ಸೌಂದರ್ಯಕ್ಕೆ ಮಹಿಳೆಯರು ಹೆಚ್ಚು ಮಹತ್ವ ನೀಡ್ತಾರೆ. ಮುಖದ ಮೇಲೆ ಕೂದಲು ಹುಟ್ಟಿಕೊಂಡ್ರೆ ಬ್ಯೂಟಿಪಾರ್ಲರ್ ಗೆ ಹೋಗಿ ಅದನ್ನು ತೆಗೆಸಿಕೊಂಡು ಬರ್ತಾರೆಯೇ ವಿನಃ ಅದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡೋದಿಲ್ಲ.
ನಮ್ಮ ದೇಹಕ್ಕೆ ವಯಸ್ಸಾದಂತೆ ಅದ್ರಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಕಾಣ್ಬಹುದು. ಅದ್ರಲ್ಲೂ ಮಹಿಳೆಯರು ಬಹಳಷ್ಟು ಸವಾಲುಗಳನ್ನು ಎದುರಿಸುತ್ತಾರೆ. ವಯಸ್ಸಿಗೆ ಅನುಗುಣವಾಗಿ ಹಾಗೂ ಹಾರ್ಮೋನ್ ಬದಲಾವಣೆಯಾದಂತೆ ಅಥವಾ ಯಾವುದೋ ಖಾಯಿಲೆಗಳಿಂದ ಶರೀರದಲ್ಲಿ ಹಾಗೂ ಮುಖದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತವೆ. ಇನ್ಕೆಲವರಿಗೆ ವಂಶಪಾರಂಪರ್ಯವಾಗಿಯೂ ಕೆಲವೊಂದು ಖಾಯಿಲೆ ಬಳುವಳಿಯಾಗಿ ಬಂದಿರುತ್ತದೆ.
ಮನುಷ್ಯನೇ ಆಗಲಿ ಅಥವಾ ಪ್ರಾಣಿಯೇ ಆಗಲಿ ಮೈಮೇಲೆ ಕೂದಲು (Hair) ಇರುವುದು ಸರ್ವೇಸಾಮಾನ್ಯ. ಮಹಿಳೆಯರಿಗಿಂತ ಪುರುಷರ ದೇಹ (Body) ದ ಮೇಲೆ ಹೆಚ್ಚು ಕೂದಲನ್ನು ಕಾಣಬಹುದು. ಕೆಲವು ಮಹಿಳೆಯರು ಮುಖದ ಮೇಲೆ ಕೂದಲನ್ನು ಹೊಂದಿರುತ್ತಾರೆ. ಮುಖದ ಮೇಲೆ ಅತಿಯಾಗಿ ಬೆಳೆಯುವ ಕೂದಲು ಅವರಿಗೆ ಹೆಚ್ಚು ಮುಜುಗರವನ್ನುಂಟು ಮಾಡುತ್ತದೆ. ಸೌಂದರ್ಯ (Beauty) ದ ಬಗ್ಗೆ ಹೆಚ್ಚು ಕಾಳಜಿ ಇರುವವರು ಮುಖದ ಮೇಲಿರುವ ಕೂದಲನ್ನು ಆಗಾಗ ತೆಗೆದುಕೊಳ್ಳುತ್ತಾರೆ. ಇದರಿಂದ ಮುಖ ಹಾನಿಗೊಳಗಾಗಬಹುದು ಎನ್ನುವ ಹೆದರಿಕೆಯೂ ಇರುತ್ತದೆ. ಕೇವಲ ಹಾರ್ಮೋನ್ ವ್ಯತ್ಯಾಸದಿಂದಲೋ ಅಥವಾ ಆನುವಂಶೀಯವಾಗಿಯೋ ಮುಖದ ಮೇಲೆ ಕೂದಲು ಬೆಳೆದರೆ ಅದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆದರೆ ಯಾವುದೋ ಒಂದು ಖಾಯಿಲೆಯಿಂದ ಮುಖದ ಮೇಲೆ ಕೂದಲು ಬೆಳೆಯುತ್ತದೆ ಎಂದಾದರೆ ಅದರ ಕಡೆ ಹೆಚ್ಚು ಗಮನ ಹರಿಸಬೇಕು. ಮಹಿಳೆಯರಿಗೆ ಮುಖದ ಮೇಲೆ ಬೆಳೆಯುವ ಕೂದಲು ಮುಖದ ಸೌಂದರ್ಯವನ್ನು ಹಾಳುಮಾಡುವುದಲ್ಲದೇ ಅದು ಖಾಯಿಲೆಯ ಸಂಕೇತವೂ ಆಗಿದೆ.
ತಡವಾಗಿ ಗರ್ಭಧರಿಸೋದರಿಂದ ಸ್ತನ ಕ್ಯಾನ್ಸರ್ ಅಪಾಯವಿದ್ಯಾ?
