
ಈಗಿನ ದಿನಮಾನದಲ್ಲಿ ಜನರು ಅನೇಕ ಸಮಸ್ಯೆಗಳಿಂದ ಬಳಲುತ್ತಾರೆ. ಅನಾರೋಗ್ಯ ಜನರನ್ನು ಹೈರಾಣ ಮಾಡಿದೆ. ಒಂದಲ್ಲ ಒಂದು ರೋಗ, ಒಂದಲ್ಲ ಒಂದು ಕಡೆ ನೋವು ಜನರಿಗೆ ಕಿರಿಕಿರಿ ನೀಡ್ತಿದೆ. ಯಾವುದೇ ಸಮಸ್ಯೆ ಬಂದ್ರು ಜನರು ಮೊದಲು ಹೋಗೋದು ವೈದ್ಯರ ಬಳಿ. ವೈದ್ಯರು ಚಿಕಿತ್ಸೆ ನೀಡಿ, ಮಾತ್ರೆಗಳನ್ನು ನೀಡ್ತಾರೆ. ಕೆಲವರು ವೈದ್ಯರನ್ನು ಸಂಪರ್ಕಿಸದೆ ಔಷಧಿ ಅಂಗಡಿಯಲ್ಲಿ ಮಾತ್ರೆ ಖರೀದಿ ಮಾಡಿ ಸೇವನೆ ಮಾಡ್ತಾರೆ. ಪದೇ ಪದೇ ಹಾಗೂ ಎಲ್ಲ ಖಾಯಿಲೆಗೆ ಮಾತ್ರೆ ಸೇವನೆ ಮಾಡೋದು ಒಳ್ಳೆಯದಲ್ಲ. ಮಾತ್ರೆ ಸೇವನೆಯಿಂದ ದೇಹದ ಮೇಲೆ ಅಡ್ಡಪರಿಣಾಮವಾಗುತ್ತದೆ. ಮಾತ್ರೆ ಸೇವನೆ ಹೆಚ್ಚಾದ್ರೆ ಮತ್ತೊಂದಿಷ್ಟು ಖಾಯಿಲೆ ಅಂಟಿಕೊಳ್ಳುತ್ತದೆ.
ಮಾತ್ರೆ (Pill) ಹಾಗೂ ಔಷಧಿ ಸೇವನೆ ಕಡಿಮೆ ಮಾಡಲು ಬಯಸುವ ಜನರು ಅದಕ್ಕೆ ಪರ್ಯಾಯ ವಿಧಾನಗಳನ್ನು ಹುಡುಕುತ್ತಾರೆ. ಪರ್ಯಾಯ ವಿಧಾನದಲ್ಲಿ ಥೆರಪಿ (Therapy) ಕೂಡ ಸೇರಿದೆ. ಕೆಲ ನೋವುಗಳಿಗೆ ಹಾಗೂ ರೋಗ (Disease) ಕ್ಕೆ ಥೆರಪಿ ಮೂಲಕ ಪರಿಹಾರ ನೀಡಲಾಗುತ್ತದೆ. ಪ್ರಪಂಚದಲ್ಲಿ ಚಿತ್ರವಿಚಿತ್ರ ಥೆರಪಿಗಳಿವೆ. ಆ ಥೆರಪಿ ಹೆಸರು ಕೇಳಿದ್ರೆ ನೀವು ದಂಗಾಗ್ತೀರಾ. ನಾವಿಂದು ಪ್ರಪಂಚದಲ್ಲಿರುವ ಕೆಲ ಥೆರಪಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಪ್ರಪಂಚದಲ್ಲಿದೆ ವಿಚಿತ್ರ ಥೆರಪಿಗಳು :
ರೈಲು ಟ್ರ್ಯಾಕ್ ಥೆರಪಿ : ಹೆಸರು ಕೇಳಿದ್ರೆ ಭಯವಾಗೋದು ಸಾಮಾನ್ಯ. ಆದ್ರೆ ಇಂಥ ಥೆರಪಿಯೊಂದು ಚಾಲ್ತಿಯಲ್ಲಿದೆ. ಇಂಡೋನೇಷ್ಯಾದಲ್ಲಿ ರೈಲ್ವೆ ಟ್ರ್ಯಾಕ್ ಥೆರಪಿ ಪ್ರಚಲಿತದಲ್ಲಿದೆ. ಮಧುಮೇಹ ರೋಗಿಗಳಿಂದ ಹಿಡಿದು ಅಧಿಕ ರಕ್ತದೊತ್ತಡದವರೆಗೆ ಪ್ರತಿಯೊಂದು ಚಿಕಿತ್ಸೆಗೂ ರೈಲ್ವೆ ಟ್ರ್ಯಾಕ್ ಥೆರಪಿಯನ್ನು ಇಲ್ಲಿನ ಜನ ಆಶ್ರಯಿಸುತ್ತಾರೆ.
