ಅತಿಯಾಗಿ ಖಾರ(Spicy) ತಿಂದರೆ ಹೊಟ್ಟೆ ಉರಿ ಗ್ಯಾರಂಟಿ. ಅತಿಯಾದ ಉಷ್ಣದಿಂದಾಗಿಯೂ ದೇಹದಲ್ಲಿ ಅಲ್ಲಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಕಾಲಲ್ಲಿ ಬಾವು(Swelling) ವಿಪರೀತವಾಗಿಬಿಡುತ್ತದೆ. ಆಗಾಗ್ಗೆ ಕಾಣಿಸಿಕೊಳ್ಳುವ ಈ ಉರಿಯೂತಕ್ಕೆ ಮೆಡಿಸಿನ್‌ಗಳ ಮೊರೆ ಹೋಗುವ ಬದಲು ನಮ್ಮ ಮನೆಯಲ್ಲೇ ನಿವಾರಿಸಿಕೊಳ್ಳಬಹುದು. ಅದು ಹೇಗೆ ಯಾವೆಲ್ಲಾ ಔಷಧಿ(Medicine) ಬಳಸಿದರೆ ಕಡಿಮೆ ಆಗುತ್ತೆ. ಈ ಬಗ್ಗೆ ಕೆಲ ಟಿಪ್ಸ್ ಇಲ್ಲಿದೆ.
ಕೆಲ ಆಹಾರ(Food) ಸೇವಿಸಿದರೂ ಕೆಲವರಿಗೆ ಉರಿಯೂತ(Inflammation) ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್(Cancer), ಹೃದಯ ಸಂಬAಧಿ ಖಾಯಿಲೆ(Heart), ಖಿನ್ನತೆ, ಅರ್ಥರೀಸ್(Arteries) ಹೀಗೆ ಮುಂತಾದ ಖಾಯಿಲೆಗಳಿಂದಲೂ ಉರಿಯೂತ ಕಾಣಿಸಿಕೊಳ್ಳುತ್ತೆ. ನೋವು ಹಾಗೂ ಉರಿಯೂತ ಕಡಿಮೆ ಮಾಡುವುದು ಅತ್ಯಗತ್ಯ.
ಆರೋಗ್ಯದಲ್ಲಿ ಸುಧಾರಣೆ ಕಾಣಬೇಕೆಂದರೆ ಕೆಲ ಪಥ್ಯಗಳನ್ನು(Precautions) ಮಾಡುವುದು ಅಗತ್ಯ. ಮನೆಯಲ್ಲೇ ಕೆಲ ಜ್ಯೂಸ್‌ಗಳನ್ನು(Juice) ಮಾಡಿ ಕುಡಿಯಬಹುದು ಇದು ಆರೋಗ್ಯಕ್ಕೂ ಒಳ್ಳೆಯದು. ಹೆಚ್ಚಿನ ಸಮಯವೇನು ತೆಗೆದುಕೊಳ್ಳುವುದಿಲ್ಲ ಐದು ನಿಮಿಷಗಳಲ್ಲಿ ಉರಿಯೂತ ಕಡಿಮೆ ಮಾಡುತ್ತೆ. ಮನೆಯಲ್ಲಿ ತಯಾರಿಸಲಾಗುವ ಈ ಜ್ಯೂಸ್‌ಗಳಲ್ಲಿ ನ್ಯಾಚುರಲ್(Natural) ಸಿಹಿ(Sweet) ಇರುವುದರಿಂದ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ.
ಉರಿಯೂತ ಪದೇ ಪದೇ ಕಾಣಿಸಿಕೊಳ್ಳುವುದು, ಹೆಚ್ಚು ಕಾಲ ಇರುವುದು, ಬಾವು(Swelling) ಬರುವುದು, ನೋವು, ಅನಾನುಕೂಲವಾಗುವುದು ಅಪಾಯಕಾರಿ. ಇದಕ್ಕೆ ಮನೆಯಲ್ಲಿ ತಯಾರಿಸಲಾಗುವ ಈ ಜ್ಯೂಸ್ ಬಹು ಉಪಕಾರಿಯಾಗಿದೆ.
