆ ತಿಳಿಸುವುದು ಉತ್ತಮ. ಅವಧಿ ಮೀರಿದ ಔಷಧಿ ಸೇವನೆಯಿಂದ ಉಂಟಾಗಬಹುದಾದ ಈ ಕೆಳಗಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ.
ಎಕ್ಸ್‌ಪೈಯರಿ ಆದ ಮೆಡಿಸಿನ್‌ಗಳ ಬಳಕೆಯಿಂದಾಗುವ ಆರೋಗ್ಯ ಸಮಸ್ಯೆ
ಅವಧಿ ಮೀರಿದ ಔಷಧಿಗಳನ್ನು ತೆಗೆದುಕೊಳ್ಳುವುದು ಸೋಂಕುಗಳು, ಹೆಚ್ಚು ಗಂಭೀರವಾದ ಅನಾರೋಗ್ಯ ಮತ್ತು ಸಂಭವನೀಯ ಪ್ರತಿಜೀವಕ ಪ್ರತಿರೋಧವನ್ನು ಉಂಟುಮಾಡಬಹುದು. ಅವಧಿ ಮೀರಿದ ಇನ್ಹೇಲರ್‌ಗಳು, ಥೈರಾಯ್ಡ್ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸುವುದು ಅತ್ಯಗತ್ಯ. ಈ ನಿಷ್ಪರಿಣಾಮಕಾರಿ ಔಷಧಗಳು ಒಬ್ಬರಿಗೆ ಅನಾನುಕೂಲವನ್ನುಂಟು ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚಿಸಬಹುದು.
undefined
ಡಾಕ್ಟರ್‌ಗೆ ತೋರ್ಸದೇ ಜ್ವರಕ್ಕೆ ಮಾತ್ರೆ ತಗೊಂಡ ಮಹಿಳೆ ಮುಖವೇ ಆಯ್ತು ವಿಚಿತ್ರ!
ಆಘಾತಕಾರಿಯಾಗಿ, ಈ ಅವಧಿ ಮೀರಿದ ಔಷಧಿಗಳು ಯಕೃತ್ತು ಮತ್ತು ಮೂತ್ರಪಿಂಡದ ಹಾನಿಯನ್ನು ಉಂಟುಮಾಡಬಹುದು, ಇದು ಅಜೀವ ಚಿಕಿತ್ಸೆ ಅಥವಾ ಕಸಿಯನ್ನು ಮಾಡಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಅವಧಿ ಮೀರಿದ ಔಷಧಿಗಳಿಂದ ಉಂಟಾಗುವ ಅಲರ್ಜಿಗಳಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಆಗಬಹುದು. ಇದು ದೇಹದ ಆಹಾರ ಜೀರ್ಣಗೊಳಿಸುವ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಕಣ್ಣಿನ ಹನಿಗಳು ಬ್ಯಾಕ್ಟೀರಿಯಾದಿಂದ ಕಲುಷಿತಗೊಳ್ಳುತ್ತವೆ ಮತ್ತು ಅವು ಅವಧಿ ಮುಗಿದ ನಂತರ ಬಳಸಿದರೆ ಕಾಂಜಂಕ್ಟಿವಿಟಿಸ್ (ಗುಲಾಬಿ ಕಣ್ಣು) ನಂತಹ ಸೋಂಕಿಗೆ ಕಾರಣವಾಗುತ್ತದೆ.
ಅವಧಿ ಮೀರಿದ ಔಷಧಿ ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಹೇಗೆ?
ಡೇಟ್ ಎಕ್ಸ್‌ಪೈಯರಿ ಆದ ಔಷಧಿಗಳನ್ನು ಮಕ್ಕಳಿಂದ ಸುರಕ್ಷಿತವಾಗಿ ದೂರವಿಡುವುದನ್ನು ಖಚಿತಪಡಿಸಿಕೊಳ್ಳಿ. ಅವಧಿ ಮೀರಿದ ಔಷಧಿಗಳನ್ನು ಪುಡಿಮಾಡಿ ಮುಚ್ಚಿದ ಪೆಟ್ಟಿಗೆಯಲ್ಲಿ ಎಸೆಯುವುದು ಒಳ್ಳೆಯದು. ದ್ರವಗಳ ವಿಷಯಕ್ಕೆ ಬಂದಾಗ, ಅವುಗಳನ್ನು ಫ್ಲಶ್ ಮಾಡಿ ಅಥವಾ ಸಿಂಕ್‌ನಲ್ಲಿ ಎರೆದು ಖಾಲಿ ಮಾಡಿ.
ಯಾವತ್ತೂ ಈ ಔಷಧ ಚಹಾ, ಕಾಫಿಯೊಂದಿಗೆ ಸೇವಿಸಲೇ ಬೇಡಿ
ಔಷಧಿಯ ಗರಿಷ್ಟ ಪರಿಣಾಮವನ್ನು ಪಡೆಯಲು ಔಷಧಿಗಳ ಮೇಲೆ ತಿಳಿಸಲಾದ ಸೂಕ್ತವಾದ ಶೇಖರಣಾ ಮಾರ್ಗಸೂಚಿಗಳನ್ನು ಅನುಸರಿಸಿ. ಅವಧಿ ಮೀರಿದ ಔಷಧಗಳನ್ನು ಪೇರಿಸುವುದನ್ನು ತಪ್ಪಿಸಲು ಔಷಧ ಪೆಟ್ಟಿಗೆಯನ್ನು ನಿಯಮಿವಾಗಿ ಪರಿಶೀಲಿಸುತ್ತಿರಿ. ಎಕ್ಸ್‌ಪಯರಿ ಡೇಟ್ ಆದ ಔಷಧಿಗಳನ್ನು ಎಸೆಯಿರಿ.