ಗಂಟಲು (Throat) ಒಣಗಿದಾಗ ಅಥವಾ ಗಂಟಲು ನೋಯುತ್ತಿರುವಾಗ ಮೊದಲು ನೀರು (Water) ಕುಡಿಯುತ್ತೇವೆ. ಇದರಿಂದ ಗಂಟಲು ತೇವಗೊಂಡು ಸಮಸ್ಯೆಗಳು ದೂರವಾಗುತ್ತವೆ. ಆದರೆ ಅನೇಕ ಜನರು ನೀರು ಕುಡಿದ ನಂತರವೂ ಮತ್ತೆ ಮತ್ತೆ ಒಣ ಗಂಟಲಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದಕ್ಕೇನು ಕಾರಣ ? ಪರಿಹಾರವೇನು ತಿಳ್ಕೊಳ್ಳೋಣ.
ನೀರು, ಒಬ್ಬ ವ್ಯಕ್ತಿಯ ದೇಹವನ್ನು ಹೈಡ್ರೇಟೆಡ್ (Hydrated) ಆಗಿರಲು ಸಹಾಯ ಮಾಡುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಮತ್ತು ಮೂತ್ರಪಿಂಡಗಳಿಂದ ತ್ಯಾಜ್ಯವನ್ನು ಹೊರಹಾಕುತ್ತದೆ, ದೇಹದ ವಿವಿಧ ಭಾಗಗಳಿಗೆ ಪೋಷಕಾಂಶಗಳು (Nutrients) ಲಭ್ಯವಾಗುವಂತೆ ಮಾಡುತ್ತದೆ. ಹೀಗೆ ನೀರು ದೇಹದಲ್ಲಿ ಹಲವಾರು ದೈಹಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಹೆಚ್ಚೆಚ್ಚು ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡುತ್ತಾರೆ. ಮನುಷ್ಯನಿಗೆ ಸಹಜವಾಗಿಯೇ ಬಾಯಾರಿಕೆ ಆಗುತ್ತದೆ. ನೀರು ಕುಡಿದಾಗ ಬಾಯಾರಿಕೆ ಇಂಗುತ್ತದೆ, ನಿರಾಳವಾಗುತ್ತದೆ. ಆದರೆ ಹೀಗಲ್ಲದೆಯೂ ಕೆಲವೊಬ್ಬರಿಗೆ ನೀರು ಕುಡಿದ ಮೇಲೂ ಗಂಟಲು ಒಣಗಿದ ಅನುಭವವಾಗುತ್ತದೆ. ಇದಕ್ಕೇನು ಕಾರಣ ? ಹೀಗಾಗದಂತೆ ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ನಿರ್ಜಲೀಕರಣದ ಸಮಸ್ಯೆ: ಮಾನವ ದೇಹದಲ್ಲಿನ ನೀರಿನ ಮಟ್ಟದಲ್ಲಿ ತೀವ್ರ ಇಳಿಕೆ ಕಂಡುಬಂದಾಗ ಮಾತ್ರ ಗಂಟಲು ಒಣಗುತ್ತದೆ ಎಂಬ ಅಂಶದ ಬಗ್ಗೆ ತಿಳಿದುಕೊಳ್ಳಬೇಕು. ನಿರ್ಜಲೀಕರಣವು (Dehydration) ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು. ಹೊಟ್ಟೆನೋವು, ಅತಿಯಾದ ಬೆವರುವಿಕೆ ಇತ್ಯಾದಿಗಳು ಸಹ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಸಮಸ್ಯೆ: ರಾತ್ರಿಯಲ್ಲಿ ಗಂಟಲು ಒಣಗಲು ಮುಖ್ಯ ಕಾರಣ ನಿಶ್ಯಕ್ತಿಯಾಗಿದೆ. ಖಿನ್ನತೆ (Anxiety)ಯಿಂದ ಬಳಲುತ್ತಿರುವವರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಗಂಟಲಿನಲ್ಲಿ ಶುಷ್ಕತೆ ಸ್ವಲ್ಪ ಸಮಯದವರೆಗೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಒಳ್ಳೇದು ಅಂತ ನೀರನ್ನು ಬೇಕಾಬಿಟ್ಟಿ ಕುಡಿದರೆ ಅನಾರೋಗ್ಯ ಕಾಡಬಹುದು!
ಮಧುಮೇಹದ ಲಕ್ಷಣ: ಗಂಟಲು ಒಣಗುವುದು ಮಧುಮೇಹದ (Diabtes) ಲಕ್ಷಣ ಸಹ ಆಗಿರಬಹುದು. ಅತಿಯಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹವು ನೀರನ್ನು ಕಳೆದುಕೊಳ್ಳಬಹುದು. ಪರಿಣಾಮವಾಗಿ ಗಂಟಲು ಬೇಗನೆ ಒಣಗುತ್ತದೆ. ಹೀಗಾಗಿ ಈ ವಿಚಾರದ ಬಗ್ಗೆಯೂ ಗಮನಹರಿಸಿ.
ಬಾಯಿ ತೆರೆದು ಮಲಗುವ ಅಭ್ಯಾಸ: ರಾತ್ರಿ ಬಾಯಿ ತೆರೆದು ಮಲಗಿದರೆ ಈ ಸಮಸ್ಯೆ ಎದುರಾಗಬಹುದು. ಬಾಯಿ ತೆರೆದು ಮಲಗಿದಾಗ, ಲಾಲಾರಸವು ಗಾಳಿಯಲ್ಲಿ ಒಣಗುತ್ತದೆ. ಗಾಳಿಯು ಲಾಲಾರಸವನ್ನು ಒಣಗಿಸುತ್ತದೆ. ಇದು ಒಣ ಬಾಯಿ ಮತ್ತು ಗಂಟಲಿಗೆ ಕಾರಣವಾಗಬಹುದು.
