Travel Sickness: ಭಯ ಬಿಟ್ಹಾಕಿ, ಈ ಸಿಂಪಲ್ ಟಿಪ್ಸ್ ಮಾಡುತ್ತೆ ನಿಮ್ಮನ್ನು ರಿಲ್ಯಾಕ್ಸ್

Published : Aug 25, 2025, 05:11 PM IST
Car Vomiting

ಸಾರಾಂಶ

ಪ್ರಯಾಣದಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ ಸಾಮಾನ್ಯ ಸಮಸ್ಯೆ. ಕಣ್ಣು ಮತ್ತು ಮೆದುಳಿನ ಚಲನೆಯ ಗ್ರಹಿಕೆಯಲ್ಲಿನ ವ್ಯತ್ಯಾಸ ಇದಕ್ಕೆ ಕಾರಣ. ಲಿಂಬೆಹಣ್ಣು, ಚಾಕಲೇಟ್, ಮಿತ ಆಹಾರ ಸೇವನೆ ಪರಿಹಾರ.

 ಸಾಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಕೆಲವರು ವಾಂತಿ, ತಲೆಸುತ್ತುವಿಕೆಯಿಂದ ಬಳಲುತ್ತಿರುತ್ತೇವೆ     ನಾವು ನಮ್ಮ ಕಣ್ಣಿನಲ್ಲಿ ನೋಡುವ ಚಲನೆಗೂ ಮತ್ತು ನಮ್ಮ ಮೆದುಳಿನಲ್ಲಿ ಅರ್ಥವಾಗುವ ಚಲನೆಗೆ ಹೊಂದಾಣಿಕೆ ಆಗದಿದ್ದಾಗ ಉಂಟಾಗುವ ಸಮಸ್ಯೆ ಪ್ರಯಾಣದ ವಾಂತಿ(Vomiting). ಈ ಸಮಸ್ಯೆ ರಸ್ತೆಯಲ್ಲಿ ಸಂಚರಿಸುವಾಗ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಮತ್ತು ನೀರಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಈ ಸಮಸ್ಯೆ ಕೆಲವು ವರ್ಷಗಳವರೆಗೆ ಮಾತ್ರ ಇದ್ದರೆ ಇನ್ನು ಹಲವರಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿ ಪ್ರಯಾಣವನ್ನು ಇಷ್ಟಪಡದ ಧೋರಣೆ ಬರುವುದುಂಟು, ಇದರ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಇರಬೇಕೆಂದಿಲ್ಲ ಹಲವರಲ್ಲಿಆಕಳಿಸುವಿಕೆ, ಕೆಲವರಲ್ಲಿ ವಾಂತಿ ತಲೆ ಸುತ್ತುವಿಕೆ ವಿಪರೀತವಾಗಿರಲು ಸಾಧ್ಯತೆ ಇದೆ.

