Face Pack for Glowing Skin: ಮುಖ ಸುಕ್ಕು ಗಟ್ಟಿದ್ಯಾ? ಈ ಫೆಸ್‌ಪ್ಯಾಕ್‌ ನಿಂದ ಮುಖ ಫಳ ಫಳ ಹೊಳೆಯುತ್ತೆ

Published : Jul 14, 2025, 06:50 PM IST
DIY Besan Face Packs for skincare

ಸಾರಾಂಶ

ಮಾವಿನ ಹಣ್ಣು ರುಚಿಕರ ಮಾತ್ರವಲ್ಲ, ಸೌಂದರ್ಯವರ್ಧಕವೂ ಹೌದು. ಚರ್ಮದ ಕಾಂತಿ ಹೆಚ್ಚಿಸಲು, ಮೊಡವೆ ನಿವಾರಿಸಲು, ಸನ್ ಟ್ಯಾನ್ ಕಡಿಮೆ ಮಾಡಲು ಹೀಗೆ ಹಲವು ಉಪಯೋಗಗಳಿವೆ.

ಮಾವಿನ ಹಣ್ಣು(Mango Fruit) ಉತ್ತಮ ಸೌಂದರ್ಯ ವರ್ಧಕ. ಹಣ್ಣುಗಳ ರಾಜ ನಾವು ತಿನ್ನಲು ಎಷ್ಟು ರುಚಿಕರವೋ ಸೌಂದರ್ಯ ಹೆಚ್ಚಿಸುವಲ್ಲಿ ಅಷ್ಟೇ ಸಹಕಾರಿ ಮಾವಿನಹಣ್ಣಿನ ಫೇಶಿಯಲ್ ನಿಂದ ಕಾಂತಿ ಹೆಚ್ಚುತ್ತದೆ.ನಿರಿಗೆ ಸೊಕ್ಕು ಮಾಯವಾಗುತ್ತದೆ. ಇದರಲ್ಲಿರುವ ನಿರ್ಜೀವ ಕಣಗಳು ನಿವಾರಣೆಯಾಗಿ ಹೊಳೆಯುತ್ತದೆ. ಇಷ್ಟೆಲ್ಲ ಲಾಭ ಮಾವಿನಿಂದ ಇರುವಾಗ ಹೆಣ್ಣು ಚೆಂದ ಕಾಣಲೇ ಬೇಕು. ಮಾವಿನ ಹಣ್ಣು ಹಲವಾರು ತೊಂದರೆಗಳಿಗೆ ಪರಿಹಾರ.ಈ ಹೆಣ್ಣು ಎಲ್ಲರ ನಿದ್ದೆಗೆಡಿಸುವ ಮೊಡವೆ ಹಾಗೂ ಕಲೆಗಳು, ಮುಖದ ಮೇಲಿನ ಸುಕ್ಕುಗಳು ಒರಟು ಚರ್ಮದಂಥ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಹಣ್ಣು ಮಾತ್ರವಲ್ಲ ಅದರ ಎಲೆಯು ಸೌಂದರ್ಯವರ್ಧಕ ವಿಟಮಿನ್ ಎ ಸಿ ಇ ಬಿ ಹಾಗೂ ಖನಿಜಗಳಾದ ಪೊಟ್ಯಾಶಿಯಂ, ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂನಿಂದ ಕೂಡಿದ ಮಾವಿನಹಣ್ಣು ನೈಸರ್ಗಿಕ ಬ್ಲಿಚ್‌ ಆಗಿ ಕೂಡ ಕೆಲಸ ಮಾಡುತ್ತದೆ. ನಿರ್ಜೀವ ಜೀವಕೋಶವನ್ನು ತೆಗೆದು ಚರ್ಮದ ಅಂದ ಇಮ್ಮಡಿಗೋಳಿಸುವುದರ ಜೊತೆಗೆ ಸೂರ್ಯನ ಅತಿ ನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ನಾರ್ಮಲ್ ಚರ್ಮ, ವಣ ಚರ್ಮ ತೆಗೆದವರು ಅವರವರ ಚರ್ಮದ ಪ್ರಕೃತಿಗೆ ಅನುಗುಣವಾಗಿ ಫೇಶಿಯಲ್ ಮಾಡುವಾಗ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ. ಮಾವಿನ ಹಣ್ಣಿನಿಂದ ಮಾಡಿದ ಕ್ರೀಮ್ ಜಲ್ ಹಾಗೂ ಇತರ ಸೌಂದರ್ಯವರ್ಧಕಗಳು ನಮ್ಮ ತ್ವಚೆಗೆ ಸೂಕ್ತ ಎಂದು ಪರೀಕ್ಷಿಸಿದ ಬಳಿಕವೇ ಬಳಸುವುದು ಒಳ್ಳೆಯದು.

