Health Problems: ಭಾರತದಲ್ಲಿ ಈ ಕಾರಣಕ್ಕೆ ಹೆಚ್ಚಾಗ್ತಿದೆ ಸಾವು..!

By Suvarna NewsFirst Published Sep 28, 2022, 10:51 AM IST
Highlights

ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಸಾಂಕ್ರಾಮಿಕವಲ್ಲದ ರೋಗದಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಹೌದು, ಸಾಂಕ್ರಾಮಿಕವಲ್ಲದ ರೋಗಕ್ಕೆ ಶೇಕಡಾ 66ರಷ್ಟು ಮಂದಿ ಬಲಿಯಾಗ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರವೆಂದ್ರೆ ನೀವು ನಂಬ್ಲೇಬೇಕು.
 

ಸಾಂಕ್ರಾಮಿಕ ರೋಗ ಎಂದಾಗ ತಕ್ಷಣ ನೆನಪಾಗೋದು ಕೊರೊನಾ. ಕೊರೊನಾದಿಂದ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ಆಪ್ತರನ್ನು ಕಳೆದುಕೊಳ್ಳಲು ಕಾರಣವೆಂದು ಅನೇಕರು ನಂಬಿದ್ದಾರೆ. ಆದ್ರೆ ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕಿಂತ ಸಾಂಕ್ರಾಮಿಕವಲ್ಲದ ರೋಗ ಹೆಚ್ಚು ಗಂಭೀರ ಸಮಸ್ಯೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಡಬ್ಲ್ಯುಎಚ್‌ಒ ಪ್ರಕಾರ ಭಾರತದಲ್ಲಿ ಶೇಕಡಾ 66ರಷ್ಟು ಸಾವು ಸಾಂಕ್ರಾಮಿಕವಲ್ಲದ ಖಾಯಿಲೆಯಿಂದ ಬರುತ್ತದೆಯಂತೆ. ಕೆಟ್ಟ ಜೀವನ ಶೈಲಿಯೇ ಅನೇಕ ಖಾಯಿಲೆ, ಸಾವಿಗೆ ಕಾರಣವೆಂದು ಹೇಳಲಾಗ್ತಿದೆ. ಜೀವನ ಶೈಲಿ ಬದಲಿಸಿದ್ರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. 

ಸಾಂಕ್ರಾಮಿಕವಲ್ಲದ ರೋಗ (Non Communicable) ದಲ್ಲಿ ಮಧುಮೇಹ,ಹೃದಯರೋಗ, ಉಸಿರಾಟದ ಸಮಸ್ಯೆ,ಕ್ಯಾನ್ಸರ್  (Cancer ) ಇತ್ಯಾದಿ ಸೇರಿದೆ. ಡಬ್ಲ್ಯುಎಚ್‌ಒ ವರದಿ ಪ್ರಕಾರ, ಭಾರತದಲ್ಲಿ ಅಕಾಲಿಕ ಮರಣದ ಅಪಾಯ ಶೇಕಡಾ 22 ರಷ್ಟು ಹೆಚ್ಚಿದೆ. ಮಧುಮೇಹ, ಹೃದಯ ರೋಗ, ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ನಿಂದ ಶೇಕಡಾ 22ರಷ್ಟು ಮಂದಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ 30 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇಕಡಾ 22ರಷ್ಟು ಜನರು 70 ವರ್ಷಕ್ಕಿಂತ ಮೊದಲೇ ಸಾವನ್ನಪ್ಪುತ್ತಾರೆ. ವಿಶ್ವದಲ್ಲಿ ಇದು ಶೇಕಡಾ 18ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.  

ಹೃದಯ (Heart) ರೋಗದಿಂದ ಮರಣ ಹೊಂದುತ್ತಾರೆ ಇಷ್ಟು ಮಂದಿ : ಭಾರತದಲ್ಲಿ ಶೇಕಡಾ 28ರಷ್ಟು ಸಾವು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಹೃದಯ ಕಾಯಿಲೆ ಸೇರಿದೆ. 30ರಿಂದ 79 ವರ್ಷ ವಯಸ್ಸಿನ ಶೇಕಡಾ 31  ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದ್ರೆ ಇದ್ರಲ್ಲಿ ಶೇಕಡಾ 63ರಷ್ಟು ಮಂದಿ ಯಾವುದೇ ಚಿಕಿತ್ಸೆ ಪಡೆಯುವುದಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. 

