
ಸೌಜನ್ಯ ಪ್ರಕರಣವಾಗಿ ಒಂದು ವರ್ಷದ ನಂತರ ವಾರಿಜಾ ಆಚಾರ್ತಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡರು. ಈ ವಾರಿಜಾ ಆಚಾರ್ತಿ ಸೌಜನ್ಯ ಕೇಸ್‌ನ ಪ್ರಮುಖ ಸಾಕ್ಷಿ ಎನ್ನಲಾಗಿತ್ತು. ಈಕೆ ಗರ್ಭಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆ ನೋವು ತಾಳಲಾರದೆ ಸಾವನ್ನಪ್ಪಿದರು. ಹೌದು, ಸ್ತನ ಕ್ಯಾನ್ಸರ್ ನಂತರ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ. 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇಂದಿನ ಜೀವನಶೈಲಿಯಿಂದಾಗಿ ಮಹಿಳೆಯರು ಚಿಕ್ಕ ವಯಸ್ಸಿನಲ್ಲಿಯೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದ್ದು, ಇದರ ಚಿಕಿತ್ಸೆಯು ಬಹಳ ಮುಖ್ಯವಾಗಿದೆ.
ಇತರ ಕ್ಯಾನ್ಸರ್‌ಗಳಿಗಿಂತ ಮಹಿಳೆಯರು ಗರ್ಭಕೋಶ ಕ್ಯಾನ್ಸರ್‌ನಿಂದ ಸಾಯುವ ಸಾಧ್ಯತೆ ಹೆಚ್ಚು. ಗರ್ಭಕೋಶ ಕ್ಯಾನ್ಸರ್‌ನಲ್ಲಿ, ಗರ್ಭಕೋಶದ ಆರೋಗ್ಯಕರ ಕೋಶಗಳು ಅನಿಯಮಿತವಾಗಿ ಬೆಳೆಯಲು ಪ್ರಾರಂಭಿಸುತ್ತವೆ, ಇದು ಗಡ್ಡೆಯ ರೂಪವನ್ನು ಪಡೆಯುತ್ತದೆ. ಈ ಗಡ್ಡೆಗಳು ಕೆಲವೊಮ್ಮೆ ಕ್ಯಾನ್ಸರ್ ಆಗಬಹುದು. ಋತುಬಂಧದ ನಂತರ ಸುಮಾರು 70-75% ಮಹಿಳೆಯರಲ್ಲಿ ಇದು ಸಂಭವಿಸುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಕೆಲವು ದೈಹಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಏಕೆಂದರೆ ಇವು ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಂದಹಾಗೆ ಗರ್ಭಕೋಶದ ಕ್ಯಾನ್ಸರ್‌ನ ಲಕ್ಷಣಗಳು ಹೀಗಿರುತ್ತವೆ.
ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದೀರಿ ಎಂದು ಸೂಚಿಸುವ ಲಕ್ಷಣಗಳು...
1 ಗರ್ಭಕೋಶದೊಳಗೆ ಗೆಡ್ಡೆ ಇದ್ದರೆ, ಅದು ನಿಧಾನವಾಗಿ ಬೆಳೆಯಲು ಪ್ರಾರಂಭಿಸುತ್ತದೆ. ಇದು ಹೊಟ್ಟೆ, ಮೂತ್ರಕೋಶ ಮತ್ತು ಸಣ್ಣ ಕರುಳಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಸಂಭವಿಸಿದಾಗ, ಮಲವಿಸರ್ಜನೆಯಲ್ಲಿ ತೊಂದರೆ ಉಂಟಾಗುತ್ತದೆ. ಇದು ಗರ್ಭಕೋಶ ಅಥವಾ ಅಂಡಾಶಯದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು.
2 ಋತುಬಂಧದ ನಂತರವೂ ರಕ್ತಸ್ರಾವ ಸಂಭವಿಸಿದರೆ, ಅದನ್ನು ಅಂಡಾಶಯದ ಕ್ಯಾನ್ಸರ್‌ನ ಅತ್ಯಂತ ಅಪಾಯಕಾರಿ ಲಕ್ಷಣಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ, ವಿಶೇಷವಾಗಿ ಇದು ನಿಮಗೆ ಪದೇ ಪದೇ ಸಂಭವಿಸಿದರೆ.
3 ನಿಮಗೆ ಆಗಾಗ್ಗೆ ದಣಿವು ಅನಿಸಿದರೆ, ಅದು ಒಳ್ಳೆಯದಲ್ಲ. ಕೆಲವು ಮಹಿಳೆಯರು ಹೆಚ್ಚು ನಿದ್ರೆ ಮಾಡುತ್ತಾರೆ, ಇದು ಅಂಡಾಶಯದ ಕ್ಯಾನ್ಸರ್‌ನ ಆರಂಭಿಕ ಲಕ್ಷಣವೂ ಆಗಿದೆ.
4 ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರದಲ್ಲಿ ರಕ್ತ ಇತ್ಯಾದಿ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ಮೂತ್ರ ವಿಸರ್ಜನೆಯ ಅಭ್ಯಾಸದಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ, ಇವು ಅಂಡಾಶಯದ ಕ್ಯಾನ್ಸರ್‌ನ ಲಕ್ಷಣಗಳಾಗಿವೆ.
