Chanakya Niti Health Tips: ಈ ಎಂಟು ಚೆನ್ನಾಗಿದ್ದರೆ ನಿಮ್ಮ ಆರೋಗ್ಯ ಪರ್‌ಫೆಕ್ಟ್‌ ಅಂತಾರೆ ಚಾಣಕ್ಯ

Published : Jul 14, 2025, 09:33 PM ISTUpdated : Jul 15, 2025, 10:18 AM IST
chanakya

ಸಾರಾಂಶ

ನೀವು ಆರೋಗ್ಯವಂತರಾಗಿ ಇದ್ದೀರಾ ಇಲ್ಲವಾ ಎಂಬುದನ್ನು ತಿಳಿಯೋಕೆ ಎಂಟು ದಾರಿಗಳಿವೆಯಂತೆ. ಚಾಣಕ್ಯ ನೀತಿಯಲ್ಲಿ ಆರೋಗ್ಯವಂತರಾಗಿರುವ ಆ ಎಂಟು ಸೂತ್ರಗಳನ್ನು ವಿವರಿಸಲಾಗಿದೆ. 

ಚಾಣಕ್ಯ ಏನು ಹೇಳಿದಾರೆ- ಏನು ಹೇಳಿಲ್ಲ ಅಂತಿಲ್ಲ. ಮನುಷ್ಯನ ದೇಹದ ಆರೋಗ್ಯದ ಬಗ್ಗೆ ಕೂಡ ಅವರು ಚಿಂತನೆ ನಡೆಸಿದ್ದಾರೆ. ಒಳ್ಳೇ ಆರೋಗ್ಯ ಅಂದರೆ ಹೇಗಿರಬೇಕು ಎನ್ನುವುದು ಸದಾಕಾಲ ಎಲ್ಲರೂ ಉತ್ತರ ಬಯಸುವ ಒಂದು ಪ್ರಶ್ನೆ. ನಾನು ಎಲ್ಲ ರೀತಿಯಿಂದಲೂ ಆರೋಗ್ಯವಾಗಿ ಇದ್ದೇನೆಂದು ನನಗೆ ಹೇಗೆ ಗೊತ್ತಾಗುತ್ತದೆ? ನಾನು ಆರೋಗ್ಯವಾಗಿಲ್ಲ ಎಂಬುದರ ಸೂಚನೆಗಳು ಯಾವುವು? ಇದಕ್ಕಾಗಿಯೇ ನೂರೆಂಟು ಟೆಸ್ಟ್‌ಗಳನ್ನು ಅಲೋಪತಿಯಲ್ಲಿ ಮಾಡಿಸಲಾಗುತ್ತದೆ. ಆದರೆ ಅದೆಲ್ಲಾ ನಿಜಕ್ಕೂ ಅಗತ್ಯವೇ? ಆಯುರ್ವೇದ ಪರಿಣತರು ನಿಮ್ಮ ಆರೋಗ್ಯವನ್ನು ಅರ್ಥ ಮಾಡಿಕೊಳ್ಳೋಕೆ ಕೆಲವು ಸೂತ್ರಗಳನ್ನು ನೀಡುತ್ತಾರೆ. ಚಾಣಕ್ಯ ಹೇಳಿದ ಈ ಸೂತ್ರಗಳು ಒಂದು ಸುಂದರ ಸಂಸ್ಕೃತ ಶ್ಲೋಕದಲ್ಲಿ ಅಡಕವಾಗಿವೆ. ಅದು ಹೀಗಿದೆ:

ದೇಹೇ ಸರ್ವತ್ರ ಚೌಸ್‌ನಸ್ಯ ಸಮತಾ ಲಾಘವಮ್ ಸುಖಮ್

ಶುತ ತೀಕ್ಷ್ಣ ಗಧ್ ನಿದ್ರಾ ಚ ಮಾನಸೋಪಿ ಪ್ರಸನ್ನತಾ

ಶರೀರೇ ಕರ್ಮಸಾಮರ್ಥ್ಯಮ್ ಅನಾಲಸ್ಯಾ ಚ ಕರ್ಮಾಶು

ಸ್ವತ ಸ್ವೇದೋ ಗಂ ಕಲೇ ಸ್ವಾಸ್ಥ್ಯ ಲಕ್ಷಣಾತಿ ಹಿ

ಇದರ ಅರ್ಥ ಸುಂದರವಾದ ಎಂಟು ಸೂತ್ರಗಳಲ್ಲಿದೆ.

1. ದಿನಕ್ಕೊಮ್ಮೆ ಸರಾಗ ಮಲವಿಸರ್ಜನೆ

ದಿನಕ್ಕೊಮ್ಮೆ ಸರಾಗವಾಗಿ ಮಲ ವಿಸರ್ಜನೆಯಾಗಬೇಕು. ವಿಸರ್ಜನೆಗೆ ಕಷ್ಟ ಪಡಬಾರದು. ಮಲಕ್ಕೆ ವಿಚಿತ್ರವಾದ ಬಣ್ಣ ಹಾಗೂ ವಿಲಕ್ಷಣ ವಾಸನೆ ಇರಬಾರದು. ಪ್ರತಿದಿನ ಒಂದೇ ನಿಗದಿತ ಹೊತ್ತಿಗೆ ವಿಸರ್ಜನೆ ಆಗುತ್ತಿರಬೇಕು. ಮುಂಜಾನೆ ಆಗುತ್ತಿದ್ದರೆ ಒಳ್ಳೆಯದು. ಇದಕ್ಕಾಗಿ ಯಾವುದೇ ಔಷಧ, ಮಾತ್ರೆ ತೆಗೆದುಕೊಳ್ಳುವಂತಿರಬಾರದು. ನಮಗೆ ಬೇಡವಾದ ವಸ್ತು ನಮ್ಮ ದೇಹದೊಳಗೇ ಇದ್ದರೆ ಅದು ವಿಷವಾಗಿ ಪರಿವರ್ತನೆಯಾಗುತ್ತದೆ.

2. ಹೆಚ್ಚಿನ ಮೈತೂಕ ಇರಬಾರದು

ದೇಹದಿಂದ ತ್ಯಾಜ್ಯ ಕಾಲಕಾಲಕ್ಕೆ ಹೊರಹೋಗುತ್ತಿದ್ದರೆ ದೇಹ ಅದರ ತೂಕವನ್ನು ಎಷ್ಟು ಬೇಕೋ ಅಷ್ಟು ಉಳಿಸಿಕೊಳ್ಳುತ್ತದೆ.

3. ನಿರ್ಮಲವಾದ ಚರ್ಮ

ನಮ್ಮ ದೇಹದ ಒಳಗೆ ಏನಾಗುತ್ತಿದೆ ಎಂಬುದರ ಸೂಚಕ ಚರ್ಮ. ನಮ್ಮ ಚರ್ಮದಲ್ಲಿ ಕಲೆಗಳು, ಅಕಾಲಿಕ ಸುಕ್ಕು, ಮೊಡವೆಗಳು, ದೇಹದೊಳಗೆ ಏನೋ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತವೆ.

4. ಸೋಮಾರಿತನ ಇಲ್ಲದಿರುವಿಕೆ

ಮುಂಜಾನೆ ಐದಕ್ಕೆ ಎದ್ದು ರಾತ್ರಿ ಹತ್ತರವರೆಗೂ ಕೆಲಸ ಮಾಡುವಷ್ಟು ಶಕ್ತಿಯನ್ನು ಪ್ರಕೃತಿ ನಮಗೆ ನೀಡಿರುತ್ತದೆ. ನಾವು ನಡುವೆ ಬ್ರೇಕ್ ಇಲ್ಲದೇ ಕೆಲಸ ಮಾಡಬಹುದು. ಆದರೆ ಬ್ರೇಕ್ ಅಗತ್ಯ ಬೀಳುತ್ತಿದೆ ಎನಿಸಿದರೆ, ದಣಿವಾಗುತ್ತಿದೆ ಎನಿಸಿದರೆ, ಏನೋ ಸಮಸ್ಯೆ ಇದೆ ಎಂದರ್ಥ.

