ನಿಮ್ಮ ಕಿವಿಯನ್ನೂ ಬಿಡ್ತಾ ಇಲ್ಲ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೊನಾ ವೈರಸ್, ಏನು ಸಮಸ್ಯೆ?

By Suvarna NewsFirst Published Mar 5, 2024, 11:50 AM IST
Highlights

ಕೊರೊನಾ ವೈರಸ್ ಜನರ ಜೀವ ಹಿಂಡಿದೆ. ಕೊರೊನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಆಗಾಗ ಹೊಸ ರೂಪದಲ್ಲಿ ಕಾಣಿಸಿಕೊಳ್ತಿರುವ ವೈರಸ್ ಇಡೀ ದೇಹದ ಅಂಗಾಂಗಗಳಿಗೆ ಹಾನಿ ಮಾಡ್ತಿದೆ. ವೈರಸ್ ಕಿವಿಯನ್ನು ಹಾನಿಕೊಳಿಸ್ತಿದೆ. 
 

ಇಡೀ ವಿಶ್ವವನ್ನೇ ನಡುಗಿಸಿದ ಖಾಯಿಲೆ ಕೊರೊನಾ. ಕೊರೊನಾ ಸಾವಿರಾರು ಮಂದಿಯನ್ನು ಬಲಿಪಡೆದಿದೆ. ಕೊರೊನಾ ಗೆದ್ದು ಬಂದವರು ಕೂಡ ಮೊದಲಿನಂತೆ ಜೀವನ ನಡೆಸಲು ಸಾಧ್ಯವಾಗ್ತಿಲ್ಲ. ಕೊರೊನಾ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ಹಿಂಸಿಸುತ್ತಿದೆ. ಕೊರೊನಾದ ಹೊಸ ರೂಪಾಂತರ  ವಿಶ್ವವನ್ನು ಕಾಡುತ್ತಿದೆ. ಹೊಸ ಹೊಸ ರೂಪಗಳು ಪತ್ತೆಯಾಗ್ತಿವೆ. ಕೊರೊನಾದಿಂದ ಬಳಲಿದ ಜನರಿಗೆ ಉಸಿರಾಟ ತೊಂದರೆ, ಹೃದಯದ ಸಮಸ್ಯೆ, ರೋಗ ನಿರೋಧಕ ಶಕ್ತಿಯಲ್ಲಿ ಇಳಿಕೆ ಸೇರಿದಂತೆ ಅನೇಕ ದೀರ್ಘ ಸಮಸ್ಯೆಗಳು ಕಾಡುತ್ತವೆ. ಈಗ ಹೊಸ ಸಂಶೋಧನೆಯೊಂದು ಕಿವಿಗೆ ಸಂಬಂಧಿಸಿದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದೆ. 

ಕಿವಿಗೆ ಅಪಾಯಕಾರಿ ಕೊರೊನಾ (Corona) ವೈರಸ್ : ಕೊರೊನಾ ಕಾಯಿಲೆಗೆ ಕಾರಣವಾದ ವೈರಸ್ (Virus) ಸಾರ್ಸ್ ಕೋವ್- 2, ಕಿವಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಸೋಂಕು ಒಂದು ತಿಂಗಳವರೆಗೆ ಮಧ್ಯದ ಕಿವಿಯಲ್ಲಿ ಇರುತ್ತದೆ ಎಂಬುದು ಹೊಸ ಸಂಶೋಧನೆ (research)ಯಿಂದ ಪತ್ತೆಯಾಗಿದೆ. ಅಮೇರಿಕನ್ ಜರ್ನಲ್ ಆಫ್ ಓಟೋಲರಿಂಗೋಲಜಿಯಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಕೊರೊನಾ 19 ವೇರಿಯಂಟ್ ಓಮಿಕ್ರಾನ್ ಸೋಂಕಿತ ರೋಗಿಗಳಲ್ಲಿ ಎಫ್ಯೂಷನ್ನೊಂದಿಗೆ ಓಟಿಟಿಸ್  ಅಭಿವೃದ್ಧಿಪಡಿಸಿದ ರೋಗಿಗಳ ನಡುವೆ ಕೊರೊನಾ  ವೈರಸ್ ಮತ್ತು ರೋಗಿಗಳ ನಡುವಿನ ಸಂಭವನೀಯ ಸಂಪರ್ಕವನ್ನು ಕಂಡುಹಿಡಿದಿದೆ.

ನಟನಾಗುವುದು ಹಾಗಿರಲಿ, ಡಾನ್ಸ್‌ ಮಾಡಲೂ ಅಸಾಧ್ಯ ಅಂದಿದ್ರು ಡಾಕ್ಟರ್; ಇಂದು ಸೂಪರ್ ಸ್ಟಾರ್!

