ಊಟ ಆದ್ಮೇಲೆ ಇದನ್ನು ತಿಂದ್ರೆ ಲೈಂಗಿಕ ಶಕ್ತಿ ಹೆಚ್ಚಿಸುವುದಲ್ಲದೇ, ಹೃದಯದ ಆರೋಗ್ಯವನ್ನೂ ಸುಧಾರಿಸುತ್ತೆ!

By Suvarna NewsFirst Published Apr 5, 2024, 4:02 PM IST
Highlights

ಹೊಟ್ಟೆ ನೋವಾಗ್ತಿದೆ, ಅಜೀರ್ಣ ಆಗಿದೆ ಎಂದಾಗ ಮನೆ ಮದ್ದು ಬಳಸುವ ಜನರು ಏಲಕ್ಕಿ ತಿನ್ನುತ್ತಾರೆ. ಊಟವಾದ್ಮೇಲೆ ಏಲಕ್ಕಿ ತಿನ್ನುವ ಜನರ ಸಂಖ್ಯೆ ಕಡಿಮೆ ಏನಿಲ್ಲ. ನೀವೂ ಊಟವಾದ್ಮೇಲೆ ಏಲಕ್ಕಿ ಸೇವನೆ ಮಾಡೋರಾದ್ರೆ ಈ ಸುದ್ದಿ ಓದಿ.
 

ದಿನದಲ್ಲಿ ಮೂರು ಹೊತ್ತು ಹೊಟ್ಟೆ ತುಂಬ ಆಹಾರ ಸೇವನೆ ಮಾಡುವ ಜನರಿಗೆ ಅದನ್ನು ಜೀರ್ಣಿಸಿಕೊಳ್ಳೋದು ಕಷ್ಟವಾಗುತ್ತದೆ. ಕೆಲವೊಮ್ಮೆ ಪಾರ್ಟಿ, ಸಮಾರಂಭದ ಸಮಯದಲ್ಲಿ ಊಟ ಹೆಚ್ಚಾಗುತ್ತೆ. ಇದ್ರಿಂದ ಹುಳಿ ತೇಗು, ಹೊಟ್ಟೆ ಭಾರದ ಸಮಸ್ಯೆ ಶುರುವಾಗುತ್ತದೆ. ಈ ಎಲ್ಲ ಸಮಸ್ಯೆಯಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಅನೇಕರು ಊಟದ ನಂತರ ಏಲಕ್ಕಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಎಂದೂ ಕರೆಯುತ್ತಾರೆ. ಏಲಕ್ಕಿ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಊಟದ ನಂತ್ರ ನೀವೂ ಏಲಕ್ಕಿ ತಿನ್ನುವ ಅಭ್ಯಾಸ ಹೊಂದಿದ್ದರೆ ಅದ್ರಿಂದ ಪ್ರಯೋಜನವಿದೆಯೇ ಅಥವಾ ನಷ್ಟವಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಿ.

ಏಲಕ್ಕಿ (Cardamom) ಯನ್ನು ಭಾರತದಲ್ಲಿ ಅನೇಕ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರ (Food) ದ ಸುಹಾಸನೆಯನ್ನು ಹೆಚ್ಚಿಸುತ್ತದೆ. ಸಿಹಿ (Sweet) ಯಾಗಿರುವ ಮಸಾಲೆಯುಕ್ತ ಆಹಾರದ ರುಚಿಯನ್ನು ಹೆಚ್ಚಿಸಲು ನಾವು ಹೆಚ್ಚಾಗಿ ಏಲಕ್ಕಿಯನ್ನು ಬಳಸುತ್ತೇವೆ. ನೀವು ಹೆಚ್ಚಿನ ಏಲಕ್ಕಿ ಸೇವನೆ ಮಾಡೋದು ಒಳ್ಳೆಯದಲ್ಲ. ಕೇವಲ 2 ಏಲಕ್ಕಿಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಕಲ್ಲಂಗಡಿ ಹಣ್ಣು ಫ್ರಿಡ್ಜ್‌ನಲ್ಲಿಟ್ಟು ತಿನ್ನೋ ಅಭ್ಯಾಸವಿದ್ಯಾ? ಆರೋಗ್ಯಕ್ಕೆಷ್ಟು ಕೆಟ್ಟದ್ದು ಗೊತ್ತಿರ್ಲಿ

ಏಲಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಊಟದ ನಂತ್ರ ಏಲಕ್ಕಿಯನ್ನು ತಿನ್ನುವುದರಿಂದ ಹಲವಾರು ರೀತಿಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಏಲಕ್ಕಿ ತಿನ್ನುವುದರಿಂದ ಹೃದಯವೂ ಆರೋಗ್ಯವಾಗಿರುತ್ತದೆ. ಇದು ನಿದ್ರೆಯ ಸಮಸ್ಯೆಯಿಂದಲೂ ಪರಿಹಾರವನ್ನು ನೀಡುತ್ತದೆ. ಏಲಕ್ಕಿ ತಿನ್ನುವುದರಿಂದ ಬಾಯಿಯ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತದೆ. ಬಾಯಿ ವಾಸನೆಯಿಂದ ಬಳಲುವ ಜನರು ಇದನ್ನು ನಿಯಮಿತವಾಗಿ ಬಳಸುವುದ್ರಿಂದ ಪರಿಹಾರ ಕಂಡುಕೊಳ್ಳಬಹುದು.

ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದ್ರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆದು ನಿದ್ರೆ ಬರುತ್ತದೆ ಎನ್ನುತ್ತಾರೆ ತಜ್ಞರು. 

 ಏಲಕ್ಕಿಯಲ್ಲಿ ಪೊಟ್ಯಾಸಿಯಮ್ (Potasium) ಮತ್ತು ಮೆಗ್ನೀಸಿಯಮ್ (Magnesium) ಇದೆ. ಏಲಕ್ಕಿ ಮಲಬದ್ಧತೆ (Constipation), ಗ್ಯಾಸ್, ಅಸಿಡಿಟಿ (Acidity), ಅಸ್ತಮಾದಂತಹ ಸಮಸ್ಯೆಗೆ ಪರಿಹಾರ ನೀಡುತ್ತದೆ. ನೆಗಡಿ – ಶೀತದಿಂದ ಬಳಲುವ ಜನರು ಏಲಕ್ಕಿಯನ್ನು ನಿತ್ಯ ಬಳಸಬೇಕು. ಇದು ನೆಗಡಿ ಜೊತೆ ಕಾಡುವ ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಏಲಕ್ಕಿಯನ್ನು ಹಾಲಿನಲ್ಲಿ ಕುದಿಸಿ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ನಿಮ್ಮ ದೇಹವು ಒಳಗಿನಿಂದ ಬಲಗೊಳ್ಳುತ್ತದೆ.

ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನು ಸುಲಭವಾಗಿ ಸೋಲಿಸಬಹುದು.  ಏಲಕ್ಕಿ ಸೇವನೆ ಮಾಡುವುದ್ರಿಂದ ಅದ್ರಲ್ಲಿರುವ ಉರಿಯೂತದ ಅಂಶಗಳು ಬಾಯಿ ಮತ್ತು ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿ ಡಿಹೈಡ್ರೇಶನ್ ಸಮಸ್ಯೆ ಕಾಡ್ಬಾರ್ದುಅಂದ್ರೆ ಇಂಥಾ ಆಹಾರ ತಿನ್ನಿ

ದೇಹದ ರಕ್ತ ಪರಿಚಲನೆ ಸಾಮಾನ್ಯಗೊಳಿಸುವ ಕೆಲಸವನ್ನು ಏಲಕ್ಕಿ ಮಾಡುತ್ತದೆ. ನೀವು ಏಲಕ್ಕಿಯನ್ನು ತಿನ್ನುವುದ್ರಿಂದ ನಿಮ್ಮ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೊದಲೇ ಹೇಳಿದಂತೆ ಗ್ಯಾಸ್ ಮತ್ತು ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಏಲಕ್ಕಿ ರಾಮಬಾಣ. ಹೊಟ್ಟೆ ಸಮಸ್ಯೆ ಇರುವವರು ಪ್ರತಿ ದಿನ ಊಟದ ನಂತರ ಒಂದು ಏಲಕ್ಕಿಯನ್ನು ಸೇವಿಸಬಹುದು. ಏಲಕ್ಕಿ ಅಸ್ತಮಾಕ್ಕೆ ಉತ್ತಮ ಪರಿಹಾರ ಎಂದು ತಜ್ಞರು ಹೇಳ್ತಾರೆ.

ಏಲಕ್ಕಿ ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ ನಿಜ. ಆದ್ರೆ ಮಿತಿ ಮೀರಿ ಯಾವುದೇ ಆಹಾರ ಸೇವನೆ ಮಾಡಬಾರದು. ಅದರಲ್ಲಿ ಏಲಕ್ಕಿ ಕೂಡ ಸೇರಿದೆ. ಏಲಕ್ಕಿಯನ್ನು ನೀವು ಮಿತಿಮೀರಿ ತಿಂದಾಗ ಅದು ಸಮಸ್ಯೆಯುಂಟು ಮಾಡುತ್ತದೆ. ಏಲಕ್ಕಿ ಹೊಟ್ಟೆಯಲ್ಲಿ ಶಾಖವನ್ನು ಉಂಟುಮಾಡುತ್ತದೆ. ಇದರಿಂದ ನಿಮಗೆ ಹೊಟ್ಟೆನೋವು ಕಾಡುವ ಅಪಾಯವಿದೆ. 

click me!