5. ಚೆನ್ನಾಗಿ ಹಸಿವಾಗುವಿಕೆ

ನಮಗೆ ಹಸಿವಾಗುವಾಗ ಚೆನ್ನಾಗಿ, ಜೋರಾಗಿ ಹಸಿವಾಗಬೇಕು. ಹಸಿವಾಗುತ್ತಿಲ್ಲ ಎಂದರೆ ಹಿಂದಿನ ಊಟ ಸರಿಯಾಗಿ ಜೀರ್ಣವಾಗಿಲ್ಲ ಎಂದರ್ಥ. ನಮ್ಮ ಜೀರ್ಣಶಕ್ತಿ ಚೆನ್ನಾಗಿದ್ದರೆ ಒಳ್ಳೆಯ ಹಸಿವಾಗಿಯೇ ಆಗುತ್ತದೆ. ದಿನಕ್ಕೆ ಐದು ಬಾರಿಯಾದರೂ ಚೆನ್ನಾಗಿ ಹಸಿವಾಗಬೇಕು. ಹಾಂ, ಹೊಟ್ಟೆ ಹಸಿವ ಮಾತ್ರ, ಮನದ ಹಸಿವಲ್ಲ.

6. ದೇಹದಲ್ಲಿ ನೋವಿಲ್ಲದಿರುವಿಕೆ

ಕೆಲವೊಮ್ಮೆ ತಲೆನೋವು, ಕೆಲವೊಮ್ಮೆ ಬೆನ್ನುನೋವು, ಕಾಲುನೋವು- ಹೀಗೆ ನೋವುಗಳು ಸದಾ ಇದ್ದರೆ ದೇಹದಲ್ಲಿ ಏನೋ ಸಮಸ್ಯೆ ಇದೆ ಎಂದರ್ಥ. ಆರೋಗ್ಯವಂತ ಮನುಷ್ಯನಲ್ಲಿ ನೋವಿರುವುದಿಲ್ಲ.

30 ದಿನ 'ಟೀ' ಕುಡಿಯೋದು ಬಿಟ್ರೆ ದೇಹದಲ್ಲಾಗುವ ಬದಲಾವಣೆಗಳೇನು?

7. ಗಾಢವಾದ ನಿದ್ರೆ ಬರುವಿಕೆ

ಶಿಶು ನಿದ್ರಿಸಿದಂತೆ ನಿದ್ರಿಸಬೇಕು. ಮಗು ಸೋಫಾದಲ್ಲಿ ಬಿದ್ದು ನಿದ್ದೆಹೋದರೆ ಬೆಳಗ್ಗಿನವರೆಗೂ ತಾನು ಸೋಫಾದಲ್ಲಿ ಮಲಗಿದ್ದೇನೆ ಎಂಬ ಅರಿವೇ ಹೊಂದಿರುವುದಿಲ್ಲ. ಆರೋಗ್ಯವಂತ ನಿದ್ರೆ ಎಂದರೆ ನಿಮಗೆ ಬಿದ್ದ ಕನಸುಗಳು ಮರುದಿನ ನೆನಪಿರಬಾರದು. ಫ್ಯಾನ್, ಎಸಿ ನಡುರಾತ್ರಿ ಆಫ್ ಆದರೆ ನಮಗೆ ಗೊತ್ತೇ ಆಗಬಾರದು.

8. ಸಕಾರಾತ್ಮಕ ಚಿಂತನೆಗಳು

ನಮ್ಮ ಸುತ್ತಮುತ್ತ ಅನೇಕ ಕೋಲಾಹಲಗಳ ಆಗುತ್ತಿರುತ್ತವೆ. ನೋವು, ಯಾತನೆ ಎಲ್ಲ ಇದೆ. ಆದರೆ ಅದೆಲ್ಲದರಿಂದ ವಿಚಲಿತರಾಗಿದರುವ, ಶಾಂತ ಸ್ವಭಾವ ನಮ್ಮಲ್ಲಿದ್ದರೆ, ಸಕಾರಾತ್ಮಕ ಯೋಚನೆಗಳೇ ಬರುತ್ತಿದ್ದರೆ, ಆಗ ನೀವು ಆರೋಗ್ಯವಾಗಿದ್ದೀರಿ ಎಂದರ್ಥ.

ತೂಕ ಇಳಿಸಲು ಚಪಾತಿ ತಿನ್ನುತ್ತಿದ್ದೀರಾ? ಹಾಗಿದ್ದರೆ ತಪ್ಪದೆ ಈ ವಿಚಾರ ತಿಳಿಯಿರಿ!

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