ಕೇರಳದ ಮಲಪ್ಪುರಂ ಜಿಲ್ಲೆಯ ವಳಂಚೇರಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದವರಲ್ಲಿ ಹೆಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ.
ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ವಳಂಚೇರಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದವರಲ್ಲಿ ಹೆಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ. ಡ್ರಗ್ ವ್ಯಸನಿಗಳಾಗಿದ್ದ ಒಂದು ಗುಂಪಿನ ಒಂಬತ್ತು ಜನರಿಗೆ ಹೆಚ್‌ಐವಿ ಇರುವುದು ಸಾಬೀತಾಗಿದೆ. ಕೇರಳ ಏಡ್ಸ್ ಸೊಸೈಟಿ ನಡೆಸಿದ ಸ್ಕ್ರೀನಿಂಗ್‌ನಲ್ಲಿ ಈ 9 ಜನರಿಗೆ ಹೆಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ. ಇದರಲ್ಲಿ ಮೂವರು ಹೊರರಾಜ್ಯದ ಕಾರ್ಮಿಕರಾಗಿದ್ದಾರೆ. ಈ ಸುದ್ದಿಯನ್ನು ಮಲಪ್ಪುರಂ ಡಿಎಂಒ ಕೂಡ ಖಚಿತಪಡಿಸಿದ್ದಾರೆ. ಒಂದೇ ಸಿರಿಂಜ್ ಬಳಸಿಕೊಂಡು ದೇಹಕ್ಕೆ ಡ್ರಗ್ಸ್ ಇಂಜೆಕ್ಟ್ ಮಾಡಿರುವುದೇ ಈ ಹೆಚ್‌ಐವಿ ಸೋಂಕು 9 ಜನರಲ್ಲಿ ಕಾಣಿಸಿಕೊಂಡಿರುವುದಕ್ಕೆ ಕಾರಣವಾಗಿದೆ.
ಜನವರಿಯಲ್ಲಿ ಕೇರಳ ಏಡ್ಸ್ ಸೊಸೈಟಿ ನಡೆಸಿದ ಸ್ಕ್ರೀನಿಂಗ್‌ನಲ್ಲಿ ವಳಂಚೇರಿಯಲ್ಲಿ ಒಬ್ಬ ವ್ಯಕ್ತಿಗೆ ಹೆಚ್‌ಐವಿ ಸೋಂಕು ದೃಢಪಟ್ಟಿತ್ತು. ನಂತರ ಇವರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ತಪಾಸಣೆಯಲ್ಲಿ ಒಟ್ಟು ಒಂಬತ್ತು ಜನರಿಗೆ ಹೆಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ. ಇವರೆಲ್ಲರೂ ಒಂದೇ ಸಿರಿಂಜ್‌ನಲ್ಲಿ ಡ್ರಗ್ಸ್ ತೆಗೆದುಕೊಂಡಿದ್ದರಿಂದ ರೋಗ ಹರಡಿದೆ ಎಂದು ಡಿಎಂಒ ತಿಳಿಸಿದ್ದಾರೆ. ಹೀಗಾಗಿ ಈಗ ಇವರ ಕುಟುಂಬ ಮತ್ತು ಇವರೊಂದಿಗೆ ಸಂಪರ್ಕ ಹೊಂದಿರುವ ಇತರ ಜನರನ್ನು ಗುರಿಯಾಗಿಸಿಕೊಂಡು ಆರೋಗ್ಯ ಇಲಾಖೆ ದೊಡ್ಡ ಮಟ್ಟದ ಸ್ಕ್ರೀನಿಂಗ್ ನಡೆಸುತ್ತಿದೆ.
ಹೆತ್ತವಳು ಹಿಂದೂ, ದತ್ತು ಪಡೆದಾಕೆ ಮುಸ್ಲಿಂ, HIV ಎಂದಾಕ್ಷಣ ಇಬ್ಬರಿಗೂ ಬೇಡವಾಯ್ತು, ಕಂದಮ್ಮ ಈಗ ಅನಾಥೆ!