ಈ ಖಾಯಿಲೆಯಿಂದ ಮುಖದ ಮೇಲೆ ಕೂದಲು ಏಳುತ್ತೆ : ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದ ಮಹಿಳೆಯರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆ, ಕಿರಿಕಿರಿ, ಯಾತನೆ, ಮಾನಸಿಕ ಹಿಂಸೆ ಉಂಟಾಗುತ್ತದೆ. ಮುಖದ ಮೇಲೆ ಹೆಚ್ಚು ಕೂದಲು ಹೊಂದಿರುವ ಮಹಿಳೆಯರ ಸಂಖ್ಯೆ ಬಹಳ ಕಡಿಮೆ. ಗಡ್ಡ, ಮೀಸೆಗಳು ಪುರುಷರಿಗೆ ಕಾಣಿಸುತ್ತವೆ. ಅಪರೂಪಕ್ಕೆ ಕೆಲವು ಮಹಿಳೆಯರಿಗೆ ಪುರುಷರಂತೆ ಗಡ್ಡ ಹಾಗೂ ಕೂದಲಿರುವುದನ್ನು ನೀವು ನೋಡಿರಬಹುದು. ಹೀಗೆ ಮುಖದಲ್ಲಿ ಅತಿಯಾದ ಕೂದಲನ್ನು ಹೊಂದಿರುವ ಮಹಿಳೆಯರಿಗೆ ಹಿರ್ಸುಟಿಸಮ್ ಎಂಬ ಖಾಯಿಲೆ ಇರುತ್ತದೆ.
ಸ್ಟ್ರೋಕ್‌ನಲ್ಲಿ ಅಪಾಯದ ಸೂಚನೆ ಎಂದರೇನು?
ಜಗತ್ತಿನಲ್ಲಿ ಪ್ರತಿಶತ 5 ರಿಂದ 10 ಮಹಿಳೆಯರಲ್ಲಿ ಹಿರ್ಸುಟಿಸಮ್ ಖಾಯಿಲೆ ಕಂಡುಬರುತ್ತದೆ. ಇದು ಕೇವಲ ಮಹಿಳೆಯರ ಮೇಲೆ ಪರಿಣಾಮ ಬೀರುವ ಖಾಯಿಲೆಯಾಗಿದೆ. ಇದರ ಹೊರತಾಗಿ ಪಿಸಿಓಎಸ್, ಕಿಣ್ವದ ಕೊರತೆ, ಹೈಪರ್ಟಿಕೋಸಿಸ್, ಕುಶಿಂಗ್ ಸಿಂಡ್ರೋಮ್ ಮುಂತಾದ ಕಾಯಿಲೆಗಳಿಂದಲೂ ಮುಖದ ಮೇಲೆ ಕೂದಲು ಬೆಳೆಯುತ್ತದೆ. ಹಿರ್ಸುಟಿಸಮ್ ರೋಗವಿರುವವರಿಗೆ ದೇಹದ ಕೆಲವು ಭಾಗ ಹಾಗೂ ಮುಖದ ಮೇಲೆ ಹೆಚ್ಚು ಕೂದಲು ಬೆಳೆಯಲು ಪ್ರಾರಂಭಿಸುತ್ತದೆ. ಈ ರೀತಿಯ ತೊಂದರೆಯನ್ನು ಹೊಂದಿರುವ ಮಹಿಳೆಯರು, ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಸಮಸ್ಯೆ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡಿ ಸಮಯೋಚಿತ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗಿದೆ.
ಕೂದಲನ್ನು ತೆಗೆಯೋದು ಹೇಗೆ? : ಮುಖದ ಮೇಲೆ ಹಾಗೂ ಕುತ್ತಿಗೆಯ ಮೇಲೆ ಇರುವ ಅನವಶ್ಯಕ ಕೂದಲನ್ನು ತೆಗೆಯಲು ಈಗಾಗಲೇ ಅನೇಕ ರೀತಿಯ ಚಿಕಿತ್ಸೆಗಳು ಬಂದಿವೆ. ಇಂತಹ ಅನಗತ್ಯ ಕೂದಲನ್ನು ತೆಗೆದುಹಾಕಲು ಅನೇಕ ಮಂದಿ ಲೇಸರ್ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ. ಇದರ ಹೊರತಾಗಿ ಪ್ಲಕಿಂಗ್, ಶೇವಿಂಗ್, ಥ್ರೆಡಿಂಗ್, ವ್ಯಾಕ್ಸಿಂಗ್, ಹೇರ್ ರಿಮೂವರ್ ಕ್ರೀಮ್ ಮುಂತಾದವುಗಳ ಮೂಲಕವೂ ಶರೀರದ ಅನಗತ್ಯ ಕೂದಲುಗಳನ್ನು ತೆಗೆದುಕೊಳ್ಳುತ್ತಾರೆ.
ಹದಿಹರೆಯದ ಯುವತಿಯರಲ್ಲಿ ಮುಖದ ಮೇಲೆ ಅಥವಾ ಕುತ್ತಿಗೆಯ ಭಾಗದಲ್ಲಿ ಕೂದಲನ್ನು ಹೊಂದಿರುವ ಮಹಿಳೆಯರು ಪಾರ್ಲರ್ ಗಳಿಗೆ ಹೋಗುವ ಮುನ್ನ ಒಮ್ಮೆ ವೈದ್ಯರನ್ನು ಭೇಟಿಯಾಗಿ ಕೂದಲು ಬೆಳೆಯಲು ಸೂಕ್ತ ಕಾರಣ ಏನು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡು ಚಿಕಿತ್ಸೆ ಮಾಡಿಕೊಳ್ಳುವುದು ಸೂಕ್ತವಾಗಿದೆ.