ಅಲರ್ಜಿಗಳು: ಕಾಲೋಚಿತ ಅಲರ್ಜಿಗಳು (Allergy) ಸಹ ಒಣ ಗಂಟಲಿಗೆ ಕಾರಣವಾಗಬಹುದು. ಹಾಗಾಗಿ ನೀರು ಕುಡಿದ ನಂತರ ಗಂಟಲು ಒಣಗಿದ್ದರೆ, ಅದು ಕಾಲೋಚಿತ ಅಲರ್ಜಿಯಿಂದ ಉಂಟಾಗಿರುವ ಸಮಸ್ಯೆಯೂ ಆಗಿರಬಹುದು. ಈ ಸ್ಥಿತಿಯಲ್ಲಿ, ನೀವು ಮೂಗು ಸೋರುವಿಕೆ, ಸೀನುವಿಕೆ, ತುರಿಕೆ, ಕೆಮ್ಮು ಮುಂತಾದ ಸಮಸ್ಯೆಗಳನ್ನು ಹೊಂದಿರಬಹುದು. ಇದಲ್ಲದೆ, ನೀವು ಬಾಯಿಯ ಮೂಲಕ ಉಸಿರಾಡಬಹುದು. ಈ ಕಾರಣದಿಂದಾಗಿ, ನಿಮ್ಮ ಗಂಟಲು ಒಣಗಬಹುದು.
ಆಸಿಡ್ ರಿಫ್ಲಕ್ಸ್: ಆಸಿಡ್ ರಿಫ್ಲಕ್ಸ್ ಎನ್ನುವುದು ನಿಮ್ಮ ಹೊಟ್ಟೆ (Stomach)ಯಿಂದ ಅನ್ನನಾಳಕ್ಕೆ ಆಮ್ಲವನ್ನು ಹಿಂತಿರುಗಿಸಲು ಕಾರಣವಾಗುವ ಸ್ಥಿತಿಯಾಗಿದೆ. ಆಮ್ಲದ ಬ್ಯಾಕ್‌ಅಪ್ ಅನ್ನು ಆಸಿಡ್ ರಿಫ್ಲಕ್ಸ್ ಎಂದು ಕರೆಯಲಾಗುತ್ತದೆ. ಆಮ್ಲವು ಅನ್ನನಾಳದ ಒಳಪದರವನ್ನು ಸುಡುತ್ತದೆ. ಈ ಕಾರಣದಿಂದಾಗಿ, ಎದೆಯುರಿ, ನುಂಗಲು ತೊಂದರೆ, ಒಣ ಕೆಮ್ಮು, ಹುಳಿ ಬೆಲ್ಚಿಂಗ್ ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಅನಾರೋಗ್ಯದಿಂದ ಬಳಲುತ್ತಿರುವಾಗ ಕಣ್ಣಿನಿಂದ ನೀರು ಬರುವುದು ಯಾಕೆ ?
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಸಾಕಷ್ಟು ಬೆವರುವ ಕಾರಣ ಸಾಕಷ್ಟು ನೀರಿನ ಮಟ್ಟವನ್ನು ಹೊಂದಿರುವುದಿಲ್ಲ. ಆದ್ದರಿಂದ ನೀವು ಅಧಿಕ ರಕ್ತದೊತ್ತಡ ಹೊಂದಿರುವವರಾಗಿದ್ದರೆ, ನಿಮ್ಮ ದೇಹದಲ್ಲಿ ಯಾವಾಗಲೂ ಸಾಕಷ್ಟು ನೀರು ಇರುವಂತೆ ನೋಡಿಕೊಳ್ಳಿ.
ರಾತ್ರಿ ಗಂಟಲು ಒಣಗುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ನಿಯಮಿತ ಮಧ್ಯಂತರದಲ್ಲಿ ನೀರನ್ನು ಸೇವಿಸಿದರೂ, ನಮ್ಮ ಗಂಟಲು ಒಣಗುತ್ತಲೇ ಇರುವ ಸಂದರ್ಭಗಳಿವೆ. ಅತಿಯಾದ ಶುಷ್ಕತೆ ಇದ್ದರೆ, ಅದನ್ನು ನಿರ್ಲಕ್ಷಿಸಬಾರದು, ಏಕೆಂದರೆ ಇದು ವಿವಿಧ ಪ್ರಮುಖ ರೋಗಗಳ ಆರಂಭಿಕ ಲಕ್ಷಣವಾಗಿರಬಹುದು. ಇದು ಪ್ರತಿದಿನ ಸಂಭವಿಸಿದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಜೊತೆಗೆ, ಶೀತದಿಂದ ಶ್ವಾಸಕೋಶದಲ್ಲಿ ಸಮಸ್ಯೆ ಇದ್ದರೆ, ಆಗಾಗ್ಗೆ ಒಣ ಗಂಟಲಿನಿಂದ ಬಳಲುತ್ತಿರುವ ಪ್ರವೃತ್ತಿ ಇರುತ್ತದೆ. ನೀವು ಮೂತ್ರಪಿಂಡ, ಹೃದಯ ಅಥವಾ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮ್ಮ ಗಂಟಲು ನಿಯಮಿತವಾಗಿ ಒಣಗಬಹುದು. ಹೀಗಾಗಿ ಇಂಥಾ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.