ಬೆಳಗ್ಗೆದ್ದು ಈ ತಪ್ಪು ಮಾಡ್ತಿರೋದಕ್ಕೆ ನಿಮ್ಗೆ ದಿನವಿಡೀ ಸುಸ್ತಾಗ್ತಿದೆ ಅಂತ ಫೀಲ್ ಆಗೋದು!

By Vinutha Perla  |  First Published Apr 6, 2024, 8:36 AM IST

ಕೆಲವೊಬ್ಬರು ದಿನವಿಡೀ ಸುಸ್ತಾಗುತ್ತೆ ಅಂತ ಹೇಳುತ್ತಿರುತ್ತಾರೆ. ಸುಮ್ನೆ ಸುಮ್ನೆ ಒತ್ತಡ, ಆಯಾಸ ಕಿರಿಕಿರಿಯ ಅನುಭವ ಆಗುತ್ತಿರುತ್ತಾರೆ. ಇದೆಲ್ಲವೂ ಬೆಳಗ್ಗೆದ್ದು ಮಾಡುವ ಕೆಲವು ತಪ್ಪುಗಳ ಮೇಲೆ ಅವಲಂಬನೆಯಾಗಿರುತ್ತದೆ. ಹೀಗಾಗಿ ಬೆಳಗ್ಗೆದ್ದು ನೀವು ಈ ಕೆಲವು ತಪ್ಪುಗಳನ್ನು ಮಾಡಲೇಬಾರ್ದು.


ಬೆಳಗ್ಗೆದ್ದು ಒಬ್ಬೊಬ್ಬರ ರೊಟೀನ್ ಒಂದೊಂದು ರೀತಿ ಇರುತ್ತದೆ. ಕೆಲವೊಬ್ಬರು ಬೇಗ ಎದ್ದರೆ, ಇನ್ನು ಕೆಲವರು ತಡವಾಗಿ ಏಳುತ್ತಾರೆ. ಕೆಲವರು ಎದ್ದು ಚುರುಕಾಗಿ ಕೆಲಸ ಮಾಡಿದರೆ, ಮತ್ತೆ ಕೆಲವರು ನಿಧಾನವಾಗಿ ಕೆಲಸದಲ್ಲಿ ತೊಡಗುತ್ತಾರೆ. ಹೀಗಾಗಿ ಡೇ ಅನ್ನೋದು ಒಬ್ಬೊಬ್ಬರ ಪಾಲಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ದಿನವಿಡೀ ಸುಸ್ತಾಗುತ್ತೆ ಅಂತ ಹೇಳುತ್ತಿರುತ್ತಾರೆ. ಸುಮ್ನೆ ಸುಮ್ನೆ ಒತ್ತಡ, ಆಯಾಸ ಕಿರಿಕಿರಿಯ ಅನುಭವ ಆಗುತ್ತಿರುತ್ತಾರೆ. ಇದೆಲ್ಲವೂ ಬೆಳಗ್ಗೆದ್ದು ಮಾಡುವ ಕೆಲವು ತಪ್ಪುಗಳ ಮೇಲೆ ಅವಲಂಬನೆಯಾಗಿರುತ್ತದೆ. 

ಎಲ್ಲರೂ ಬೆಳಗ್ಗೆ ಬೇಗನೆ ಏಳಲು ಸಾಧ್ಯವಿಲ್ಲ. ಹೀಗಾಗಿಯೇ ಕೆಲವರು ತುಂಬಾ ನಿದ್ರಾಹೀನತೆಯನ್ನು ಅನುಭವಿಸುತ್ತಾರೆ. ಆದ್ದರಿಂದ, ದಿನವಿಡೀ  ಉತ್ಪಾದಕತೆಯನ್ನು ತಡೆಯುವ ಕೆಲವು ವಿಧಾನಗಳನ್ನು ಆಶ್ರಯಿಸುತ್ತಾರೆ. ನೆನಪಿಡಿ, ಮುಂಜಾನೆಯು ಇಡೀ ದಿನದ ದಿನಚರಿಯನ್ನು ಹೊಂದಿಸುವ ಸಮಯವಾಗಿದೆ. ಆದ್ದರಿಂದ ನೀವು ಖಂಡಿತವಾಗಿಯೂ ಬೆಳಿಗ್ಗೆ ಮಾಡುವುದನ್ನು ತಪ್ಪಿಸಬೇಕಾದ ವಿಷಯಗಳ ಪಟ್ಟಿ ಇಲ್ಲಿದೆ.

Latest Videos

ಆರೋಗ್ಯ ಯಾರಿಗ್ ಬೇಡ ಹೇಳಿ, ಬೆಳಗ್ಗೆ ಇಷ್ಟು ಮಾಡಿ ಸಾಕು ಫಿಟ್ ಆಗಿರ್ತಿರಿ

ಸ್ನೂಜ್ ಬಟನ್ ಪದೇ ಪದೇ ಒತ್ತುವುದು
ಮಲಗಿದ್ದಾಗ ಏಳಲೇ ಮನಸ್ಸಾಗದೆ ಇರುವುದು, ಮತ್ತೆ ಮತ್ತೆ ಮಲಗಬೇಕು ಅನಿಸೋದು ಸಾಮಾನ್ಯ. ಹೀಗಾಗಿಯೇ ಅಲಾರಂ ಇಟ್ಟುಕೊಂಡಿದ್ದರೂ ಎಲ್ಲರೂ ಪದೇ ಪದೇ ಸ್ನೂಜ್ ಬಟನ್ ಒತ್ತುವುದು ಸಾಮಾನ್ಯ. ಆದ್ರೆ ಹೀಗೆ ಮಾಡುವುದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು. ಸೋಮಾರಿತನದ ಭಾವನೆಯನ್ನು ಹೆಚ್ಚಿಸಬಹುದು. ಅಲಾರಂನ್ನು ಹೀಗೆ ಸ್ನೂಜ್ ಮಾಡುವ ಬದಲು ನಿರ್ಧಿಷ್ಟವಾಗಿ ಏಳುವ ಸಮಯವನ್ನು ಹೊಂದಿಸಿ. ಅಲಾರಂ ಆದ ತಕ್ಷಣ ಹಾಸಿಗೆಯಿಂದ ಏಳಲು ಪ್ರಯತ್ನಿಸಿ.

ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುವುದು
ಬೆಳಗಿನ ಉಪಾಹಾರವು ಸಾಮಾನ್ಯವಾಗಿ ದಿನದ ಪ್ರಮುಖ ಊಟವಾಗಿದೆ. ಇದನ್ನು ಬಿಟ್ಟುಬಿಡುವುದು ದಿನವಿಡೀ ಸುಸ್ತಾದ ಅನುಭವವಾಗಲು ಕಾರಣವಾಗಬಹುದು. ಇದು ಯಾವುದೇ ಕೆಲಸದ ಮೇಲಿನ ಗಮನವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಅತಿಯಾಗಿ ತಿನ್ನುವಂತೆ ಮಾಡುತ್ತದೆ. ಹೀಗಾಗಿ ದಿನವಿಡೀ ಆಕ್ಟಿವ್ ಆಗಿರಲು ದೇಹ ಮತ್ತು ಮನಸ್ಸು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಮತೋಲಿತ ಉಪಾಹಾರವನ್ನು ಸೇವಿಸುವುದು ಮುಖ್ಯ.

ಥೈರಾಯ್ಡ್‌ ಮಟ್ಟ ದೇಹದಲ್ಲಿ ಸಾಕಷ್ಟಿಲ್ಲವಾದರೆ ಬೆಳಗ್ಗೆ ಎದ್ದಾಕ್ಷಣ ಹೀಗೆಲ್ಲ ಆಗುತ್ತೆ, ಗಮನಿಸಿ

ಎದ್ದ ತಕ್ಷಣ ಫೋನ್ ನೋಡುವುದು
ಬೆಳಗ್ಗೆದ್ದ ತಕ್ಷಣ ಮೊಬೈಲ್ ನೋಡುವ ಅಭ್ಯಾಸವನ್ನು ಹೆಚ್ಚಿನವರು ಹೊಂದಿರುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಬೆಳಗ್ಗೆದ್ದು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ನೋಡುವುದು ನಿಮ್ಮ ಅತ್ಯಮೂಲ್ಯ ಸಮಯವನ್ನು ಸುಲಭವಾಗಿ ವ್ಯರ್ಥಗೊಳಿಸುತ್ತದೆ. ಇದರ ಬದಲು ನೀವು ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಧ್ಯಾನ, ಓದುವಿಕೆ ಅಥವಾ  ಇತರ ಚಟುವಟಿಕೆಗಳಿಗೆ ಸಮಯವನ್ನು ನಿಗದಿಪಡಿಸಬಹುದು. ಇದು ನಿಮ್ಮ ಮನಸ್ಸನ್ನು ತಾಜಾ, ಮತ್ತು ಉತ್ಪಾದಕವಾಗಿರಿಸುತ್ತದೆ.

ಎಕ್ಸರ್‌ಸೈಸ್ ಮಾಡದೇ ಇರುವುದು
ಬೆಳಿಗ್ಗೆ ಕೆಲವು ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸುಧಾರಿತ ಮನಸ್ಥಿತಿ, ಹೆಚ್ಚಿದ ಶಕ್ತಿಯ ಮಟ್ಟಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವ್ಯಾಯಾಮವನ್ನು ಬಿಟ್ಟುಬಿಡುವ ಅಭ್ಯಾಸವನ್ನು ಸಾಧ್ಯವಾದಷ್ಟು ತಪ್ಪಿಸಿ. ದೇಹವನ್ನು ಚಲಿಸುವಂತೆ ಮಾಡಲು ಮತ್ತು  ಚಯಾಪಚಯವನ್ನು ಹೆಚ್ಚಿಸಲು ಎಕ್ಸರ್‌ಸೈಸ್, ಸ್ಟ್ರೆಚಿಂಗ್, ವಾಕಿಂಗ್ ಮಾಡಲು ಪ್ರಯತ್ನಿಸಿ.

ದಿನವನ್ನು ಖುಷಿಯಿಂದ ಆರಂಭಿಸಿ
ದಿನವನ್ನು ಎಂದಿಗೂ ಆತುರದಿಂದ ಪ್ರಾರಂಭಿಸಬೇಡಿ. ಇದು ಹೆಚ್ಚಿದ ಒತ್ತಡದ ಮಟ್ಟಗಳು ಮತ್ತು ಮನಸ್ಸಿನ ಒತ್ತಡಕ್ಕೆ ಕಾರಣವಾಗಬಹುದು. ಸ್ನಾನ ಮಾಡುವುದು, ಬಟ್ಟೆ ಧರಿಸುವುದು ಮತ್ತು ಮುಂದಿನ ದಿನಕ್ಕಾಗಿ ತಯಾರಿ ಮಾಡುವಂತಹ ಚಟುವಟಿಕೆಗಳಿಗೆ ಸಾಕಷ್ಟು ಸಮಯವನ್ನು ಮೀಸಲಿಡುವ ಮೂಲಕ ನಿಮ್ಮ ಬೆಳಗಿನ ದಿನಚರಿಯನ್ನು ಖುಷಿಯಿಂದ ಶುರು ಮಾಡಿ.

click me!