ರೈಲ್ವೆ ಟ್ರ್ಯಾಕ್ ಥೆರಪಿ ಅಂದ್ರೇನು ? : ಇದರಲ್ಲಿ ಜನರು ರೈಲು ಹಳಿ ಮೇಲೆ ಮಲಗಿರುತ್ತಾರೆ. ಅವರ ದೇಹದ ಮೇಲ್ಭಾಗವು ಒಂದು ರೈಲು ಹಳಿಯ ಮೇಲೆ ಮತ್ತು ಅವರ ಪಾದಗಳು ಇನ್ನೊಂದರ ಮೇಲೆ ಇರುತ್ತವೆ. ನಂತರ ಅವರು ಪಕ್ಕದ ರೈಲ್ವೆ ಹಳಿ ಮೇಲೆ ರೈಲು ಹಾದು ಹೋಗುವುದನ್ನು ಕಾಯ್ತಾರೆ. ರೈಲು ಹೋದಾಗ ಪಕ್ಕದ ಹಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಪ್ರವಾಹವಾಗುತ್ತದೆ. ಇದನ್ನು ದೇಹ ಹೀರಿಕೊಳ್ಳುತ್ತದೆ. ಇದ್ರಿಂದ ರೋಗ ಕಡಿಮೆಯಾಗುತ್ತದೆ ಎಂದು ಜನರು ಭಾವಿಸ್ತಾರೆ. ಆದ್ರೆ ಈ ರೈಲ್ವೆ ಹಳಿ ಚಿಕಿತ್ಸೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಆದ್ರೂ ಜನರು ಈ ಚಿಕಿತ್ಸೆ ಪಡೆಯಲು ಉತ್ಸುಕರಾಗಿರ್ತಾರೆ.
ಉಪ್ಪಿನ ಥೆರಪಿ : ಆಹಾರಕ್ಕೆ ಉಪ್ಪಿಲ್ಲವೆಂದ್ರೆ ರುಚಿ ಇರೋದಿಲ್ಲ. ಉಪ್ಪನ್ನು ಅನೇಕ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಮಹಿಳೆಯರು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಉಪ್ಪನ್ನು ಬಳಸುತ್ತಾರೆ. ಯುರೋಪಿನಲ್ಲಿ ಜನರು ಉಪ್ಪಿನ ಥೆರಪಿ ಆಶ್ರಯಿಸಿದ್ದಾರೆ. ಈ ಚಿಕಿತ್ಸೆಯಲ್ಲಿ ಜನರು ಉಪ್ಪಿನ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಯುರೋಪಿನ ಜನರು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಚಿಕಿತ್ಸೆ ಬಳಸ್ತಾರೆ. ಈ ಚಿಕಿತ್ಸೆಗಾಗಿ ಉಪ್ಪು ತುಂಬಿದ ರೂಮಿನಲ್ಲಿ ರೋಗಿ ಕುಳಿತುಕೊಳ್ಳಬೇಕಾಗುತ್ತದೆ.