ಸನ್‌ ಟ್ಯಾನ್‌ ಸಮಸ್ಯೆಗೆ ಸನ್ ಬರ್ನ್ ಸಮಸ್ಯೆಗೆ (Sun Tan problem And Sunburn Problem)

ಎರಡು ಚಮಚ ನುಣ್ಣಗೆ ಇರುವ ಮಾವಿನ ತಿರುಳಿಗೆ ಎರಡು ಚಮಚ ಅಕ್ಕಿ ಹಿಟ್ಟು ಹಾಗೂ ಒಂದು ಚಮಚ ಮಜ್ಜಿಗೆ ಬೆರೆಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಸಂಪೂರ್ಣವಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಉಪಯೋಗಿಸಿದರೆ ಚರ್ಮ ತನ್ನ ನೈಜ್ಯ ಬಣ್ಣವನ್ನು ಮರಳಿ ಪಡೆಯುವುದು. ಹಣ್ಣಿನ ತಿರುಳಿನ ಜೊತೆ ಹಸಿ ಹಾಲನ್ನು ಬೆರೆಸಿ ಹಚ್ಚುವುದರಿಂದ ಬಿಸಿಲಿನ ಕಾರಣದಿಂದ ಹಾನಿಗೊಳಗಾದ ತ್ವಚೆಯನ್ನ ತಂಪಾಗಿಸುತ್ತದೆ ಮಾವಿನ ಹಣ್ಣಿನ ರಸದಿಂದ ಐಸ್ ತಯಾರಿಸಿ ಮುಖ ಹಾಗೂ ಕತ್ತಿಗೆ ಮಾಲೀಸ್ ಮಾಡಿಕೊಂಡರೆ ಬರ್ನ್ ಆದ ತ್ವಚೆಗೆ ಹಿತಕರ ಹಣ್ಣಿನ ಜೊತೆ ಶ್ರೀಗಂಧದ ಪುಡಿ ಬೆರೆಸಿ, ಲೇಪಿಸಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಇದು ಸಹ ಮುಖಕ್ಕೆ ಕಾಂತಿಯನ್ನ ನೀಡುತ್ತದೆ.

ಮೊಡವೆ ನಿವಾರಣೆಗೆ (For Acne Treatment) ಒಂದು ಚಮಚ ಮಾವಿನಹಣ್ಣಿನ ತಿರುಳಿಗೆ ಒಂದು ಚಮಚ ಪುದಿನ ಸೊಪ್ಪಿನ ರಸ ಬೆರೆಸಿ ಹಚ್ಚಿಕೊಂಡು 10 ನಿಮಿಷ ನಂತರ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ನೀರಿಗೆ ಮಾವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ತಣಿದ ಮೇಲೆ ಸೊಸಿಕೊಂಡು ಈ ನೀರನ್ನ ಬಾಟಲಿಗೆ ಹಾಕಿ ಫ್ರಿಡ್ಜ್ ನಲ್ಲಿ ಇಡಿ ಈ ನೀರಿನ ಪ್ರತಿದಿನ ಮುಖಕ್ಕೆ ಹಚ್ಚಿದರೆ ಮೊಡವೆ ಹಾಗೂ ಕಲೆ ಬೇಗನೆ ನಿವಾರಣೆ ಆಗುತ್ತದೆ ಎರಡು ಚಮಚ ಮಾವಿನ ಹಣ್ಣಿನ ರಸದೊಂದಿಗೆ ಎರಡು ಚಮಚ ಟೊಮ್ಯಾಟೊ ರಸ ಸೇರಿಸಿ ಲೇಪಿಸಿ 15 ನಿಮಿಷ ಬಿಟ್ಟು ತೊಳೆಯಬೇಕು ಇದರಿಂದ ಚರ್ಮದಲ್ಲಿನ ಅತಿಯಾದ ಜಿಡ್ಡು ಹಾಗೂ ಕಲ್ಮಶ ಹೋಗಿ ಮುಖ ಶುಭ್ರವಾಗುತ್ತದೆ.

