ಮೊಸರನ್ನ ಅನೇಕರಿಗೆ ಇಷ್ಟ. ದಕ್ಷಿಣ ಭಾರತದಲ್ಲಿ ಪ್ರತಿ ಮನೆಯಲ್ಲೂ ಮೊಸರನ್ನ ಸೇವನೆ ಮಾಡ್ತಾರೆ. ಮೊಸರನ್ನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ರುಚಿ ಜೊತೆ ಹೆಲ್ತ್ ಸುಧಾರಿಸುವ ಮೊಸರನ್ನವನ್ನು ನೀವು ಪ್ರತಿ ದಿನ ಸೇವನೆ ಮಾಡಿ ನೋಡಿ.
ಮಧ್ಯಾಹ್ನದ ಊಟದ ಕೊನೆಯಲ್ಲಿ ಅನ್ನಕ್ಕೆ ಮೊಸರು ಹಾಕಿಕೊಂಡು ತಿನ್ನುವವರು ಸಾಕಷ್ಟು ಜನರಿದ್ದಾರೆ. ಮೊಸರನ್ನ ತಿನ್ನದೆ ಹೋದ್ರೆ ಊಟ ಅಪೂರ್ಣ. ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಜನರ ಮನೆಯಲ್ಲಿ ಮೊಸರು, ಅನ್ನ ಇದ್ದೇ ಇರುತ್ತದೆ. ಅನ್ನಕ್ಕೆ ಮೊಸರು ಸೇರಿಸಿ ತಿನ್ನೋದ್ರಿಂದ ಸಾಕಷ್ಟು ಲಾಭವಿದೆ. ಮಧ್ಯಾಹ್ನದ ಊಟದಲ್ಲಿ ಮಸಾಲೆ ಆಹಾರ ಸೇವನೆ ಮಾಡಿದ ನಂತ್ರ ಕೊನೆಯಲ್ಲಿ ಮೊಸರನ್ನ ತಿಂದ್ರೆ ಹೊಟ್ಟೆ, ಮನಸ್ಸು ಎರಡಕ್ಕೂ ಹಿತವೆನ್ನಿಸುತ್ತದೆ. ಇದು ಜೀರ್ಣ ಕ್ರಿಯೆಗೂ ಬಹಳ ಒಳ್ಳೆಯದು.
ಆಯುರ್ವೇದ (Ayurveda) ದಲ್ಲಿ ಅನ್ನ ಹಾಗೂ ಮೊಸರ (Curd) ನ್ನು ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಮೊಸರು ಅಜೀರ್ಣ ಅಥವಾ ಅತಿಸಾರ (Diarrhea) ಕ್ಕೆ ಉತ್ತಮ ಮದ್ದು ಎಂದು ತಜ್ಞರು ಹೇಳ್ತಾರೆ. ಮೊಸರಿನಲ್ಲಿ ಪ್ರೋಬಯಾಟಿಕ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅನ್ನದ ಜೊತೆ ಮೊಸರನ್ನು ಸೇವನೆ ಮಾಡುವುದ್ರಿಂದ ಆರೋಗ್ಯಕರ ಸೂಕ್ಷ್ಮಜೀವಿಯ ಸಮತೋಲನವನ್ನು ಕಾಪಾಡಿಕೊಳ್ಳಬಹುದು.ಇದು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅನ್ನಕ್ಕೆ ಮೊಸರು ಹಾಕಿ ತಿನ್ನುವುದ್ರಿಂದ ನಿಮ್ಮ ಅತಿಸಾರ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಅನ್ನದ ಜೊತೆ ಮೊಸರು ಸೇವನೆಯಿಂದ ಸಾಕಷ್ಟು ಲಾಭವಿದೆ. ನಾವಿಂದು ಅನ್ನ ಹಾಗೂ ಮೊಸರಿನ ಲಾಭಗಳ ಬಗ್ಗೆ ನಿಮಗೆ ಹೇಳ್ತೇವೆ.
ಅನ್ನ – ಮೊಸರಿನಿಂದ ದೇಹ ತಂಪಾಗುತ್ತದೆ : ಬಿಸಿ ಬಿಸಿ ಅನ್ನಕ್ಕೆ ಮೊಸರನ್ನು ಹಾಕಿ ತಿನ್ನುವುದು ಒಳ್ಳೆಯದಲ್ಲ. ಮೊಸರು ಮತ್ತು ಅನ್ನವನ್ನು ಯಾವಾಗಲೂ ತಣ್ಣಗಿರುವಾಗ ಸೇವನೆ ಮಾಡಬೇಕು. ಮೊಸರು ದೇಹವನ್ನು ತಂಪಾಗಿಡುತ್ತದೆ. ನೀವು ಅನ್ನದ ಜೊತೆ ಮೊಸರು ಬೆರೆಸಿ ತಿನ್ನುವುದ್ರಿಂದ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಬಹುದು. ದೇಹದಲ್ಲಿ ಬಿಸಿ ಅನುಭವವಾಗ್ತಿದ್ದರೆ, ದೇಹ ತಣ್ಣಗಾಗಲು, ಉರಿ ಕಡಿಮೆಯಾಗಲು ನೀವು ಅನ್ನದ ಜೊತೆ ಮೊಸರನ್ನು ಬೆರೆಸಿ ಸೇವನೆ ಮಾಡಬೇಕು.
