Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

Published : Jul 05, 2023, 11:21 AM IST
Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಸಾರಾಂಶ

ಥಟ್ಟಂತ ಈ ಇಮೇಜ್ ನೋಡಿದಾಗ ನಿಮಗೇನ್ ಕಾಣಿಸುತ್ತೆ. ಅದೇ ನಿಮ್ಮ ವ್ಯಕ್ತಿತ್ವದ ಕುರಿತಾಗಿ ಹಲವು ವಿಚಾರಗಳನ್ನು ತಿಳಿಸುತ್ತೆ. ಈ ಫೋಟೋ ನೋಡಿ ನಿಮ್ಮ ಥಿಂಕಿಂಗ್‌ ಸ್ಟೈಲ್ ಬಗ್ಗೆ ಟೆಸ್ಟ್ ಮಾಡಿ ಮತ್ತು ನಿಮ್ಮ ಪರ್ಸನಾಲಿಟಿಯ ಬಗ್ಗೆ ತಿಳ್ಕೊಳ್ಳಿ.

ವ್ಯಕ್ತಿತ್ವ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತೆ. ಒಬ್ಬ ವ್ಯಕ್ತಿ ಇದ್ದಂತೆ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಕೆಲವರ ವ್ಯಕ್ತಿತ್ವ ಕೆಲವರಿಗೆ ತುಂಬಾ ಇಷ್ಟವಾದರೆ, ಇನ್ನೂ ಕೆಲವರಿಗೆ ತುಂಬಾ ಕಷ್ಟವೆನಿಸುತ್ತದೆ. ನೀವು ಮಾತನಾಡುವಾಗ ನಿಮ್ಮ ಸಹೋದ್ಯೋಗಿಗಳು ಏನು ಯೋಚಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ. ನಿಮ್ಮ ಬಗ್ಗೆ ನಿಮ್ಮ ಸ್ನೇಹಿತರು ಯಾವ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನೀವು ಸ್ವಭಾವತಃ ಅಹಂಕಾರಿಯಾಗಿದ್ದೀರಾ ಅಥವಾ ಉತ್ತಮ ವ್ಯಕ್ತಿ ಎಂಬ ಪ್ರಶಂಸೆಯನ್ನು ಪಡೆಯುತ್ತೀರಾ. ನೀವು ಯಾವ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂಬ ಬಗ್ಗೆ ನೀವು ಸಾಕಷ್ಟು ಕನ್‌ಫ್ಯೂಶನ್‌ಗಳನ್ನು ಹೊಂದಿದ್ದರೆ, ಈ ಆಪ್ಟಿಕಲ್ ಇಲ್ಯೂಷನ್ ವ್ಯಕ್ತಿತ್ವ ಪರೀಕ್ಷೆ ನಿಮಗಾಗಿ.

ಜೀವನದಲ್ಲಿ (Life) ನೀವು ಯಾವುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೀರಿ ಎಂಬುದನ್ನು ಕಂಡುಹಿಡಿಯಲು ಈ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್ ತೆಗೆದುಕೊಳ್ಳಿ. ಈ ಭ್ರಮೆಯು (Illusion) ವ್ಯಕ್ತಿಯ ದೃಷ್ಟಿಗೋಚರ ಗ್ರಹಿಕೆಯೊಂದಿಗೆ ಗೊಂದಲಕ್ಕೀಡಾಗುತ್ತವೆ ಮತ್ತು ಜನರು ಇಲ್ಲದಿರುವುದನ್ನು ನೋಡುವಂತೆ ಮಾಡುತ್ತದೆ. ಕೆಲವೊಮ್ಮೆ ಪ್ರಮುಖ ವಿವರಗಳನ್ನು ಸಹ ಗಮನಿಸುವುದಿಲ್ಲ. ಸಂಶೋಧಕರು ದಶಕಗಳಿಂದ ಈ ಚಿತ್ರಗಳು (Photos) ಯಾಕೆ ಮಾನವನಿಗೆ ಗೊಂದಲವನ್ನುಂಟು ಮಾಡುತ್ತದೆ ಎಂಬುದಕ್ಕೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ, ಆದರೆ ಈ ಪ್ರಶ್ನೆಗಳಿಗೆ ನಿರ್ಧಿಷ್ಟವಾದ ಉತ್ತರ ದೊರಕಿಲ್ಲ.

Personality Tips: ಸ್ಮಾರ್ಟ್ ಜನರಿಗೆ ಕೆಲವೇ ಸ್ನೇಹಿತರು ಅದ್ಯಾಕೆ ಹಾಗೆ?

ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ನೆರವಾಗುವ ಫೋಟೋ
ವಿನೋದ ಮತ್ತು ಸವಾಲಿನ ಜೊತೆಗೆ, ಆಪ್ಟಿಕಲ್ ಭ್ರಮೆಗಳನ್ನು ವ್ಯಕ್ತಿಯ ಐಕ್ಯೂ ಮಟ್ಟವನ್ನು ನಿರ್ಧರಿಸಲು ಅಳತೆಯಾಗಿ ಬಳಸಬಹುದು. ಬುದ್ಧಿವಂತಿಕೆಯ ಅಳತೆಯ ಜೊತೆಗೆ, ಈ ಭ್ರಮೆಗಳು ಒಬ್ಬ ವ್ಯಕ್ತಿಗೆ ತಮ್ಮ ವ್ಯಕ್ತಿತ್ವದ (Personality) ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ವ್ಯಕ್ತಿಗಳು ತಮ್ಮ ಗುಪ್ತ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಕಂಡುಹಿಡಿಯಲು ಸಹಾಯ ಮಾಡುವುದರಿಂದ ಹಿಡಿದು ಅವರ ಸಾಮಾಜಿಕ ಜೀವನದ ಕುರಿತು ಹಲವು ವಿವರಗಳನ್ನು ಬಹಿರಂಗಪಡಿಸುತ್ತದೆ.

ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಟೆಸ್ಟ್
ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಲು ನೀವು ಮಾಡಬೇಕಾದ್ದು ಇಷ್ಟೆ. ಈ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಚಿತ್ರದಲ್ಲಿ ಏನನ್ನು ನೋಡುತ್ತೀರಿ ಎಂಬುದನ್ನು ನಿರ್ಧರಿಸುವುದು. ಕೆಲವರು ಭ್ರಮೆಯನ್ನು ನೋಡುತ್ತಾರೆ ಮತ್ತು ಬಿಳಿ ಹೊಗೆಯನ್ನು ನೋಡುತ್ತಾರೆ, ಆದರೆ ಇತರರು ಹೊಗೆಯಲ್ಲಿ (Smoke) ಭ್ರೂಣದ ಸಿಲೂಯೆಟ್ ಅನ್ನು ಗಮನಿಸುತ್ತಾರೆ. ಚಿತ್ರದಲ್ಲಿ ನೀವು ನೋಡುವುದು ನೀವು ಹೊಂದಿರುವ ವ್ಯಕ್ತಿತ್ವದ ಪ್ರಕಾರವನ್ನು ನಿರ್ಧರಿಸುತ್ತದೆ.

Personality Tips: ಒರಟಾಗಿ ಹ್ಯಾಂಡ್ ಶೇಕ್ ಮಾಡಿದ್ರೆ ನಿಮ್ಮನ್ಯಾರೂ ಇಷ್ಟ ಪಡೋಲ್ಲ!

ಹೊಗೆಯಂತೆ ಕಾಣಿಸಿದರೆ ಏನರ್ಥ
ಚಿತ್ರವನ್ನು ನೋಡಿದ ಕೂಡಲೇ ಮೊದಲಿಗೆ ನೀವು ಹೊಗೆಯನ್ನು ಗಮನಿಸಿದರೆ, ಇತರ ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಕುರಿತು ನೀವು ಹೆಚ್ಚು ಕಾಳಜಿ (Care) ವಹಿಸುವ ವ್ಯಕ್ತಿಯಾಗಿದ್ದೀರಿ ಎಂಬುದು ತಿಳಿದು ಬರುತ್ತದೆ. ಅದಕ್ಕಾಗಿಯೇ ನೀವು ಮತ್ತೊಬ್ಬರ ಓಪಿನೀಯನ್‌ಗಳನ್ನು ಗಂಭೀರವಾಗಿ ಪರಿಗಣಿಸುತ್ತೀರಿ. ನಿಮ್ಮ ಉತ್ತಮ ಭಾಗವನ್ನು ಜನರಿಗೆ ತೋರಿಸಲು ನೀವು ಪ್ರಯತ್ನಿಸುತ್ತೀರಿ ಮತ್ತು ಆಗಾಗ್ಗೆ ಅಭಿನಂದನೆಗಳು ಮತ್ತು ಪ್ರಶಂಸೆಗಳನ್ನು ಪಡೆಯುವುದನ್ನು ಆನಂದಿಸುತ್ತೀತಿ. ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಏನಾದರೂ ಕೇಳಿದರೆ, ನೀವು ಅದನ್ನು ಬೇಸರ ಮಾಡಿಕೊಳ್ಳುತ್ತೀರಿ.

ಭ್ರೂಣದಂತೆ ಕಾಣಿಸಿದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ?
ಫೋಟೋ ನೋಡಿದ ತಕ್ಷಣ  ಭ್ರೂಣದಂತೆ (Fetus) ಕಾಣಿಸಿದರೆ, ಅವರು ಹೆಚ್ಚು ಸಮಸ್ಯೆಯನ್ನು ಎದುರಿಸಿದಾಗ ಅವರ ನೈತಿಕ ನಿಯಮಗಳನ್ನು ಗೌರವಿಸುವ ವ್ಯಕ್ತಿಯಾಗಿದ್ದಾರೆ ಎಂದರ್ಥ. ಮೌಲ್ಯಗಳು ಇಂಥಾ ಜನರ ಜೀವನದ ಪ್ರಮುಖ ಆದ್ಯತೆಯಾಗಿರುತ್ತದೆ. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿರಿಸಿಕೊಳ್ಳುವುದು ಇಂಥವರ ಉದ್ದೇಶವಾಗಿರುತ್ತದೆ. ಇವರು ಹೆಚ್ಚು ಶ್ರೀಮಂತಿಕೆಯನ್ನು ಬಳಸುವುದಿಲ್ಲ. ಬದಲಿಗೆ ಪ್ರೀತಿ ಪಾತ್ರರು ಜೊತೆಗಿರಬೇಕು ಮತ್ತು ಎಲ್ಲರೂ ಆರೋಗ್ಯ (Healthy)ವಾಗಿರಬೇಕು ಎಂದು ಅಂದುಕೊಳ್ಳುತ್ತಾರೆ. ಕಾಮೆಂಟ್‌ಗಳ ಮೂಲಕ ಆಪ್ಟಿಕಲ್ ಭ್ರಮೆಯಲ್ಲಿ ನೀವು ಏನು ನೋಡಿದ್ದೀರಿ ಎಂಬುದನ್ನು ನಮಗೆ ತಿಳಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