ನಮ್ಮ ದೈನಂದಿನ ಕರುಳಿನ ಚಲನೆಯಿಂದ ಹೃದಯಾಘಾತದ ಅಪಾಯವನ್ನು ಊಹಿಸಬಹುದು ಎಂದು ಸಂಶೋಧನೆ ತಿಳಿಸಿದೆ. ಎಷ್ಟು ಬಾರಿ ಶೌಚಾಲಯಕ್ಕೆ ಹೋಗುತ್ತೀರಿ ಎಂಬುದರಲ್ಲಿ ಹೃದಯಾಘಾತದ ಮನ್ಸೂಚನೆ ಅಡಗಿದೆ. ಶೌಚಾಲಯದಲ್ಲಿ ಏಕಾಂಗಿಯಾಗಿದ್ದಾಗ ಹೃದಯ ಸಂಬಂಧಿ ತುರ್ತುಸ್ಥಿತಿ ಸಂಭವಿಸಿದಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.
ಇಂದಿನ ಆಧುನಿಕ ಜೀವನ ಶೈಲಿಯು, ಆರೋಗ್ಯದ ಮೇಲೆ ತುಂಬಾ ಬೀರುತ್ತಿದೆ. ಜೀವನ ಶೈಲಿಯಲ್ಲಾದ ಬದಲಾವಣೆಯಿಂದ ಜನರು ಹೃದಯಘಾತದಂತಹ ಅನೇಕ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೃದಯಾಘಾತವು, ಪ್ರತಿ ವರ್ಷವು ಅಂದಾಜು 18 ಮಿಲಿಯನ್ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಹೃದಯ ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಪ್ರತಿಯೊಂದು ಅಂಗಾಂಗಗಳಿಗೆ ಕಳುಹಿಸಿ ಕೊಡುವ ಕೆಲಸ ಮಾಡುತ್ತದೆ. ಆದರೆ ನಮ್ಮ ದೈನಂದಿನ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಈ ಹಿಂದೆ 65ಕ್ಕಿಂತ ಹೆಚ್ಚಿನ ವಯೋಮಾನದ ಮೇಲ್ಪಟ್ಟ ಜನರಲ್ಲಿ ಹೃದಯ ರೋಗದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದವು. ಈಗೀಗ ಚಿಕ್ಕ ವಯಸ್ಸಿನವರಿಗೂ ಕೂಡ ಇದು ಬರಲು ಶುರು ಮಾಡಿದೆ. ಹೃದಯಾಘಾತದ ಸಮಸ್ಯೆ ಹಾಗೆ ಬರುವುದಿಲ್ಲ. ಅದು ದೇಹದಲ್ಲಿ ಮುಂಚಿತವಾಗಿ ಕೆಲವು ಲಕ್ಷಣಗಳನ್ನು ತೋರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ, ನಾವು ಎಷ್ಟು ಬಾರಿ ಶೌಚಾಲಯಕ್ಕೆ ಹೋಗುತ್ತೇವೆ ಎನ್ನುವುದು ಹೃದಯಾಘಾತದ ಅಪಾಯವನ್ನು ಸೂಚಿಸುತ್ತದೆ ಎಂದರೆ ನೀವು ನಂಬಲೇಬೇಕು.