ಕಾರಣವೇನು? 
ನಮ್ಮ ಕಿವಿಯಲ್ಲಿ ಒಂದು ನರ ವ್ಯವಸ್ಥೆ ಇದ್ದು, ನಮ್ಮ ಶರೀರದ ಚಲನೆ ಸಮತೋಲನವನ್ನು ಅರ್ಥೈಸಿಕೊಂಡು ಮೆದುಳಿಗೆ ಸಂದೇಶ ರವಾನೆ ಮಾಡುವ ವಿಶೇಷ ಕಾರ್ಯವನ್ನ ನಿರಂತರವಾಗಿ ನಡೆಸುತ್ತಿರುತ್ತವೆ. ಕಣ್ಣಿನ ನರಗಳಿಂದ ಗ್ರಹಿಕೆಯಾದ ಚಲನೆ ಸಂದೇಶ ಒಂದು ನರ ವ್ಯವಸ್ಥೆ ಮುಖಾಂತರ ಮೆದುಳಿನ ಒಂದು ನಿರ್ದಿಷ್ಟ ಭಾಗಕ್ಕೆ ರವಾನೆ ಆಗುತ್ತದೆ. ಕೆಲವು ಬಾರಿ ಕಣ್ಣಿನಿಂದ ಅರ್ಥೈಸಿಕೊಂಡು ಚಲನೆಗೂ ಮೆದುಳಿನಲ್ಲಿ ರವಾನಿಯಾದ ಚಲನೆಗೂ ಪರಸ್ಪರ ವಿರೋಧ ವ್ಯಕ್ತವಾಗುತ್ತಿದೆ ಅಂದಾಗ ಆಗ ಮೆದುಳಿನಲ್ಲಿ ಬೇರೆ ಬೇರೆ ರೀತಿಯ ದ್ರವಗಳು ಉತ್ಪತ್ತಿಯಾಗಿ ಮೆದುಳನ್ನು ಜಾಗೃತಗೊಳಿಸುತ್ತವೆ. ದೇಹದ ರಕ್ಷಣೆಗೆಂದು ಮೆದುಳಿನ ಕೆಲವು ಕೇಂದ್ರಗಳಿಂದ ಜಠರಕ್ಕೆ ಸಂದೇಶ ರವಾನೆಯಾಗಿ ವಾಕರಿಕೆ ವಾಂತಿ     (Vomiting) ಅಂತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಪ್ರಯಾಣದ ವಾಂತಿಯಲ್ಲಿ ಇದೇ ನಿಯಮ ಅನ್ವಯವಾಗುತ್ತದೆ. ನಾವು ವಾಹನಗಳಲ್ಲಿ ಪ್ರಯಾಣಿಸುತ್ತಿರುವಾಗ ನಮ್ಮ ಕಣ್ಣುಗಳು ಚಲನೆಯನ್ನು ಗುರುತಿಸದೆ ತಪ್ಪು ಸಂದೇಶವನ್ನು ರವಾನಿಸುತ್ತವೆ ಯಾಕೆಂದರೆ ವಾಹನದೊಳಗೆ ಯಾವುದೇ ಚಲನೆ ಇಲ್ಲದ ಕಾರಣ ಗಳು ಚಲನೆಯ ಸಂದೇಶವನ್ನು ರವಾನಿಸುವುದಿಲ್ಲ ಆದರೆ ನಮ್ಮ ಒಳ ಕಿವಿಯಲ್ಲಿರುವ ವೆಸ್ಟಿಬುಲರ್(Vestibular) ವ್ಯವಸ್ಥೆ ಚಲನೆಯನ್ನ ಗುರುತಿಸಿ ಮೆದುಳನ್ನ ತದ್ವಿರುದ್ಧ ಸಂದೇಶಗಳಿಗಿಂತ ಸಂಕಷ್ಟಕ್ಕೆ ಸುಲುಪಿಸುತ್ತದೆ ಇದರಿಂದ ಮೆದುಳು ಜಾಗೃತಗೊಂಡು ಕರುಳಿನ ನರಗಳಿಗೆ ಸಂದೇಶ ರವಾನಿಸಿ ವಾಕರಿಕೆ ವಾಂತಿ(Vomiting) ಯನ್ನು ಉಂಟುಮಾಡುತ್ತದೆ. ಜಾಸ್ತಿ ತಿರುವುಗಳಿಂದ ರಸ್ತೆ ಗುಡ್ಡ ಪರ್ವತ ಪ್ರದೇಶಗಳಲ್ಲಿ ವಾಹನ ಸಂಚಾರದಲ್ಲಿ ವೆಸ್ಟಿಬುಲರ್ ವ್ಯವಸ್ಥೆ ನಮ್ಮ ದೃಷ್ಟಿ ವಾಹನದೊಳಗೆ ಇದ್ದಲ್ಲಿ ಅಥವಾ ಕೆಳಗೆ ನೋಡುತ್ತಿದ್ದರೆ ವಾಕರಿಕೆ ವಾಂತಿ ಜಾಸ್ತಿ. ಆದ್ದರಿಂದ ದೃಷ್ಟಿ ಬೆರೆಡೆಗೆ ಗಮನ ಹರಿಸಿದರೆ ಪ್ರಯಾಣದ ವಾಂತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು

ಪರಿಹಾರೋಪಾಯಗಳೇನು? 
ಪ್ರಯಾಣ ಮಾಡುವಾಗ ವಾಕರಿಕೆ ಬರುವವರು ಬಾಯಲ್ಲಿ ಯಾವುದಾದರೂ ಚಾಕಲೇಟನ್ನು ಚೀಪುತ್ತಾ ಇದ್ದಲ್ಲಿ ಸಮಸ್ಯೆಯ ತೀವ್ರತೆ ಕಡಿಮೆಯಾಗುತ್ತದೆ.ಹವ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣ ಮಾಡುವಾಗ ಕಿಟಕಿಗಳಲ್ಲಿ ಸ್ವಲ್ಪ ಮಟ್ಟಿಗೆ ತೆರೆದರೆ ವಾಕರಿಕೆ ಕಡಿಮೆ ಆಗುತ್ತದೆ. ಆದರೆ ಹೊರಗೆ ಗಾಳಿ ಧೂಳು ಬಂದಲ್ಲಿ ವಾಕರಿಕೆ ಜಾಸ್ತಿ ಆಗುವ ಸಾಧ್ಯತೆ ಇದೆ. ಈ ಕಾಯಿಲೆಯ ತೀವ್ರತೆ ಜಾಸ್ತಿ ಇರುವವರು ಪ್ರಯಾಣದ ಸಮಯದಲ್ಲಿ ನಿದ್ರಿಸಿದಲ್ಲಿ ,ಹೆಚ್ಚಾಗಿ ರಾತ್ರಿ ಸಮಯದಲ್ಲಿ ವಾಕರಿಕೆ ವಾಂತಿ(Vomiting) ಯನ್ನು ತಡೆಯಬಹುದಾಗಿದೆ.

ಪ್ರಯಾಣದ ಮೊದಲು ಮಿತಿಯಲ್ಲಿ ಆಹಾರ ಸೇವನೆಯನ್ನು ಮಾಡುವುದು ಉತ್ತಮ ಜೊತೆಗೆ ಕಾರವುಳ್ಳ ಆಹಾರ ಸೇವನೆ ಹಾಗೂ ಹೆಚ್ಚು ಎಣ್ಣೆಯುಕ್ತ ಆಹಾರಗಳಿಂದಲೂ ಪ್ರಯಾಣ ಸಮಯದಲ್ಲಿ ವಾಂತಿಗೆ (Vomiting) ಕಾರಣವಾಗಬಹುದು. ಲಿಂಬೆ ಹಣ್ಣನ ಕೈಯಲ್ಲಿ ಹಿಡಿದುಕೊಂಡು ಅದರ ವಾಸನೆಯನ್ನು ಹೀರುವುದರಿಂದ ವಾಂತಿಯ ಸಂದರ್ಭಗಳಲ್ಲಿ ತಪ್ಪಿಸಬಹುದು. ಜೊತೆಗೆ ಹುಳಿ ಇರುವಂತಹ ಚಾಕಲೇಟ್‌ಗಳನ್ನ ಸಹ ಸೇವಿಸುವುದರಿಂದ ಪ್ರಯಾಣ ಸಮಯದಲ್ಲಿ ಪ್ರಯಾಣ ವಾಂತಿಯನ್ನ ತಡೆಗಟ್ಟಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿಯೇ ಕಿವಿ ನೋವು, ತುರಿಕೆ, ಸೋಂಕಿನ ಸಮಸ್ಯೆ ಕಾಡುವುದೇಕೆ.. ಈ ಸಮಯದಲ್ಲಿ ನಾವೇನು ಮಾಡಬೇಕು?
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?