ಮಾಯಿಶ್ಚರೈಸರ್ Moisturizer ಒಂದು ಚಮಚ ಮಾವಿನಹಣ್ಣಿನ ತಿರುಳು ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಗೋಧಿ ಹಿಟ್ಟಿನ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು 15 ನಿಮಿಷ ಬಿಟ್ಟು ಬೆಚ್ಚನೆ ನೀರಿನಿಂದ ತೊಳೆಯಬೇಕು ಇದರಿಂದ ಮುಖದಲ್ಲಿನ ಜಿಡ್ಡು ಹೋಗುತ್ತದೆ. ಎಣ್ಣೆ ಚರ್ಮದವರು ಮಾವಿನಹಣ್ಣಿನ (Mango Fruit) ಜೊತೆ ಸ್ಟ್ರಾಬೆರಿ ಹಣ್ಣನ್ನ ರುಬ್ಬಿಕೊಂಡು ಲೇಪಿಸಿಕೊಂಡು ಹತ್ತು ನಿಮಿಷ ಆದಮೇಲೆ ತೊಳೆಯಬೇಕು ಇದರಿಂದ ಎಣ್ಣೆ ಅಂಶ ಕಡಿಮೆಯಾಗಿ ತೇವಾಂಶ ಹೆಚ್ಚುವುದು ಬರುತ್ತದೆ. ಬೇಕಾದರೆ ರೋಸ್‌ವಾಟರ್‌ ಸೇರಿಸಿಕೊಳ್ಳಬಹುದು.

ಎರಡು ಚಮಚ ಮಾವಿನಹಣ್ಣು(Mango Fruit) ಹಾಗೂ ಎರಡು ಚಮಚ ಮ್ಯಾಶ್ ಮಾಡಿದ ಬಾಳೆ ಹಣ್ಣನ್ನು ಮಿಶ್ರ ಮಾಡಿ ಮುಖಕ್ಕೆ ಮಸಾಜ್ ಮಾಡಿಕೊಂಡು ಅದು ಆರುವವರೆಗೆ ಬಿಡಿ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ ಇದರಿಂದ ಮುಖದಲ್ಲಿ ಹೊಳಪು ಹೆಚ್ಚಾಗುತ್ತದೆ. ಈ ಹಣ್ಣಿನ ಉಪಯೋಗಗಳು ಇಷ್ಟಕ್ಕೆ ಸೀಮಿತವಾಗಿಲ್ಲ ಬ್ಲಾಕ್ಹೆಡ್ಸ್ (Blackheads)ವೈಟ್ ಹೆಡ್ಸ್ (Whiteheads) ನಿವಾರಿಸಲು ಹಾಗೂ ಕಣ್ಣಿನ ಅಂದ ಹೆಚ್ಚಿಸಲು ಇದನ್ನು ಉಪಯೋಗಿಸಬಹುದು. ನೀರಿಗೆ ಮಾವಿನ ಎಲೆಗಳನ್ನು ಹಾಕಿ ಕುದಿಸಿ ಅದರ ಹಬೆ ತೆಗೆದುಕೊಂಡರೆ ಬ್ಲಾಕ್ಹೆಡ್ಸ್ ಹಾಗೂ ವೈಟ್ ಹೆಡ್ಸ್ ಕಡಿಮೆಯಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದಲ್ಲಿ ಲಭ್ಯವಿರುವ ತೂಕ ಇಳಿಸುವ ಔಷಧಿಗಳು ಯಾವುವು? ಇದರ ಬೆಲೆ ಎಷ್ಟು, ಯಾರೆಲ್ಲಾ ಬಳಸಬಹುದು?
Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips