ಭಾರತದಲ್ಲಿ ಅತಿ ಜನಪ್ರಿಯ ಈ ಪಾನೀಯ: 2ನೇ ಅತ್ಯುತ್ತಮ ನಾನ್ ಆಲ್ಕೋಹಾಲಿಕ್ ಡ್ರಿಂಕ್ ಗರಿ

By Suvarna News  |  First Published Jan 23, 2024, 5:44 PM IST

ಭಾರತದ ಮಸಾಲೆ ಚಹಾಕ್ಕೆ 2023ನೇ ಸಾಲಿನ ನಾನ್ ಆಲ್ಕೋಹಾಲಿಕ್ ಡ್ರಿಂಕ್ ಗಳ ಪೈಕಿ ಜಾಗತಿಕವಾಗಿ 2ನೇ ಅತ್ಯುತ್ತಮ ಪಾನೀಯ ಎನ್ನುವ ಮನ್ನಣೆ ದೊರೆತಿದೆ. ಚಹಾ ಪ್ರಿಯರಿಗೆ ಇದೊಂದು ಹೆಮ್ಮೆಯ ಹಾಗೂ ಸಂತಸದ ಸಂಗತಿ. 
 


ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ಚಹಾ ಕುಡಿಯದಿದ್ದರೆ ದಿನ ಫ್ರೆಶ್ ಆಗಿ ಶುರುವಾದಂತೆ ಅನಿಸುವುದಿಲ್ಲ ಎನ್ನುವುದು ಬಹಳಷ್ಟು ಜನರ ಅನುಭವ. ಬೆಳಗ್ಗೆ ಎದ್ದಾಕ್ಷಣ ಅವರಿಗೆ ಟೀ ಬೇಕೇ ಬೇಕು. ಇಲ್ಲವಾದಲ್ಲಿ ತಲೆನೋವೋ ಏನೋ ಒಂದು ಗಂಟುಬಿದ್ದಂತಾಗುತ್ತದೆ. ಇನ್ನು, ಕೆಲವರು ಬೆಳಗ್ಗೆಯ ತಿಂಡಿಯನ್ನಾದರೂ ಸ್ಕಿಪ್ ಮಾಡುತ್ತಾರೆ, ಚಹಾವನ್ನು ಮಾತ್ರ ಸ್ಕಿಪ್ ಮಾಡುವುದಿಲ್ಲ. ಜಗತ್ತಿನಲ್ಲಿ ಕಾಫಿ ಪ್ರಿಯರು ಎಷ್ಟಿದ್ದಾರೆಯೋ ಅದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಚಹಾ ಪ್ರಿಯರಿದ್ದಾರೆ. ಜಾಗತಿಕ ಮಟ್ಟದಲ್ಲಿ ಚಹಾವನ್ನು ಅತ್ಯಧಿಕ ಜನ ಸೇವಿಸುತ್ತಾರೆ. ಚಹಾಕ್ಕೆ ಅವರ ಹೃದಯದಲ್ಲಿ ಅಗ್ರಸ್ಥಾನ. ಎಲ್ಲರೂ ತಮ್ಮ ತಮ್ಮ ಚಹಾ ಸವಿಯುವಾಗ ತಮ್ಮದೇ ಟೇಸ್ಟ್ ಇರಲಿ ಎಂದು ಬಯಸುತ್ತಾರೆ. ಕೆಲವರು ಸ್ಟ್ರಾಂಗ್ ಕುಡಿಯಬಹುದು, ಕೆಲವರು ಹದವಾದ ಸ್ವಾದ ಬಯಸಬಹುದು. ಕೆಲವರು ಚಹಾಕ್ಕೆ ಹೆಚ್ಚು ಸಕ್ಕರೆ ಹಾಕಿಕೊಂಡರೆ, ಕೆಲವರು ಚಹಾದೊಂದಿಗೆ ಸಕ್ಕರೆ ಬೆರೆಸಿ ಕುಡಿಯುವುದನ್ನು ಇಷ್ಟಪಡುವುದಿಲ್ಲ. ವಿಭಿನ್ನತೆ ಬಹಳಷ್ಟಿದ್ದರೂ ಚಹಾ ಎನ್ನುವುದೊಂದೇ ಭಾವನಾತ್ಮಕವಾಗಿ ಎಲ್ಲರನ್ನೂ ಬೆರೆಯುವ ಅಂಶವಾಗಿದೆ. ಇದೀಗ, ಚಹಾ ಪ್ರಿಯರಿಗೊಂದು ಖುಷಿಯಾದ ಸುದ್ದಿಯಿದೆ. 
2023ನೇ ಸಾಲಿನಲ್ಲಿ ನಾನ್ ಆಲ್ಕೋಹಾಲಿಕ್ ಡ್ರಿಂಕ್ (Non Alcoholic Drink) ಗಳ ಪೈಕಿ ಚಹಾ (Tea) ಜಾಗತಿಕವಾಗಿ (Global) 2ನೇ ಅತ್ಯುತ್ತಮ ಪಾನೀಯ ಎನ್ನುವ ಮನ್ನಣೆ ಗಳಿಸಿಕೊಂಡಿದೆ. ಅದರಲ್ಲೂ ಮಸಾಲೆಭರಿತ (Masala Tea) ಭಾರತದ ಟೀ ಜಾಗತಿಕವಾಗಿ ಹೆಚ್ಚು ಪ್ರಚಾರದಲ್ಲಿದೆ. ಟೇಸ್ಟ್ ಅಟ್ಲಾಸ್ ಎನ್ನುವ ಸಂಸ್ಥೆ, ಈ ವಿಶ್ವಮಟ್ಟದ ರ್ಯಾಂಕಿಂಗ್ (Ranking) ಪ್ರಕಟಿಸುತ್ತದೆ. ಆಹಾರ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿ ಸಂಸ್ಥೆಯಾಗಿರುವ ಟೇಸ್ಟ್ ಅಟ್ಲಾಸ್, ಆಯಾ ದೇಶಗಳ ಸಾಂಪ್ರದಾಯಿಕ (Traditional) ಆಹಾರ, ಸ್ಥಳೀಯ ವೈವಿಧ್ಯತೆ ಹಾಗೂ ಜಗತ್ತಿನಾದ್ಯಂತ ಅತ್ಯುತ್ತಮ ರೆಸ್ಟೋರೆಂಟ್ ಗಳ ಕುರಿತು ಮಾರ್ಗದರ್ಶನ ನೀಡುತ್ತದೆ. 

ಈ ಸಪ್ಲಿಮೆಂಟ್‌ ತಗೊಂಡ್ರೆ ಲ್ಯಾಬ್‌ ಟೆಸ್ಟ್‌ ರಿಸಲ್ಟೇ ತಲೆಕೆಳಗಾಗಿ ಹೋಗುತ್ತೆ ಹುಷಾರ್!

Latest Videos

undefined

ಅಷ್ಟಕ್ಕೂ ಈ ಪಟ್ಟಿಯ ಟಾಪ್ ಸ್ಥಾನ ಪಡೆದಿರುವ ನಾನ್ ಆಲ್ಕೋಹಾಲಿಕ್ ಡ್ರಿಂಕ್ ಯಾವುದು ಎನ್ನುವ ಕುತೂಹಲ ನಿಮಗೂ ಕಾದಿದ್ಯಾ? ಅದು ಮೆಕ್ಸಿಕೋದ ಆಗಸ್ ಫ್ರೆಸ್ಕಾಸ್. ಹಣ್ಣುಗಳು, ಸೌತೆಕಾಯಿ, ಹೂವುಗಳು, ಬೀಜ, ಧಾನ್ಯ, ಸಕ್ಕರೆ ಮತ್ತು ನೀರಿನೊಂದಿಗೆ ತಯಾರಿಸಲಾಗುವ ಪಾನೀಯ ಎಂಬುದಾಗಿ ಇದರ ಬಗ್ಗೆ ವರ್ಣನೆ ದೊರೆಯುತ್ತದೆ. ಈ ಪಾನೀಯದ ಬಗ್ಗೆ ಭಾರತೀಯರಿಗೆ ಗೊತ್ತಿರಲಿಕ್ಕಿಲ್ಲ. ಆದರೆ, ನಮ್ಮ ಮಸಾಲಾ ಚಾಯ್ ಗೆ 2ನೇ ಸ್ಥಾನ ಲಭಿಸಿದೆ ಎಂದರೆ ಅದೊಂದು ಹೆಮ್ಮೆಯ ಸಂಗತಿ. ಭಾರತದಲ್ಲಿ ಮಸಾಲೆ ಟೀಗೆ ಭಾರೀ ಬೇಡಿಕೆಯಿದೆ. ಲವಂಗ, ಕಪ್ಪು ಮೆಣಸು, ಶುಂಠಿ, ಏಲಕ್ಕಿ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಮಸಾಲೆ ಟೀ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ (Foreign) ಜನಪ್ರಿಯ. ಎಲ್ಲ ಋತುಮಾನಗಳಲ್ಲೂ ಇದನ್ನು ಸವಿಯಬಹುದಾದರೂ, ಮಳೆಗಾಲ, ಚಳಿಗಾಲ (Winter) ಹೆಚ್ಚು ಆಪ್ತವೆನಿಸುತ್ತದೆ. ಹಲವು ರೀತಿಯಲ್ಲಿ ಇದು ಆರೋಗ್ಯಕ್ಕೂ ಅನುಕೂಲವಾಗಿದೆ.

ಭಾರತದ ಟೀ ಹದ ವಿಶಿಷ್ಟ
ಟೀಗೆ ಹಾಲು (Milk) ಸೇರಿಸುವುದು ಭಾರತದಲ್ಲಿ ಅತಿ ಸಾಮಾನ್ಯ. ಆದರೆ, ಜಗತ್ತಿನ ಬಹುತೇಕ ಕಡೆ ಈ ಪದ್ಧತಿಯಿಲ್ಲ. ಸಕ್ಕರೆ ಮತ್ತು ಹಾಲಿನೊಂದಿಗೆ ಮಾಡುವ ಚಹಾ ಭಾರತದ ಸ್ಪೆಷಲ್. ಚಹಾದ ಹುಟ್ಟಿನ ಬಗ್ಗೆ ಹಲವು ಕತೆಗಳಿವೆ. ಮೂಲತಃ ಇದು ಚೀನಾದ್ದು. ಆದರೆ, ಮಸಾಲೆ ಬೆರೆಸಿದ ಟೀ ಹದ ಕಂಡುಹಿಡಿದಿದ್ದು ಮಾತ್ರ ಭಾರತೀಯರು. ಇದನ್ನು ಹೆಚ್ಚು ಜನಪ್ರಿಯಗೊಳಿಸಿದ್ದುದು ಬ್ರಿಟಿಷರು. ಚಹಾದೊಂದಿಗೆ ಮಸಾಲೆ ಪದಾರ್ಥಗಳನ್ನು ಸೇರಿಸುವ ಮತ್ತು ಕಪ್ಪು ಚಹಾ (Black Tea) ಸವಿಯುವ ಅಭ್ಯಾಸವನ್ನು ಯುರೋಪ್ ಗೆ ಕರೆದೊಯ್ದವರೂ ಸಹ ಬ್ರಿಟಿಷರು. 19ನೇ ಶತಮಾನದಲ್ಲಿ ಚಹಾ ವ್ಯಾಪಾರದ (Trade) ಮೇಲೆ ಚೀನಾ ಪ್ರಾಬಲ್ಯ ಹೊಂದಿತ್ತು. ಅಲ್ಲಿನ ಮಾರುಕಟ್ಟೆಗೆ ಪರ್ಯಾಯವಾಗಿ ಯುರೋಪ್ ನಲ್ಲಿ ಕಪ್ಪು ಚಹಾಕ್ಕೆ ಬೆಚ್ಚು ಬೇಡಿಕೆ ಸೃಷ್ಟಿಯಾಗುವಂತೆ ಮಾಡಲಾಯಿತು. ಈ ಅವಧಿಯಲ್ಲೇ ಮಸಾಲೆ ಚಹಾವೂ ಪ್ರವರ್ಧಮಾನಕ್ಕೆ ಬಂತು. 

ಮೂಲಂಗಿ ತಿಂದ ಬಳಿಕ ಈ 4 ಆಹಾರ ಸೇವಿಸಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!

ಇಲ್ಲೊಂದು ಕುತೂಹಲಕಾರಿ ಸಂಗತಿ ಇದೆ. ಇಂಡಿಯನ್ ಟೀ ಅಸೋಸಿಯೇಷನ್ 20ನೇ ಶತಮಾನದ ಆರಂಭದಲ್ಲಿ “ಟೀ ಬ್ರೇಕ್’ ಎನ್ನುವ ಪದ ಹಾಗೂ ಪದ್ಧತಿಯನ್ನು ಚಾಲ್ತಿಗೆ ತಂದಿತು. ಇದೂ ಸಹ ಟೀ ಜನಪ್ರಿಯತೆ ಹೆಚ್ಚಲು ಕಾರಣವಾಯಿತು. ಅಲ್ಲದೆ, ಎಲ್ಲರಿಗೂ ದೊರೆಯುವಂತೆ ಟೀ ದರದಲ್ಲೂ ಇಳಿಕೆಯಾಯಿತು.

click me!