ಒಂದಕ್ಕಿಂತ ಹೆಚ್ಚು ಬಾರಿ ಶೌಚಾಲಯ ಬಳಸುವುದು ಅಪಾಯಕಾರಿ:
undefined
ಕರುಳಿನ ಚಲನೆಯ (bowel movement) ವೇಳೆ ದೇಹದ ಮೇಲೆ ಪ್ರಯಾಸ ಹಾಗೂ ಹೆಚ್ಚಿನ ಶ್ರಮ ಬೀಳಲಿದೆ ಎಂದು ಅಧ್ಯಯನಗಳು ತಿಳಿಸಿವೆ. ವಿವಿಧ ಅಧ್ಯಯನಗಳ ಆಧಾರದ ಮೇಲೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಕರುಳಿನ ಚಲನೆಯು ಹೃದ್ರೋಗಕ್ಕೆ ಹೆಚ್ಚಿನ ಅಪಾಯ ನೀಡಲಿದೆ. ಹಾಗೂ ವಾರದಲ್ಲಿ ಮೂರು ಬಾರಿ ಕಡಿಮೆ ಇರುವ ಕರುಳಿನ ಚಲನೆಯ ಆವರ್ತನವು (bowel movement frequency) ಕೂಡ ಹೃದಯಕ್ಕೆ ಹೆಚ್ಚಿನ ಅಪಾಯ ನೀಡುವ ಸಂಬಂಧಿಸಿದೆ. ಕರುಳಿನ ಚಲನೆ ಏರುಪೇರು ಆಗುವುದರಿಂದ ಮಲದ ಸಮಸ್ಯೆ ಉಂಟಾಗುತ್ತದೆ. ಈ ವೇಳೆ ಒಂದಕ್ಕಿಂತ ಹೆಚ್ಚು ಬಾರಿ ಶೌಚಾಲಯವನ್ನು ಬಳಸುವುದು ಸಾಮಾನ್ಯ. ಆದರೆ ಇದು ಹೃದಯಕ್ಕೆ ಅಪಾಯಕಾರಿ ಎಂದು ಸಂಶೋಧನೆ ಹೇಳಿದೆ. ಯಾಕೆಂದರೆ ಈ ವೇಳೆ ಹೃದಯದ (heart) ಮೇಲೆ ಹೆಚ್ಚಿನ ಒತ್ತಡ ಉಂಟಾಗಬಹುದು ಅಥವಾ ಹಠಾತ್ ಹೃದಯ ಸ್ತಂಭನಕ್ಕೆ ಪ್ರಚೋದಕವಾಗಬಹುದು. ಇಂತಹ ವೇಳೆ ವಾಸೋವಗಲ್ ಪ್ರತಿಕ್ರಿಯೆ (vasovagal response) ಎಂದು ಕರೆಯಲ್ಪಡುವ ಯಾವುದನ್ನಾದರೂ ಪ್ರಚೋದಿಸಬಹುದು. ಇದು ಕೆಲವೊಮ್ಮೆ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಹಾಗೂ ಮುಖ್ಯವಾಗಿ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ನಂಬುತ್ತಾರೆ.
ಇದನ್ನೂ ಓದಿ: HEALTH PROBLEMS: ಭಾರತದಲ್ಲಿ ಈ ಕಾರಣಕ್ಕೆ ಹೆಚ್ಚಾಗ್ತಿದೆ ಸಾವು..!
ಶೌಚಾಲಯದಲ್ಲಿ ಹೃದಯ ಸಮಸ್ಯೆ ಎದುರಾದಾಗ ಏನು ಮಾಡಬೇಕು?:
ನೀವು ಶೌಚಾಲಯದಲ್ಲಿರುವಾಗ ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ನೀವು ಮುಜುಗರ ಅನುಭವಿಸಿದರೂ ಸಹಾಯ ಪಡೆಯುವುದು ಮುಖ್ಯ. ಆ ವೇಳೆ ಎದೆ ನೋವು, ಉಸಿರಾಟದ ತೊಂದರೆ (Breathlessness) ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ (Nausea and vomiting), ಪ್ರಜ್ಞೆ ತಪ್ಪಿದ ಭಾವನೆ ಇದ್ದಕ್ಕಿದ್ದಂತೆ ಅನುಭವಿಸಿದರೆ ಬೇರೆಯವರ ನೆರವು ಪಡೆಯಲು ಹಿಂಜರಿಯಬೇಡಿ. ಹೆಲ್ತ್‌ಲೈನ್ ಪ್ರಕಾರ ಹೃದಯರಕ್ತನಾಳದ ಕಾಯಿಲೆ ಇರುವವರು ಶೌಚಾಲಯವನ್ನು ಬಳಸುವಾಗ ಈ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಉದ್ಯೋಗಸ್ಥರು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್
1. ನಿಮ್ಮ ಎದೆಯ ಮೇಲೆ ಬಿಸಿ ನೀರಿನಲ್ಲಿ ಮುಳುಗಬೇಡಿ
2. ನೀವು ಸ್ನಾನ ಮಾಡುವಾಗ ಅಥವಾ ಮಲವಿಸರ್ಜನೆ ಮಾಡುವಾಗ ಟೈಮರ್ ಅಥವಾ ಅಲಾರಂ ಇಡಿ
3. ವಿಶ್ರಾಂತಿ ಔಷಧವನ್ನು ತೆಗೆದುಕೊಂಡ ನಂತರ ಬಿಸಿ ಶವರ್ ಎಂದಿಗೂ ತೆಗೆದುಕೊಳ್ಳಬೇಡಿ
4. ತುರ್ತು ಸಂದರ್ಭದಲ್ಲಿ ನಿಮ್ಮ ಫೋನ್ ಯಾವಾಗಲೂ ಒಂದು ತೋಳಿನ ಅಂತರದಲ್ಲಿ ಇರಿಸಿ