ಬಾಯಿ ಹುಣ್ಣಿನ ಸಮಸ್ಯೆಯಿಂದ ಏನು ತಿನ್ನೋಕಾಗದೆ ಕಷ್ಟ ಪಡ್ತಿದ್ದೀರಾ ? ಕಾರಣವೇನು ತಿಳ್ಕೊಳ್ಳಿ
ಉರಿಯೂತ ನಿಯಂತ್ರಿಸುವ ಹಣ್ಣು ಮತ್ತು ತರಕಾರಿ
ತೆಂಗು(Coconut), ಎಲೆಕೋಸು ಮತ್ತು ಪಾಲಕ(Spinach) ಸೊಪ್ಪು, ಕೆಂಪು ದ್ರಾಕ್ಷಿ(Red Grapes), ಬೆಣ್ಣೆ ಹಣ್ಣು(Avocado), ಬ್ರೊಕೋಲಿ(Broccoli), ಟೊಮೆಟೊ(Tomato), ಗ್ರೀನ್ ಟೀ(Green tea), ಕಾಳುಮೆಣಸು(Pepper), ಹಳದಿ(Turmeric), ಶುಂಠಿ(Ginger), ಚಕ್ಕೆ, ಡಾರ್ಕ್ ಚಾಕೊಲೇಟ್(Dark chocolate), ನಿಂಬೆಹಣ್ಣು(Lemon), ಕಿತ್ತಳೆ(Orange), ಖರ್ಜೂರಾ, ಸಿಹಿಗೆಣಸು(Sweet potato),
ಕರುಳಿನ ಉರಿಯೂತ ನಿಯಂತ್ರಣ
ಕರುಳಿನಲ್ಲಿ ಉರಿಯೂತ(Gut Inflammation) ಕೆಲವರಲ್ಲಿ ಕಾಣಿಸಿಕೊಳ್ಳುತ್ತದೆ. ಮೇಲಿನ ಹಣ್ಣು(Fruits) ಮತ್ತು ತರಕಾರಿಗಳ(Vegetables) ಜ್ಯೂಸ್ ಸೇವಿಸಬಹುದಾದರೂ ಮತ್ತಷ್ಟು ಜಾಗೃತಿ ಅಗತ್ಯವಿದೆ.
1. ಹೆಚ್ಚು ಸಂಸ್ಕರಿಸಿದ ಆಹಾರಗಳ ಸೇವನೆ ಕರುಳಿನ ಊತಕ್ಕೆ ಕಾರಣವಾಗಬಹುದು. ಉಪ್ಪಿನಕಾಯಿಯಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದರಿಂದ ಕರುಳಿನ ಬ್ಯಾಕ್ಟೀರಿಯಾದ(Bacteria) ನೈಸರ್ಗಿಕ ಸಮತೋಲವನ್ನು ಅಡ್ಡಿಪಡಿಸುವ ಅಂಶಗಳನ್ನು ಒಳಗೊಂಡಿದೆ. ಇದು ಆಲಸ್ಯ ಮತ್ತು ಉಬ್ಬುವ ಭಾವನೆಯನ್ನು ಉಂಟುಮಾಡಬಹುದು.
2. ಆಹಾರದ ಪದ್ಧತಿಗೆ ಅನುಗುಣವಾಗಿ ಯಾವ ಆಹಾರ ಉರಿಯೂತಕ್ಕೆ ಕಾರಣವಾಗಬಹುದೆಂದು ಗುರುತಿಸುವುದು ಅಗತ್ಯ. ಯಾವ ಆಹಾರದಿಂದ ಹೀಗೆ ಆಗುತ್ತಿದೆ ಎಂದು ಕಾರಣ ಕಂಡುಕೊಳ್ಳುವುದು ಬಹಳ ಮುಖ್ಯ. ಕೆಲವರಿಗೆ ಬದನೆಕಾಯಿ ತಿಂದರೆ ಅಲರ್ಜಿ(Allergy), ಇದರಿಂದ ಕಾಲಲ್ಲಿ ಬಾವು ಬರುವುದು ನಂಜಾಗುವುದು ಕಾಣಿಸಿಕೊಳ್ಳುತ್ತದೆ. ಇಂಥಹ ಆಹಾರ ಪದಾರ್ಥಗಳಿಂದ ದೂರ ಇರುವುದು ಒಳ್ಳೆಯದು. ಡೈರಿ(Dairy), ಸಿಟ್ರಸ್ ಹಣ್ಣುಗಳು, ಅಂಟು ಇರುವ ಪದಾರ್ಥಗಳನ್ನು ಅವಾಯ್ಡಿ ಮಾಡುವುದು ಒಳ್ಳೆಯದು.