ಉಸಿರಾಟ ಖಾಯಿಲೆಯಿಂದ ಇಷ್ಟೊಂದು ಸಾವು : ಹೃದಯ ಖಾಯಿಲೆಯಿಂದ ಮಾತ್ರವಲ್ಲ ಭಾರತದಲ್ಲಿ ಉಸಿರಾಟ ಖಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆಯೂ ಹೆಚ್ಚಿದೆ. ಶೇಕಡಾ 12ರಷ್ಟು ಮಂದಿ ಈ ಖಾಯಿಲೆಯಿಂದ ಬಳಲುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಭಾರತದಲ್ಲಿ ಪ್ರತಿ 100,000 ಜನಸಂಖ್ಯೆಗೆ 113 ಜನರು ಸಿಆರ್ ಡಿಯಿಂದ ಸಾವನ್ನಪ್ಪುತ್ತಾರೆ. 

ಕ್ಯಾನ್ಸರ್ ನಿಂದ ಇಷ್ಟು ಸಾವು : ಭಾರತದಲ್ಲಿ ಶೇಕಡಾ 10ರಷ್ಟು ಮಂದಿ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಾರೆ. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಿದ್ದರೆ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಿದೆ. 

Weight Loss Tips: ಎಷ್ಟೇ ಡಯಟ್ ಮಾಡಿದ್ರೂ ಸಣ್ಣ ಆಗ್ತಿಲ್ವಾ ? ಈ ತಪ್ಪು ಮಾಡಬೇಡಿ.

ಹೆಚ್ಚಾಗ್ತಿದೆ ತಂಬಾಕು ಸೇವನೆ : ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ತಂಬಾಕು ಸೇವನೆಯಿಂದ 80 ಲಕ್ಷ ಮಂದಿ ಪ್ರಾಣ ಬಿಡ್ತಿದ್ದಾರೆ. ಅದ್ರಲ್ಲಿ ಒಂದು ಮಿಲಿಯನ್ ಜನರು ಧೂಮಪಾನ ಮಾಡದೆ ಸಾವನ್ನಪ್ಪುತ್ತಿದ್ದಾರೆ. ಅಂದ್ರೆ ಧೂಮಪಾನಿಗಳ ಹೊಗೆ ತೆಗೆದುಕೊಳ್ಳು ಅವರು ಮರಣ ಹೊಂದುತ್ತಿದ್ದಾರೆ. 

ಕಳಪೆ ಆಹಾರವೇ ಸಾವಿಗೆ ಕಾರಣ : ಕಳಪೆ ಆಹಾರದಿಂದ ಭಾರತದಲ್ಲಿ ವರ್ಷಕ್ಕೆ 8 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ಕಡಿಮೆ ಆಹಾರ ಸೇವನೆ, ಮಿತಿ ಮೀರಿದ ಆಹಾರ ಸೇವನೆ ಹಾಗೂ ಅನಾರೋಗ್ಯಕರ ಆಹಾರ ಸೇವನೆಯಿಂದ ಜನರು ಖಾಯಿಲೆಗೆ ತುತ್ತಾಗ್ತಿದ್ದಾರೆ. ಇದು ಅವರನ್ನು ಸಾವಿನ ಮನೆಗೆ ತಂದು ನಿಲ್ಲಿಸುತ್ತಿದೆ.  ಸರಿಯಾದ ಜೀವನ ಶೈಲಿ, ಸೂಕ್ತ ಸಮಯದಲ್ಲಿ ಆಹಾರ ಸೇವನೆ, ಸ್ಥೂಲಕಾಯದಿಂದ ದೇಹವನ್ನು ರಕ್ಷಿಸಿಕೊಂಡ್ರೆ ಇನ್ನೊಂದಿಷ್ಟು ವರ್ಷ ಆರಾಮವಾಗಿ ಬದುಕಬಹುದು.

WEIGHT LOSS TIPS: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ

ಮಧುಮೇಹದಿಂದಲೂ ಸಂಭವಿಸುತ್ತೆ ಸಾವು : ಭಾರತದಲ್ಲಿ ಮಧುಮೇಹಿಗಳ ಸಂಖ್ಯೆಯೂ ಹೆಚ್ಚಿದೆ. ಶೇಕಡಾ 28ರಷ್ಟು ಮಂದಿಯಲ್ಲಿ ಒಬ್ಬರು ಮಧುಮೇಹದಿಂದ ಸಾವನ್ನಪ್ಪುತ್ತಿದ್ದಾರೆ.
 

click me!