5 ಬೆನ್ನು ನೋವು, ಲೈಂಗಿಕ ಕ್ರಿಯೆ ಸಮಯದಲ್ಲಿ ನೋವು ಅಥವಾ ಅಸ್ವಸ್ಥತೆಯು ಅಂಡಾಶಯದಲ್ಲಿನ ಗೆಡ್ಡೆಯ ಕಾರಣದಿಂದಾಗಿರಬಹುದು. ಈ ನೋವು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ.
6 ವಯಸ್ಸಾದ ಮಹಿಳೆಯರಲ್ಲಿ, ಹೊಟ್ಟೆಯ ಕೆಳಭಾಗದಲ್ಲಿ ಉಬ್ಬುವುದು, ಅಜೀರ್ಣ, ಗ್ಯಾಸ್, ವಾಕರಿಕೆ, ಎದೆಯುರಿ ಮುಂತಾದ ಲಕ್ಷಣಗಳು ಸಹ ಅಂಡಾಶಯದ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು. ಸೊಂಟದಲ್ಲಿ ನೋವು ಕೂಡ ಇದರ ಲಕ್ಷಣವಾಗಿದೆ. ಇದರೊಂದಿಗೆ ಅಂಡಾಶಯದಲ್ಲಿನ ಗೆಡ್ಡೆಯಿಂದಾಗಿ ಅಂಡಾಶಯ ಮತ್ತು ಅದರ ಸುತ್ತಮುತ್ತಲಿನ ಅಂಗಗಳ ಮೇಲೆ ಒತ್ತಡ ಉಂಟಾಗುತ್ತದೆ. ನೋವು ಕೆಲವು ದಿನಗಳವರೆಗೆ ಮುಂದುವರಿದರೆ, ಅದು ಅಂಡಾಶಯದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.
ಯಾರಿಗೆ ಬರುವ ಅಪಾಯ ಹೆಚ್ಚು?
ವಯಸ್ಸು: 60 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಈ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚು.
ಅಧಿಕ ತೂಕ: ಅಧಿಕ ತೂಕ ಮತ್ತು ಬೊಜ್ಜು ಗರ್ಭಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಮತ್ತು ಇತರ ಹಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಕುಟುಂಬದ ಇತಿಹಾಸ: ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಕಾಲಕಾಲಕ್ಕೆ ಕ್ಯಾನ್ಸರ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.
ಋತುಚಕ್ರದ ಸಮಯ: ಯಾರಾದರೂ 12 ವರ್ಷಕ್ಕಿಂತ ಮೊದಲು ಋತುಚಕ್ರ ಪ್ರಾರಂಭವಾದರೆ ಅಥವಾ ಋತುಬಂಧ ವಿಳಂಬವಾದರೆ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹಲವು ಪಟ್ಟು ಹೆಚ್ಚಾಗುತ್ತವೆ.
ಗರ್ಭಿಣಿಯಾಗದಿರುವುದು: ಗರ್ಭಿಣಿಯಾಗದಿರುವುದು ದೇಹದಲ್ಲಿ ಈಸ್ಟ್ರೊಜೆನ್ ಅಪಾಯವನ್ನು ಹೆಚ್ಚಿಸುತ್ತದೆ, ಇದು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.
ರೇಡಿಯೋ-ಫ್ರೀಕ್ವೆನ್ಸಿ ಚಿಕಿತ್ಸೆಯ ಬಳಕೆ: ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಕೆಲವು ಸಂದರ್ಭಗಳಲ್ಲಿ ರೇಡಿಯೋ-ಫ್ರೀಕ್ವೆನ್ಸಿ ಚಿಕಿತ್ಸೆಯಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಕಂಡುಬಂದಿದೆ.
ಈಸ್ಟ್ರೋಜೆನ್ ಬದಲಿ ಚಿಕಿತ್ಸೆ: ಈ ರೀತಿಯ ಚಿಕಿತ್ಸೆಯನ್ನು ಹೆಚ್ಚಾಗಿ ಋತುಬಂಧದ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಪ್ರೊಜೆಸ್ಟರಾನ್ ಇಲ್ಲದೆ, ಈ ಚಿಕಿತ್ಸೆಯು ಗರ್ಭಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಟ್ಯಾಮೋಕ್ಸಿಫೆನ್ ನ ಅಡ್ಡಪರಿಣಾಮಗಳು: ಈ ಔಷಧಿಗಳನ್ನು ಹೆಚ್ಚಾಗಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುತ್ತದೆ. ಔಷಧಿಗಳು ಸ್ತನ ಕ್ಯಾನ್ಸರ್ ಲಕ್ಷಣಗಳಿಂದ ಪರಿಹಾರವನ್ನು ನೀಡುತ್ತವೆ, ಆದರೆ ಇದರಿಂದಾಗಿ ಗರ್ಭಕೋಶದ ಕ್ಯಾನ್ಸರ್ ಬರುವ ಅಪಾಯವು ಸ್ವಲ್ಪ ಹೆಚ್ಚಾಗುತ್ತದೆ.
ಗಮನಿಸಿ: ಕ್ಯಾನ್ಸರ್ ಬರುವ ಸಾಧ್ಯತೆಯಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ . ವೈದ್ಯಕೀಯ ಸಹಾಯ ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.