ಎಫ್ಯೂಷನ್ (Effusion) ಎಂಬುದು ಮಧ್ಯಮ ಕಿವಿಯಲ್ಲಿ ದ್ರವದ ಸಂಗ್ರಹವಾಗಿದೆ.  ಎಫ್ಯೂಷನ್ ಮಧ್ಯಮ ಕಿವಿಯ ಸೋಂಕಿನ ಮತ್ತೊಂದು ಹೆಸರಾಗಿದೆ. ಇದು ದಪ್ಪ ಅಥವಾ ಜಿಗುಟಾಗಿ ಇರಬಹುದು. ಶೀತ ಮತ್ತು ನೋಯುತ್ತಿರುವ ಗಂಟಲಿನ ಸಮಸ್ಯೆ ಕಾಡಬಹುದು. ಉಸಿರಾಟದ ಸೋಂಕು ಕೂಡ ಕಾಡುವ ಸಂಭವವಿದೆ. ದ್ರವವು ಕಿವಿಯಲ್ಲಿ ಸಂಗ್ರಹವಾಗುತ್ತದೆ ಮತ್ತು ಇದು ತಾತ್ಕಾಲಿಕ ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಇದು 3 ರಿಂದ 7 ವರ್ಷ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ವಯಸ್ಕರಲ್ಲಿ ಈ ಸೋಂಕು ಕಾಣಿಸುತ್ತದೆ. ಆದ್ರೆ ಮಗುವಿನಲ್ಲಿ ಹೆಚ್ಚು ಗಂಭೀರವಾಗಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. 

ಮಧ್ಯದ ಕಿವಿಯ ಮೇಲೆ ಕರೋನಾ ವೈರಸ್ ಸಂಭಾವ್ಯ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತದೆ.  SARS-CoV-2 ಮತ್ತು ಎಫ್ಯೂಷನ್ ಆರಂಭದ ನಡುವಿನ ಸಂಪರ್ಕವನ್ನು ಬಹಿರಂಗಪಡಿಸುತ್ತದೆ ಎಂದು ಚೀನಾದ ವುಕ್ಸಿ ಹುಯಿಶನ್ ಜಿಲ್ಲಾ ಪೀಪಲ್ಸ್ ಆಸ್ಪತ್ರೆಯ ಚೆಂಗ್ಝೌ ಹಾನ್ ಹೇಳಿದ್ದಾರೆ. ಎಫ್ಯೂಷನ್ ಗೆ ಗಣನೀಯವಾಗಿ ಕೊಡುಗೆ ನೀಡುವ ವೈರಸ್ ಒಮಿಕ್ರಾನ್ ಸೋಂಕಿನ ಒಂದು ತಿಂಗಳ ನಂತರ ಮಧ್ಯದ ಕಿವಿಯಲ್ಲಿ ಕಂಡುಬರುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಇದು ಎಫ್ಯೂಷನ್ ಚಿಕಿತ್ಸಾ ತಂತ್ರಗಳು ಮತ್ತು ಮರು-ಎಕ್ಸ್ಪೋಸರ್ನಲ್ಲಿ ಸಂಭವನೀಯ ಬದಲಾವಣೆಗಳನ್ನು ಸೂಚಿಸುತ್ತದೆ.

ಜನವರಿಯಿಂದ ಜೂನ್ 2023 ರವರೆಗೆ ಅಧ್ಯಯನ ನಡೆದಿದೆ. 32 ರಿಂದ 84 ವರ್ಷ ವಯಸ್ಸಿನ 23 ರೋಗಿಗಳನ್ನು ಸಂಶೋಧನೆ ಮಾಡಲಾಗಿದೆ. ಅವರು ಓಮಿಕ್ರಾನ್ ನಂತರ ಎಫ್ಯೂಷನ್  ಸೋಂಕಿನಿಂದ ಬಳಲುತ್ತಿದ್ದಾರೆ. ಇವರಲ್ಲಿ 21 ಮಂದಿಗೆ ಏಕಪಕ್ಷೀಯ ಲಕ್ಷಣ ಕಾಣಿಸಿಕೊಂಡಿದೆ. ಶೇಕಡಾ 80 ರಷ್ಟು ಕಿವಿಗಳಲ್ಲಿ ದ್ರವದ ಶೇಖರಣೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಇಂತ ಅಭ್ಯಾಸ ಇರೋ ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆ ಜಾಸ್ತಿ !

ಓಮಿಕ್ರಾನ್ ಸೋಂಕಿನ (Omicron Infection) ಸಾಮಾನ್ಯ ಲಕ್ಷಣಗಳು : ಓಮಿಕ್ರಾನ್ ಗುಣಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ವ್ಯಕ್ತಿಗೆ ಕೇಳಲು ತೊಂದರೆಯಾಗಬಹುದು. ಒಂದು ಅಥವಾ ಎರಡೂ ಕಿವಿಗಳಲ್ಲಿ ನೋವು, ಎಳೆತ ಕಾಣಿಸಿಕೊಳ್ಳಬಹುದು. ವ್ಯಕ್ತಿಗಳು ಬ್ಯಾಲೆನ್ಸ್ ಕಳೆದುಕೊಳ್ತಾರೆ. ಮಾತನಾಡಲು ಅವರಿಗೆ ತೊಂದರೆ ಆಗಬಹುದು. ಸೋಂಕಿನ ಮಾದರಿಯ ಸರಾಸರಿ ಅವಧಿಯ 21 ದಿನಗಳು. ಈ ಸಮಯದಲ್ಲಿ ಶೇಕಡಾ 88 ರಷ್ಟು ಕಿವಿಗಳಲ್ಲಿ ದ್ರವ ಶೇಖರಣೆ ಕಂಡುಬಂದಿದೆ.  

click me!