3. ಕರುಳಿನ ಉರಿಯೂತ ಸಮಸ್ಯೆ ಇದ್ದಲ್ಲಿ ಒಳ್ಳೆಯ ಬ್ಯಾಕ್ಟೀರಿಯ ಇರುವ ಪದಾರ್ಥಗಳನ್ನು ಸೇವಿಸಬೇಕು. ಇದು ಜೀರ್ಣಕ್ರಿಯೆಗೂ(Digest) ಅನುಕೂಲವಾಗುತ್ತದೆ. ಮೊಸರು(Curd), ಕಫೀರ್, ಸೌರ್‌ಕ್ರಾಟ್, ಟೆಂಪೆ ಮತ್ತು ಕಿಮ್ಚಿ ಕರುಳಿನಲ್ಲಿ ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ.
Kids' Health : ಮಗು ಓದಿದ್ದು ತಲೆ ಹೋಗುತ್ತಿಲ್ಲ ಎನ್ನುತ್ತಿದ್ಯಾ ಮಗು, ಈ ಫುಡ್ ಕೊಡಿ
ಈ ಜ್ಯೂಸ್ ಟ್ರೆ ಮಾಡಿ
1. ಬೆಣ್ಣೆ ಹಣ್ಣು ಮತ್ತು ಕೇಲ್ ಸ್ಮೂತೀಸ್(Smoothie) ಬಹಳ ಒಳ್ಳೆಯದು. ಇದರಲ್ಲಿ ಆಯಂಟಿ ಆಕ್ಸಿಡೆಂಟ್(Antioxident) ಅಂಶವಿದ್ದು ಉರಿಯೂತ ನಿಯಂತ್ರಿಸುತ್ತದೆ.
2. ಬಹಳ ಜನರ ಹೆಲ್ತ ಫ್ರೆಂಡ್ಲಿ(Health Friendly) ಗ್ರೀನ್ ಟೀ(Green tea) ಉರಿಯೂತ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್(Epigallocatechin gallate) ಅಂಶವಿದೆ. ಅಷ್ಟೇ ಅಲ್ಲದೆ ಗ್ರೀನ್ ಟೀನಲ್ಲಿ ಆಂಟಿವೈರಸ್(Anti virus), ಆಂಟಿಬ್ಯಾಕ್ಟೀರಿಯ(Anti Bacteria), ಆಂಟಿಫAಗಲ್(Anti Fungal) ಗುಣಲಕ್ಷಣಗಳನ್ನು ಹೊಂದಿದ್ದು, ಉರಿಯೂತದ ವಿರುದ್ಧ ಹೋರಾಡುತ್ತದೆ.
3. ಆಪಲ್ ಸೈಡರ್ ವಿನೆಗರ್(Apple cider vinegar) ಕೇವಲ ತೂಕ ಇಳಿಸಲು(Weight loss) ಫೇಮಸ್ ಆಗಿದೆ. ಇದರೊಂದಿಗೆ ವಿಟಮಿನ್(Vitamin) ಮತ್ತು ಆಂಟಿ ಆಕ್ಸಿಡೆಂಟ್ ಗುಣವಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಇದನ್ನು ಹಾಗೆ ಸೇವಿಸುವುದಕ್ಕಿಂತ ಜೇನಿನೊಂದಿಗೆ(Honey) ಸೇವಿಸಿದರೆ ಒಳ್ಳೆಯದು.
4. ಸಿಟ್ರಿನ್(Citrine) ಇರುವ ಅಂದರೆ ಲಿಂಬೆ(Lemon) ಹಾಗೂ ಹಳದಿ(Turmeric) ಮಿಶ್ರಣದ ಜ್ಯೂಸ್ ಉರಿಯೂತವನ್ನು ಬಹುಬೇಗ ಗುಣಪಡಿಸುತ್ತದೆ. ಆಂಟಿಸೆಪ್ಟಿಕ್(Antiseptic) ಆಗಿ ಕೆಲಸ ಮಾಡುವ ಅರಿಶಿಣ ಔಷಧೀಯ(Medicine) ಗೂಣಗಳನ್ನು ಹೊಂದಿದೆ.
5. ಪಾಲಕ್(Spinach), ಬಾಳೆಹಣ್ಣು(Banana), ತೆಂಗು(Coconut) ಹಾಕಿ ಸ್ಮೂತೀಸ್ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ತಂಪು ನೀಡುವುದರ ಜೊತೆಗೆ ಉರಿಯೂತ ನಿಯಂತ್ರಣಕ್ಕೆ ಸಹಕಾರಿಯಾಗಿದೆ.