Health Tips in Kannada: ದಿನಪೂರ್ತಿ ಆಕ್ಟೀವ್ ಆಗಿರ್ಬೇಕಾ? ಅರ್ಧ ಗಂಟೆ ವಾಕಿಂಗ್ ಮಾಡಿ
ಅಗ್ನಿ ಥೆರಪಿ : ಬೆಂಕಿ ಅಪಾಯಕಾರಿ. ಅದ್ರಿಂದ ಜನರು ದೂರವಿರ್ತಾರೆ. ಆದ್ರೆ ಚೀನಾದಲ್ಲಿ ಅಗ್ನಿ ಥೆರಪಿ ಬಳಕೆ ಮಾಡಲಾಗುತ್ತದೆ. ನೋವಿನಿಂದ ಬಳಲುವ ಜನರು ಅಗ್ನಿ ಚಿಕಿತ್ಸೆ ಬೆಳಸ್ತಾರೆ. ಬರೀ ನೋವು ಮಾತ್ರವಲ್ಲ, ಕ್ಯಾನ್ಸರ್ ಹಾಗೂ ಒತ್ತಡದಂತಹ ಖಾಯಿಲೆಗೂ ಇದು ಮದ್ದು ಎನ್ನಲಾಗುತ್ತದೆ. ಮೊದಲು ಗಿಡಮೂಲಿಕೆಯಿಂದ ಮಾಡಿದ ಪೇಸ್ಟನ್ನು ರೋಗಿ ದೇಹಕ್ಕೆ ಹಚ್ಚಲಾಗುತ್ತದೆ. ಅದ್ರ ನಂತ್ರ ರೋಗಿ ದೇಹವನ್ನು ಟವೆಲ್ ನಿಂದ ಮುಚ್ಚಲಾಗುತ್ತದೆ. ಟವೆಲ್ ಗೆ ನೀರು ಮತ್ತು ಆಲ್ಕೋಹಾಲ್ ಹಾಕಲಾಗುತ್ತದೆ. ನಂತ್ರ ಬೆಂಕಿ ಹಚ್ಚಲಾಗುತ್ತದೆ.
ಅನಿರೀಕ್ಷಿತವಾಗಿ ಗರ್ಭಧಾರಣೆಯ ಪರೀಕ್ಷೆ POSITIVE ಬಂದರೆ ಸಂಗಾತಿಗೆ ಹೇಗೆ ತಿಳಿಸುತ್ತೀರಾ?
ಜಿಗಣೆ ಥೆರಪಿ : ಜಿಗಣೆ ನೋಡಿದ್ರೆ ಭಯಪಡುವವರಿದ್ದಾರೆ. ಆದ್ರೆ ಜಿಗಣಿ ಥೆರಪಿ ಕೂಡ ಪ್ರಸಿದ್ಧಿ ಪಡೆದಿದೆ. ರಕ್ತ ಶುದ್ಧೀಕರಣ,ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳಿಗೆ ಇದು ಪ್ರಯೋಜನಕಾರಿ ಎನ್ನಲಾಗುತ್ತದೆ. ಈ ಚಿಕಿತ್ಸೆಯ ಸಮಯದಲ್ಲಿ ವ್ಯಕ್ತಿ ತನ್ನ ದೇಹವನ್ನು ಜಿಗಣೆಗೆ ನೀಡ್ತಾನೆ. ಜಿಗಣೆ ಆತನ ಅಶುದ್ಧ ರಕ್ತವನ್ನು ಹೀರುತ್ತದೆ. ಈ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ. ರಕ್ತ ಹೀರುವಾಗ ಜಿಗಣೆ ರಕ್ತದಲ್ಲಿ ಕೆಲವು ಕಿಣ್ವಗಳನ್ನು ಬಿಡುತ್ತದೆ. ಅದು ರೋಗ ಗುಣಪಡಿಸಲು ನೆರವಾಗುತ್ತದೆ ಎಂದು ಜನರು ನಂಬಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.