ಡೆಂಗ್ಯೂ ಅಪಾಯಕಾರಿ ರೋಗಗಳಲ್ಲಿ ಒಂದು. ಜೀವ ತೆಗೆಯಬಲ್ಲ ಶಕ್ತಿ ಹೊಂದಿರುವ ಡೆಂಗ್ಯೂ, ರೋಗಿಗಳ ದೇಹವನ್ನು ಕುಗ್ಗಿಸುತ್ತದೆ. ಅದ್ರಿಂದ ಚೇತರಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಡೆಂಗ್ಯೂ ರೋಗಿ ಬೇಗ ಮೊದಲಿನಂತಾಗಬೇಕೆಂದ್ರೆ ಆಹಾರದಲ್ಲಿ ಬದಲಾವಣೆ ಮಾಡಬೇಕು.
ಚಳಿಗಾಲ ಶುರುವಾಗ್ಬೇಕಿತ್ತು. ಆದ್ರೆ ಇನ್ನೂ ಮಳೆ ಬರ್ತಿದೆ. ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಇದ್ರಿಂದಾಗಿ ಎಲ್ಲರ ಆರೋಗ್ಯ ಹಾಳಾಗ್ತಿದೆ. ಹವಾಮಾನದಲ್ಲಾಗ್ತಿರುವ ಬದಲಾವಣೆಯಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗ್ತಿವೆ. ಡೆಂಗ್ಯೂ ಬಂದವರು ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದ್ರೆ ಅದ್ರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ದೇಹ ಶಕ್ತಿ ಕಳೆದುಕೊಳ್ಳುತ್ತದೆ. ಆಯಾಸ ರೋಗಿಗಳನ್ನು ಕಾಡುತ್ತದೆ. ಡೆಂಗ್ಯೂ ಸಮಯದಲ್ಲಿ ದೇಹ ದುರ್ಬಲಗೊಳ್ಳುತ್ತದೆ. ಇದ್ರಿಂದ ಆಹಾರ ಒಳಗೆ ಹೋಗುವುದಿಲ್ಲ. ಆಹಾರ ದೇಹ ಸೇರದೆ ಹೋದ್ರೆ ಪೋಷಕಾಂಶಗಳ ಕೊರತೆ ಕಾಡುವುದು ಸಾಮಾನ್ಯ. ಡೆಂಗ್ಯೂದಿಂದ ಚೇತರಿಸಿಕೊಳ್ಳುತ್ತಿರುವವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಡೆಂಗ್ಯೂ ರೋಗಿಗಳ ಡಯೆಟ್ ಹೇಗಿರಬೇಕೆಂದು ನಾವು ಹೇಳ್ತೇವೆ.
ಡೆಂಗ್ಯೂ (Dengue) ರೋಗದಿಂದ ಚೇತರಿಸಿಕೊಳ್ತಿರುವವರು ಈ ಆಹಾರ (Food ) ಸೇವನೆ ಮಾಡಿ :
ಆಹಾರದಲ್ಲಿರಲಿ ದ್ರವ ಪದಾರ್ಥ : ದೇಹ ನಿರ್ಜಲೀಕರಣ (Dehydration) ಗೊಳ್ಳಬಾರದು. ದೇಹಕ್ಕೆ ಸಾಕಷ್ಟು ದ್ರವ ಆಹಾರ ಸೇರ್ತಿರಬೇಕು. ಹಾಗಾಗಿ ನೀವು ದ್ರವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಿರಬೇಕು. ಡೆಂಗ್ಯೂ ರೋಗ (Disease) ದಿಂದ ಗುಣಮುಖವಾಗ್ತಿರುವವರು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯಬೇಕು. ನೀರಿನ ಜೊತೆ ನೀವು ಕಷಾಯ, ಗಿಡಮೂಲಿಕೆ ಚಹಾ ಮತ್ತು ಸೂಪ್ ಸೇವನೆ ಮಾಡಿದ್ರೆ ಒಳ್ಳೆಯದು. ಇದು ನಿಮ್ಮ ರೋಗನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸುತ್ತದೆ. ದೇಹವನ್ನು ಹೈಡ್ರೀಕರಿಸುತ್ತದೆ. ಅಲ್ಲದೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಡೆಂಗ್ಯೂ ಚಿಕಿತ್ಸೆ ನಂತರ ಪ್ಲೇಟ್ಲೆಟ್ ಗಳನ್ನು ಹೆಚ್ಚಿಸಲು ಹೈಡ್ರೇಷನ್ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ.
