ಬ್ಲಡ್ ಸ್ಯಾಂಪಲ್ ವರದಿ ರಾಂಗ್: ಗರ್ಭಿಣಿಯ ಜೀವದ ಜೊತೆ ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರ ಚೆಲ್ಲಾಟ!

By Ravi Janekal  |  First Published Jul 4, 2023, 7:45 AM IST

ಜಿಲ್ಲಾಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿಯೋರ್ವಳು ಇಡೀ ದಿನ ಪರದಾಡಿ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.


ಕೊಪ್ಪಳ (ಜು.4) : ಜಿಲ್ಲಾಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ನಿರ್ಲಕ್ಷ್ಯಕ್ಕೆ ಗರ್ಭಿಣಿಯೋರ್ವಳು ಇಡೀ ದಿನ ಪರದಾಡಿ ಘಟನೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

 ರಕ್ತ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಬಂದಿದ್ದ ಗರ್ಭಿಣಿ ರೇಣುಕಾ. ರಕ್ತ ಪರೀಕ್ಷೆ ಮಾಡಿ ರೇಣುಕಾಳ ಬ್ಲಡ್ ಸ್ಯಾಂಪಲ್ AB+ ಎಂದು ವರದಿ ನೀಡಿರುವ ಜಿಲ್ಲಾಸ್ಪತ್ರೆ. ವೈದ್ಯರು ಕೊಟ್ಟ ತೆಗೆದುಕೊಂಡು ರಕ್ತ ಪಡೆಯಲು ಬ್ಲಡ್‌ ಬ್ಯಾಂಕಿಗೆ ತೆರಳಿದ ರೇಣುಕಾಳ ಸಂಬಂಧಿಕರು. ಅದರೆ ಅಲ್ಲಿ ಆಗಿದ್ದೇ ಬೇರೆ.  ನೀವು ತಂದಿರುವ ರಕ್ತದ ಮಾದರಿಗೂ AB+ ಮಾದರಿಗೂ ಸಂಬಂಧವಿಲ್ಲ ಎಂದಿರುವ ಬ್ಲಂಡ್ ಬ್ಯಾಂಕ್ ಸಿಬ್ಬಂದಿ.

Tap to resize

Latest Videos

ಚಿಕಿತ್ಸೆ ನೀಡುವಾಗ ತುಟಿಯನ್ನೇ ಕಟ್ ಮಾಡಿದ ಬೆಂಗಳೂರಿನ ವೈದ್ಯ, ಪರಿಹಾರ ನೀಡಲು ನ್ಯಾಯಾಲಯ ಆದೇಶ

 ಇದನ್ನು ಕೇಳಿ ದಂಗಾದ ರೇಣುಕಾಳ ಸಂಬಂಧಿಗಳು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿದ ಮಾಡಿಸಿದಾಗ ಗರ್ಭಿಣಿ ರೇಣುಕಾಳ ರಕ್ತದ ಮಾದರಿ  B+ ಎಂದು ವರದಿ ಬಂದಿದೆ. ಆದರೆ ರಕ್ತಕ್ಕಾಗಿ ಇಡೀ ದಿನ ಕಾಯುವಂತಾಗಿದೆ. ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಇದೊಂದು ನಿದರ್ಶನ. ಈ ಹಿಂದೆಯೂ ಗರ್ಭಿಣಿ, ಬಾಣಂತಿಯರ ಜೀವದ ಜೊತೆಗೆ ಚೆಲ್ಲಾಟವಾಡಿರುವ ಘಟನೆಗಳು ಸಾಕಷ್ಟಿವೆ. 

ಜಿಲ್ಲಾಸ್ಪತ್ರೆಗೆ ಬೇಕಿದೆ ಮೇಜರ್ ಸರ್ಜರಿ. ಜಿಲ್ಲಾಸ್ಪತ್ರೆ ಸಿಬ್ಬಂದಿ, ವೈದ್ಯರ ನಿರ್ಲಕ್ಷ್ಯ, ಅಸಡ್ಡೆಯಿಂದಾಗಿ ಇಲ್ಲಿಗೆ ರೋಗಿಗಳು, ಗರ್ಭಿಣಿ ಬಾಣಂತಿಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ತಪ್ಪು ವರದಿ ನೀಡಿ ಗರ್ಭಿಣಿ ಜೀವದ ಜೊತೆ ಚೆಲ್ಲಾಟವಾಡಿದ ಲ್ಯಾಬ್ ಸಿಬ್ಬಂದಿ ಆಸ್ಪತ್ರೆ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಗರ್ಭಿಣಿ ಸಂಬಂಧಿಕರು ಒತ್ತಾಯಿಸಿದ್ದಾರೆ. 

ನಾಲಿಗೆ ಸರ್ಜರಿಗೆ ತೆರಳಿದ್ದ ಬಾಲಕಗೆ ಸುನ್ನತ್‌, ಆಸ್ಪತ್ರೆ ಲೈಸೆನ್ಸ್‌ ಅಮಾನತು

108 ಅಂಬುಲೆನ್ಸ್ ನಲ್ಲಿಯೆ ಹೆಣ್ಣು ಮಗುವಿಗೆ ಜನ್ಮ 

ಕೊಪ್ಪಳ: ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳುವ ವೇಳೆ ಆಂಬುಲೆನ್ಸ್‌ನಲ್ಲೇ ಹೆರಿಗೆಯಾಗಿರುವ ಘಟನೆ ನಡೆದಿದೆ.

ಕನಕಗಿರಿ ತಾಲೂಕಿನ ಬಂಕಾಪುರ ಗ್ರಾಮದ ಮರಿಯಮ್ಮ (30) ಅಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಸಾಗುವ ಮಾರ್ಗಮದ್ಯ ಹೆರಿಗೆನೋವು. ಕಾಣಿಸಿಕೊಂಡಿದೆ. ಈ ವೇಳೆ ಅಂಬುಲೆನ್ಸ್ ಸಿಬ್ಬಂದಿ ಯಲ್ಲಾಲಿಂಗ ಹಾಗೂ ಚಾಲಕ ಮಹಮ್ಮದ ರಫೀಕ್ ಆಂಬುಲೆನ್ಸ್‌ನಲ್ಲೇ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ.

ತಾಯಿ ಮಗು ಆರೋಗ್ಯವಾಗಿದ್ದು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

click me!