ಅನ್ನ – ಮೊಸರಿನಿಂದ ಹೆಚ್ಚಾಗುತ್ತೆ ರೋಗ ನಿರೋಧಕ ಶಕ್ತಿ : ಮೊಸರು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ. ನೀವು ಅನಾರೋಗ್ಯಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಮೊಸರನ್ನವನ್ನು ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ ಬರುತ್ತದೆ. ದೇಹವನ್ನು ಆರೋಗ್ಯಕರವಾಗಿಡುವ ಉತ್ತಮ ಬ್ಯಾಕ್ಟೀರಿಯಾವನ್ನು ಇದು ಹೊಂದಿದೆ.
ತೂಕ ಹೆಚ್ಚಾದ್ರೆ ತಿನ್ನಿ ಮೊಸರನ್ನ : ತೂಕ ಹೆಚ್ಚಾಗಿದೆ, ಬೊಜ್ಜು ಕರಗಿಸಬೇಕು ಎನ್ನುವವರು ಅನ್ನಕ್ಕೆ ಮೊಸರು ಬೆರೆಸಿ ತಿನ್ನಬಹುದು. ಇದು ನಿಮ್ಮ ತೂಕವನ್ನು ಇಳಿಸಲು ನೆರವಾಗುತ್ತದೆ. ಮೊಸರನ್ನ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುವುದ್ರಿಂದ ನೀವು ದೀರ್ಘ ಕಾಲದವರೆಗೆ ಆಹಾರ ಸೇವನೆ ಮಾಡಲು ಹೋಗುವುದಿಲ್ಲ.
ಜೀರ್ಣಾಂಗ ಕ್ರಿಯೆ ಸುಧಾರಿಸುತ್ತೆ ಮೊಸರನ್ನ : ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಿದ್ದರೂ ನೀವು ಭಯವಿಲ್ಲದೆ ಅನ್ನ –ಮೊಸರನ್ನು ಸೇವನೆ ಮಾಡಬಹುದು. ಈ ಮೊಸರನ್ನ ಸುಲಭವಾಗಿ ಜೀರ್ಣವಾಗುತ್ತದೆ. ಆಮ್ಲೀಯತೆ ಮತ್ತು ಅಜೀರ್ಣ ಸಮಸ್ಯೆಗೆ ಮೊಸರು ಪರಿಹಾರ ನೀಡುತ್ತದೆ. ಅನ್ನ ಮೊಸರಿನಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿದೆ. ಇದು ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಲಬದ್ಧತೆ ಮತ್ತು ಹೊಟ್ಟೆ ನೋವು ಕಡಿಮೆಯಾಗುತ್ತದೆ.
Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು
ಒತ್ತಡ ನಿವಾರಣೆಗೆ ಮೊಸರನ್ನ : ಹೆಚ್ಚು ಒತ್ತಡದಿಂದ ಬಳಲುವ ಜನರು ಮೊಸರನ್ನವನ್ನು ಸೇವನೆ ಮಾಡಬೇಕು. ಯಾಕೆಂದ್ರೆ ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉತ್ತಮ ಕೊಬ್ಬು, ನೋವು ಮತ್ತು ಒತ್ತಡದಂತಹ ಭಾವನೆಗಳನ್ನು ಕಡಿಮೆ ಮಾಡಲು ಮೆದುಳಿಗೆ ಸಹಾಯ ಮಾಡುತ್ತದೆ.
Weight Loss Tips: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ
ಮೊಸರನ್ನ ಮಾಡುವ ವಿಧಾನ : ನೀವು ಪ್ರತಿ ದಿನ ಮೊಸರನ್ನ ಸೇವನೆ ಮಾಡ್ಬೇಕಾಗಿಲ್ಲ. ಅನ್ನಕ್ಕೆ ಸ್ವಲ್ಪ ಮೊಸರು ಹಾಗೂ ಉಪ್ಪನ್ನು ಸೇರಿಸಿ ಸೇವನೆ ಮಾಡಬಹುದು. ಇದು ಸೆಪ್ಪೆ, ರುಚಿ ಬೇಕು ಎನ್ನುವವರು, ಅನ್ನಕ್ಕೆ ಮೊಸರು ಬರೆಸಿ, ತುಪ್ಪ, ಕರಿಬೇವು, ಸಾಸಿವೆಯನ್ನು ಹಾಕಿ ಒಗ್ಗರಣೆ ಮಾಡಿ ಅದನ್ನು ಮೊಸರಿನ ಅನ್ನಕ್ಕೆ ಹಾಕಬೇಕು. ಬೇಕೆನಿಸಿದ್ರೆ ನೀವು ಗೋಡಂಬಿ, ದ್ರಾಕ್ಷಿ, ದಾಳಿಂಬೆ ಹಣ್ಣನ್ನು ಕೂಡ ನೀವು ಹಾಕಬಹುದು.