ಡಯೆಟ್ ನಲ್ಲಿರಲಿ ಮಸಾಲೆ : ಆಹಾರದಲ್ಲಿ ಬಳಸುವ ಮಸಾಲೆಗಳು ಔಷಧಿ ರೂಪದಲ್ಲಿ ಕೆಲಸ ಮಾಡ್ತವೆ ಎಂಬುದು ಬಹುತೇಕರಿಗೆ ತಿಳಿದಿದೆ. ಇದು ಚೇತರಿಸಿಕೊಳ್ಳಲ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತವೆ. ಅರಿಶಿನ, ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ದಾಲ್ಚಿನ್ನಿ, ಏಲಕ್ಕಿ ಮತ್ತು ಜಾಯಿಕಾಯಿಯಂತಹ ಮಸಾಲೆಗಳು ದೇಹವನ್ನು ಆರೋಗ್ಯಕರವಾಗಿಡಲು ನೆರವಾಗುತ್ತವೆ. ಇವುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅನೇಕ ಮಸಾಲೆ ಪದಾರ್ಥಗಳು ಬ್ಯಾಕ್ಟೀರಿಯಾ ವಿರೋಧಿ, ಆಂಟಿಫಂಗಲ್, ಆಂಟಿಮೈಕ್ರೊಬಿಯಲ್ ,ಆಂಟಿವೈರಲ್ ಮತ್ತು ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಡೆಂಗ್ಯೂನಿಂದ ಚೇತರಿಸಿಕೊಳ್ಳಲು ಈ ಮಸಾಲೆಗಳನ್ನು ಕಷಾಯ ಅಥವಾ ಆಹಾರದ ರೂಪದಲ್ಲಿ ನೀವು ಸೇವಿಸಬೇಕಾಗುತ್ತದೆ.
ಟೆನ್ಶನ್ ಮಾಡ್ಕೋಬೇಡಿ, ತಲೆಯೊಳಗಿಂದ ಸೌಂಡ್ ಕೇಳ್ಸುತ್ತೆ ಹುಷಾರ್ !
ಆಹಾರದಲ್ಲಿರಲಿ ಪ್ರೋಬಾಯೋಟ್ರಿಕ್ಸ್ : ಡೆಂಗ್ಯೂನಿಂದ ಬೇಗ ಚೇತರಿಸಿಕೊಳ್ಳಬೇಕು ಎನ್ನುವವರು ಪ್ರೊಬಯೋಟಿಕ್ಸ್ ಇರುವ ಆಹಾರವನ್ನು ತೆಗೆದುಕೊಳ್ಳಬೇಕು. ಪ್ರೊಬಯೋಟಿಕ್ಸ್ ಉತ್ತಮ ಬ್ಯಾಕ್ಟೀರಿಯಾದ ಉತ್ತಮ ಮೂಲವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಳೆಹಣ್ಣು, ಸೋಯಾಬೀನ್ಸ್, ಬೆಳ್ಳುಳ್ಳಿ, ಈರುಳ್ಳಿ ಹಾಗೂ ಧಾನ್ಯಗಳಲ್ಲಿ ನೀವು ಪ್ರೊಬಯೋಟಿಕ್ಸ್ ನೋಡಬಹುದು. ಡೆಂಗ್ಯೂನಿಂದ ದೇಹ ದುರ್ಬಲವಾಗಿದೆ, ಹಾಸಿಗೆಯಿಂದ ಎದ್ದೇಳುವುದು ಕಷ್ಟ ಎನ್ನುವವರು ಈ ಆಹಾರಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರಯತ್ನಿಸಬೇಕು.
ಹೃದ್ರೋಗಿ ಮೊಟ್ಟೆ ತಿನ್ನೋದು ಒಳ್ಳೇದೋ, ಅಲ್ವೋ?
ದೇಹಕ್ಕೆ ಬೇಕು ವಿಟಮಿನ್ಸ್-ಆಂಟಿಆಕ್ಸಿಡೆಂಟ್ : ಡೆಂಗ್ಯೂ ಕಾಡಿದ ಸಮಯದಲ್ಲಿ ದೇಹದ ಸೂಕ್ಷ್ಮ ಪೋಷಕಾಂಶಗಳು ಗಮನಾರ್ಹವಾಗಿ ಕಡಿಮೆಯಾಗಿರುತ್ತವೆ. ಹಾಗಾಗಿ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರವನ್ನು ಡೆಂಗ್ಯೂ ರೋಗದಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿ ಸೇವಿಸಬೇಕು. ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಋತು ಹಣ್ಣುಗಳನ್ನು ಸೇರಿಸಿದ್ರೆ ಬೇಗ ಫಲಿತಾಂಶ ನೋಡಬಹುದು. ಸೇಬು ಹಣ್ಣು, ದಾಳಿಂಬೆ ಹಣ್ಣು ಮತ್ತು ಪಪ್ಪಾಯಿಯಂತಹ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು. ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಹಾಗೆ ಫೈಬರ್ ನೀಡುವ ಹಣ್ಣುಗಳನ್ನು ಹಾಗೂ ಆಹಾರವನ್ನು ತಿನ್ನುವುದು ಒಳ್ಳೆಯದು. ಇವುಗಳ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಶೀರ್ಘದಲ್ಲಿಯೇ ನೀವು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.